ಮೀಮಾಂಸ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ವೇದ: ಮುಂದುವರೆಸಿದೆ-
೧೧ ನೇ ಸಾಲು:
== ವೇದ ==
;[[ವೇದ]]ವೆಂದರೆ [[ಮಂತ್ರ]]ಗಳು ಮತ್ತು [[ಬ್ರಾಹ್ಮಣಗಳು]] - ||'''ಮಂತ್ರ ಬ್ರಾಹ್ಮಣಯೋರ್ವೇದಃ'''||
:ಇದಕ್ಕೆ '''ಕರ್ಮಕಾಂಡ'''ವೆಂದು ಹೆಸರು. ಕರ್ಮವೆಂದರೆ ಯಜ್ಞ - ವೈದಿಕ ಕರ್ಮ. ಈ ಕರ್ಮಗಳಿಗೆ ಸಂಬಂಧಪಟ್ಟ ವಿಚಾರಗಳು -ಮಂತ್ರಗಳು ವೇದದ ಮೊದಲ ಭಾಗದಲ್ಲಿದೆ ; ಆದ್ದರಿಂದ ಈ ದರ್ಶನಕ್ಕೆ '''ಪೂರ್ವ ಮೀಮಾಂಸಾ''' (ಪೂರ್ವ =ಹಿಂದಿನ, ಮೊದಲಿನ ; ಉತ್ತರ = ನಂತರದ -ಉತ್ತರ ಮೀಮಾಂಸ) ಎಂದು ಹೆಸರು . ವೇದಗಳ ಮುಂದಿನ ಭಾಗ [[ಉಪನಿಷತ್ತುಗಳು]] ;ಅವು ಸತ್ಯದ ತತ್ವದ ವಿಚಾರಮಾಡುತ್ತವೆ . ಅವಕ್ಕೆ '''ಉತ್ತರ ಮೀಮಾಂಸಾ''' ಎಂದು ಹೆಸರು. ಇವೆರಡೂ '''ಪೂರ್ವಮೀಮಾಂಸಾ''' ಮತ್ತು '''ಉತ್ತರ ಮೀಮಾಂಸಾಗಳು''' ಕರ್ಮಪ್ರಧಾನ ವಾದ ವೈದಿಕರಿಗೂ, ತತ್ವ ಚಿಂತನೆ -ವಿಚಾರ ಮಾಡುವ ವೇದಾಂತಿಗಳಿಗೂ ಗೌರವದ ದರ್ಶನ -ದರ್ಶನಗಳು.
 
== ಇತಿಹಾಸ ==
:ಕ್ರಿ.ಪೂ. ೪೦೦ ರ ೧೬ ಅಧ್ಯಾಯ, ೨೩೪೪ ಸೂತ್ರಗಳಿರುವ , '''ಜೈಮಿನಿಯ ಸೂತ್ರಗಳು''' [[ವೇದ]] ವಿಚಾರದ ಬಗೆಗೆ, ತಿಳಿಸುವ '''ಪ್ರವರ್ತಕ ಗ್ರಂಥ''' ಮತ್ತು ಮೀಮಾಂಸೆಗೆ ಮೂಲ. ಇದಕ್ಕೆ ಅನೇಕ ಭಾಷ್ಯ - ಟೀಕೆಗಳಿವೆ. '''ಶಬರಸ್ವಾಮಿಯ ಭಾಷ್ಯ''' ಪ್ರಸಿದ್ಧವಾದುದು. ಬೌದ್ಧರ ಪ್ರಚಂಡ ತರ್ಕದಿಂದ ವೈದಿಕ ಮತವನ್ನು ರಕ್ಷಿಸಿ ಲೋಕಪ್ರಿಯಗೊಳಿಸಿದವನು '''ಕುಮಾರಿಲ ಭಟ್ಟ.'''. ಶಾಬರ ಭಾಷ್ಯದ ಮೇಲಿನ ಅವನ ಮೂರು ವೃತ್ತಿ ಗ್ರಂಥಗಳು "ಮೀಮಾಸಾ ದರ್ಶನ" ದ ಆಧಾರ ಸ್ಥಂಬಗಳು. ಇದನ್ನು '''ಭಾಟ್ಟ ಮತ'''ವೆನ್ನುತ್ತಾರೆ. ಇಂದಿಗೂ ರೂಢಿಯಲ್ಲಿದೆ.
;ಪ್ರಭಾಕರನ ಪ್ರಭಾಕರ ಮತ, ಮುರಾರಿಮಿಶ್ರನ ಮೂರನೆಯ ಸಂಪ್ರದಾಯ ಪ್ರಸಿದ್ಧ , || ಮುರಾರೇ ಸ್ತ್ರಿತೀಯಾ ಪಂಥಾಃ || .
== ಪ್ರಮಾಣಗಳು ==
:'''ಪ್ರಮೆ''' ಯಾಗಿರುವುದು ಪ್ರಮಾಣ. "ಪ್ರಮೆ" ಅಥವಾ "ಯತಾರ್ಥ ಜ್ಞಾನ"ವನ್ನು ಮಾಡುವ /ಕೊಡುವ ಸಾಧನಗಳು -ಪ್ರಮೆ. ||'''ಪ್ರಮಾಕರಣಂ ಪ್ರಮಾಣಂ''' ||. ದೋಷ ರಹಿತವಾದ ಜ್ಞಾನಕ್ಕೆ ಪ್ರಮೆ ಯೆಂದು ಹೆಸರು.
ನೆನಪು, ಅನುವಾದ, ತಪ್ಪು ತಿಳುವಳಿಕೆ, ಸಂಶಯವುಳ್ಳದ್ದು , ಪ್ರಮೆಯಲ್ಲ.
 
 
"https://kn.wikipedia.org/wiki/ಮೀಮಾಂಸ_ದರ್ಶನ" ಇಂದ ಪಡೆಯಲ್ಪಟ್ಟಿದೆ