ವೈರಾಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೆಚ್ಚು ಪರಿಚಯ ಹಾಗು ಇತಿಹಾಸ
೮ ನೇ ಸಾಲು:
 
=='''ಇತಿಹಾಸ'''==
[[ಚಿತ್ರ:ಟಿ.ಎಮ್.ವಿ ವೈರಾಣು|Https://commons.wikimedia.org/wiki/File:TMV structure full.png|framed|left|ಟಿ.ಎಮ್.ವಿ ವೈರಾಣು]]
[[ಚಿತ್ರ:ವೆನ್ಡೆಲ್ ಮೆರೆಡಿತ್ ಸ್ಟಾನ್ಲಿ|Https://commons.wikimedia.org/wiki/File:Wendell Meredith Stanley.jpg|framed|left|ವೆನ್ಡೆಲ್ ಮೆರೆಡಿತ್ ಸ್ಟಾನ್ಲಿ]]
ವೈರಾಣುಗಳ ಅಸ್ತಿತ್ವವನ್ನು ಹತ್ತೊಂಬತ್ತನೇಯ ಶತಮಾನದಿಂದ ನಿರೀಕ್ಷಣೆಗೆ ಒಳಗೊಂಡಿದೆ. ಇದರ ಫಲವಾಗಿ ಇವುಗಳು ಬ್ಯಾಕ್ಟೀರಿಯಾಗಳಿಗಿಂತ ಚಿಕ್ಕದು ಎಂಬುದು ವ್ಯಕ್ತವಾಯಿತು. ಇನ್ನ ಒಂದು ಹೆಜ್ಜೆ ಮುಂದೆಯಾಗಿ ಇವುಗಳು ಪುನರಾವರ್ತಿಸುವುದು ಜೀವಕೋಶಗಳಲ್ಲಿ ಮಾತ್ರವೆಂದು ತಿಳಿಯಿತು. ೧೮೯೨ರಲ್ಲಿ, '''''ಡಿಮಿಟ್ರಿ ಇವಾನೋವ್ಸ್ಕಿ''''' ಅವರು ಮಾಡಿದ ವ್ಯಾಸಂಗದ ಮೂಲಕ, ಸೋಂಕಿತಗೊಂಡ ಸಸ್ಯರಸವನ್ನು ಬಹಳ ಫೂಟ್ಟ ರಂದ್ರ ಹೊಂದಿರುವ ಶೋಧಕದಲ್ಲಿ ಸೋಸಿದಾಗಲು ಪಡೆದ ದ್ರವಕ್ಕೆ ಬೇರೆ ಆರೋಗ್ಯಕರವಾದ ಗಿಡವನ್ನು ಸೋಂಕಿತಗೊಳಿಸುವ ಶಕ್ತಿ ಉಳಿದಿತ್ತು. ಆದರೆ ಇದೇ ದ್ರವವನ್ನು ಪ್ರಯೋಗಾಲಯದಲ್ಲಿ ಬೆಳೆಯಲು ಸಾಧ್ಯವಾಗಲಿಲ್ಲ. ಪಡೆದ ಫಲಿತಾಂಶದಿಂದ ಇವರು, ಬೆಳೆಯಲು ಅಸಾಧ್ಯವಾದ, ಬ್ಯಾಕ್ಟೀರಿಯಾಗಳಿಗಿಂತ ಚಿಕ್ಕ ಜೀವಿಗಳು ಇವು ಎಂದು ಹೇಳಿದರು. ಇವುಗಳ ನಿಜವಾದ ಸ್ವಭಾವವನ್ನು ೧೯೩೩ರಲ್ಲಿ ಜೀವಶಾಸ್ತ್ರಜನಾದ '''''ವೆಂಡಲ್ ಮೆರೆಡಿತ್ ಸ್ಟಾನ್ಲಿ '''''ಅವರು ಕಂಡುಹಿಡಿದ '''ಟೊಬಾಕೊ ಮೊಸಾಯ್ಕ್ ವೈರಾಣು'''ವಿನ[https://en.wikipedia.org/wiki/Tobacco_mosaic_virus TMV] ಮೂಲಕ. ತಂಬಾಕು ಗಿಡದ ಸೋಂಕಿತ ಎಲೆಯನ್ನು ತೆಗೆದು, ಅದರ ಸತ್ವವನ್ನು ಶೇಕರಿಸಿ,ಶುದ್ದಗೊಳಿಸಿ, ಪತನ ಮಾಡಿದಾಗ, ದ್ರವದಲ್ಲಿದ್ದ ಎಲ್ಲವು ಪತನಗೊಂಡವು. ಇದು ಸಾಧ್ಯವಾಗುವುದು ರಾಸಾಯನೀಯ ಪದಾರ್ಥಗಳಲ್ಲಿ ಮಾತ್ರವೆ. ಇದರ ಮೂಲಕ ಇವರು, ವೈರಾಣುಗಳನ್ನು ಸ್ಫಟಕೀಕರಣಗೊಳ್ಳಿಸಿ, ಇವುಗಳು ಕೇವಲ ನಿರ್ಜೀವ ಪದಾರ್ಥಗಳು ಎಂದು ವ್ಯಕ್ತಪಡಿಸಿದರು. ೧೯೪೬ರಲ್ಲಿ ಇವರ ಈ ಕೆಲಸಕ್ಕೆ ನೊಬೇಲ್ ಪುರಸ್ಕಾರ ದೊರಕಿತು. ಕೆಲವು ವರ್ಷಗಳ ನಂತರ ವಿಜ್ಞಾನಿಗಳು ಈ ವೈರಾಣುವಿನ ಸಂಯೋಜನೆ ಆರ್.ಎನ್.ಎ ಹಾಗು ಪ್ರೋಟೀನುಗಳು ಎಂಬುದು ವ್ಯಕ್ತವಾಯಿತು.
 
"https://kn.wikipedia.org/wiki/ವೈರಾಣು" ಇಂದ ಪಡೆಯಲ್ಪಟ್ಟಿದೆ