ಮೀಮಾಂಸ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಜಗತ್ತು: ಮುಂದುವರೆಸಿದೆ-
೫೮ ನೇ ಸಾಲು:
== ಜಗತ್ತು ==
:ಮೀಮಾಂಸ ಜಗತ್ತನ್ನು ನಿತ್ಯವೆಂದು ಹೇಳುತ್ತದೆ.
:ಬದಲಾವಣೆಗಳನ್ನು ಒಪ್ಪಿದರೂ ಅದು ಅನಿತ್ಯವಲ್ಲ, ವಾಸ್ತವ (ಸತ್ಯ).ಅದು ಪರಿಣಾಮ ನಿತ್ಯವಾಗಿದೆ. ಅದಕ್ಕೆ ಆದಿಯೂಇಲ್ಲ , ಅಂತ್ಯವೂ ಇಲ್ಲ. ಪ್ರಳಯ ಕೇವಲ ಕಲ್ಪನೆ. ಸಂಸಾರದಲ್ಲಿ (ಜಗತ್ತು) ನಮಗೆ ಮೂರು ವಸ್ತುಗಳ ಜ್ಞಾನವಾಗುತ್ತದೆ. -ಶರೀರ , ಇಂದ್ರಿಯಗಳು . ಪದಾರ್ಥಗಳು. ಆತ್ಮವು ಇದರಲ್ಲಿದ್ದುಕೊಂಡು, ಸುಖ , ದುಃಖವನ್ನು ಅನುಭವಿಸುತ್ತದೆ. ಈಂದ್ರಿಯಗಳು ಭೋಗ ಸಾಧನಗಳು. ಪದಾರ್ಥಗಳು ಭೋಗ ವಿಷಯಗಳು.
:ಕುಮಾರಿಲ ಮತದಲ್ಲಿ ಪದಾರ್ಥಗಳು ಐದು. ದ್ರವ್ಯ , ಗುಣ , ಕರ್ಮ, ಮತ್ತು ಸಾಮಾನ್ಯಗಳು-ಭಾವ ಪದಾರ್ಥಗಳು , ಅಭಾವವು ಐದನೆಯದು. ದ್ರವ್ಯದಲ್ಲಿ ತಮಸ್ಸು , ಶಬ್ದ ಸೇರಿದೆ. ಕತ್ತಲೆಗೆ -ಕಪ್ಪು ಬಣ್ಣ , ಚಲನೆಗೆ ಶಕ್ತಿ ಇದೆ ಎಂಬುದು ಇವರ ವಾದ.
:ಆದರೆ ವೈಶೇಷಿಕರು , ಬೆಳಕಿನ ಅಭಾವವೇ ಕತ್ತಲೆ ಎನ್ನುತ್ತಾರೆ. ಆದರೆ ಮುರಾರಿ ಮಿಶ್ರನು , ಬ್ರಹ್ಮ ವೊಂದೇ ಪರಮಾರ್ಥಪದಾರ್ಥವೆಂದಿದ್ದಾನೆ. ಕೆಲವರು ಪರಮಾಣು ವಾದವನ್ನು ಒಪ್ಪಿದರೂ, ಕುಮಾರಿಲರು ಮೀಮಾಂಸಕರಿಗೆ ಪರಮಾಣುವಾದವು ಅವಶ್ಯವಿಲ್ಲವೆನ್ನುತ್ತಾರೆ.
== ಆತ್ಮ ==
:ಮೀಮಾಂಸಕರು ಶರೀರ, ಇಂದ್ರಿಯ, ಬುದ್ಧಿಗಳಿಂದ ಬೇರೆಯಾದ ಆತ್ಮವನ್ನು ಒಪ್ಪುತ್ತಾರೆ. ಆತ್ಮವೇ ಇಲ್ಲದಿದ್ದರೆ ಇದ್ದಾಗ ಮತ್ತು ಸತ್ತಮೇಲೆ ಕರ್ಮಫಲವನ್ನು ಭೋಗಿಸುವವನೇಇಲ್ಲವಾದೀತು.
ಇವರ ಪ್ರಕಾರ , ಆತ್ಮದಲ್ಲಿ ಪರಿಣಾಮ ಅಥವಾ ಬದಲಾವಣೆ ಇದೆ. ಆದರೆ ಅನಿತ್ಯವಲ್ಲ . ಅದು ಜ್ಞಾನ ಸ್ವರೂಪಿಯಲ್ಲ. ಜ್ಞಾನವು ಆತ್ಮದ ಕ್ರಿಯೆ. ಆತ್ಮದಲ್ಲಿ ಚಿತ್ , ಅಚಿತ್ , ಅಂಶಗಳಿವೆ . ಚಿತ್ ಅಂಶದಿಂ ಜ್ಞಾನ , ಅಚಿತ್ನಿಂದ ಬದಲಾವಣೆ. ಆತ್ಮವು ಸರ್ವವ್ಯಾಪಿ , ಆದರೆ , ಪ್ರತಿಯೊಂದು ಶರೀರಕ್ಕೂ ಒಂದೊಂದು ಆತ್ಮವಿದೆ . ಪ್ರಭಾಕರನ ಪ್ರಕಾರ, ಅಹಂ ಪ್ರತ್ಯಯ ವೇದ್ಯ. ನಾನು ಎಂಬ ತಿಳುವಿನಿಂದ ತಿಳಿಯಲ್ಪಡುತ್ತದೆ. ಅದರಲ್ಲಿ ಕ್ರಿಯೆ ಇಲ್ಲ. ಆದರೆ ಕೆಲವರು ಅದಕ್ಕೆ ಎರಡೂ ಗುಣಗಳಿವೆ ಎನ್ನುತ್ತಾರೆ. ಅದು ಮಾನಸ ಪ್ರತ್ಯಕ್ಷ ವೆನ್ನುತ್ತಾರೆ .
== ಕರ್ಮ ==
:ಈ ದರ್ಶನದಲ್ಲಿ ಪ್ರಧಾನವಾದುದು ಕರ್ಮತತ್ವ. ವೇದ ವಿಹಿತವಾದ ಯಾಗಾದಿಗಳ ಆಚರಣೆಯೇ, ಧರ್ಮ . ಇದೇ ಕರ್ಮ ಅಥವಾ ಕರ್ತವ್ಯ. ವೇದ ನಿಷೇಧವಾದದ್ದು ಅಧರ್ಮ. ವೇದ ವಿಧಿಸಿದ ಕರ್ಮಗಳು ಮೂರು ವಿಧ. :- ನಿತ್ಯ , ನೈಮಿತ್ತಿಕ , ಕಾಮ್ಯ .
:೧. ಸಂಧ್ಯಾವಂದನೆ , ದೇವರ ಪೂಜೆ ಮೊದಲಾದವು -ನಿತ್ಯಕರ್ಮ.
:೨. ಶ್ರಾದ್ಧಾದಿ ವಿಶೇಷ ಕರ್ಮಗಳು ನೈಮಿತ್ತಿಕ ಕರ್ಮಗಳು.
:೩. ಕಾಮನೆಯ (ಬಯಕೆಯ) ಪೂರ್ತಿಗಾಗಿ ಮಾಡುವುದು ಕಾಮ್ಯ ಕರ್ಮ.
:ಇವು ಧರ್ಮವೆನಿಸುತ್ತವೆ. ವೇದ ವಿರೋಧಿ ಕರ್ಮಗಳು ನಿಷಿದ್ಧ ಕರ್ಮಗಳು.
:೧. ನಿತ್ಯ ಕರ್ಮಗಳಿಗೆ ಫಲವಿಲ್ಲ. ಬಿಟ್ಟರೆ ಪ್ರತ್ಯವಾಯು (ಲೋಪ) ಸಂಭವಿಸುತ್ತದೆ. ಆದರೆ ಮಾಡಿದ್ದರಿಂದ ಪಾಪಗಳು ಕ್ಷಯಿಸುತ್ತವೆ ಎಂದು ಕುಮಾರಿಲರು ಹೇಳುತ್ತಾರೆ. ಮಾಡಿದ್ದರಿಂದ ಪುಣ್ಯವಿದೆ ಬಿಟ್ಟದ್ದರಿಂದ ಪಾಪವಿಲ್ಲ ಎಂದು ಕೆಲವರು ಹೇಳುತ್ತಾರೆ.
== ಅಪೂರ್ವ==
ಕರ್ಮಫಲವು ಹೇಗೆ ಉಂಟಗುತ್ತದೆ ? ಈವಿಚಾರ :
 
:ಮುಂದುವರೆಯುವುದು/ಮುಂದುವರೆಸಿದೆ-
"https://kn.wikipedia.org/wiki/ಮೀಮಾಂಸ_ದರ್ಶನ" ಇಂದ ಪಡೆಯಲ್ಪಟ್ಟಿದೆ