ವೈಶೇಷಿಕ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
:ವೈಶೇಷಿಕವು ಒಂದು ವಿಶಿಷ್ಟ ಅರ್ಥಾತ್ ವಿಶೇಷತೆಯುಳ್ಳ ದರ್ಶನವೆಂದು ಪರಿಗಣಿಸಲಾಗಿದೆ. [[ನ್ಯಾಯ]] ಮತ್ತು ವೈಶೇಷಿಕವು ಒಂದೇ ಗುಂಪಿಗೆ ಸೇರಿದವು. ನ್ಯಾಯವು ಪ್ರಮಾಣ ಶಾಸ್ತ್ರ -ಜ್ಞಾನ ಮೀಮಾಂಸೆ ಮತ್ತು ತರ್ಕಗಳನ್ನು ವಿವರಿಸುತ್ತದೆ. :ವೈಶೇಷಿಕವು ಪ್ರಮೇಯ ಶಾಸ್ತ್ರ, -ಎಂದರೆ ಪದಾರ್ಥ ವಿವರಣೆ ಯಾಗಿದೆ. ಮನುಷ್ಯರಲ್ಲಿ - ಪದಾರ್ಥಗಳಲ್ಲಿ ಪರಸ್ಪರ ಸಮಾನತೆ ಇದ್ದರೂ, ಪ್ರತಿಯೊಂದೂ ಬೇರೆ ಬೇರೆಯಾಗಿದೆ. ಪ್ರತಿಯೊಂದಕ್ಕೂ ಪ್ರತ್ಯೇಕ ವಿಶೇಷತೆ ಇದೆ. (ಉದಾಹರಣೆ ; ಒಬ್ಬರಂತೆ ಮತ್ತೊಬ್ಬರಿಲ್ಲ. -ಒಂದು ವಸ್ತುವಿನಂತೆ ಮತ್ತೊಂದಿಲ್ಲ.) . ಇದು ಈ ದರ್ಶನದ ಮುಖ್ಯ ತಳಹದಿ.
 
:ಕಣಾದನು ಈ ದರ್ಶನದ ಸೂತ್ರಧಾರ. ಈತನಿಗೆ ಕಶ್ಯಪ , ಕಾಶ್ಯಪ, ಉಲೂಕ ಎಂಬ ಹೆಸರುಗಳಿವೆ. ಈತನು '''ಕಣವಾದಿ'''ಯಾದ್ದರಿಂದ , ಇವನನ್ನು '''ಕಣಾದ''' ಎಂದೂ ಕರೆಯುತ್ತಾರೆ. ಇವನ ಕಾಲ ಸುಮಾರು ಕ್ರಿ . ಪೂ. ೨--೪ ನೇ ಶತಮಾನ.
:ಪ್ರಶಸ್ತಪಾದನ - "ಧರ್ಮಸಂಗ್ರಹ", ; ಉದಯನ ನ -"ಕಿರಣಾವಳಿ", ಗ್ರಂಥಗಳು ಪ್ರಸಿದ್ಧ . ಅಣ್ಣಂಭಟ್ಟನ "ತರ್ಕಸಂಗ್ರಹ"ವೂ ಪ್ರಸಿದ್ಧ . ಇದು ಕಾಲಾಂತರದಲ್ಲಿ [[ವೇದ]]ವನ್ನು ಒಪ್ಪಿಕೊಂಡು, [[ಆಸ್ತಿಕ ಧರ್ಮ]]ವೆನ್ನಿಸಿಕೊಂಡಿದೆ.
 
"https://kn.wikipedia.org/wiki/ವೈಶೇಷಿಕ_ದರ್ಶನ" ಇಂದ ಪಡೆಯಲ್ಪಟ್ಟಿದೆ