ತರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ವಿಷಯ ವಿಸ್ತರಿಸಲಾಗಿದೆ
ವಿಷಯ ವಿಸ್ತರಿಸಲಾಗಿದೆ
೧ ನೇ ಸಾಲು:
[[File:2006-01-14 Surface waves.jpg |thumb |right |200px|ನೀರಿನಲ್ಲಿ ತರಂಗಗಳು]]
{{ದ್ವಂದ್ವ|ಈ ಹೆಸರಿನ ಕನ್ನಡ ವಾರಪತ್ರಿಕೆಗೆ [[ತರಂಗ (ವಾರಪತ್ರಿಕೆ)]] ಪುಟ ನೋಡಿ}}
'''ತರಂಗ'''ಗಳು [[ದ್ರವ್ಯ]] ಮತ್ತು ಜಾಗದಲ್ಲಿ, [[ಕಾಲ]]ಕ್ಕನುಗುಣವಾಗಿ [[ಶಕ್ತಿ]]ಯ ಸಮ್ಮೋಹನದೊಂದಿಗೆ ಹರಡುವ ತುಮುಲಗಳು. ತರಂಗ ಚಲನೆಯು ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಕ್ತಿಯನ್ನು ವರ್ಗಾಯಿಸುತ್ತದೆ. ಸಾಮಾನ್ಯವಾಗಿ ಈ ಕ್ರಿಯೆಯಲ್ಲಿ ಅತಿ ಕಡಿಮೆ ಅಥವಾ ಶೂನ್ಯ ದ್ರವ್ಯ ಸ್ಥಳಾಂತರ ನೆಡೆಯುತ್ತದೆ. ಉದಾಹರಣೆಗೆ ಶಾಂತವಾದ ನೀರಿನಲ್ಲಿ ಒಂದು ಸಣ್ಣ ಕಲ್ಲು ಎಸೆದಾಗ ಕಲ್ಲಿನ [[ಶಕ್ತಿ]] ನೀರಿನ ಮೇಲ್ಭಾಗದಲ್ಲಿ ತರಂಗಗಳನ್ನು ಉಂಟುಮಾಡುತ್ತದೆ. ತರಂಗ ಚಲನೆಯನ್ನು ಸಮೀಕರಣಗಳ[[ಸಮೀಕರಣ]]ಗಳ ಮೂಲಕ ವಿಷ್ಲೇಶಿಸುತ್ತಾರೆ. ಈ ಸಮೀಕರಣದ ಗಣಿತ ನಮೂನೆಯು ತರಂಗದ ವಿಧದ ಆಧಾರದ ಮೇಲೆ, ಆ ತರಂಗ ಹೇಗೆ ಕಾಲಕ್ರಮೇಣ ಚಲಿಸುವುದು ಎಂಬುದನ್ನು ವಿವರಿಸುತ್ತದೆ.
 
ತರಂಗಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಮೊದಲನೆಯದು ಯಾಂತ್ರಿಕ ತರಂಗಗಳು. ಇವು ಚಲನೆಗೆ ಮಾಧ್ಯಮವನ್ನು ಆಧರಿಸಿವೆ. ಉದಾಹರಣೆಗೆ [[ಶಬ್ದ]] ತರಂಗ. ಯಾಂತ್ರಿಕ ತರಂಗಗಳು ಪ್ರವಹಿಸುವಾಗ ಮಾಧ್ಯಮವು ವಿರೂಪಗಳ್ಳುತ್ತದೆ. ಆ ಕ್ಷಣದಲ್ಲಿ ಪನಃಸ್ಥಾಪಿತ ಬಲಗಳು ಮಾಧ್ಯಮವನ್ನು ಮೊದಲಿನ ಸ್ಥಿತಿಗೆ ತರುತ್ತವೆ. ಎರಡನೆಯದು [[ವಿದ್ಯುತ್ ಕಾಂತೀಯ ತರಂಗ]]ಗಳು. ಇವುಗಳ ಚಲನೆಗೆ ಮಾಧ್ಯಮಗಳ ಅವಶ್ಯಕತೆಯಿಲ್ಲ. ಇವು ವಿದ್ಯುದಂಶಪೂರಿತ ಕಣಗಳಿಂದ ಸೃಷ್ಟಿಯಾದ ವಿದ್ಯುತ್ ಹಾಗು ಕಾಂತಕ್ಷೇತ್ರದ ಆವರ್ತಕ ಆಂದೋಲನಗಳನ್ನು ಒಳಗೊಂಡಿರುತ್ತವೆ. ಆದ್ದರಿಂದಲೇ ಇವು [[ನಿರ್ವಾತ]]ದಲ್ಲೂ ಚಲಿಸುವ ಶಕ್ತಿಯನ್ನು ಹೊಂದಿವೆ. ಉದಾಹರಣೆಗೆ [[ರೇಡಿಯೋ ತರಂಗ]]ಗಳು, [[ಸೂಕ್ಷ್ಮ ತರಂಗ]]ಗಳು, [[ಇನ್‌ಫ್ರಾ‌ರೆಡ್‌|ರಕ್ತಾತೀತ]] ತರಂಗಗಳು, [[ಬೆಳಕು|ದೃಶ್ಯ ತರಂಗ]]ಗಳು, [[ಅತಿನೇರಳೆ ವಿಕಿರಣ|ನೇರಳಾತೀತ]] ತರಂಗಗಳು, [[ಕ್ಷ-ಕಿರಣ|ಕ್ಷ ತರಂಗ]]ಗಳು, [[ಗ್ಯಾಮ ತರಂಗ]]ಗಳು. ಈ ತರಂಗಗಳು ತರಂಗಾಂತರದಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿವೆ.
[[ವರ್ಗ:ಭೌತಶಾಸ್ತ್ರ]]
"https://kn.wikipedia.org/wiki/ತರಂಗ" ಇಂದ ಪಡೆಯಲ್ಪಟ್ಟಿದೆ