ಮೀಮಾಂಸ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಶಬ್ದ -ವೇದ: /ಮುಂದುವರೆಸಿದೆ-
→‎ಅರ್ಥಾಪತ್ತಿ: ಮುಂದುವರೆಸಿದೆ-
೪೦ ನೇ ಸಾಲು:
:[[ವೇದ]] ವಾಕ್ಯಗಳಲ್ಲಿ , ಸಿದ್ಧಾರ್ಥವಾಕ್ಯ, ವಿಧಾಯಕ ವಾಕ್ಯಗಳುಂಟು.ಇದ್ದದ್ದನ್ನು ಹೇಳುವುದು ; ಉದಾ: "ಸತ್ಯಂ ಜ್ಞಾನಮನಂತಂ ಬ್ರಹ್ಮ" ; ಇದು ಬ್ರಹ್ಮದ ಪರಿಚಯ . ವೇದದ ತಾತ್ಪರ್ಯವಿರುವುದು- ವಿಧಿ ವಾಕ್ಯಗಳಲ್ಲಿ .- ಉದಾ: '''ಸ್ವರ್ಗ ಕಾಮೋ ಯಜೇತ''' ; 'ಸ್ವರ್ಗ ಬಯಸುವವನು ಯಜ್ಞ ಮಾಡಬೇಕು'. ಆದ್ದರಿಂದ ವೇದ ವಿಹಿತ ಕರ್ಮವೇ ಧರ್ಮ. ಅದೇ ಜೀವನದ ಗುರಿ . ಸಿದ್ಧಾರ್ಥದ ವಾಕ್ಯಗಳು ವ್ಯರ್ಥ. ಆದ್ದರಿಂದ ಮೀಮಾಂಸೆಯು ವಿದಿ ವಿಚಾರವನ್ನು ನಿರ್ಣಯಿಸುತ್ತದೆ.
== ಅರ್ಥಾಪತ್ತಿ ==
:'''ಪ್ರಮಾಣ''' : ಮೀಮಾಂಸಕರು ಹೊಸದಾಗಿ ಸೇರಿಸಿದ ಪ್ರಮಾಣ . ಕೇಳಿದ ಸಂಗತಿಯಲ್ಲಿ ವಿರೋಧವನ್ನು ಪರಿಹರಿಸಿಕೊಳ್ಳಲು ಅರ್ಥಾಂತರವನ್ನು ಕಲ್ಪಿಸಿಕೊಳ್ಳುವುದು - '''ಇದು ಅರ್ಥಾಪತ್ತಿ.''' ಉದಾಹರಣೆ; 'ದೇವದತ್ತನು ಹಗಲಿನಲ್ಲಿ ಊಟಮಾಡುವುದಿಲ್ಲ, ಆದರೆ ದಪ್ಪಗಿದ್ದಾನೆ'; -'ಹಾಗಿದ್ದರೆ ರಾತ್ರಿ ಊಟಮಾಡುತ್ತಾನೆ', ಎಂದು ಕಲ್ಪಿಸಿಕೊಳ್ಳುವುದು. (ಕಾರಣ -ಇಲ್ಲದಿದ್ದರೆ ತೆಳ್ಳಗಿರಬೇಕಾಗಿತ್ತು). ಇದರಲ್ಲಿ, 'ದೃಷ್ಟ' ಕಂಡಿದ್ದು; 'ಶಬ್ದ ' (ಮಾತು ) , ಎಂದು ಎರಡು ವಿಧ. ನ್ಯಾಯದಲ್ಲಿ ಇದನ್ನು ಅನುಮಾನ ಪ್ರಮಾಣದಲ್ಲಿ ಸೇರಿಸುತ್ತಾರೆ. ಅರ್ಥಾಪತ್ತಿ ಪ್ರಮಾಣವನ್ನು ಮರಣಾನಂತರ ಆತ್ಮವಿರುತ್ತದೆ, ಎಂಬುದಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಕರ್ಮಕ್ಕೆ ಫಲವಿರುವುರಿಂದ - ಇಲ್ಲಿ ಭೋಗಿಸದ ಕರ್ಮ ಫಲವನ್ನು ಭೋಗಿಸಲು ಮರಣಾನಂತರ ಆತ್ಮವಿರುತ್ತದೆ -ಇರಬೇಕು.
:'''ಅನುಪಲಬ್ಧಿ :''' ಅಭಾವ , ಇಲ್ಲದ್ದನ್ನು ತಿಳಿಯಲು ಪ್ರಮಾಣ. ಉದಾ: ನೆಲದ ಮೇಲೆ ಗಡಿಗೆ ಇಲ್ಲ. ಪ್ರತ್ಯಕ್ಷ ವಸ್ತು ಇಲ್ಲ. ಅಭಾವವನ್ನು ಶೂನ್ಯವೆಂದು ಹೇಳಲಾಗದು. ಆದ್ದರಿಂದ ಅಭಾವವನ್ನು ತಿಳಿಯಲೂ ಪ್ರಮಾಣ ಬೇಕು.
ಸ್ವತಃ ಪ್ರಾಮಾಣ್ಯವಾದ
:ಪ್ರಮಾಣಗಳಿಂದ ದೊರೆತ ಜ್ಞಾನದ ಸತ್ಯತೆಯನ್ನು ತೀರ್ಮಾನಿಸುವುದು, ಹೇಗೆಂಬುದು ಜ್ಞಾನ ಮೀಮಾಂಸೆಯ ಸಮಸ್ಯೆ . ಇಂದ್ರಿಯಗಳು ಉಪಕರಣಗಳು ದೋಷರಹಿತವಾಗಿದ್ದರೆ ಜ್ಞಾನ ಯತಾರ್ಥ. ಉದಾ : ಕಣ್ಣು -ಬೆಳಕನ್ನೂ , ಕೆಂಪು ಲೇಖನಿಯನ್ನೂ ಸರಿಯಾಗಿ ಗುರುತಿಸುವುದು. ಅಂದರೆ ಜ್ಞಾನವು ಹುಟ್ಟಿನಲ್ಲಿಯೂ (ಉತ್ಪತ್ತಿಯಲ್ಲಿಯೂ) ('''ಉತ್ಪತ್ತೌ'''), ಜ್ಞಪ್ತಿಯಲ್ಲಿಯೂ, ಪ್ರಾಮಾಣಿಕವಾಗಿರುತ್ತದೆ.
:೧. ಜ್ಞಾನದ ಪ್ರಾಮಾಣಿಕತೆಯು, ಬಾಹ್ಯ ವಸ್ತುಗಳಿಂದ ಉಂಟಾಗುವುದಿಲ್ಲ. ಆದರೆ ಅದು ಜ್ಞಾನಗಳನ್ನು ಉಂಟುಮಾಡುವ ವಸ್ತುಗಳ ಜೊತೆಗೇ ಹುಟ್ಟುತ್ತದೆ. ('''ಪ್ರಮಾಣಂ ಸ್ವತಃ ಉತ್ಪದ್ಯತೇ''')
:೨. ಜ್ಞಾನವು ಹುಟ್ಟಿದ ಕ್ಷಣದಲ್ಲಿಯೇ ಅದರ ಪ್ರಮಾಣ್ಯದ ಜ್ಞಾನವೂ ಉಂಟಾಗುತ್ತದೆ. ಅದಕ್ಕೆ ಇತರ ಪ್ರಮಾಣದ ಅವಶ್ಯಕತೆ ಇಲ್ಲ. ('''ಪ್ರಮಾಣ ಸ್ವತಃ ಜ್ಞಾಯತೇ''') ; ಇದು ಮೀಮಾಂಸಕರ ಸ್ವತಃ ಪ್ರಾಮಾಣ್ಯವಾದ.
:ಜ್ಞಾನವೆಲ್ಲವೂ ಸತ್ಯವಾದುದು ಎಂಬುದು ಮೀಮಾಂಸಕರ ನಿಲುವು. ಒಮೆ ಅದು ತಪ್ಪಾಗಿದ್ದರೆ , ಸರಿಪಡಿಸಿಕೊಂಡಿದ್ದು ಸತ್ಯ ಜ್ಞಾನ . -ಅಲ್ಲಿಯವರೆಗೆ ಅದು ಸತ್ಯ. (ಕಪ್ಪೆ ಚಿಪ್ಪು -ಬೆಳ್ಳಿಯಂತೆ) ('''ಅಪ್ರಾಮಣ್ಯಂ ಪರತಃ''') ಇತರೆ ಪ್ರಮಾಣಗಳಿಂದ ಜ್ಞಾನದ ಪ್ರಾಮಾಣಿಕತೆಯನ್ನು ತಿಳಿಯುತ್ತೇವೆ.
:'''ಪರತಃ ಪ್ರಾಮಾಣ್ಯ'''ವನ್ನು ನ್ಯಾಯದಂತೆ ಇವರು ಒಪ್ಪುವುದಿಲ್ಲ. ನೀರನ್ನು ಕುಡಿದಾಗ ಮಾತ್ರಾ ಪ್ರಮಾಣವೆಂದು ಒಪ್ಪುವುದು ನ್ಯಾಯದ ನಿಲುವು. ನೋಡಿದರೆ ಸಾಕೆಂದು ಮೀಮಾಂಸಕರು. ; ಏಕೆಂದರೆ ಅದು ಅವ್ಯವಹಾರಿಕ. ಎಲ್ಲವನ್ನೂ ದೃಢಪಡಿಸುವುದೇ ಬೇರೆ. ನೀರನ್ನು ಕುಡಿದದ್ದರಿಂದ ತಿಳಿಯಿತೋ ದೃಢಪಟ್ಟಿತೋ ? ಲೋಕವ್ಯವಹಾರವು ನಡೆಯುವುದು ನಾವು ತಿಳಿದಿದ್ದು ಸತ್ಯವೆಂಬ ನಂಬುಗೆಯಿಂದ . ಅಂದರೆ ಜ್ಞಾನವು ಸ್ವತಃ ಸಿದ್ಧವಾಗಿದೆ.
:ಮೀಮಾಂಸಕರ ಈ ವಾದಕ್ಕೆ ಕಾರಣವೇನೆಂದರೆ.-ಪರತಃ ಜ್ಞಾನವನ್ನು (ಪರೀಕ್ಷಿಸದ) ಒಪ್ಪಿದರೆ, ವೇದ ವಾಕ್ಯಗಳ , ಸ್ವತಃ ಸಿದ್ಧ ಸತ್ಯತೆಯನ್ನು ಸಂದೇಹಿಸಬೇಕಾಗುತ್ತದೆ. ಸ್ವತಃ ಪ್ರಾಮಾಣ್ಯ ವಾದವನ್ನು ಅವಲಂಬಿಸಿದರೆ ಸಂದೇಹಿಸುವ ಅಗತ್ಯವಿಲ್ಲ. :'''ಪೌರುಷೇಯ''' ಪ್ರಾಮಾಣ್ಯವನ್ನು ಪರೀಕ್ಷಿಸಬೇಕಾಗುತ್ತದೆ. ಆದರೆ '''ಅಪೌರುಷೇಯ''' [[ವೇದ]] ವಾಕ್ಯಗಳು '''ಸ್ವತಃ ಸಿದ್ಧ'''ವಾದ್ದರಿಂದ ಪರೀಕ್ಷಿಸದೆ ನಂಬಬೇಕಾಗುತ್ತದೆ.
:'''ಆಖ್ಯಾತಿವಾದ''' :
:ಎರಡು ಭಿನ್ನವಾದ ಜ್ಞಾನಗಳ ಬೇಧವನ್ನು ತಿಳಿಯುವುದರಿಂದ , -ತಿಳಿಯಲಾರದ್ದರಿಂದ ತಪ್ಪು ಜ್ಞಾನವಾಗುತ್ತದೆ. ಇದು ಭ್ರಮೆ _ (ಉದಾ: ಚಿಪ್ಪು - ಬೆಳ್ಳಿ) ಇದಕ್ಕೆ '''ಆಖ್ಯಾತ ವಾದ'''ವೆಂದು ಹೆಸರು .
:'''ವಿಪರೀತ ಖ್ಯಾತಿ ವಾದ''' :-
:ಬೆಳ್ಳಿಯ ಜ್ಞಾನ - ಕಪ್ಪೆ ಚಿಪ್ಪಿನಲ್ಲಿ ಅದರ ಆರೋಪ. -ಇದರಿಂದ ಭ್ರಮೆ . ಇದು ವಿಪರೀತ ಖ್ಯಾತಿವದ -ಇದು ಕುಮಾರಿಲ ಭಟ್ಟರ ಮತ.
== ಜಗತ್ತು ==
:ಮೀಮಾಂಸ ಜಗತ್ತನ್ನು ನಿತ್ಯವೆಂದು ಹೇಳುತ್ತದೆ.
 
:ಮುಂದುವರೆಯುವುದು/ಮುಂದುವರೆಸಿದೆ-
"https://kn.wikipedia.org/wiki/ಮೀಮಾಂಸ_ದರ್ಶನ" ಇಂದ ಪಡೆಯಲ್ಪಟ್ಟಿದೆ