ಕಣಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೩ ನೇ ಸಾಲು:
 
ಬೆಳೆ ಬೆಳೆಯುವ ರೈತರು ಬಂದ ಬೆಳೆಯನ್ನು ಕಾಪಾಡಿಕೊಳ್ಳಲು ಪುರಾತನ ಕಾಲದಿಂದಲೂ ಮಾಡಿಕೊಂಡಿರುವ ಒಂದು ವ್ಯವಸ್ಥೆ. ಅದರಲ್ಲೂ ಮುಖ್ಯವಾಗಿ ಬತ್ತದ ಬೆಳೆಗಾರರು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಕನ್ನಡದಲ್ಲಿ ಒಂದು ಸೊಗಸಾದ ಗಾದೆಯೂ ಇದೆ."ಹನಿ ಹನಿ ಕೂಡಿದರೆ ಹಳ್ಳ,; ತೆನೆ ತೆನೆ ಕೂಡಿದರೆ ಬಳ್ಳ. ಬಳ್ಳ ಎಂದರೆ ಧವಸ-ಧಾನ್ಯಗಳನ್ನು ಅಳೆಯುವ ಸಾಧನ. ಹಿಂದೆ ರಾಜ-ಮಹಾರಾಜರು ರೈತರಿಂದ ಧವಸ-ಧಾನ್ಯಗಳನ್ನು ವಸೂಲಿ ಮಾಡಿ ಅವನ್ನೇಲ್ಲ ಸಂಗ್ರಹಿಸಿ ದೊಡ್ಡದೊಂದು ಉಗ್ರಾಣವನ್ನು ಕಟ್ಟಿಸಿ ಅದರೊಳಗೆ ವರ್ಷಗಟ್ಟಲೆ ಶೇಖರಿಸಿ ಇಡುತ್ತಿದ್ದರು. ಊರಿಗೆ ಬರಗಾಲ, ಕ್ಷಾಮ ಬಂದಾಗ ಉಗ್ರಾಣದಲ್ಲಿನ ಧವಸ-ಧಾನ್ಯಗಳನ್ನು ಜನರಿಗೆ ದಾನ ಮಾಡುತ್ತಿದ್ದರು. ಈಗಲೂ ಅಂತಹ ಬೃಹತ್ ಉಗ್ರಾಣ/ಕಣಜವನ್ನು ಹಾವೇರಿ ಜಿಲ್ಲೆಯಲ್ಲಿರುವ ಬಂಕಾಪುರದಲ್ಲಿ ಕಾಣಬಹುದು. ಜನಪದರ ಇಡೀ ಜೀವನವೇ ಕಣಜದಲ್ಲಿ ಅಡಗಿರುತ್ತದೆ ಎಂಬ ಮಾತಿದೆ. ಜನ ಸಾಮಾನ್ಯರು ರಾಜ-ಮಹಾರಾಜರಂತೆ ಉಗ್ರಾಣಗಳನ್ನು ಕಟ್ಟಿಸುವ ಶಕ್ತಿ ಇಲ್ಲದುದರಿಂದ ತಮ ತಮಗೆ ಅನುಕೂಲವಾಗುವ ರೀತಿಯಲ್ಲಿ ಬಿದಿರಿನಿಂದ ಮಾಡಿದ ಗುಡಾಣ/ಕಣಜಗಳನ್ನು ಸಗಣಿಯಿಂದ ತಾರಿಸಿ ಧವಸ-ಧಾನ್ಯಗಳ ಶೇಖರಣೆಗೆ ಬಳಸುತ್ತಾರೆ. ಕೆಲವರು ಮನೆಯೊಳಗೆ ಸಿಮೆಂಟಿನಲ್ಲಿ ಉಗ್ರಾಣ/ಕಣಜವನ್ನು ಕಟ್ಟಿಸಿದರೆ, ಹಿರಿಯರು ಬೃಹತ್ ಮಡಕೆಯಲ್ಲಿ ಕಣಜವನ್ನು ತಯಾರಿಸಿ ಅದರಲ್ಲಿ ಧವಸ-ಧಾನ್ಯಗಳ ಶೇಖರಿಸಿ ಇಡುತ್ತಿದ್ದರು. ಕಣಜಗಳನ್ನು ಹೊರಗಿನಿಂದ ನೋಡಿದರೆ ಪುಟ್ಟ ಗುಡಿಸಿಲಿನಂತೆ ಗೋಚರಿಸುತ್ತದೆ. ಕಣಜಕ್ಕೆ ಮಳೆ, ಗಾಳಿ ,ಬಿಸಿಲು ಬೀಳದಂತೆ ಜತನ ಮಾಡುತ್ತಿದ್ದರು. ಸಾಮಾನ್ಯವಾಗಿ ಮನೆಯೊಳಗಿನ ಕಡೆಯ ಕತ್ತಲೆ ಕೋಣೆಯೊಳಗೆ, ಇದನ್ನು ಇಡುತ್ತಿದ್ದರು. ಮನೆಯ ಹಿರಿಯರಿಗೆ ಮಾತ್ರ ಕಣಜದ ಕೋಣೆಯೊಳಗೆ ಪ್ರವೇಶ ಇರುತ್ತಿತ್ತು.
 
'''ಕರ್ನಾಟಕ ಸರಕಾರ'''ವು ೨೦೦೯ರ ಡಿಸೆಂಬರ್ ೫ ರಂದು "ಕಣಜ"ಎಂಬ ಅಂತರಜಾಲ ಕನ್ನಡ ಜ್ಞಾನಕೋಶ ಎಂಬ ಅಂತರ್ಜಾಲ ತಾಣವನ್ನು ಹುಟ್ಟು ಹಾಕಿತು.[http:// kanaja .in/ "ಕಣಜ"]’ವನ್ನು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗವು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಕಾರದೊಂದಿಗೆ ಈ ಯೋಜನೆಯನ್ನು ಪರಿಕಲ್ಪಿಸಿ, ರೂಪಿಸಿದ್ದು ಇಂಟರ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ, ಬೆಂಗಳೂರು (ಐಐಐಟಿ-ಬಿ) ಇವರು ಜಾರಿಗೊಳಿಸುತ್ತಿದ್ದಾರೆ.
 
[[Image:_ _ _ Kanaja 2.JPG|thumb| ಕಣಜ]]
"https://kn.wikipedia.org/wiki/ಕಣಜ" ಇಂದ ಪಡೆಯಲ್ಪಟ್ಟಿದೆ