ಮರಾಠಿ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೦ ನೇ ಸಾಲು:
ಮಹಾರಾಷ್ಟ್ರದಲ್ಲಿ ಹತ್ತೊಂಭತ್ತನೆಯ ಶತಮಾನದ ಕೊನೆ ವಸಾಹತುಶಾಹಿ ಆಧುನಿಕತೆಯ ಕಾಲವಾಗಿತ್ತು . ಆ ಕಾಲದ ಇತರ ಭಾರತೀಯ ಭಾಷಾ ಸಾಹಿತ್ಯದಂತೆ, ಮರಾಠಿ ಸಾಹಿತ್ಯದಲ್ಲಿಯೂ ಇಂಗ್ಲೀಷ್ ಓದಿದ ಬುದ್ಧಿಜೀವಿಗಳ ಪ್ರಾಧಾನ್ಯವಿತ್ತು. It was the age of prose and reason. It was the period of reformist diadicticism and a great intellectual ferment.
 
1817ರಲ್ಲಿ ಮೊಟ್ಟ ಮೊದಲ ಇಂಗ್ಲೀಷಿನಿಂದ ಮರಾಠಿ ಭಾಷಾಂತರಿತ ಪುಸ್ತಕ ಹೊರಬಂದಿತು. ಮೊಟ್ಟ ಮೊದಲ ಮರಾಠಿ ವೃತ್ತಪತ್ರಿಕೆ ಹೊರಟದ್ದು 1835ರಲ್ಲಿ.ಸಾಮಾಜಿಕ ಸುಧಾರಣೆಯಯ ವಿಷಯವುಳ್ಳ ಪುಸ್ತಕಗಳನ್ನು ಬರೆದ ಮಹನೀಯರೆಂದರೆ, ಬಾಬಾ ಪದಂಜೀ (ಯಮುನಾ ಪರ್ಯಟನ - 1857) , [[ಮಹಾತ್ಮಾ ಜ್ಯೋತಿಬಾ ಫುಲೆ]], ಲೋಕಹಿತವಾದಿ, ಜಸ್ಟೀಸ್ [[ಮಹದೇವ ಗೋವಿಂದ ರಾನಡೆ]], [[ಹರಿ ನಾರಾಯಣ ಆಪ್ಟೆ]] (1864-1919) ಇತ್ಯಾದಿ. [[ಲೋಕಮಾನ್ಯ ಬಾಲ ಗಂಗಾಧರ ತಿಲಕ
[[ಲೋಕಮಾನ್ಯ ಬಾಲ ಗಂಗಾಧರ ತಿಲಕ |ಲೋಕಮಾನ್ಯ ತಿಲಕರು]] 1880ರಲ್ಲಿ ಪ್ರಾರಂಭಿಸಿದ ಕೇಸರಿ ಪತ್ರಿಕೆಯು ಸಾಹಿತ್ಯಿಕ ಚರ್ಚೆಗೆ ಸೂಕ್ತ ಅಂಕಣವನ್ನು ಒದಗಿಸಿತು. ಮರಾಠಿ ರಂಗಭೂಮಿ ಕೂಡಾ ಈ ಕಾಲದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿತ್ತು. '''ಸಂಗೀತ ನಾಟಕ''' ವೆಂಬ ಸಂಗೀತ ಪ್ರಧಾನ ನಾಟಕಗಳ ಪ್ರಕಾರವೂ ಪ್ರಾರಂಭವಾಯಿತು. ಈ ಪ್ರಕಾರದಲ್ಲಿ ಮೊದಲ ನಾಟಕ ವಿ.ಎ.ಭಾವೆ 1841ರಲ್ಲಿ ಬರೆದ ಸೀತಾ ಸ್ವಯಂವರ. ನಂತರ ಕಿರ್ಲೋಸ್ಕರ್ (1843-85) ಮತ್ತು ಜಿ.ಬಿ.ದೇವಳ್ (1854-19l6) ಈ ನಾಟಕಗಳಲ್ಲಿ ಶೃಂಗಾರ ಮತ್ತು ಸಾಮಾಜಿಕ ವಸ್ತುಗಳನ್ನು ಪರಿಚಯಿಸಿದರು. ರಾಜಕೀಯ ವಸ್ತುವುಳ್ಳ ನಾಟಕಗಳ ಸರಣಿ ಪ್ರಾರಂಭವಾದದ್ದು ಕೃಷ್ಣಾಜಿ ಪ್ರಭಾಕರ ಖಾಡಿಲ್ಕರ್ (1872~1948) ಬರೆದ ( ಮುಂದೆ ಈ ನಾಟಕವನ್ನು ನಿಷೇಧಿಸಲಾಯಿತು) ಕೀಚಕವಧ (1910) ನಾಟಕದಿಂದ. ಮುಂದೆ ಈ ಪ್ರಕಾರವನ್ನು ಸಮರ್ಥವಾಗಿ ಮುಂದುವರಿಸಿದವರು [[ರಾಮ ಗಣೇಶ ಗಡ್ಕರಿ]] ಮತ್ತು [[ಪ್ರಹ್ಲಾದ ಕೇಶವ ಆತ್ರೆ]]. 1960 ಮತ್ತು 70ರ ದಶಕಗಳಲ್ಲಿ ಮರಾಠೀ ರಂಗಭೂಮಿ ಅಮೋಘವಾಗಿ ಬೇಳೆಯಿತು. ಮೋಹನ ಆಗಾಶೆ, ಶ್ರೀರಾಮ ಲಾಗೂ, [[ಕಾಶೀನಾಥ ಘಾಣೇಕರ್]], [[ಪ್ರಭಾಕರ ಫಣಶೀಕರ್]] ರಂತಹ ಯಾವುದೇ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಪ್ರತಿಭಾವಂತ ನಟಸಮೂಹ ಸಾಹಿತ್ಯ ದಿಗ್ಗಜಗಳಾದ [[ವಸಂತ ಕಾನೇಟ್ಕರ್]], [[ಕುಸುಮಾಗ್ರಜ]], [[ವಿಜಯ್ ತೆಂಡೂಲ್ಕರ್]] ಇತ್ಯಾದಿ ವಿರಚಿತ ನಾಟಕಗಳಲ್ಲಿನ ಅಮರ ಪಾತ್ರಗಳಿಗೆ ಜೀವದುಂಬಿದರು.
 
ಮರಾಠಿ ರಂಗಭೂಮಿಯೊಂದಿಗೇ ಮರಾಠಿ ಚಿತ್ರೋದ್ಯಮವೂ ಬೆಳೆದರೂ, ಚಿತ್ರೋದ್ಯಮಕ್ಕೆ ಸತತ ಯಶಸ್ಸು ದೊರಕಲಿಲ್ಲ. ಭಾರತಲ್ಲಿಯೇ ಮೊಟ್ಟಮೊದಲ ವಾಕಿ ಚಿತ್ರ ತಯಾರಿಸಿದ [[ದಾದಾಸಾಹೇಬ್ ಫಾಳಕೆ]] , ಖ್ಯಾತ ನಿರ್ದೇಶಕ [[ವಿ.ಶಾಂತಾರಾಮ್]] ಮೊದಲಾದವರಿಂದ ಮರಾಠಿ ಚಿತ್ಯೋದ್ಯಮ ಸಮಕಾಲೀನ ಹಿಂದೀ ಚಿತ್ರರಂಗಕ್ಕೆ ಗಣನೀಯ ಕೊಡುಗೆ ನೀಡಿತು. ನಿರ್ದೇಶಕ ರಾಜಾ ಪರಾಂಜಪೆ, ಸಂಗೀತ ನಿರ್ದೇಶಕ ಸುಧೀರ್ ಫಡ್ಕೆ, ಸಂಗೀತ ರಚನಕಾರ ಜಿ. ಮಾಡಗೂಳಕರ್ , ನಟ ರಾಜಾ ಗೋಸಾವಿ ಮೊದಲಾದವರು ಒಂದುಗೂಡಿ ಅನೇಕ ಗಮನಾರ್ಹ ಮರಾಠಿ ಚಿತ್ರಗಳನ್ನು ತೆರೆಗಿತ್ತರು. ಅಂದಿನ ಮರಾಠಿ ಆಡುಭಾಷೆಯು ನಾಟಕ, ಸಿನಿಮಾ ಅಷ್ಟಲ್ಲದೇ ಮರಾಠಿ ಸಾಹಿತ್ಯದಿಂದಲೂ ಪ್ರಭಾವಿತವಾಗಿತ್ತು.
"https://kn.wikipedia.org/wiki/ಮರಾಠಿ_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ