ಶ್ರವಣಬೆಳಗೊಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
+ಚಂದ್ರಗಿರಿ
ಫೋಟೋ
೧ ನೇ ಸಾಲು:
'''ಶ್ರವಣ ಬೆಳಗೊಳ''' (Shravanabelagola) [[ಹಾಸನ]] ಜಿಲ್ಲೆಯ ಐತಿಹಾಸಿಕ ಧಾರ್ಮಿಕ, ಪ್ರವಾಸಿ ತಾಣ. ಶ್ರವಣ ಬೆಳಗೊಳದಲ್ಲಿ ವಿಶ್ವವಿಖ್ಯಾತ ೫೮'೮"(೧೮ ಮೀಟರ್ ) ಅಡಿ ಎತ್ತರದ [[ಬಾಹುಬಲಿ | ಬಾಹುಬಲಿಯ]] ಮೂರ್ತಿಯಿರುವುದು. ಜೈನರ ಧಾರ್ಮಿಕ ಕೇಂದ್ರವಾದರೂ, ಇತೆರೆ ಹಲವರು ಕೂಡ ಬಂದು ಪೂಜೆ ಸಲ್ಲಿಸುತ್ತಾರೆ.
 
[[Image:gommata.jpg|frame|ಗೊಮ್ಮಟೇಶ್ವರ, ಶ್ರವಣಬೆಳಗೊಳ]][[ಏಷ್ಯ]] ಖಂಡದಲ್ಲಿಯೇ ಅತಿ ಎತ್ತರದ(೫೭ ಅಡಿ)ಮತ್ತು ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹಗಳಲ್ಲಿಯೇ ದೊಡ್ಡದಾದ ಗೊಮ್ಮಟನ ಶಿಲೆಯಿರುವ '''ಶ್ರವಣಬೆಳಗೊಳ''' ಪ್ರಸಿದ್ಧ ಜೈನ ಪುಣ್ಯಕ್ಷೇತ್ರ. ಹಾಸನ ಜಿಲ್ಲೆಯ [[ಚನ್ನರಾಯಪಟ್ಟಣ ]]ತಾಲ್ಲೂಕಿನ ಹೋಬಳಿ ಕೇಂದ್ರವು [[ಬೆಂಗಳೂರು|ಬೆಂಗಳೂರಿನಿಂದ]] ೧೪೫ ಕಿ.ಮೀಗಳ ದೂರದಲ್ಲಿದೆ.ಶ್ರವಣ ಬೆಳಗೊಳದ ವಿಂಧ್ಯಗಿರಿಯ ಮೇಲೆ ಗ್ರಾನೈಟಿನಲ್ಲಿ ಕಡೆಯಲಾಗಿರುವ ಈ ಮೂರ್ತಿಯನ್ನು [http://kn.wikipedia.org/wiki/%E0%B2%9A%E0%B2%BE%E0%B2%B5%E0%B3%81%E0%B2%82%E0%B2%A1%E0%B2%B0%E0%B2%BE%E0%B2%AF ಚಾವುಂಡರಾಯನು]ಬೃಹದಾಕಾರದ ವಿಗ್ರಹವನ್ನು ಕ್ರಿ.ಶ.೯೭೩ರಲ್ಲಿ ಕೆತ್ತಿಸಿದನು.ಅರಿಷ್ಟ ನೇಮಿ ಎಂಬುವ ಶಿಲ್ಪಿ ಕೆತ್ತಿದನೆಂದು ಹೇಳಲಾಗುತ್ತದೆ. '''ಈ ಶಿಲ್ಪಿಯು ವಿಶ್ವಕರ್ಮ ವರ್ಗಕ್ಕೆ ಸೆರಿದವನಾಗಿದ್ದು, ಪ್ರಸಿದ್ಧ ಶಿಲ್ಪಿ ಜಕಣಚಾರಿಯ ಶಿಷ್ಯನೆ೦ದು ಹೆಳುತ್ತಾರೆ', ಮತ್ತೊಂದೆಡೆ ತುಳುನಾಡಿನ ಪ್ರಸಿದ್ದ ಶಿಲ್ಪಿ "ವೀರ ಶಂಭು ಕಲ್ಕುಡ "ಕೆತ್ತಿದನೆಂದು ಹೇಳಲ್ಪಡುತ್ತದೆ.(ಕೋಟಿ ಚೆನ್ನಯ:-ಡಾ| ವಾಮನ ನಂದಾವರ ಪುಟ219) ವಿಂಧ್ಯಗಿರಿಯ ಬೆಟ್ಟದ ಮೇಲಕ್ಕೆ ಹೋಗಲು ಸುಮಾರು ೭೦೦ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಹತ್ತಲಾಗದವರಿಗೆ ಡೋಲಿ ವ್ಯವಸ್ಥೆಯೂ ಲಭ್ಯವಿದೆ. ವಿಂಧ್ಯಗಿರಿಯ ಎದುರಿನಲ್ಲೇ ಚಿಕ್ಕಬೆಟ್ಟ ಅಥವಾ ಚಂದ್ರಗಿರಿ ಬೆಟ್ಟವಿದ್ದು ಇಲ್ಲೂ ಸಹ ಪ್ರಾಚೀನ ಬಸದಿಗಳಿವೆ. ಕ್ಷೇತ್ರದಲ್ಲಿ ಜೈನ ಮಠವಿದ್ದು, ಮಠದ ಪಕ್ಕದಲ್ಲಿಯೇ ಪ್ರಾಚೀನವಾದ ಭಂಡಾರಿ ಹುಳ್ಳ ಬಸದಿ ಹಾಗೂ ಚಂದ್ರನಾಥ ಸ್ವಾಮಿಯ ಬಸದಿಯಿದೆ. ಜೈನ ಮಠದ ಈಗಿನ ಭಟ್ಟಾರಕರಾದ ಶ್ರೀ ಚಾರುಕೀರ್ತಿ ಸ್ವಾಮೀಜಿಯವರು (Charukeerthi swamiji, Shravanabelagola) ವಿದ್ವತ್‌ಪೂರ್ಣರು ಹಾಗೂ ಸಾಕಷ್ಟು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಹನ್ನೆರಡು ವರ್ಷಗಳಿಂದ ಕಠಿಣ ವ್ರತದ ಕಾರಣ ಸಂಚಾರಕ್ಕೆ ವಾಹನವನ್ನೂ ಸಹ ಬಳಸದ ಸ್ವಾಮೀಜಿಯವರು ಇತ್ತೀಚೆಗೆ ತಾನೆ ಧರ್ಮಪ್ರಚಾರಕ್ಕೋಸ್ಕರ ಮತ್ತೆ ವಾಹನವನ್ನು ಬಳಸಿ ಧರ್ಮಪ್ರಚಾರ ಕೈಗೊಳ್ಳುತ್ತಿದ್ದಾರೆ.[[FeetofBahubali.jpg|thumb|]]
 
ಶ್ರೀ ಕ್ಷೇತ್ರದ ವತಿಯಿಂದ ನಡೆಸುತ್ತಿರುವ ಶ್ರೀ ಬಾಹುಬಲಿ ಇಂಜಿನಿಯರಿಂಗ್ ಕಾಲೇಜ್ ಸಹ ಇಲ್ಲಿದ್ದು, ಸಾಕಷ್ಟು ಹೊರ ರಾಜ್ಯದ ವಿದ್ಯಾರ್ಥಿಗಳು ಈ ಗ್ರಾಮೀಣ ಪ್ರದೇಶದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಪಾಲಿಟೆಕ್ನಿಕ್, ವಿಜ್ಞಾನ ಕಾಲೇಜು, ಪ್ರೌಢ ಮತ್ತು ಪ್ರಾಥಮಿಕ ಶಾಲೆಯನ್ನೂ ಶ್ರೀಕ್ಷೇತ್ರದ ವತಿಯಿಂದ ನಡೆಸಲಾಗುತ್ತಿದೆ.ಶ್ರವಣಬೆಳಗೊಳ ಜೈನರ ಕಾಶಿ ಎಂದು ಕರೆಯಲ್ಪಡುವ ಸ್ಥಳ."ನಮನ"
[[Image:_ _ _DSC 0627.jpg|thumb|ಎತ್ತರ ೫೮.೮" ಅಡಿ ]]
"https://kn.wikipedia.org/wiki/ಶ್ರವಣಬೆಳಗೊಳ" ಇಂದ ಪಡೆಯಲ್ಪಟ್ಟಿದೆ