ಬರಾಕ್ ಒಬಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೬ ನೇ ಸಾಲು:
ಇದಕ್ಕೆ ಮೊದಲು ಹಿಂದಿನ ಅಧ್ಯಕ್ಷ ’[[ಜಾರ್ಜ್ ಬುಷ್]]’ ರವರು, ದೀಪಾವಳಿಹಬ್ಬಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿದ್ದರು{{ಯಾವಾಗ}}. ಆದರೆ ಅವರ ಸಂಗಡಿಗರೊಡನೆ ಹಬ್ಬವನ್ನು ಆಚರಿಸಲಾಗಲಿಲ್ಲ. ೨೦೦೯ರಲ್ಲಿ ಅಧ್ಯಕ್ಷ ಒಬಾಮಾ ರವರು [[ವೈಟ್ ಹೌಸ್]]ನ ಸಿಬ್ಬಂದಿವರ್ಗ ಹಾಗೂ ಭಾರತೀಯ ಸಮುದಾಯದವರೊಂದಿಗೆ ಸೇರಿಕೊಂಡು ದೀಪಾವಳಿಯನ್ನು ಆಚರಿಸಿದ ಪ್ರಪ್ರಥಮ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾದರು. ಪಂ. ನಾರಾಯಣಾಚಾರ್ ದಿಗಲ್ ಕೋಟೆಯವರು ಮಂತ್ರ ಪಠಿಸುತ್ತಿದ್ದಂತೆಯೇ ಅಧ್ಯಕ್ಷ ಒಬಾಮಾ ರವರು ವಿಶ್ವಶಾಂತಿಯ ಪ್ರಾರ್ಥನೆಗೈದು ದೀಪಬೆಳಗಿ ದೀಪಾವಳಿಯ ಶುಭಾಶಗಳನ್ನು ಎಲ್ಲರೊಡನೆ ಹಂಚಿಕೊಂಡರು. ಐತಿಹಾಸಿಕ ಈಸ್ಟ್ ರೂಂನಲ್ಲಿ ಏರ್ಪಡಿಸಿದ್ದ ಮಾರಂಭದಲ್ಲಿ ಒಬಾಮಾರವರು "ಬೆಳಕಿನ ಹಬ್ಬ ದೀಪಾವಳಿಯು, ಕೆಟ್ಟದರ ವಿರುದ್ಧ ಒಳಿತಿನ ವಿಜಯವಾಗಿದೆ. ಮನುಷ್ಯನಲ್ಲಿನ ಅಜ್ಞಾನವನ್ನು ತೊಲಗಿಸುವ ಪರ್ವದಿನವಾಗಿದೆ," ಯೆಂದು ನುಡಿದರು.ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ೮ ನವೆಂಬರ್ ೨೦೧೦ ಸೋಮವಾರ ಬಾರತದ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ೪೫ ನಿಮಿಷ ಕಾಲ ಭಾಷಣ ಮಾಡಿದರು।,ಟೆಲಿಪ್ರಾಂಪ್ಟರ್ ಬಳಸಿ ಬರಾಕ್ ಒಬಾಮ ಭಾಷಣ ಮಾಡಿದರು,.ಬಾರತದ ಸಂಸತ್ತಿನಲ್ಲಿ ಇದೇ ಮೊದಲ ಬಾರಿ ಟೆಲಿಪ್ರಾಂಪ್ಟರ್ ಬಳಕೆಯಾಯಿತು,
 
== ''[[ಒಸಾಮಾ ಬಿನ್ ಲಾಡನ್]]'' ಹತ್ಯೆ ==
ಸನ್ ೨೦೦೧ ರ ಸೆಪ್ಟೆಂಬರ್, ೧೧ ರಂದು ಅಮೆರಿಕದ ಮೇಲೆ ಹಲ್ಲೆ ಮಾಡಲು ಆವನ ಸಹಚರರನ್ನು ಬಳಸಿದ್ದ 'ಜಾಗತಿಕ ಆಲ್ ಖಾಯಿದಾ ಸಂಘಟನೆ'ಯ ಭಯೋತ್ಪಾದಕ, [[ಬಿನ್ ಲಾಡನ್]] ಅಮೆರಿಕ ನೇತೃತ್ವದ ಪಡೆ ನಡೆಸಿದ ನಾಟಕೀಯ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮೃತನಾಗಿದ್ದಾನೆ. ಮೇ, ೧, ಭಾನುವಾರ ಮಧ್ಯರಾತ್ರಿಯಲ್ಲಿ ಅಧ್ಯಕ್ಷ [[ಬರಾಕ್ ಒಬಾಮ]]ರವರು,[[ಶ್ವೇತಭವನ]]ದ ಸುದ್ದಿಗೋಷ್ಠಿಯಲ್ಲಿ ಪತ್ರಕಾರರನ್ನು ಉದ್ದೇಶಿಸಿ ಈ ವಿಷಯವನ್ನು ಬಯಲುಮಾಡಿದರು. ಪಾಕಿಸ್ತಾನದ ಇಸ್ಲಾಮಾಬಾದ್ ಪ್ರದೇಶದ [[ಅಬುತಾಬಾದ್]] ಎಂಬ ಸ್ಥಳದಲ್ಲಿ ಅಮೆರಿಕ ಸೇನಾಪಡೆ ಕೈಗೊಂಡ ಕಾರ್ಯಾಚರಣೆಯಲ್ಲಿ [[ಒಸಾಮಾ ಬಿನ್ ಲಾಡೆನ್]] ಮತ್ತು ಅವನ ೨೦ ಮಂದಿ ಆಪ್ತ ಸಹಚರರು ಮೃತಪಟ್ಟಿದ್ದಾರೆ. [[ಒಸಾಮ ಬಿನ್ ಲಾಡೆನ್]] ನ ಮೃತ ಶರೀರವನ್ನು ಸಮುದ್ರದಲ್ಲಿ ದಫನ್ ಮಾಡಿದ್ದಾರೆ. [[ಸದ್ಧಾಮ್ ಹುಸೇನ್]] ತರಹ, ನೆಲದಲ್ಲಿ ಸಮಾಧಿಮಾಡಿದ್ದಿದ್ದಿದ್ದರೆ, ಅವನ ಅನುಯಾಯಿಗಳು ಅಲ್ಲಿಗೆ ಭೇಟಿನೀಡಿ ತಮ್ಮ ಗೌರವವನ್ನು ಸಲ್ಲಿಸುವ ಪ್ರಮೇಯಗಳಿದ್ದವು. ಸನ್ ೨೦೦೧ ರ ಸೆಪ್ಟೆಂಬರ್, ೧೧ ರಂದು 'ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್' ಮೇಲೆ ಹಲ್ಲೆಮಾಡಿ ಮಕ್ಕಳು ಹೆಣ್ಣುಮಕ್ಕಳೂ ಸೇರಿದಂತೆ ಸಾವಿರಾರು ನಾಗರಿಕರನ್ನು ಕೊಂದ ಹಿನ್ನೆಯಲ್ಲಿ ಸುಮಾರು ೧೦ ವರ್ಷಗಳಿಂದ ಅಮೆರಿಕ ಈ ಸಂಧರ್ಭಕ್ಕಾಗಿ ಹೊಂಚುಹಾಕಿದ್ದು, ಸಫಲತೆಯನ್ನು 'ಹಾಸಿಲ್' ಮಾಡಿದೆ.
 
"https://kn.wikipedia.org/wiki/ಬರಾಕ್_ಒಬಾಮ" ಇಂದ ಪಡೆಯಲ್ಪಟ್ಟಿದೆ