ಜ್ಯೋತಿಷ ಮತ್ತು ವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫ ನೇ ಸಾಲು:
==ಜಾತಕ ಮತ್ತು ಕುಂಡಲಿ ರಚನೆ==
* ಭವಿಷ್ಯ ಇತ್ಯಾದಿ ಗುಣ, ದೋಷ ತಿಳಿಯಲು ವ್ಯಕ್ತಿಯ ಕುಂಡಲಿಯನ್ನು ರಚಿಸಲಾಗುವುದು. ಜನನ ಕಾಲದಲ್ಲಿ ಯಾವ ಯಾವ ಗ್ರಹಗಳು ಆಕಾಶದಲ್ಲಿ ಯಾವ ಯಾವ ಸ್ಥಾನದಲ್ಲಿ ಇದ್ದವೆಂದು ತಿಳಿಸುವ ವಿವರ ಮತ್ತು ನಕ್ಷೆಯೇ ಆ ವ್ಯಕ್ತಿಯ ಜಾತಕ ಮತ್ತು ಕುಂಡಲಿ. ಭೂಮಿಯು ಒಂದು ದಿನದಲ್ಲಿ ತನ್ನನ್ನೇ ತಾನು (ತನ್ನ ಅಕ್ಷದ ಮೇಲೆ) ಒಂದು ಸುತ್ತು ಸುತ್ತುವುದು. ಈ ಅಕ್ಷಕ್ಕೆ ಲಂಬವಾಗಿರುವ [[ಭೂಮಧ್ಯ ರೇಖೆ]]ಯನ್ನು ಆಕಾಶಕ್ಕೆ ವಿಸ್ತರಿಸಿದಲ್ಲಿ ಆಕಾಶದಲ್ಲಿ ಒಂದು ಖಗೋಲ ವೃತ್ತವಾಗುವುದು. ಅದನ್ನು [[ವಿಷುವದ್ ವೃತ್ತ]]ವೆಂದು ಕರೆಯುತ್ತಾರೆ. ಹೀಗೆ ಸ್ವಯಂ ಬ್ರಮಣದೊಂದಿಗೆ ಸೂರ್ಯನನ್ನು ಸುತ್ತುವಾಗ , ಭೂಮಿಯ ಅಕ್ಷವು ೨೩.೫ (೨೩.೪೪) ಡಿಗ್ರಿ ಓರೆಯಾಗಿ ಇರುವುದರಿಂದ, ವಿಷುವದ್ ರೇಖೆಗೆ ಅಥವಾ ಭೂಮಿಯ ಅಕ್ಷಕ್ಕೆ ೨೩.೫ ಡಿಗ್ರಿ ಓರೆಯಾಗಿ ಭೂಮಿಯ ಮೇಲಿನ ಊಹಾ ವೃತ್ತಗಳಾದ, ಮಕರ ಸಂಕ್ರಾತಿ ಮತ್ತು [[ಕರ್ಕಾಟಕ ಸಂಕ್ರಾಂತಿ]] ವೃತ್ತ ಗಳ ಮಧ್ಯೆ ಒಂದು ಊಹಾವೃತ್ತವು ಉಂಟಾಗುವುದು. ಅದನ್ನು ಆಕಾಶಕ್ಕೆ ವಿಸ್ತರಿಸಿದಲ್ಲಿ , ಅದನ್ನು [[ಕ್ರಾಂತಿ ವೃತ್ತ]] ವೆಂದು ಕರೆಯುತ್ತಾರೆ. ಆ [[ಕ್ರಾಂತಿ ವೃತ್ತ]]ದ ಮೇಲೆ ರಾಶಿ, ನಕ್ಷತ್ರ ಗಳನ್ನು ಗುರುತಿಸಲಾಗಿದೆ.. (ನೋಡಿ ಚಿತ್ರ ಕ್ಲಿಕ್ ಮಾಡಿ- [[ವಿಷುವತ್ ಸಂಕ್ರಾಂತಿ]] ಕೆಂಪು ಗೆರೆ ವಿಷುವದ್ ವೃತ್ತ ; ತಿಳಿ ನೀಲಿ ಗೆರೆ ಕ್ರಾಂತಿ ವೃತ್ತ.) ಅದು (ಕ್ರಾಂತಿ ವೃತ್ತ) ಪಂಚಾಂಗ ರೀತಿ ಸೂರ್ಯನು ೧ ವರ್ಷದಲ್ಲಿ ಭೂಮಿಯನ್ನು ಸುತ್ತುವ ಆಕಾಶದ ಪಥ (ದಾರಿ). ಇದರಲ್ಲಿ ಸೂರ್ಯನು ದಕ್ಷಿಣದ ಕಡೆ ಚಲಿಸುತ್ತಾ [[ಮಕರ ಸಂಕ್ರಾಂತಿ]] ವೃತ್ತ ದ ಮೇಲೆ ನೇರವಾಗಿ ಬಂದು ಉತ್ತರದ ಕಡೆ ಚಲಿಸಲು ಪ್ರಾರಂಬಿಸಿದ ದಿನ [[ಮಕರ ಸಂಕ್ರಾಂತಿ]]. ಅದು ಸಾಮಾನ್ಯ ವಾಗಿ ಜನವರಿ ೧೪ ರಂದು ಆಗುತ್ತದೆ. ಆದರೆ ವೈಜ್ಞಾನಿಕವಗಿ ಸೂರ್ಯನು ಡಿಸೆಂಬರ್ ೨೧/೨೨ ರಂದೇ ಉತ್ತರಾಭಿಮುಖವಾಗಿ ಹೊರಡುತ್ತಾನೆ. ಸಂಕ್ರಮಣ ಲೆಕ್ಕದಲ್ಲಿ ೨೪ ದಿನ ವ್ಯತ್ಯಾಸವಾಗಿದೆ.
 
==ರಾಶಿ==
*ಸೂರ್ಯ ಚಲಿಸುವ [[ಕ್ರಾಂತಿ ವೃತ್ತ]]ದ ಮೇಲೆ ಆಕಾಶದಲ್ಲಿ ೩೦ ಡಿಗ್ರಿಗಳಷ್ಟು ಪ್ರದೇಶವೇ ಒಂದು ರಾಶಿ. ಅದೇ ಒಂದು ಸೌರಮಾನ ತಿಂಗಳು. ಸೂರ್ಯ ೩೦/೩೧ ದಿನಗಳಲ್ಲಿ ಕ್ರಮಿಸುವ ಕಾಲ/ಪಥ ಪ್ರದೇಶ.