ವೇದವ್ಯಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q330521 (translate me)
→‎ಮಹಾಭಾರತದ ಲೇಖಕ: ಚಿತ್ರ ಅಳವಡಿಕೆ
೨೨ ನೇ ಸಾಲು:
 
==[[ಮಹಾಭಾರತ]]ದ ಲೇಖಕ==
[[File:Angkor Wat 006.JPG|thumb|ವ್ಯಾಸ ಗಣೇಶನಿಗೆ ಮಹಾಭಾರತವನ್ನು ವಿವರಿಸುತ್ತಿರುವುದು, [[ಆಂಗ್‌ಕರ್ ವಾಟ್]].]]
 
ಪಾರಂಪರಿಕವಾಗಿ ವ್ಯಾಸರು ಈ ಮಹಾಕಾವ್ಯದ ಲೇಖಕರು. ಆದರೆ ಈ ಮಹಾಕಾವ್ಯದಲ್ಲಿ ಇವರ ಒಂದು ಪಾತ್ರವೂ ಇದೆ. ಇವರ ತಾಯಿ ನಂತರ [[ಹಸ್ತಿನಾಪುರ]]ದ ರಾಜ ಶಂತನುವನ್ನು ಮದುವೆಯಾಗಿ ಇಬ್ಬರು ಗಂಡು ಮಕ್ಕಳನ್ನು ಹೆತ್ತಳು. ಈ ಇಬ್ಬರೂ ಸಂತಾನವಿಲ್ಲದೇ ತೀರಿಕೊಂಡರು. ಪ್ರಾಚೀನ ಪದ್ಧತಿ [[ನಿಯೋಗ]]ವನ್ನು ಅನುಸರಿಸಿ ಸತ್ಯವತಿಯು ವ್ಯಾಸರಿಗೆ ತನ್ನ ಸತ್ತ ಮಗನಾದ [[ವಿಚಿತ್ರವೀರ್ಯ]]ನ ಪರವಾಗಿ ಗಂಡು ಮಕ್ಕಳನ್ನು ಹುಟ್ಟಿಸುವಂತೆ ಕೋರುತ್ತಾಳೆ. ಈ ಪ್ರಕಾರ ವ್ಯಾಸರು ತೀರಿಕೊಂಡ ರಾಜನ ಪತ್ನಿಯರಾದ [[ಅಂಬಿಕೆ]] ಮತ್ತು [[ಅಂಬಾಲಿಕೆ]]ಯಿಂದ [[ಧೃತರಾಷ್ಟ್ರ]] ಮತ್ತು [[ಪಾಂಡು]]ವಿನ ತಂದೆಯಾಗುತ್ತಾರೆ. ಇದೇ ಸಂಪ್ರದಾಯದಿಂದ ರಾಣಿಯರ ಸೇವಕಿಯಿಂದ [[ವಿದುರ]]ನ ಜನ್ಮವಾಗುತ್ತದೆ.
 
Line ೨೮ ⟶ ೩೦:
ಈ ಪ್ರಕಾರ ವ್ಯಾಸರು ಮಹಾಭಾರತ ಯುದ್ಧದಲ್ಲಿ ಕಾದಾಡಿದ [[ಕೌರವ]]ರು ಮತ್ತು [[ಪಾಂಡವ]]ರ ತಾತರಾಗುತ್ತಾರೆ. ತದನಂತರ ಮಹಾಭಾರತದಲ್ಲಿ ಆಧ್ಯಾತ್ಮಿಕ ಗುರುವಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ.
 
ಮಹಾಭಾರತದ ಮೊದಲ ಗ್ರಂಥದಲ್ಲಿ ಇವರು ಈ ಮಹಾಕಾವ್ಯವನ್ನು ರಚಿಸಲು [[ಗಣೇಶ]]ನನ್ನು ಕೇಳಿಕೊಂಡರು. ಈ ಪ್ರತೀತಿಯ ಪ್ರಕಾರ ಗಣೇಶನು ವ್ಯಾಸರಿಗೆ ಮಹಾಕಾವ್ಯವನ್ನು ಒಂದು ಕ್ಷಣವನ್ನೂ ನಿಲ್ಲಿಸಿದೇ ಹೇಳಲು ಷರತ್ತು ವಿಧಿಸಿದನು. ಇದಕ್ಕೆ ಪ್ರತಿಯಾಗಿ ವ್ಯಾಸರು ಹಾಕಿದ ಷರತ್ತೇನೆಂದರೆ ತಾವು ಹೇಳಿದ ಪ್ರತಿ ಶ್ಲೋಕವನ್ನು ಗಣೇಶನು ಅರ್ಥಮಾಡಿಕೊಂಡ ನಂತರವಷ್ಟೇ ಬರೆಯಬೇಕೆಂದು. ಹೀಗೆ ವ್ಯಾಸರಿಗೆ ವಿಶ್ರಾಂತಿ ಬೇಕಿದ್ದಾಗ ಕಷ್ಟಕರವಾದ [[ಸಂಸ್ಕೃತ]] ಶ್ಲೋಕಗಳನ್ನು ಹೇಳುತ್ತಿದ್ದರು.
 
==ಇತರ ಕೃತಿಗಳು==
"https://kn.wikipedia.org/wiki/ವೇದವ್ಯಾಸ" ಇಂದ ಪಡೆಯಲ್ಪಟ್ಟಿದೆ