ವೈಶೇಷಿಕ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಪದಾರ್ಥ: ಮುಂದುವರೆಸಿದೆ.
೯ ನೇ ಸಾಲು:
 
== ಪದಾರ್ಥ ==
:ವಸ್ತುವಿಗೆ ಪದಾರ್ಥವೆನ್ನುವರು .ಪದಾರ್ಥಗಳು ಏಳು. ೧.ದ್ರವ್ಯ, ; ೨. ಗುಣ. ; ೩. ಕರ್ಮ. ; ೪. ಸಾಮಾನ್ಯ. ; ೫. ವಿಶೇಷ. ; ೬. ಸಮವಾಯು. ; ಇವು ಆರು ಸತ್ತಾತ್ಮಕ ; ೭. ಅಭಾವ. ಸೇರಿ ಏಳು . ಲೋಕವಿಲ್ಲಾ ಈ ಏಳು ಪದಾರ್ಥಗಳೇ ಆಗಿವೆ .
:ವಸ್ತುವಿಗೆ ಪದಾರ್ಥವೆನ್ನುವರು (Matter).
:: ದ್ರವ್ಯ : ಕಾರ್ಯಕ್ಕೆ ಸಮವಾಯು ಕಾರಣವಾಗಿ ಇರುವಿಕೆ (ಉದಾಹರಣೆ : ಮಕೆಗೆ ವ್ಮಣ್ಣು ಸಮವಾಯು ಕಾರಣ) ಗುಣಕ್ಕೆ ,ಕರ್ಮಕ್ಕೆ ಆಶ್ರಯವಾದುದು ದ್ರವ್ಯ. ದ್ರವ್ಯಗಳು ಒಂಭತ್ತು. ಪೃಥ್ವಿ , ಜಲ, ತೇಜ , ವಾಯು , ಆಕಾಶ , ಕಾಲ , ದಿಕ್ಕು , ಆತ್ಮ , ಮತ್ತು ಮನಸ್ಸು . ಪೃಥ್ವಿಯು ಗಂಧ ಗುಣವುಳದ್ದು. ಅದು ಮುಖ್ಯ ಗುಣ (ಅದರಲ್ಲಿ ರೂಪ,ರಸ, ಸ್ಪರ್ಶ ಗಳಿದ್ದರೂ ಕೂಡ.) ; ಹೀಗೆ
ಜಲಕ್ಕೆ ಶೀತ ಮುಖ್ಯ ಗುಣ -ಇತರೆ ಗುಣಗಳು ಇದ್ದರೂ ಕೂಡ. ಅದೇ ರೀತಿ ತೇಜಕ್ಕೆ ಉಷ್ಣ , ವಾಯುವಿಗೆ ಸ್ಪರ್ಶ , ಆಕಾಶಕ್ಕೆ ಶಬ್ದ . (ಆಕಾಶವು ನಿತ್ಯವಾಗಿದೆ.) ಕಾಲಕ್ಕೆ ಅಜ್ಞಾನ ಗುಣ , ದಿಕ್ಕಿಗೆ ಹತ್ತಿರ - ದೂರ , ಪೂರ್ವ ಪಶ್ಚಿಮ -ಇತ್ಯಾದಿ. ಗುಣ.
::ಆತ್ಮ : ಇಂದ್ರಿಯಗಳ ಅನುಭವಕ್ಕೆ ಕರ್ತೃ . ಅದರ ಫಲವನ್ನು ಅನುಭವಿಸುವವನು ಆತ್ಮ : ಜೀವವೂ ಆತ್ಮ
ಉಸಿರಾಟ , ಕಣ್ಣು ಮಿಟಕಿಸುವುದು , ಚೇತನ ಕೆಲಸವಾದ್ದರಿಂದ, .ಆತ್ಮನಿದ್ದಾನೆ. ಹಲವು ಇಂದ್ರಿಯಗಳ ಅನುಭವವನ್ನು ಒಂದೇ ವಸ್ತು ಪಡೆಯುತ್ತದೆ - ಅದು ಆತ್ಮ . ಸುಖ , ದುಃಖ ಅಪೇಕ್ಷೆ ಇವುಗಳ ಆಶ್ರಯ -ಆತ್ಮ.
ಆತ್ಮಗಳು ಅನೇಕ. ಏಕೆಂದರೆ ಒಂದೊಂದು ಶರೀರದ ಅನುಭವ ಒಂದೊಂದು ರೀತಿ. ಮನಸ್ಸು ಆತ್ಮಕ್ಕೆ ಸಹಕಾರಿ ; ಅದು ಆತ್ಮಕ್ಕಿಂತ ಬೇರೆ.
::ಮನಸ್ಸು : ಮನಸ್ಸು ಆತ್ಮಕ್ಕಿಂತ ಬೇರೆ . ಮನಸ್ಸು ಬೇರೆ ಕಡೆ ತಲ್ಲೀನವಾದರೆ ಆತ್ಮವಿದ್ದರೂ ಗ್ರಹಿಸುವುದಿಲ್ಲ . ಆದ್ದರಿಂದ ಆತ್ಮ -ಮನಸ್ಸು ಬೇರೆ ಬೇರೆ .
::ಗುಣ : ದ್ರವ್ಯದಲ್ಲಿರುವ ಪದಾರ್ಥವೇ ಗುಣ . ಗುಣದ ಅಸ್ತಿತ್ವವು ದ್ರವ್ಯದ ಮೂಲಕ ತಿಳಿಯುತ್ತದೆ. ಸ್ವತಂತ್ರವಾಗಿ ಅಲ್ಲ. ಸಿಹಿ ಎಂಬುದೇ ಬೇರೆ ಇಲ್ಲ (ಸಕ್ಕರೆ ಇದ್ದರೆ ಮಾತ್ರಾ ಸಿಹಿ ಇರುತ್ತದೆ ) . ಗುಣಕ್ಕೆ ಗಣವಿಲ್ಲ .
ಕಣಾದನು ಹದಿನೇಳು ಗುಣಗಳನ್ನೂ ಭಾಷ್ಯಕಾರರು ಇನ್ನೂ ಏಳು ಗುಣಗಳನ್ನೂ ಹೇಳಿದ್ದಾರೆ . ಶಬ್ದ , ಸ್ಪರ್ಶ, ರೂಪ , ರಸ , ಗಂಧ , ಸಂಖ್ಯಾ , ಪರಿಣಾಮ (ಗಾತ್ರ) , ಪೃಥಕ್ (ಬೇರೆಬೇರೆ ಆಗುವಿಕೆ) , ಸಂಯೋಗ , ವಿಭಾಗ , ಗುರುತ್ವ , ದ್ರವತ್ವ , ಸ್ನೇಹ , ಸಂಸ್ಕಾರ , ಅಪರತ್ವ , ಪರತ್ವ , ಬುದ್ಧಿ , ಸುಖ , ದುಃಖ , ಇಚ್ಛೆ , ದ್ವೇಷ , ಪ್ರಯತ್ನ , ಧರ್ಮ , ಅಧರ್ಮ .
== ಪರಮಾಣುವಾದ ==
::ಜಗತ್ತಿಗ ಮೂಲ ಉಪಾದಾನ ಕಾರಣ (ಮೂಲವಸ್ತು) ಯಾವುದು ? ಎಂಬುದು - ದಾರ್ಶನಿPರು ಉತ್ತರಿಸಬೇಕಾದ ಪ್ರಶ್ನೆ (ಹಿಂದೆ -ಈಗ ವಿಜ್ಞಾನ) . ಸಾಂಕ್ಯರು ಪ್ರಕೃತಿ ಎನ್ನುತ್ತಾರೆ ; ಅದ್ವೈತಿಗಳು ಮಾಯೆ ಎನ್ನುತ್ತಾರೆ -ಇತ್ಯಾದಿ .
 
ಮುಂದುವರೆಯುವುದು/ಮುಂದುವರೆಸಿದೆ.
"https://kn.wikipedia.org/wiki/ವೈಶೇಷಿಕ_ದರ್ಶನ" ಇಂದ ಪಡೆಯಲ್ಪಟ್ಟಿದೆ