ರಾಮಕೃಷ್ಣ ಮಿಷನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೩೧ ನೇ ಸಾಲು:
ಇತ್ತೀಚಿಗೆ ಆರಂಭಗೊಂಡ ಈ ಆಶ್ರಮವು ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆಯನ್ನು ಪೂರ್ಣಗೊಳಿಸಿದೆ. ಹಲವಾರು ಯೋಜನೆಗಳನ್ನು ಶೀಘ್ರದಲ್ಲೆ ಜಾರಿಗೊಳಿಸಲು ನಿರ್ಧರಿಸಿರುವ ಈ ಅಶ್ರಮವು, ಈಗ ಪುಸ್ತಕ ಪ್ರಕಟಣೆ, ಪ್ರವಚನ, ಶಿಬಿರಗಳ ಮುಖಾಂತರ ಜನರ ಸೇವೆಯನ್ನು ಮಾಡುತ್ತಿದೆ.
 
==ರಾಮಕೃಷ್ಣ ಮಿಷನ್==
ರಾಮಕೃಷ್ಣ ಮಿಷನ್ ರಾಮಕೃಷ್ಣ ಮಠವು ಪಕ್ಕಾ ಸಂನ್ಯಾಸ ಸಂಸ್ಥೆಯಾದರೆ, ರಾಮಕೃಷ್ಣ ಮಿಷನ್ ಸನ್ಯಾಸಿಗಳಿಗೂ, ಗೃಹಸ್ಥರಿಗೂ ಮುಕ್ತವಾಗಿ ತೆರೆದುಕೊಂಡ ಸಾರ್ವಜನಿಕ ಸಂಸ್ಥೆಯಾಗಿದೆ . ಶ್ರೀರಾಮಕೃಷ್ಣರಲ್ಲಿ ಮತ್ತು ಸಂದೇಶದಲ್ಲಿ ಶ್ರದ್ಧೆಯುಳ್ಳ ಮತ್ತು ರಾಮಕೃಷ್ಣ ಮಿಷನ್ನಿನ ಅದರ್ಶ ಹಾಗೂ ಚಟುವಟಿಕೆಗಳಲ್ಲಿ ಒಲವು ಉಳ್ಳ ಯಾರು ಬೇಕಾದರೂ ಇದಕ್ಕೆ ಸದಸ್ಯರಾಗಬಹುದು. ಶೈಕ್ಷಣಿಕ, ವೈದ್ಯಕೀಯ ಹಾಗೂ ಇತರ ರೀತಿಯ ಸಂಸ್ಥೆಗಳನ್ನು ನಡೆಸುವುದರಲ್ಲಿ ಸಂನ್ಯಾಸೇತರ ಜನರು ಸಂನ್ಯಾಸಿಗಳಿಗೆ ನೆರವಾಗುತ್ತಾರೆ. ರಾಮಕೃಷ್ಣ ಮಿಷನ್ 1901ರ ಮೇ 4ರಂದು ಒಂದು ಸಂಘವಾಗಿ ನೊಂದಾವಣೆಗೊಂಡಿದ್ದು , ಭಾರತದಾದ್ಯಂತ ಮತ್ತು ಇತರೆ ಕೆಲವು ದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ.
 
 
[[ಆಡಳಿತ]]
ರಾಮಕೃಷ್ಣ ಮಠವು ಆಡಳಿತವನ್ನು ಒಂದು ವಿಶ್ವಸ್ತ ಮಂಡಳಿಯು ನೋಡಿಕೊಳ್ಳುತ್ತದ್ದೆ. ಈ ಮಂಡಳಿಗೆ ಚುನಾಯಿತರಾದ ಅಧ್ಯಕ್ಷರು, ಒಬ್ಬರು ಅಥವಾ ಹೆಚ್ಚು ಮಂದಿ ಉಪಾಧ್ಯಕ್ಷರು, ಒಬ್ಬರು ಮಹಾಕಾರ್ಯದರ್ಶಿಗಳು, ಒಬ್ಬರು ಅಥವಾ ಹೆಚ್ಚು ಮಂದಿ ಸಹಾಯಕ ಕಾರ್ಯದರ್ಶಿಗಳು ಮತ್ತು ಒಬ್ಬರು ಖಜಾಂಚಿ ಇರುತ್ತಾರೆ.
Line ೪೩ ⟶ ೪೪:
ರಾಮಕೃಷ್ಣ ಮಠದ ಶಾಖಾಕೇಂದ್ರದ ಮುಖ್ಯಸ್ಥರನ್ನು ಅಧ್ಯಕ್ಷರೆಂದು ಕರೆಯುತ್ತಾರೆ; ವಿಶ್ವಸ್ತ ಮಂಡಳಿಯು ಅವರನ್ನು ನೇಮಕ ಮಾಡುತ್ತದೆ. ರಾಮಕೃಷ್ಣ ಮಿಷನ್ನಿನ ಆಡಳಿತ ಸಂಸ್ಥೆಯು ನೇಮಿಸುವ ನಿರ್ವಹಣಾ ಸಮಿತಿಯೊಂದು ರಾಮಕೃಷ್ಣ ಮಿಷನ್ನಿನ ಶಾಖಾ ಕೇಂದ್ರವನ್ನು ನೋಡಿಕೊಳ್ಳುತ್ತದೆ. ಈ ಸಮಿತಿಯು ಕಾರ್ಯದರ್ಶಿಗಳು ಆ ಶಾಖೆಯ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಾರೆ.
 
[[ವಿಚಾರಪ್ರಣಾಳಿ]]
 
ವಿಚಾರಪ್ರಣಾಳಿ
 
ರಾಮಕೃಷ್ನ್ಣ ಮಠದ ಮತ್ತು ಮಿಷನ್ನಿನ ವಿಚಾರಪ್ರಣಾಳಿಯು, ಶ್ರೀರಾಮಕೃಷ್ಣರು ಬದುಕಿ ಬಾಳಿದ ಮತ್ತು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ವೇದಾಂತದ ಶಾಶ್ವತ ತತ್ತ್ವಗಳನ್ನೊಳಗೊಂಡಿದೆ. ಈ ವಿಚಾರಪ್ರಣಾಳಿಗೆ ಮೂರು ಲಕ್ಷಣಗಳಿವೆ: ವೇದಾಂತದ ಪ್ರಾಚೀನ ತತ್ವಗಳು ಆಧುನಿಕ ಪರಿಭಾಷೆಯಲ್ಲಿ ಅಭಿವ್ಯಕ್ತವಾಗಿವೆ ಎ೦ಬ ಅರ್ಥದಲ್ಲಿ ಅದು ಆಧುನಿಕ; ಅದು ವಿಶ್ವಸಾರ್ವತ್ರಿಕ-ಎಂದರೆ, ಇಡೀ ಮನುಕುಲಕ್ಕೇ ಅದು ಉದ್ದಿಷ್ಟವಾದುದು; ಅದು ವ್ಯಾವಹರಿಕ-ಬದುಕಿನ ಸಮಸ್ಯೆಗಳನ್ನು ಪರಿಹರಿಸಲು ಅದರ ತತ್ತ್ವಗಳನ್ನು ದೈನಂದಿನ ಜೀವನಕ್ಕೆ ಅನ್ವಯಿಸುವುದು ಸಾಧ್ಯ ಎಂಬ ಅರ್ಥದಲ್ಲಿ . ಈ ವಿಚಾರಪ್ರಣಾಳಿಯ ಮೂಲಭೂತ ತತ್ವಗಳನ್ನು ಕೆಳಗೆ ಕೊಟ್ಟಿದೆ:
೮೩ ನೇ ಸಾಲು:
 
 
[[ಬದುಕಿನ ಒಂದು ವಿಧಾನವಾಗಿ ಸೇವೆ]]
 
ಹಿಂದೆ ವಿವರಿಸಿರುವ ರಾಮಕೃಷ್ಣ ಮಠ ಮತ್ತು ಮಿಷನ್ನಿನ ವಿಚಾರ ಪ್ರಣಾಳಿಗಳು ಅವುಗಳ ಬಹುಮಖ ಚಟುವಟಿಕೆಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತವೆ. ಈ ಚಟುವಟಿಕೆಗಳು ಶಿಕ್ಷಣ, ಆರೋಗ್ಯ, ಗ್ರಾಮೀಣ ಅಭಿವೃದ್ಧಿ, ಸ್ವ-ಉದ್ಯೋಗ, ಮಹಿಳಾ ಯೋಗಕ್ಷೇಮ, ಅಂತರ್-ಧರ್ಮೀಯ ಅರಿವು, ನೈತಿಕ ಜೀವನ, ಅಧ್ಯಾತ್ಮಿಕ ಮಾರ್ಗದರ್ಶನ ಮತ್ತು ನೈಸರ್ಗಿಕ ಪ್ರಕೋಪಗಳಿಗೆ ಬಲಿಯಾದವರಿಗೆ ಪರಿಹಾರ ನೀಡುವ ಮಾನವೀಯ ಅಗತ್ಯ ಹಾಗೂ ಸಾಮಾಜಿಕ ಹಿತದಂತಹ ವಿಭಿನ್ನ ಕ್ಷೇತ್ರಗಳಲ್ಲಿ ಹರಡಿರುತ್ತವೆ. ಈ ಎಲ್ಲ ಚಟುವಟಿಕೆಗಳೂ ಸೇವೆಯಾಗಿ, ಮನುಷ್ಯನಲ್ಲಿ ಅಂತರ್ಗತನಾಗಿರುವ ದೇವರ ಸೇವೆಯಾಗಿ ನಡೆಯುತ್ತವೆ.
"https://kn.wikipedia.org/wiki/ರಾಮಕೃಷ್ಣ_ಮಿಷನ್" ಇಂದ ಪಡೆಯಲ್ಪಟ್ಟಿದೆ