ವೈರಾಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ನಿರ್ಮಾಣ, ಬ್ಯಾಕ್ಟೀರಿಯೋಫಾಜ್
೧೧ ನೇ ಸಾಲು:
ವೈರಾಣುಗಳ ಅಸ್ತಿತ್ವವನ್ನು ಹತ್ತೊಂಬತ್ತನೇಯ ಶತಮಾನದಿಂದ ನಿರೀಕ್ಷಣೆಗೆ ಒಳಗೊಂಡಿದೆ. ಇದರ ಫಲವಾಗಿ ಇವುಗಳು ಬ್ಯಾಕ್ಟೀರಿಯಾಗಳಿಗಿಂತ ಚಿಕ್ಕದು ಎಂಬುದು ವ್ಯಕ್ತವಾಯಿತು. ಇನ್ನ ಒಂದು ಹೆಜ್ಜೆ ಮುಂದೆಯಾಗಿ ಇವುಗಳು ಪುನರಾವರ್ತಿಸುವುದು ಜೀವಕೋಶಗಳಲ್ಲಿ ಮಾತ್ರವೆಂದು ತಿಳಿಯಿತು. ೧೮೯೨ರಲ್ಲಿ, '''''ಡಿಮಿಟ್ರಿ ಇವಾನೋವ್ಸ್ಕಿ''''' ಅವರು ಮಾಡಿದ ವ್ಯಾಸಂಗದ ಮೂಲಕ, ಸೋಂಕಿತಗೊಂಡ ಸಸ್ಯರಸವನ್ನು ಬಹಳ ಫೂಟ್ಟ ರಂದ್ರ ಹೊಂದಿರುವ ಶೋಧಕದಲ್ಲಿ ಸೋಸಿದಾಗಲು ಪಡೆದ ದ್ರವಕ್ಕೆ ಬೇರೆ ಆರೋಗ್ಯಕರವಾದ ಗಿಡವನ್ನು ಸೋಂಕಿತಗೊಳಿಸುವ ಶಕ್ತಿ ಉಳಿದಿತ್ತು. ಆದರೆ ಇದೇ ದ್ರವವನ್ನು ಪ್ರಯೋಗಾಲಯದಲ್ಲಿ ಬೆಳೆಯಲು ಸಾಧ್ಯವಾಗಲಿಲ್ಲ. ಪಡೆದ ಫಲಿತಾಂಶದಿಂದ ಇವರು, ಬೆಳೆಯಲು ಅಸಾಧ್ಯವಾದ, ಬ್ಯಾಕ್ಟೀರಿಯಾಗಳಿಗಿಂತ ಚಿಕ್ಕ ಜೀವಿಗಳು ಇವು ಎಂದು ಹೇಳಿದರು. ಇವುಗಳ ನಿಜವಾದ ಸ್ವಭಾವವನ್ನು ೧೯೩೩ರಲ್ಲಿ ಜೀವಶಾಸ್ತ್ರಜನಾದ '''''ವೆಂಡಲ್ ಮೆರೆಡಿತ್ ಸ್ಟಾನ್ಲಿ '''''ಅವರು ಕಂಡುಹಿಡಿದ '''ಟೊಬಾಕೊ ಮೊಸಾಯ್ಕ್ ವೈರಾಣು'''ವಿನ[https://en.wikipedia.org/wiki/Tobacco_mosaic_virus TMV] ಮೂಲಕ. ತಂಬಾಕು ಗಿಡದ ಸೋಂಕಿತ ಎಲೆಯನ್ನು ತೆಗೆದು, ಅದರ ಸತ್ವವನ್ನು ಶೇಕರಿಸಿ,ಶುದ್ದಗೊಳಿಸಿ, ಪತನ ಮಾಡಿದಾಗ, ದ್ರವದಲ್ಲಿದ್ದ ಎಲ್ಲವು ಪತನಗೊಂಡವು. ಇದು ಸಾಧ್ಯವಾಗುವುದು ರಾಸಾಯನೀಯ ಪದಾರ್ಥಗಳಲ್ಲಿ ಮಾತ್ರವೆ. ಇದರ ಮೂಲಕ ಇವರು, ವೈರಾಣುಗಳನ್ನು ಸ್ಫಟಕೀಕರಣಗೊಳ್ಳಿಸಿ, ಇವುಗಳು ಕೇವಲ ನಿರ್ಜೀವ ಪದಾರ್ಥಗಳು ಎಂದು ವ್ಯಕ್ತಪಡಿಸಿದರು. ೧೯೪೬ರಲ್ಲಿ ಇವರ ಈ ಕೆಲಸಕ್ಕೆ ನೊಬೇಲ್ ಪುರಸ್ಕಾರ ದೊರಕಿತು. ಕೆಲವು ವರ್ಷಗಳ ನಂತರ ವಿಜ್ಞಾನಿಗಳು ಈ ವೈರಾಣುವಿನ ಸಂಯೋಜನೆ ಆರ್.ಎನ್.ಎ ಹಾಗು ಪ್ರೋಟೀನುಗಳು ಎಂಬುದು ವ್ಯಕ್ತವಾಯಿತು.
 
=='''ವೈರಾಣುಗಳ ನಿರ್ಮಾಣ'''==
ಎಲ್ಲಾ ವೈರಾಣುಗಳಿಗೆ ತಳಮಟ್ಟದ ರಚನೆ ಒಂದೇ ಆಗಿದೆ: ನಡುವಲ್ಲಿ ನ್ಯೂಕ್ಲಿಯಿಕ್ ಆಸಿಡ್, ಇದರ ಸುತ್ತ ಪ್ರೋಟೀನಿನ ಸುತ್ತುವರಿ. ಎರಡು ತರದ ನ್ಯೂಕ್ಲಿಯಿಕ್ ಆಸಿಡಿನಲ್ಲಿ (ಡಿ.ಎನ್.ಎ ಹಾಗೂ ಆರ್.ಎನ್.ಎ) ಯಾವುದಾದರು ಒಂದು ಪ್ರತಿಯೊಬ್ಬ ವೈರಾಣುವಿನಲ್ಲಿ ಕಂಡುಬರುತ್ತದೆ. ಇದರ ಸುತ್ತ ಇರುವುದು ೧ ರಿಂದ ಹಲವಾರು ತರದ ಪ್ರೋಟೀನುಗಳು ಪುನರಾವರ್ತಿತವಾಗಿ ಮಾಡಲಾಗಿರುವ 'ಕ್ಯಾಪ್ಸಿಡ್' ಎಂಬ ರಕ್ಷಣೆ. ಈ ಪ್ರೋಟೀನುಗಳನ್ನು 'ಕ್ಯಾಪ್ಸೋಮಿಯರ್ಸ್' ಎಂದು ಕರೆಯಲಾಗಿದೆ. ಕೆಲವು ಪ್ರಾಣಿಗಳನ್ನು ಆಕ್ರಮಿಸುವ ವೈರಾಣುಗಳಿಗೆ ಕ್ಯಾಪ್ಸಿಡಿನ ಸುತ್ತ ಪ್ರೋಟೀನ್, ಮೇದಸ್ಸು ಅಥವ ಗ್ಲೈಕೋ-ಪ್ರೋಟೀನ್, ಎವುಗಳಿಂದ ನಿರ್ಮಿತವಾಗಿರುವ 'ಎನ್ವೆಲಪ್' ಎಂಬ ಸುತ್ತಗಟ್ಟ ಇದೆ.
 
=='''ವೈರಾಣುಗಳು ಮತ್ತು ರೋಗಗಳು'''==
==='''''ಮನುಷ್ಯ'''''===
*ಹೆಚ್.ಐ.ವಿ ---ಎ.ಐ.ಡಿ.ಎಸ್
*ಹೆಪಟೈಟಿಸ್ ವೈರಾಣು[[''ಹೆಪಟೈಟಿಸ್ ಬಿ ವೈರಾಣು'']]---ಯಕೃತ್ತು ರೋಗಗಳು
*ಹಲವಾರು ವೈರಾಣುಗಳು, ಮುಖ್ಯವಾಗಿ ರೈನೋ ವೈರಾಣು---[[''ನೆಗಡಿ'']]
*ಹೆರ್ಪೆಸ್ ವೈರಾಣು---ಚಿಕನ್ ಪೋಕ್ಸ್
 
==='''''ಮೃಗ'''''===
*ರಾಬ್ಡೋ ವೈರಾಣು---ರೇಬೀಸ್
*ಹಂದಿಜ್ವರ ವೈರಾಣು---[[''ಹಂದಿಜ್ವರ'']]
*ಇನ್ಫ್ಲುಯೆನ್ಜ ವೈರಾಣು---[[''ಇನ್ಫ್ಲುಯೆನ್ಜ'']]
 
==='''''ಗಿಡ'''''===
*ಟಿ.ಎಮ್.ವಿ---ಮೊಸೈಕ್ ರೋಗ
[[ಚಿತ್ರ:Bacteriophage.png|thumbnail|left|ಬ್ಯಾಕ್ಟೀರಿಯೋಫಾಜ್]]
=='''ಬ್ಯಾಕ್ಟೀರಿಯೋಫಾಜ್'''==
ಬ್ಯಾಕ್ಟೀರಿಯಾಗಳನ್ನು ಆಕ್ರಮಿಸುವ ವೈರಾಣುಗಳನ್ನು 'ಬ್ಯಾಕ್ಟೀರಿಯೋಫಾಜ್' ಎಂದು ಕರೆಯಲಾಗಿದೆ. ಇವುಗಳಲ್ಲಿ ಎರಡು ರೀತಿಯ ಸಂತಾನೋತ್ಪತಿಯ ರೀತಿಗಳನ್ನು ಕಂಡು ಬರಬಹುದು. ಒಂದು 'ಲೈಟಿಕ್' ಮತ್ತೊಂದು 'ಲೈಸೋಜೆನಿಕ್' ಜೀವನ ಚಕ್ರ.
 
==='''ಲೈಟಿಕ್ ಜೀವನ ಚಕ್ರ'''===
(ಲೈಸಿಸ್ ಎಂದರೆ 'ಬೇರ್ಪಡು' ಎಂದರ್ಥ) ವೈರಾಣು ಒಂದು ಬ್ಯಾಕ್ಟೀರಿಯಾದ ಜೀವಕೋಶವನ್ನು ಸೋಂಕಿತಗೊಳ್ಳಿಸಿ, ನಂತರ ಅದೇ ಕೋಶವನ್ನು ಸಂಪೂರ್ಣವಾಗಿ ನಾಶಗೊಳಿಸಿದಾಗ ಆ ಜೀವನ ಚಕ್ರವನ್ನು ಲೈಟಿಕ್ ಜೀವನ ಚಕ್ರ ಎಂದು ಕರೆಯುವೆವು. ಕೆಲವು ವೈರಾಣುಗಳು ಇದನ್ನು ಬ್ಯಾಕ್ಟೀರಿಯದ ಒಳಗೆ ಸೇರಿದ ತಕ್ಷಣ ಮಾಡುವುದು, ಕೆಲವು ಸುಮಾರು ವರ್ಷಗಳು ಕಳೆದು ಮಾಡುವವು. [[ಚಿತ್ರ:Phage2.JPG|thumbnail|right|ಲೈಟಿಕ್ ಮತ್ತು ಲೈಸೋಜೆನಿಕ್ ಜೀವನ ಚಕ್ರ]]
ವೈರಾಣು ಮೊದಲು ಬ್ಯಾಕ್ಟೀರಿಯ ಕೋಶದ ಮೇಲೆ ಇರುವ ಗ್ರಾಹಕ ಕಣಗಳ ಒಂದಿಗೆ ಅಂಟಿಕೊಂಡು, ತಮ್ಮ ನ್ಯೂಕ್ಲಿಕ್ ಆಸಿಡನ್ನು ಕೋಶದ ಒಳಕ್ಕೆ ಕಳಿಸುತ್ತದೆ. ಕೋಶದ ಒಳಗಡೆ ಈ ಒಂದು ನ್ಯೂಕ್ಲಿಕ್ ಆಸಿಡ್ ಹೆಚ್ಚಾಗುತ್ತದೆ ಜೊತೆಗೆ ಪ್ರೋಟೀನುಗಳ ಉತ್ಪಾದನೆಯು ನಡೆಯುತ್ತದೆ. ಇದರ ನಂತರ ನಿರ್ಮಿತವಾದ ಎಲ್ಲಾ ಕಣಗಳು ಸೇರಿ ಹಲವಾರು ವೈರಾಣುಗಳನ್ನು ಹೊರಡಿಸುತ್ತದೆ. ಕೋಶದ ಒಳಗಿನ ಒತ್ತಡ ಹೆಚ್ಚಾಗಿದಾಗ ಕೋಶವನ್ನು ಕೀಳಿ ಹೊರಹೊಮ್ಮುವವು. ಪ್ರತಿಯೊಂದು ಸೋಂಕಿತಗೊಂಡ ಕೋಶದಿಂದ ನೂರಾರು ವೈರಾಣುಗಳು ಹೊರಬರುವವು.
 
==='''ಲೈಸೋಜೆನಿಕ್ ಜೀವನ ಚಕ್ರ'''===
ಈ ಜೀವ ಚಕ್ರದಲ್ಲಿ ಬ್ಯಾಕ್ಟೀರಿಯಾದ ಕೋಶಗಳು ನಾಶವಾಗುವುದಿಲ್ಲ. ಆದರೆ ಕೋಶದ ಒಳಗಿರುವ ವೈರಾಣುವು ಯಾವುದಾದರು ರೀತಿಯಲ್ಲಿ ಪ್ರಚೋದಕಗೊಂಡರೆ ಅದು ಲೈಟಿಕ್ ಜೀವಚಕ್ರವನ್ನು ಮುಂದುವರಿಸುತ್ತದೆ. ಇಲ್ಲಿ ವೈರಾಣುವಿನ ಗುಣಾಕಾರ ನಡೆಯುವುದಿಲ್ಲ, ಬದಲಾಗಿ ಕೋಶದ ಒಳಗಡೆ ಸೇರಿದ ನ್ಯೂಕ್ಲಿಕ್ ಆಸಿಡ್, ಬ್ಯಾಕ್ಟೀರಿಯಾದ ನ್ಯೂಕ್ಲಿಕ್ ಆಸಿಡಿನ ಜೊತೆ ಸೇರಿರುತ್ತದೆ. ವೈರಾಣುವಿನ ಸಂತಾನೋತ್ಪತಿ ನಡೆಯುವ ಮೂಲಕ ವೈರಾಣುವಿನ ಗುಣಾಕಾರವು ನಡೆಯುತ್ತದೆ.
 
ಕೆಲವು ವೈರಾಣುಗಳಲ್ಲಿ ಎರಡು ತರದ ಜೀವನ ಚಕ್ರವನ್ನು ಕಂಡುಬರಬಹುದು.(λ ಫಾಜ್).
 
==ಉಲ್ಲೇಖ==
<ref> Raven, Peter H;Johnson George Brooks. ''Biology,6th edition''. state textbook adoption,Rowan,Salisbury.2000</ref>
"https://kn.wikipedia.org/wiki/ವೈರಾಣು" ಇಂದ ಪಡೆಯಲ್ಪಟ್ಟಿದೆ