ಲಿಯನಾರ್ಡೊ ಡ ವಿಂಚಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು added Category:ಕಲೆ using HotCat
೨೮ ನೇ ಸಾಲು:
 
==ಭವ್ಯ ಸೃಷ್ಟಿಗಳು==
[[File:Mona Lisa, by Leonardo da Vinci, from C2RMF retouched.jpg|thumb|''[[ಮೋನ ಲೀಸ]]'' or ''La Gioconda'' (1503–1505/1507)—[[Louvre]], Paris, France]]
ಬಹುಮುಖ ಪ್ರತಿಭೆಯಾಗಿದ್ದ ಲಿಯನಾರ್ಡೊ ಡ ವಿಂಚಿ ಇಟ್ಯಾಲಿಯನ್ ನವೋದಯ ವಾಸ್ತುಶಿಲ್ಪಿ, ಸಂಗೀತಗಾರ, ಶರೀರ ರಚನಾ ಶಾಸ್ತ್ರಜ್ಞ, ಸಂಶೋಧಕ, ಶಿಲ್ಪಿ, ರೇಖಾಗಣಿತ ಶಾಸ್ತ್ರಜ್ಞ, ಯಂತ್ರಶಿಲ್ಪಿ ಮತ್ತು ವರ್ಣಚಿತ್ರಗಾರ ಹೀಗೆ ಏನೇನೋ. ಇವರನ್ನು ಆದರ್ಶ "ನವೋದಯ ಮಾನವ" ಮತ್ತು ಹಲವಾರು ವಿಷಗಳಲ್ಲಿ ಇವರು ತೋರಿರುವ ಅಮಿತ ವೈಜ್ಞಾನಿಕ ಕುತೂಹಲ, ಆಸಕ್ತಿ ಮತ್ತು ಸೃಜನಶೀಲತೆಯಿಂದಾಗಿ ಸಾರ್ವತ್ರಿಕವಾಗಿ ಮೇಧಾವಿ ಎಂದು ಪರಿಗಣಿಸಲಾಗಿದೆ. ಈ ಜಗತ್ತು ಕಂಡ ಅತಿ ಶ್ರೇಷ್ಠ ವರ್ಣಚಿತ್ರಗಾರಲ್ಲೋರ್ವರು ಎಂದು ಪರಿಗಣಿಸಲ್ಪಟ್ಟಿರುವ ಲಿಯನಾರ್ಡೋ ಡ ವಿಂಚಿ ವಿಶ್ವವಿಖ್ಯಾತ 'ಮೋನಾಲಿಸಾ', 'ಲಾಸ್ಟ್ ಸಪ್ಪರ್', , ‘ವಿಟ್ರೂವಿಯನ್ ಮ್ಯಾನ್ – ದಿ ಪ್ರೊಪೋರ್ಶಂಸ್ ಆಫ್ ಹ್ಯುಮನ್ ಫಿಗರ್’, ‘ಮಗುವಿನೊಂದಿಗೆ ಕನ್ಯೆ’, ‘ಸಂತ ಆನ್’ ಮುಂತಾದ ಅದ್ಭುತ ವರ್ಣಚಿತ್ರಗಳನ್ನು ರಚಿಸಿದ್ದರು. ಬಹುಷಃ ಅವರ ಸಮಕಾಲೀನರಾದ ಮೈಕೆಲ್ ಎಂಜೆಲೋ ಹೊರತಾಗಿ ಮತ್ಯಾರ ಚಿತ್ರಗಳೂ ಇವರ ಚಿತ್ರಗಳಷ್ಟು ಮರುಮುದ್ರಣಗಳನ್ನು ಕಂಡಿದ್ದೇ ಇಲ್ಲ. ಇವರು ತಮ್ಮ ಸ್ವಯಂ ಟಿಪ್ಪಣಿ ಬರಹಗಳಲ್ಲಿ , ಶರೀರ ರಚನಾ ಶಾಸ್ತ್ರ, ಖಗೋಳಶಾಸ್ತ್ರ , ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಕುರಿತು ಅನೇಕ ವಿಚಾರಗಳು, ಚಿತ್ರಗಳು ಮತ್ತು ನಕ್ಷೆಗಳನ್ನು ಅಭಿವ್ಯಕ್ತಿಸಿದ್ದಾರೆ.
 
"https://kn.wikipedia.org/wiki/ಲಿಯನಾರ್ಡೊ_ಡ_ವಿಂಚಿ" ಇಂದ ಪಡೆಯಲ್ಪಟ್ಟಿದೆ