ಅ.ನಾ.ಪ್ರಹ್ಲಾದರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೦ ನೇ ಸಾಲು:
ಪದಬಂಧಗಳಷ್ಟೇ ಅಲ್ಲದೇ ಚಲನಚಿತ್ರ ಲೇಖನಗಳನ್ನು ಬರೆದಿದ್ದಾರೆ. `ಅರಗಿಣಿ` ಪತ್ರಿಕೆಗಾಗಿ ಸ್ಮರಣೀಯ ಚಿತ್ರಗಳು, ಕರ್ಮವೀರಕ್ಕಾಗಿ ಗತವೈಭವ, ಮಂಗಳ ಪತ್ರಿಕೆಗಾಗಿ ಚಲನಚಿತ್ರ ಇತಿಹಾಸ ಲೇಖನ ಮಾಲೆ ಹಲವಾರು ವರ್ಷ ಕಾಲ ನಿರಂತರವಾಗಿ ಪ್ರಕಟಗೊಂಡಿದೆ. ಕರ್ನಾಟಕ ವಿಶ್ವವಿದ್ಯಾಲಯ ಹೊರ ತಂದಿರುವ ಕಿರಿಯರ ಕರ್ನಾಟಕ ಹಾಗೂ ಚಲನಚಿತ್ರ ಇತಿಹಾಸ ಗ್ರಂಥಗಳಿಗೆ ಮತ್ತು ಉದಯಬಾನು ಕಲಾಸಂಘ ಹೊರ ತಂದಿರುವ ಬೃಹತ್ ಕೃತಿ ಬೆಂಗಳೂರುದರ್ಶನಕ್ಕಾಗಿ ಮಾಹಿತಿ ಲೇಖನಗಳನ್ನು ಬರೆದಿದ್ದಾರೆ. ಮಂಗಳ, ಬಾಲಮಂಗಳ, ಕರ್ಮವೀರ, ಅರಗಿಣಿ, ಸ್ಟಾರ್, ಸಂಯುಕ್ತಕರ್ನಾಟಕ, ಸಿನಿಮಾಮಕರಂದ, ಬೆಳ್ಳಿತೆರೆ ವಿಡಿಯೋ ಮ್ಯಾಗ್ಜೆನ್ಗಾಗಿ ಕ್ವಿಜ್ ರಚಿಸಿದ್ದಾರೆ. ವಾರ್ತ ಇಲಾಖೆ ಸಾದರ ಪಡಿಸುತ್ತಿದ್ದ ಕರ್ನಾಟಕ ವಾರ್ತಾಚಿತ್ರ, ಅವಲೋಕನಕ್ಕಾಗಿ ನಿರೂಪಣಾ ಸಾಹಿತ್ಯ ರಚಿಸಿದ್ದಾರೆ. ಸರ್ಕಾರ ಪ್ರಕಟಿಸುತ್ತಿರುವ ಜನಪದ, ಕರ್ನಾಟಕವಿಕಾಸ, ಸಹಕಾರ ಪತ್ರಿಕೆಗಳಿಗಾಗಿ ಅಭಿವೃದ್ದಿ ಲೇಖನಗಳನ್ನು ಬರೆದಿದ್ದಾರೆ. 1996ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳ ಸಂದರ್ಭದಲ್ಲಿ ಹೊರತಂದ `ನಂದೂಸ್ಪೀಕ್ಸ್` ಪತ್ರಿಕೆ ಒಂದು ತಿಂಗಳ ಕಾಲ ಪ್ರಕಟಗೊಳ್ಳಲು ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಹಲವಾರು ಲೇಖನಗಳು, ಕಥೆ, ಕವನಗಳು ಮಲ್ಲಿಗೆ, ವಾರಪತ್ರಿಕೆ, ತರಂಗ, ರೂಪತಾರ, ಸುಧಾ, ಚಿತ್ರ, ಪ್ರಿಯಾಂಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕವಿ ದೊಡ್ಡರಂಗೇಗೌಡರ ಅಭಿನಂದನ ಗ್ರಂಥ `ಜಾನಪದಜಂಗಮ`ಕ್ಕಾಗಿ ಜಾನಪದ ಸೊಗಡಿನ ಜೋಪಾನಕಾರ ಲೇಖನ ಬರೆದಿದ್ದಾರೆ.ಡಿ.ಎಸ್.ವೀರಯ್ಯನವರ ಅಭಿನಂದನ ಗ್ರಂಥ ಹೋರಾಟದ ಹೆಜ್ಜೆಗಳು ಕೃತಿಗಾಗಿ `ಕನ್ನಡ ಚಲನಚಿತ್ರ: ದಲಿತ ಸಂವೇದನೆ` ಲೇಖನ ರಚಿಸಿದ್ದಾರೆ. ಕರ್ನಾಟಕ ಸರ್ಕಾರ ಪ್ರಕಟಿಸಿರುವ ಕೋಲಾರ ಜಿಲ್ಲೆ ಗೆಜೆಟಿಯರ್ನಲ್ಲಿ ಮೂರು ಕಡೆ ಇವರ ಹೆಸರು ಉಲ್ಲೇಖಗೊಂಡಿದೆ. ಕರ್ನಾಟಕ ಗೆಜೆಟಿಯರ್ನಲ್ಲಿ ಇವರ ಹೆಸರನ್ನು ಉಲ್ಲೇಖಿಸಲಾಗಿದೆ. ಸಿ.ಎಸ್.ನಂಜುಂಡಯ್ಯ ಅವರ `ಅಮ್ಮ ಪಂಡರಿಬಾಯಿ` ಹಾಗೂ `ಅಭಿನಯ ಸವ್ಯಸಾಚಿ ಹೆಚ್.ಎಲ್.ಎನ್.ಸಿಂಹ ಕೃತಿಗಳಲ್ಲಿ ಇವರ ಹೆಸರನ್ನು ಉಲ್ಲ್ಲೇಖಿಸಲಾಗಿದೆ. ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ಅಭಿನಂದನಗ್ರಂಥ `ನಿಸಾರ್ ನಿಮಗಿದೋ ನಮನ` ಹೆಬ್ಬೊತ್ತಿಗೆಯಲ್ಲಿ ಡಾ.ರಾಜಕುಮಾರ್ ಹಾಗೂ ನಿಸಾರ್ ಕುರಿತ ಲೇಖನ ಬರೆದಿದ್ದಾರೆ. ಚಿಂತಾಮಣಿಯ ವೆ.ಎಸ್.ಗುಂಡಪ್ಪನವರ ಸ್ಮರಣಸಂಚಿಕೆ ಸೇರಿದಂತೆ ಹಲವಾರು ಸ್ಮರಣಸಂಚಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.
 
ಅ.ನಾ.ಪ್ರಹ್ಲಾದರಾವ್ ಅವರ ಪದಬಂಧ ಪ್ರಕಟಗೊಳ್ಳುತ್ತಿರುವ ಪತ್ರಿಕೆಗಳು: ವಿಜಯ ಕರ್ನಾಟಕ (ಪ್ರತಿನಿತ್ಯ), ಸಂಯುಕ್ತ ಕರ್ನಾಟಕ (ಪ್ರತಿ ನಿತ್ಯ), ಮಂಗಳ (ಪ್ರತಿವಾರ), ಅರಗಿಣಿ (ಚಲನಚಿತ್ರ), ಪ್ರಿಯಾಂಕ (ಮಾಸಿಕ), ಚಿತ್ರ (ಚಲನಚಿತ್ರ ಮಾಸಿಕ). ಆನ್‍ಲೈನ್ ಮೂಲಕ `ಇಂಡಿಕ್ರಾಸ್` ಜಾಲದಲ್ಲಿ ಪ್ರತಿನಿತ್ಯ ಅ.ನಾ.ಪ್ರಹ್ಲಾದರಾವ್ ಅವರ ಪದಬಂದಗಳು ಪ್ರಕಟಗೊಳ್ಳುತ್ತಿದ್ದು, ವಿಶ್ವದಾದ್ಯಂತ ಕನ್ನಡಿಗರು ನಿತ್ಯ ಪದಬಂಧ ತುಂಬಿಸುವಲ್ಲಿ ಸಹಕಾರಿಯಾಗಿದೆ.
 
ಅ.ನಾ.ಪ್ರಹ್ಲಾದರಾವ್ ಅವರ ಪದಬಂಧ ಪ್ರಕಟಗೊಂಡ ಪತ್ರಿಕೆಗಳು: ಕನ್ನಡಪ್ರಭ (ಪ್ರತಿನಿತ್ಯ), ಈಸಂಜೆ (ಪ್ರತಿನಿತ್ಯ), ಪ್ರಜಾವಾಣಿ (ಚಲನಚಿತ್ರ-ಪ್ರತಿವಾರ), ಬಾಲಮಂಗಳ (ಪಾಕ್ಷಿಕ), ದೆಹಲಿವಾರ್ತೆ (ನವದೆಹಲಿ-ಪ್ರತಿನಿತ್ಯ), ಉದಯರಾಗ (ಮುಂಬೈ-ಪ್ರತಿನಿತ್ಯ), ರಂಗವಲ್ಲಿ (ವಾಪ), ಚೆಲುವೆ (ವಾರ ಪತ್ರಿಕೆÀ), ಹೋಟೆಲ್ ಪತ್ರಿಕೆ (ಪಾಕ್ಷಿಕ ತಿಂಡಿ ತಿನಿಸು), ರಾಜಕೀಯಸುದ್ದಿ (ವಾರ ಪತ್ರಿಕೆÀ), ಮಾರ್ಚ್ ಆಫ್ ಕರ್ನಾಟಕ (ಮಾಸಿಕ-ವಾರ್ತಾ ಇಲಾಖೆ), ಜನಪದ (ಮಾಸಿಕ-ವಾರ್ತಾಇಲಾಖೆ), ಯುವ ಕರ್ನಾಟಕ (ಮಾಸಿಕ-ಯುವಜನಸೇವಾ ಇಲಾಖೆ), ವಿಜ್ಞಾನ ಸಂಗಾತಿ (ಮಾಸಿಕ-ಕನ್ನಡ ವಿ.ವಿ, ಹಂಪೆ), ವಿಜಯಚಿತ್ರ (ಮಾಸಿಕ-ಚಲನಚಿತ್ರ, ಚಂದಮಾಮ ಪ್ರಕಟಣೆ), ವನಿತಾ (ಮಾಸಿಕ-ಚಂದಮಾಮ ಪ್ರಕಟಣೆ), ಪೆÇಲೀಸ್ ನ್ಯೂಸ್ (ವಾರ ಪತ್ರಿಕೆ-ಅಪರಾಧ), ಪೆÇಲಿಸ್ ಫೈಲ್ (ವಾರ ಪತ್ರಿಕೆ-ಅಪರಾಧ), ಸಂಚು (ಮಾಸಿಕ-ಅಪರಾಧ), ತಾಯಿ (ಮಾಸಿಕ-ಗೃಹ), ಕ್ರಿಡಾಭಿಮಾನಿ (ಮಾಸಿಕ-ಕ್ರೀಡೆ), ಅಭಿಮಾನಿ-(ವಾರ ಪತ್ರಿಕೆ), ಅಭಿಮಾನ (ಪ್ರತಿನಿತ್ಯ), ತರಂಗ (ಮಕ್ಕಳಿಗಾಗಿ), ಕನ್ನಡಮ್ಮ (ವಾರಕ್ಕೊಮ್ಮೆ), ಕೆ.ಎನ್.ಎನ್ ನ್ಯೂಸ್‍ನೆಟ್ ಮೂಲಕ ಹಲವಾರು ಜಿಲ್ಲಾಪತ್ರಿಕೆಗಳು, ಶೃತಿ (ಪದಬಂಧ ಮಾಸಿಕ), ಜನವಾಹಿನಿ (ಪ್ರತಿ ವಾರ), ಕರ್ಮವೀರ (ವಾರ ಪತ್ರಿಕೆÀ), ಈಸಂಜೆ (ಪ್ರತಿ ವಾರ-ಸಿನಿಮಾ), ಕಂದಾಯ ವಾರ್ತೆ (ಕಂದಾಯ ಇಲಾಖೆ ಮಾಸಿಕ), ಸಂಯುಕ್ತ ಕರ್ನಾಟಕ (ಪ್ರತಿ ವಾರ), ಕೃಷ್ಣವೇದಾಂತ ದರ್ಶನ (ಮಾಸಿಕ-ಇಸ್ಕಾನ್), ಇಂಡಿಕ್ರಾಸ್ ಆನ್‍ಲೈನ್ ಪದಬಂಧಗಳು ಮತ್ತು ಒಂಬತ್ತು ಪದಬಂಧ ಪುಸ್ತಕಗಳು.
 
===ಕೃತಿಗಳು===
"https://kn.wikipedia.org/wiki/ಅ.ನಾ.ಪ್ರಹ್ಲಾದರಾವ್" ಇಂದ ಪಡೆಯಲ್ಪಟ್ಟಿದೆ