ರಜನೀಕಾಂತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 2 interwiki links, now provided by Wikidata on d:q60068 (translate me)
No edit summary
೪ ನೇ ಸಾಲು:
== ಜೀವನ ==
ಡಿಸೆಂಬರ್ ೧೨,೧೯೪೯ರಲ್ಲಿ ಬೆಂಗಳೂರಿನಲ್ಲಿ ಮರಾಠಿ ಸಂಸ್ಕಾರದ ಮನೆಯಲ್ಲಿ ಒಂದು ಗಂಡು ಮಗು ಜನಿಸಿತು. ಆ ಮಗುವಿಗೆ ಶಿವಾಜಿ ರಾವ್ ಎಂದು ಹೆಸರಿಡಲಾಯಿತು. ಮಗು ಐದನೆಯ ವಯಸ್ಸಿನಲ್ಲೇ ತಾಯಿಯ ಪ್ರೀತಿಯಿಂದ ವಂಚಿತವಾಯಿತು. ಪ್ರಾಥಮಿಕ ಶಿಕ್ಷಣವನ್ನು ಆಚಾರ್ಯ ಪಾಠಶಾಲೆಯಲ್ಲೂ, ಮುಂದೆ ರಾಮಕೃಷ್ಣ ವಿದ್ಯಾಶಾಲೆಯಲ್ಲೂ ಓದಿ ಹುಡುಗ ಒಂದಷ್ಟು ಕೂಲಿ ಕೆಲಸ ಮಾಡಿ ಬದುಕನ್ನು ಬಂದಷ್ಟೇ ಭಾಗ್ಯ ಎಂದುಕೊಂಡು ನಡೆಸತೊಡಗಿದ.೧೯೬೮ ರಿಂದ ೧೯೭೩ ರ ಅವಧಿಯಲ್ಲಿ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಎಲ್ಲೋ ಒಂದು ಕಡೆ ನೆಲೆ ಸಿಗಲಿ ಎಂದು ಅತ್ತಿಂದಿತ್ತ ಅಲೆದಾಡುತ್ತಲೇ ಕಾಲ ತಳ್ಳಿದ ಹುಡುಗ. ಕೊನೆಗೆ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಒಂದು ನೆಲೆ ಸಿಕ್ಕಿತು ಅಂದುಕೊಂಡರು. ಸಿನಿಮಾ ಹುಚ್ಚು. ಈತನ ವರಸೆಗಳನ್ನು ನೋಡಿದ ರಾಜ್ ಬಹದ್ದೂರ್ ಎಂಬ ಗೆಳೆಯ ನೀನು ಮದ್ರಾಸು ಫಿಲಂ ಇನ್ಸ್ಟಿಟ್ಯೂಟಿನಲ್ಲಿ ತರಬೇತಿ ಪಡಿ ಎಂದು ಹುರುದುಂಬಿಸಿ ಆತನಿಗೆ ಎರಡು ವರ್ಷ ಬೆಂಗಾವಲಾಗಿ ನಿಂತರು."ನಮನ".
 
==ಕನ್ನಡದಲ್ಲಿ ಪುಸ್ತಕ==
ರಜನಿಕಾಂತ್ ಅವರನ್ನು ಕುರಿತು ಲೇಖಕ [[ಅ.ನಾ.ಪ್ರಹ್ಲಾದರಾವ್]] ಅವರು `ನನ್ನ ದಾರಿ ವಿಭಿನ್ನ ದಾರಿ: ರಜನಿಕಾಂತ್` ಪುಸ್ತಕವನ್ನು ಬರೆದಿದ್ದಾರೆ. `ನನ್ನ ದಾರಿ ವಿಭಿನ್ನ ದಾರಿ-ರಜನಿಕಾಂತ್` ಕೃತಿಯಲ್ಲಿ ಮೇರು ನಟ ರಜನಿಕಾಂತ್ ಅವರ ಜೀವನ-ಸಾಧನೆಯನ್ನು ಕನ್ನಡ ನೆಲದ ಸಂಬಂಧಗಳನ್ನು ಆಧರಿಸಿ ಚಿತ್ರಿಸಲಾಗಿದೆ. ರಜನಿಕಾಂತ್ ಚಿತ್ರಗಳ ಪಟ್ಟಿಯನ್ನೂ ಕೊಟ್ಟಿದ್ದಾರೆ. ಚಿತ್ರರಂಗದಲ್ಲಷ್ಟೆ ಅಲ್ಲ, ಸಮಾಜ ಸೇವೆಯಲ್ಲೂ ರಜನಿಕಾಂತ್ ಅವರ ಪಾತ್ರ ಹಿರಿದೆಂಬುದನ್ನು ಈ ಪುಸ್ತಕದಲ್ಲಿ ನಿರೂಪಿಸಲಾಗಿದೆ. ಬೆಂಗಳೂರಿನ ಬಳೇಪೇಟೆಯ `ನವಭಾರತ್ ಪಬ್ಲಿಕೇಷನ್` ಸಂಸ್ಥೆ ಈ ಪುಸ್ತಕದ ಪ್ರಕಾಶಕರಾಗಿದ್ದಾರೆ. ಪುಸ್ತಕದ ಮುನ್ನುಡಿಯಲ್ಲಿ ಹಿರಿಯ ಪತ್ರಕರ್ತ ವೈ.ಜಿ.ಗಿರಿಶಾಸ್ತ್ರಿ ಅವರು ಹೀಗೆ ಬರೆದಿದ್ದಾರೆ: `ರಜನಿಕಾಂತ್ ಅವರ ಬದುಕಿನ ಚಿತ್ರಣವನ್ನು ಅ.ನಾ.ಪ್ರಹ್ಲಾದರಾವ್ ಅವರು ಈ ಕೃತಿಯಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ವಸ್ತುನಿಷ್ಠವಾದ ಶ್ರೀಯುತರ ಬರವಣಿಗೆಯಲ್ಲಿ ರಜನಿಕಾಂತ್ ಸುಂದರವಾಗಿ ಅನಾವರಣಗೊಂಡಿದ್ದಾರೆ. ಪ್ರಹ್ಲಾದರಾಯರದು ಸುಭಗ ಶೈಲಿಯ ಬರವಣಿಗೆ. ಪ್ರಗಲ್ಭವಾದ ವಿಷಯವನ್ನು ಅತ್ಯಂತ ಸರಳವಾಗಿ ನಿರೂಪಿಸುವುದರಲ್ಲಿ ಅ.ನಾ.ಪ್ರ ನುರಿತವರು. ಕ್ಲಿಷ್ಟ ಪದಗಳನ್ನು ಬಳಸಿ ಓದುಗರಿಗೆ ಕಷ್ಟಕೊಡುವವರಲ್ಲ.`
ರಜನೀಕಾಂತ್ ತಮ್ಮ ಶಾಲಾಶಿಕ್ಷಣವನ್ನು ನಡೆಸಿದ್ದು [[ಬೆಂಗಳೂರು|ಬೆಂಗಳೂರಿನಲ್ಲಿ]].
"https://kn.wikipedia.org/wiki/ರಜನೀಕಾಂತ್" ಇಂದ ಪಡೆಯಲ್ಪಟ್ಟಿದೆ