Content deleted Content added
ಹೊಸ ಪುಟ: ಹೆಸರು ಟಿ. ಜಿ. ಶ್ರೀನಿಧಿ, ಬೆಂಗಳೂರಿನ ಸಾವಿರಾರು ಸಾಫ್ಟ್‌ವೇರಿಗರಲ್ಲಿ ಒಬ್...
( ಯಾವುದೇ ವ್ಯತ್ಯಾಸವಿಲ್ಲ )

೨೧:೫೭, ೧೨ ನವೆಂಬರ್ ೨೦೧೩ ನಂತೆ ಪರಿಷ್ಕರಣೆ

ಹೆಸರು ಟಿ. ಜಿ. ಶ್ರೀನಿಧಿ, ಬೆಂಗಳೂರಿನ ಸಾವಿರಾರು ಸಾಫ್ಟ್‌ವೇರಿಗರಲ್ಲಿ ಒಬ್ಬ. ಕನ್ನಡದಲ್ಲಿ ಬರೆಯುವುದು ಹವ್ಯಾಸ. ಈವರೆಗೂ ಪ್ರಕಟವಾಗಿರುವ ಪುಸ್ತಕಗಳು ಹತ್ತು, ಬರಹಗಳು ಐದುನೂರಕ್ಕಿಂತ ಹೆಚ್ಚು. ಒಂದಷ್ಟು ಕಾಲ ವಿಜಯ ಕರ್ನಾಟಕ, ಉಷಾಕಿರಣ, ಸೂರ್ಯೋದಯ ಪತ್ರಿಕೆಗಳಿಗೆ ಅಂಕಣಕಾರನಾಗಿದ್ದೆ. ವಿಜ್ಞಾನ ವಿಷಯಗಳಿಗೆ ಮೀಸಲಾದ ಇಜ್ಞಾನ ಡಾಟ್ ಕಾಮ್ ಕೂಡ ನನ್ನದೇ ತಾಣ.

ಉದಯವಾಣಿ ಬೆಂಗಳೂರು ಆವೃತ್ತಿಯಲ್ಲಿ ನನ್ನ 'ವಿಜ್ಞಾಪನೆ' ಅಂಕಣ ಸತತ ೧೨೨ ವಾರಗಳವರೆಗೆ ಪ್ರಕಟವಾಗಿತ್ತು. ಪ್ರಸ್ತುತ ಉದಯವಾಣಿ ಮಂಗಳೂರು ಆವೃತ್ತಿಯ 'ಯುವ ಸಂಪದ' ಪುರವಣಿಯಲ್ಲಿ ನನ್ನ ಅಂಕಣ 'ಸ್ವ-ತಂತ್ರ'ಪ್ರಕಟವಾಗುತ್ತಿದೆ.

೨೦೧೧ರಲ್ಲಿ ಹೊರಬಂದ 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಪುಸ್ತಕಕ್ಕೆ ಪ್ರೊ. ಜೀವಿಯವರ ಕೈಯಿಂದ ಲೋಕಾರ್ಪಣೆಯಾಗುವ ಭಾಗ್ಯ ಸಿಕ್ಕಿತು. ಅದೇ ಪುಸ್ತಕಕ್ಕಾಗಿ ನನಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ಶ್ರೇಷ್ಠ ಲೇಖಕ' ಪ್ರಶಸ್ತಿಯೂ ಬಂತು. ೨೦೧೩ರ ಸೆಪ್ಟೆಂಬರ್ ತಿಂಗಳಲ್ಲಿ ನನ್ನ ಹತ್ತನೆಯ ಪುಸ್ತಕ 'ಕ್ಲಿಕ್ ಮಾಡಿ ನೋಡಿ!' ನವಕರ್ನಾಟಕ ಪ್ರಕಾಶನದಿಂದ ಹೊರಬಂತು.