ಶೈವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
'''ಶೈವ ಪಂಥ'''ವು [[ಹಿಂದೂ ಧರ್ಮ]]ದ ನಾಲ್ಕು ಅತಿ ವ್ಯಾಪಕವಾಗಿ ಅನುಸರಿಸಲಾಗುವ ಪಂಥಗಳ ಪೈಕಿ ಒಂದು, ಮತ್ತು ಇದು ಶಿವನನ್ನು ಪರಮಾತ್ಮ ಹಾಗು ಪವಿತ್ರನೆಂದು ಭಾವಿಸುತ್ತದೆ. ಶೈವರು ಎಂದು ಕರೆಯಲ್ಪಡುವ ಶೈವ ಪಂಥದ ಅನುಯಾಯಿಗಳು ಶಿವನು ಎಲ್ಲವೂ ಮತ್ತು ಎಲ್ಲದರಲ್ಲೂ ಇದ್ದಾನೆ, ಎಲ್ಲದರ ಸೃಷ್ಟಿಕರ್ತ, ಸಂರಕ್ಷಕ, ವಿನಾಶಕ, ಬಹಿರಂಗಪಡಿಸುವವನು ಹಾಗು ಮರೆಮಾಡುವವನು ಎಂದು ನಂಬುತ್ತಾರೆ. ಶೈವ ಪಂಥವು ಭಾರತ, ನೇಪಾಳ ಹಾಗು ಶ್ರೀಲಂಕಾದ ಆದ್ಯಂತ ವ್ಯಾಪಕವಾಗಿದೆ.
== ಶೈವ ಸಿದ್ಧಾಂತಗಳು ==
:ಶಿವ ಅಥವಾ ರುದ್ರನ ಉಪಾಸನೆಯು ತುಂಬಾ ಪ್ರಾಚೀನವಾದುದು. ಸಿಧೂ ಸಂಸ್ಸೃತಿಯ ಅವಶೇಷಷಗಳಲ್ಲಿ (ಕ್ರಿ.ಪೂ.೩೦೦೦-೪೦೦೦) ಶಿವೋಪಾಸನೆ ಇತ್ತೆಂಬ ಕುರುಹುಗಳಿವೆ. ಅದನ್ನು ಪಶುಪತಿ ಎಂದು ಗುರುತಿಸಿದ್ದಾರೆ. ಪಾಶುಪತ ಪಂಥದಪಂಥ [[ಪಾಶುಪತ ದರ್ಶನ]]ದ ಪ್ರವರ್ತಕರು ಯಾರೆಂದು ತಿಳಿಯದು .
:ಪಾಶುಪತವು ದಾರ್ಶನಿಕ ವಿಚಾರಕ್ಕಿಂತ ಸಾಧನೆ ಮುಖ್ಯವೆಂದು ಹೇಳುತ್ತದೆ.
ಕಾರ್ಯ, ಕಾರಣ , ಯೋಗ , ವಿಧಿ , ಮತ್ತು ದುಃಖಾಂತ ಎಂಬ ಐದು ಅಂಶಗಳನ್ನು ಹೇಳುತ್ತಾರೆ. ಕಾರ್ಯವೆಂದರೆ ದೃಷ್ಟಿ ; ಕಾರಣ -ಶಿವ ನಿಮಿತ್ತ ಕಾರಣ ; ಜೀವನು ಪಶು ; ಶಿವಾನುಗ್ರಹದಿಂದ ದುಃಖದಿಂದ ಬಿಡುಗಡೆ ಪಡೆಯುತ್ತಾರೆ. ಯೋಗ ಮತ್ತು ವಿಧಿಗಳು ಸಾಧನಾ ಮಾರ್ಗ . ಅದರಲ್ಲಿ ಸ್ಮಶಾನ ವಾಸ , ನರ-ಕಪಾಲದಲ್ಲಿ ಆಹಾರ ಭಕ್ಷಣ, ಭಸ್ಮ ಭಕ್ಷಣ , ಮದ್ಯಪಾನ , ಮೊದಲಾದವೂ ಸೇರಿವೆ .
:ಶೈವಾಗಮಮಗಳು ಕ್ರಿ.ಶ. ೮-೯ ನೇ ಶತಮಾನದವೆಂದು ಹೇಳುತ್ತಾರೆ. ಇವು ಶೈವ ಸಿದ್ಧ್ದಾಂತಕ್ಕೆ ಮೂಲವಾಗಿವೆ. ಅವು ೧೦೮ ಇವೆ ಎನ್ನುತ್ತಾರೆ. ಅವುಗಳಲ್ಲಿ ೨೮ ಆಗಮಗಳು ಮುಖ್ಯವಾದವು . ಆಗಮದಲ್ಲಿ ನಾಲ್ಕು ಭಾಗಗಳು ; ವಿದ್ಯಾ (ಜ್ಞಾನ) , ಯೋಗ , ಕ್ರಿಯಾ , ಮತ್ತು ಚರ್ಯಾ . ಕ್ರಿಯಾ ಮತ್ತು ಚರ್ಯಾ ಕಾಂಡಗಳು ದೇವಾಲಯ ನಿರ್ಮಾಣ , ಮೂರ್ತಿಪ್ರತಿಷ್ಠಾಪನೆ , ಪೂಜಾವಿಧಾನ , ಧಾರ್ಮಿಕ ವಿಧಿಗಳನ್ನು ತಿಳಿಸುತ್ತವೆ. ಜ್ಞಾನ ಯೋಗ ಕಾಂಡಗಳಲ್ಲಿ ಜೀವ - ಶಿವರ ಸಂಬಂಧ ಶಿವ ಸ್ವರೂಪ , ಇತ್ಯಾದಿ ದಾರ್ಶನಿಕ ವಿಚಾರ , ಯೋಗ ಮಾರ್ಗಗಳಿವೆ . ತಮಿಳು ಶೈವ ಸಿದ್ಧಾಂತ , ಕಾಶ್ಮೀರ ಶೈವ ಸಿದ್ದಾಂತ , ವೀರಶೈವ ಸಿದ್ಧಾಂತಗಳು ಪ್ರಮುಖವಾಗಿವೆ.
 
== ಪಶು - ಪತಿ - ಪಾಶ ==
:ಶೈವ ಸಿದ್ಧಾಂತದ ಮೂರು ಮುಖ್ಯ ತತ್ವಗಳು, ಪಶು - ಪತಿ -ಪಾಶ. ಪಶುವೆಂದರೆ ಜೀವ ; ಪತಿ ಎಂದರೆ ಶಿವ , ಪಾಶ ಎಂದರೆ ಮಲತ್ರಯಗಳು. ಪತಿಯಾದ ಶಿವನು ಸರ್ವಜ್ಞ , ಸರ್ವಶಕ್ತ, ಕುಂಬಾರನು ಮತ್ತು ಮಡಕೆಗೆ ಮೂಲ ಕಾರಣ . ಪರಿಕರಗಳು ನಿಮಿತ್ತ ಕಾರಣ, ಮಣ್ಣು ಉಪಾಧಾನ ಕಾರಣ. ಹಾಗೆಯೇ ಶಿವನು ಜಗತ್ತಿಗೆ ಮೂಲ ಕಾರಣ. ಅವನ ಶಕ್ತಿ ನಿಮಿತ್ತ ಕಾರಣ. ಮಾಯೆ ಉಪಾದಾನ ಕಾರಣವಾಗಿದೆ. ಶಿವ-ಶಕ್ತಿಗಳು ತದಾತ್ಮ್ಯ ಹೊಂದಿವೆ.
"https://kn.wikipedia.org/wiki/ಶೈವ_ಪಂಥ" ಇಂದ ಪಡೆಯಲ್ಪಟ್ಟಿದೆ