ಬಿಜಾಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪,೯೮೯ ನೇ ಸಾಲು:
'''ಡಾ.ಗುರುಲಿಂಗ ಕಾಪಸೆ'''ಯವರು ‘'''ಹಲಸಂಗಿ ಹಾಡು’'''(2000) ಪ್ರಸ್ತಾವನೆಯಲ್ಲಿ [[ಹಲಸಂಗಿ]] ಭಾಗದ ಲಾವಣಿಕಾರರು ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡ ಬಗ್ಗೆ ಹೀಗೆ ಬರೆಯುತ್ತಾರೆ. “[[ಹಲಸಂಗಿ]]ಯ ಸುಪ್ರಸಿದ್ದ ಲಾವಣಿಕಾರನಾಗಿದ್ದ '''ಖಾಜಾಭಾಯಿ''' ತೀರಿಕೊಂಡ ಮೇಲೆ, ಅವನ ಲಾವಣಿಗಳು ಇನ್ನೂ ಸ್ವಾರಸ್ಯಕರವಾಗಿ ಹಾಡಲ್ಪಡುತ್ತಿದ್ದವು. ಖಾಜಾಭಾಯಿ ತೀರಿಕೊಂಡದ್ದು 1924ರಲ್ಲಿ. ಜೀವನ ಸಂಗೀತದಲ್ಲಿ ಸಂಗ್ರಹಿತವಾದ ಲಾವಣಿಗಳು ಮೂಲ ಕವಿಗಳಿಂದಲೇ ಪಡೆದವುಗಳಲ್ಲ. ಆಗಿನ ಕಾಲದ ಬೇರೆ ಬೇರೆ ಹಾಡುಗಾರರಿಂದ ದೊರಕಿಸಿದಂತಹವು. ಸಂಗ್ರಹಕಾರರು ತಿಳಿಸಿರುವಂತೆ ಲಾವಣಿಕಾರ ಕುಬ್ಬಣ್ಣನವರ ಮಕ್ಕಳಾದ ವೀರಭದ್ರಪ್ಪನವರು, ವಿಶೇಷವಾಗಿ ಹಲಸಂಗಿಯವರೇ ಆದ ಓಲೇಕಾರ ರಾಮಚಂದ್ರಪ್ಪನವರು ಲಾವಣಿಗಳನ್ನು ಹೇಳಿಕೊಟ್ಟಿದ್ದಾರೆ. '''ಓಲೇಕಾರ ರಾಮಚಂದ್ರಪ್ಪ'''ನವರು ಆ ಕಾಲದ ಸುಪ್ರಸಿದ್ದ ಹಾಡುಗಾರರು. ಈತನ ಕಂಚಿನ ಕಂಠ ಎಂಥವರನ್ನು ಆಕರ್ಷಿಸುತ್ತಿತ್ತು, ಬೆರಗುಗೊಳಿಸುತ್ತಲಿತ್ತು. 1936ರಲ್ಲಿ ರಾಮಕೃಷ್ಣ ಪರಮಹಂಸರ ಜನ್ಮ ಶತಮಾನೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹಲಸಂಗಿಗೆ ಆಗಮಿಸಿದ್ದ '''ಶಿವರಾಮ ಕಾರಂತ'''ರು ಓಲೇಕಾರ ರಾಮಚಂದ್ರನಿಂದ ಲಾವಣಿಗಳನ್ನು ಕೇಳಿ ತಮ್ಮನ್ನು ತಾವೇ ಮರೆತರು. ಅಷ್ಟೇ ಅಲ್ಲ ಆತನನ್ನು ತಮ್ಮ ಪುತ್ತೂರಿಗೂ ಕರಿಸಿ, ಹಾಡಿಸಿ, ಕೇಳಿ ಸಂತೋಷಪಟ್ಟರು. ಈ ವಿಷಯವನ್ನು ಕಾರಂತರೇ ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ರಾಮಚಂದ್ರನ ಲಾವಣಿಗಳನ್ನು ಕೇಳಲು ಆ ದಿನ ಕಲೆತ '''ಹಿಂದೂ - ಮುಸಲ್ಮಾನ'''ರ ಒಕ್ಕೂಟವು ನನ್ನ ಸ್ಮರಣೆಯಲ್ಲಿ ಬಹಳ ಕಾಲ ಇತ್ತು. ನಾನು ಮುಂದೊಮ್ಮೆ ಅವನನ್ನು ನಮ್ಮ ಊರಿಗೂ ಕರೆಯಿಸಿಕೊಂಡು ಹಾಡಿಸಿ ಕೇಳಿದ್ದೆ. ಒಮ್ಮೆ ಅವನಿಂದ ನಮ್ಮ ಶಾಲೆಯ ಹುಡುಗರಿಗೂ ಲಾವಣಿಗಳನ್ನು ಕಲಿಸುವ ಏರ್ಪಾಡು ಮಾಡಿದ್ದೆ. ಇದು ಅಂದಿನ ಹಲಸಂಗಿ ಲಾವಣಿ ಹಾಡುಗಾರನ ಅಗ್ಗಳಿಕೆಯನ್ನು ಸೂಚಿಸುತ್ತದೆ. ಓಲೇಕಾರ ರಾಮಚಂದ್ರನಂತೆ ಓಲೇಕಾರ ಮಾದಣ್ಣನೂ ಲಾವಣಿಗಳನ್ನು ಸೊಗಸಾಗಿ ಹಾಡುತ್ತಿದ್ದನು. ಮಧುರಚೆನ್ನರ ಆತ್ಮೀಯ ಗೆಳೆಯನಾದ ಈತನಿಂದ ಆ ಮುಂದಿನ ತಲೆಮಾರಿನವರು ಲಾವಣಿಗಳನ್ನು ಕೇಳಿ ಸಂತೋಷಪಟ್ಟಿದ್ದಾರೆ. ಹಲಸಂಗಿಯ ಗಾಢ ಸಂಬಂಧ ಹೊಂದಿದ್ದ '''ವರಕವಿ ದ.ರಾ.ಬೇಂದ್ರೆ'''ಯವರ ‘ಸಚ್ಚಿದಾನಂದ’ ದಂಥ ಕವಿತೆಗಳು ಲಾವಣಿಯ ಲಯವನ್ನು ಅಳವಡಿಸಿಕೊಂಡಿದ್ದನ್ನು ಗಮನಿಸಬಹುದು.”
 
[[ಹಲಸಂಗಿ]] ಗೆಳೆಯರು ಕೈಗೊಂಡ ಆ ಸಂದರ್ಭದ ಜಾನಪದ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯ ಜನಮುಖಿ ಸಾಹಿತ್ಯಕ್ಕೆ ಒಂದು ಬಗೆಯಲ್ಲಿ ವ್ಯಾಪಕತೆ ತಂದಿತು. ಮೊದಲ ಬಾರಿಗೆ '''ಜಾನ್ ಫೇತ್ವುನಲ್ ಪಿs್ಲೀಟರ್''' ಸಂಗ್ರಹಿಸಿದ್ದ ಆಯ್ದ ಲಾವಣಿಗಳು ‘ಇಂಡಿಯನ್ ಎಂಟಿಕ್ವೆರಿ’ 1885-1888ರಲ್ಲಿ ಪ್ರಕಟವಾಗಿದ್ದವು. ಆದರೆ ಇವುಗಳಿಗೆ ಕನ್ನಡದಲ್ಲಿ ವ್ಯಾಪಕತೆ ತಂದುಕೊಟ್ಟ ಸಾಧನೆ ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ. ಪಿ.ಧೂಲಾ ಸಾಹೇಬ ಮತ್ತು ಸಿಂಪಿ ಲಿಂಗಣ್ಣನವರ ‘ಜೀವನ ಸಂಗೀತ’ ಲಾವಣಿಗಳ ಮೊದಲ ಸಂಗ್ರಹವಾಗಿದೆ. 1919ರಲ್ಲಿ ಜರುಗಿದ 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹನುಮಂತಗೌಡರು ‘ಲಾವಣಿಗಳು’ ಎಂಬ ವಿಷಯವಾಗಿ ಒಂದು ಲೇಖನ ಓದಿ ‘ಹೈದರಾಬಾದಿನ ಲಾವಣಿ ಪದ’ ಎಂಬ ನಾಲ್ಕು ಪುಟಗಳ ಲಾವಣಿ ಕೊಟ್ಟಿದ್ದಾರೆ. ಅನಂತರ 1923ರಲ್ಲಿ ಬಿಜಾಪುರ ದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಲೇಖನವನ್ನೋದಿದ ಮಧುರಚೆನ್ನರು ಆ ಲೇಖನದಲ್ಲಿ ಒಂದು ಲಾವಣಿಯನ್ನೇ ಉದಾಹರಿಸಿದ್ದಾರೆ. ಅದೇ ಸಮ್ಮೇಳನದಲ್ಲಿ ಪಿ.ಧೂಲಾ ಸಾಹೇಬರು ‘ಲಾವಣಿಯ ಲಾವಣ್ಯ’ ಎಂಬ ಲೇಖನವನ್ನೋದಿದ್ದುದು ಒಂದು ಉಲ್ಲೇಖನೀಯ ಅಂಶವಾಗಿದೆ. 1925ರಲ್ಲಿ ಮಾಸ್ತಿಯವರು ‘ಕನ್ನಡ ಲಾವಣಿ ಸಾಹಿತ್ಯ’ ಎಂಬ ಲೇಖನವನ್ನು ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಬರೆದಬರೆದರು. ಹೀಗೆ ‘ಲಾವಣಿ’ಗಳ ವಿಷಯಕ್ಕೆ ಆಸಕ್ತಿ ಹುಟ್ಟಿಸುವ ಕಾರ್ಯವೇನೋ ನಡೆಯಿತು. ಆದರೆ ಯಾರೂ ಒಂದು ಸಂಗ್ರಹವನ್ನು ಕೊಡುವ ಸಾಹಸ ಮಾತ್ರ ಮಾಡಲಿಲ್ಲ. ಅದನ್ನು ಮೊಟ್ಟಮೊದಲಿಗೆ ಮಾಡಿದವರೆಂದರೆ ಹಲಸಂಗಿ ಗೆಳೆಯರು. ಈ ಮೂಲಕ ಕನ್ನಡ ನವೋದಯ ಕಾವ್ಯದ ಆರಂಭಕ್ಕೆ ಹಲಸಂಗಿ ಕೇಂದ್ರದಿಂದ ನಡೆದ ಈ ಕೆಲಸ ಕನ್ನಡದ ಹೊಸಕಾವ್ಯವನ್ನು ರೂಪಿಸುವಲ್ಲಿ ಎಲ್ಲ ಬಗೆಯ ಅವಕಾಶಗಳನ್ನು ಸಜ್ಜು ಮಾಡಿಕೊಟ್ಟಿತು.
 
ಕನ್ನಡ ಜನಪದ ಗೀತ ಸಂಕಲನ ಮೊಟ್ಟಮೊದಲ ಕೃತಿಯಾದ ‘ಗರತಿಯ ಹಾಡು’,ಇದರಂಥದು ಇನ್ನೊಂದಿಲ್ಲವೆನ್ನುವಷ್ಟು ಅದ್ವಿತೀಯವಾದುದು. ಇದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉಂಟುಮಾಡಿದ ತೀವ್ರತರವಾದ ಸೆಳೆತ ದಾಖಲಾರ್ಹವಾದುದು. ಹಲಸಂಗಿ, ಚಡಚಣ, ಸಾಲೋಟಗಿ, ಇಂಡಿ ಮೊದಲಾದ ಈ ಪರಿಸರದ ಹಳ್ಳಿಗಳಲ್ಲಿ ಜನಪದ ಹಾಡುಗಳನ್ನು ದಣಿವಿಲ್ಲದೆ ಹಾಡುವ ಹೆಣ್ಣು ಮಕ್ಕಳನ್ನು ಮುಂದೆ ಕುಳ್ಳಿರಿಸಿಕೊಂಡು ಹಲಸಂಗಿ ಗೆಳೆಯರು ಹಾಡಿಸಿ ಬರೆದುಕೊಂಡರು. ಹೀಗೆ ರೂಪಿತವಾದುದೇ ‘ಗರತಿಯ ಹಾಡು.’ ಇದರ ಸಂಗ್ರಾಹಕರು ಹಲಸಂಗಿಯ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮೊದಲಾದ ಗೆಳೆಯರು. ಅಂದರೆ ಮಧುರಚೆನ್ನ, ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ ಅವರು.
 
ಹಲಸಂಗಿ ಗೆಳೆಯರ ಜನಪದ ಕಾರ್ಯವೇ ಒಂದು ಮಾದರಿಯದು. ಆ ಗೆಳೆಯರಲ್ಲೊಬ್ಬರಾದ ಕಾಪಸೆ ರೇವಪ್ಪನವರ ಈ ಕಾರ್ಯ ಇನ್ನೂ ವಿಶೇಷವಾದುದು. ಈ ಸಂಗ್ರಹಕ್ಕೆ ಬರೆದ ಮಧುರಚೆನ್ನರ ಟಿಪ್ಪಣಿಗಳು ಕೂಡ ಅಭ್ಯಾಸ ಪೂರ್ಣವಾಗಿದ್ದು ಜನಪದ ಸಾಹಿತ್ಯ ಸಂಗ್ರಹ ಮಾಡುವವರಿಗೆ ಮಾರ್ಗದರ್ಶಕವಾಗಿವೆ. ಜೊತೆಗೆ ಹೊಸಕಾವ್ಯ ರಚನಾಕಾರರಿಗೆ ಅಪರೂಪದ ಮಾದರಿಯಾಗಿ ಗುರುತಿಸಿಕೊಂಡಿದೆ. ‘ಮಲ್ಲಿಗೆ ದಂಡೆ’ಯ ಹಾಡುಗಳಲ್ಲಂತೂ ಛಂದೋವೈವಿಧ್ಯ ಅಚ್ಚರಿಗೊಳಿಸುವಂತಿದೆ. ತ್ರಿಪದಿಯ ಹಲವಾರು ರೂಪ ಭೇದಗಳ ಜೊತೆಗೆ ರಗಳೆ ಸಾಂಗತ್ಯಗಳನ್ನು ಹೋಲುವ ಹಾಗೂ ದ್ವಿಪದಿ, ಚೌಪದಿ ಭೋಗ ಷಟ್ಪದಿಯಂಥ ಶಿಷ್ಟ ಕಾವ್ಯಕ್ಕೆ ಸೇರಿದ ಅನೇಕ ಛಂದೋ ರೂಪಗಳ ಬಳಕೆ ಇಲ್ಲಿ ಕಂಡುಬರುತ್ತದೆ. ಇದು ಯಾವುದನ್ನೂ ಜನಪದ ಕವಿಗಳು ಅಭ್ಯಾಸ ಮಾಡದೇ ಬರೆದರೆಂದು ಭಾವಿಸುವುದು ಒಟ್ಟಿನಲ್ಲಿ ಕಾವ್ಯ ರಚನೆಯ ತತ್ವಕ್ಕೇ ವಿರುದ್ಧವಾಗಿದೆ. ಹೀಗೆ ಸಹಜವಾಗಿ ಬರುವ ಜನಪದ ಗೀತೆಗಳು ಸಾಹಿತ್ಯಿಕ ಅಂಶವನ್ನು ಪ್ರಧಾನವಾಗಿ ಹೊಂದಿರುವುದು ಅವುಗಳ ಶ್ರೇಷ್ಠತೆಯನ್ನು ಗುರುತಿಸುವಂತೆ ಮಾಡುತ್ತದೆ. ‘ಹಳ್ಳಿಗರ ಹಾಡುಗಳು ಎಷ್ಟು ಮನೋಹರವಾಗಿರಬಲ್ಲವು ಅವುಗಳನ್ನು ಕಟ್ಟಿದವರೆಲ್ಲ ವ್ಯುತ್ಪತ್ತಿಯುಳ್ಳವರೆಂದಾಗಲಿ, ಸತತವಾಗಿ ಅಭ್ಯಾಸ ಮಾಡಿದವರೆಂದಾಗಲಿ ಯಾರು ಹೇಳಬಲ್ಲರು? ಎಂಬ ಅಬಿsಪ್ರಾಯಕ್ಕೆ ಬರುವ ತೀನಂಶ್ರೀ ಅವರು ಜನಪದರ ಕಾವ್ಯದ ಹುಟ್ಟಿನ ಸಹಜತೆಯನ್ನು ತೋರುತ್ತಾರೆ. ಒಟ್ಟಾರೆ ಹಲಸಂಗಿ ಗೆಳೆಯರ ಬಳಗದ ಕವಿಗಳು ಜನಪದ ಗೀತೆಗಳ ಸಂಗ್ರಹ ಸಂಪಾದನೆಯಲ್ಲಿ ತೋರಿದ ಕಾಳಜಿಯಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯದ ಸಮೃದ್ಧತೆಗೆ ಸಾಕ್ಷಿಯಾಯಿತು.
 
 
=='''ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ'''==
 
[[File:Shree Ranga.JPG|thumb|ಶ್ರೀರಂಗ - ಆದ್ಯರಂಗಾಚಾರ್ಯ
(ಆರ್.ವಿ.ಜಾಗೀರದಾರ)]]
 
[[ಬಿಜಾಪುರ]] ನಗರದಲ್ಲಿ ಈ ಹಿಂದೆ (೯೦ ವರ್ಷಗಳ ಹಿಂದೆ ) ೧೯೨೩ರಲ್ಲಿ ಪ್ರಥಮವಾಗಿ '''ಅಖಿಲ ಭಾರತ ೯ನೇ ಕನ್ನಡ ಸಾಹಿತ್ಯ ಸಮ್ಮೇಳನ'''ವು '''ಸಿದ್ದಾಂತಿ ಶಿವಶಂಕರ ಶಾಸ್ತ್ರಿ'''ಯವರ ಅಧ್ಯಕ್ಷತೆಯಲ್ಲಿ ಜರುಗಿತ್ತು. ನಂತರ ದ್ವೀತಿಯವಾಗಿ [http://www.bijapur.nic.in/79kansam/ '''ಅಖಿಲ ಭಾರತ ೭೯ನೇ ಕನ್ನಡ ಸಾಹಿತ್ಯ ಸಮ್ಮೇಳನ'''] ವು '''[[ಕೊ.ಚನ್ನಬಸಪ್ಪ]]'''ರವರ ಅಧ್ಯಕ್ಷತೆಯಲ್ಲಿ ೯, ೧೦, ೧೧ ಫೆಬ್ರುವರಿ ೨೦೧೩ರಂದು '''ಸೈನಿಕ ಶಾಲೆ'''ಯ ಆವರಣದಲ್ಲಿ ಜರುಗಿತು.
 
<big>'''ಬಿಜಾಪುರ ನಗರದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ'''</big>
 
{| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext>
|- style="background-color:#969696;font-weight:bold" valign="bottom"
| width="30" Height="30" | ಕ್ರ.ಸಂ.
| width="50" | ವರ್ಷ
| width="150" | ಸ್ಥಳ
| width="200" | ಅಧ್ಯಕ್ಷತೆ
|- valign="bottom"
|೯
|[[೧೯೨೩]]
|[[ವಿಜಾಪುರ]]
|[[ಸಿದ್ಧಾಂತಿ ಶಿವಶಂಕರ ಶಾಸ್ತ್ರಿ]]
|- valign="bottom"
|೭೯
|[[೨೦೧೩]]
|[[ವಿಜಾಪುರ]]
|[[ಕೋ.ಚನ್ನಬಸಪ್ಪ]]
|}
 
[[ಬಿಜಾಪುರ]] ಜಿಲ್ಲೆಯ ಸಾಹಿತಿಗಳು ಬೇರೆ ಸ್ಠಳಗಳಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು [[ಸಿಂಪಿ ಲಿಂಗಣ್ಣ]], [[ಶ್ರೀರಂಗ]] ಮತ್ತು [[ಫ.ಗು.ಹಳಕಟ್ಟಿ]].
 
{| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext>
|- style="background-color:#969696;font-weight:bold" valign="bottom"
| width="30" Height="30" | ಕ್ರ.ಸಂ.
| width="50" | ವರ್ಷ
| width="150" | ಸ್ಥಳ
| width="200" | ಅಧ್ಯಕ್ಷತೆ
|- valign="bottom"
|೧೨
|[[೧೯೨೬]]
|[[ಬಳ್ಳಾರಿ]]
|[[ಫ.ಗು.ಹಳಕಟ್ಟಿ]]
|- valign="bottom"
|೩೮
|[[೧೯೫೬]]
|[[ರಾಯಚೂರು]]
|[[ಶ್ರೀರಂಗ]]
|- valign="bottom"
|೬೨
|[[೧೯೯೩]]
|[[ಕೊಪ್ಪ್ಪಳ]]
|[[ಸಿಂಪಿ ಲಿಂಗಣ್ಣ]]
|}
 
 
=='''ನಾಟ್ಯ (ನಾಟಕ) ಸಂಘಗಳು'''==
 
ವಿಜಾಪುರ ಜಿಲ್ಲೆಯಲ್ಲಿ ೧೦೦ಕ್ಕೂ ಹೆಚ್ಚು ನಾಟಕ ಸಂಘಗಳಿವೆ.
 
* ಶ್ರೀ ಕುಮಾರ ವಿಜಯ ನಾಟಕ ಸಂಘ, ಚಿತ್ತರಗಿ, ವಿಜಾಪುರ.
*
* ಶ್ರೀ ಕುಮಾರೇಶ್ವರ ನಾಟ್ಯ ಸಂಘ, ಹಾನಗಲ್ಲ, ವಿಜಾಪುರ.
*
* ಶ್ರೀ ಖಾಸ್ಗತೇಶ್ವರ ನಾಟ್ಯ ಸಂಘ, ತಾಳಿಕೋಟ, ವಿಜಾಪುರ.
*
* ಶ್ರೀ ಘನಮಠೇಶ್ವರ ನಾಟ್ಯ ಸಂಘ, ಕುಂಟೋಜಿ, ಮುದ್ದೇಬಿಹಾಳ, ವಿಜಾಪುರ.
 
 
=='''ವಿಜ್ಞಾನ'''==
 
[[ಭಾಸ್ಕರಾಚಾರ್ಯ]]ರು ವಿಜಾಪುರ ಜಿಲ್ಲೆಯ ಗಣಿತಜ್ಞರು.
 
'''ಭಾಸ್ಕರಾಚಾರ್ಯ''' (೧೧೧೪ - ೧೧೮೫), ಅಥವಾ ಎರಡನೆಯ ಭಾಸ್ಕರ, ಭಾರತದ ಗಣಿತಜ್ಞ ಹಾಗೂ ಖಗೋಳ ಶಾಸ್ತ್ರಜ್ಞ.
 
[[ಕರ್ನಾಟಕ|ಕರ್ನಾಟಕದ]] [[ವಿಜಾಪುರ|ವಿಜಾಪುರದ]] ಬಳಿ ಬಿಜ್ಜಡ ಬೀಡ ಎಂಬಲ್ಲಿ ಜನಿಸಿದ ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ ವರಾಹಮಿಹಿರ ಮತ್ತು [[ಬ್ರಹ್ಮಗುಪ್ತ|ಬ್ರಹ್ಮಗುಪ್ತರ]] ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. ದಶಮಾನ ಪದ್ದತಿ ಹಾಗೂ ಆಧುನಿಕ [[ಬೀಜಗಣಿತ]]ದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು.
 
<big>'''ಭಾಸ್ಕರಾಚಾರ್ಯನ ಮುಖ್ಯಕೃತಿಗಳು''':</big>
 
* <big>[[ಲೀಲಾವತಿ]]</big> (ಮುಖ್ಯವಾಗಿ ಅಂಕಗಣಿತದ ಬಗ್ಗೆ, ತನ್ನ ಮಗಳ ಮನೋರಂಜನೆಗಾಗಿ ಬರೆದದ್ದೆಂದು ಹೇಳಲಾಗುತ್ತದೆ).
 
* <big>ಬೀಜಗಣಿತ</big>
 
* <big>ಸಿದ್ಧಾಂತಶಿರೋಮಣಿ</big>
 
ಇದರಲ್ಲಿ ಎರಡು ಭಾಗಗಳಿವೆ:
 
* <big>ಗೋಳಾಧ್ಯಾಯ</big>
 
* <big>ಗ್ರಹಗಣಿತ</big>
 
 
<big>'''ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು'''</big>
 
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಪ ಕಚೇರಿಯು [[ವಿಜಾಪುರ]] ನಗರದಲ್ಲಿದೆ.
 
 
=='''ತಂತ್ರಜ್ಞಾನ'''==
 
<big>'''ವಿಜಾಪುರ ಕೃಷಿ ಹವಾಮಾನ ಸೇವೆಗಳು'''</big>
 
ಇದು ಒಂದು ಆಧುನಿಕ ಉಪಕರಣವಾಗಿದ್ದು ಕೃಷಿ ಮಹಾವಿದ್ಯಾಲಯದ ಆವರದಲ್ಲಿ ಸ್ಥಾಪಿಸಲಾಗಿದೆ. ವಿಜಾಪುರ ಜಿಲ್ಲೆಯ ಕೃಷಿ ಹವಾಮಾನ ಸೇವೆಗಳನ್ನು ಒದಗಿಸುತ್ತದೆ.
 
 
<big>'''ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ'''</big>
 
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಉಪ ಕಚೇರಿಯು [[ವಿಜಾಪುರ]] ನಗರದಲ್ಲಿದೆ.
 
 
=='''ಹೋಟೆಲುಗಳು'''==
 
[[File:Hotel Shashinag, bijapur.JPG|thumb|ಹೊಟೇಲ್ ಶಶಿನಾಗ ರೆಸಿಡೆನ್ಸಿ, ವಿಜಾಪುರ]]
[[File:Basav Residency Hotel, Bijapur.JPG|thumb|ಹೊಟೇಲ್ ಬಸವ ರೆಸಿಡೆನ್ಸಿ, ವಿಜಾಪುರ]]
[[File:Kamat Hotel, Bijapur.JPG|thumb|ಹೋಟೆಲ ಕಾಮತ್, ವಿಜಾಪುರ]]
[[File:Pearl Hotel,Bijapur.JPG|thumb| ಪರ್ಲ ಹೊಟೇಲ್, ವಿಜಾಪುರ]]
[[File:Hotel Parekh Residency, Bijapur.JPG|thumb|ಪಾರೆಖಾ ಹೊಟೇಲ್, ವಿಜಾಪುರ]]
[[File:Google Hotel Bijapur.JPG|thumb|ಗೂಗಲ್ ಹೊಟೇಲ್, ವಿಜಾಪುರ]]
 
* ಶಶಿನಾಗ ರೆಸಿದೆನ್ಸಿ ಹೊಟೇಲ್, ವಿಜಾಪುರ
 
* ಹೋಟೆಲ ಕಾಮತ್, ವಿಜಾಪುರ
 
* ಹೋಟೆಲ ಅಶೋಕ, ವಿಜಾಪುರ
 
* ಮಧುವನ ಹೊಟೇಲ್, ವಿಜಾಪುರ
 
* ಪ್ಲಿಜಂಟ ಸ್ಟೆ ಹೊಟೇಲ್, ವಿಜಾಪುರ
 
* ಕನಿಷ್ಕ ಇಂಟರನ್ಯಾಶನಲ್ ಹೊಟೇಲ್, ವಿಜಾಪುರ
 
* ನವರತ್ನ ಇಂಟರನಾಶನಲ್ ಹೊಟೇಲ್, ವಿಜಾಪುರ
 
* ಪರ್ಲ ಹೊಟೇಲ್, ವಿಜಾಪುರ
 
* ಕೆ.ಎಸ್.ಟಿ.ಡಿ.ಸಿ. ಮಯೂರ ಆದಿಲ್ ಶಾಹಿ ಹೊಟೇಲ್, ವಿಜಾಪುರ
 
* ಮೆಘರಾಜ ಹೊಟೇಲ್, ವಿಜಾಪುರ
 
* ಸಾಗರ ಹೊಟೇಲ್, ವಿಜಾಪುರ
 
* ಪಾರೆಖಾ ಹೊಟೇಲ್, ವಿಜಾಪುರ
 
* ಬ್ಲೂ ಡೈಮಂಡ ಹೊಟೇಲ್, ವಿಜಾಪುರ
 
* ಬಸವ ರೆಸಿಡೆನ್ಸಿ ಹೊಟೇಲ್, ವಿಜಾಪುರ
 
* ಗೊಲ್ಡನ್ ಹೈಟ್ಸ್ ಹೊಟೇಲ್, ವಿಜಾಪುರ
 
* ಸನ್ಮಾನ ಹೊಟೇಲ್, ವಿಜಾಪುರ
 
* ಮೈಸೂರ ಹೊಟೇಲ್, ವಿಜಾಪುರ
 
* ಗೊದಾವರಿ ಹೊಟೇಲ್, ವಿಜಾಪುರ
 
* ರತ್ನಾ ಪ್ಯಾಲೇಸ ಹೊಟೇಲ್, ವಿಜಾಪುರ
 
* ಯಾತ್ರಿ ನಿವಾಸ ಹೊಟೇಲ್, ವಿಜಾಪುರ
 
* ಮಧುವನ ಹೊಟೇಲ್, ವಿಜಾಪುರ
 
* ಟೌನ ಪ್ಯಾಲೇಸ ಹೊಟೇಲ್, ವಿಜಾಪುರ
 
* ಕೊಹಿನೂರ ಹೊಟೇಲ್, ವಿಜಾಪುರ
 
* ರಾಯಲ್ ಹೊಟೇಲ್, ವಿಜಾಪುರ
 
* ಲಲಿತ ಮಹಲ್ ಹೊಟೇಲ್, ವಿಜಾಪುರ
 
* ಹೆರಿಟೇಜ ಹೊಟೇಲ್, ವಿಜಾಪುರ
 
* ಟೂರಿಸ್ಟ ಹೊಟೇಲ್, ವಿಜಾಪುರ
 
* ಮೋಯಿನ್ ಹೊಟೇಲ್, ವಿಜಾಪುರ
 
* ಚೈತನ್ಯ ಹೊಟೇಲ್, ವಿಜಾಪುರ
 
* ಶ್ರೀ ಗೊದಾವರಿ ಲಕ್ಷ್ಮಿ ಹೊಟೇಲ್, ವಿಜಾಪುರ
 
* ವಿಜಾಪುರ ಕೆಫೆ ಹೊಟೇಲ್, ವಿಜಾಪುರ
 
* ತ್ರೀವೇಣಿ ಹೊಟೇಲ್, ವಿಜಾಪುರ
 
* ವಿನಾಯಕ ಹೊಟೇಲ್, ವಿಜಾಪುರ
 
* ರಾಜೇಂದ್ರ ಹೊಟೇಲ್, ವಿಜಾಪುರ
 
* ಉಲ್ಲಾಸ ಹೊಟೇಲ್, ವಿಜಾಪುರ
 
* ಇಂಟರನ್ಯಾಶನಲ್ ಹೊಟೇಲ್, ವಿಜಾಪುರ
 
* ಶೀತಲ ಹೊಟೇಲ್, ವಿಜಾಪುರ
 
* ಸಾಗರ ಹೊಟೇಲ್, ವಿಜಾಪುರ
 
* ರಾಜಧಾನಿ ಹೊಟೇಲ್, ವಿಜಾಪುರ
 
* ಗೋಕುಲ ಹೊಟೇಲ್, ವಿಜಾಪುರ
 
* ಕೃಷ್ಣ ಹೊಟೇಲ್, ವಿಜಾಪುರ
 
* ಕಪಿಲ್ ಹೊಟೇಲ್, ವಿಜಾಪುರ
 
* ರುಚಿ ಹೊಟೇಲ್, ವಿಜಾಪುರ
 
* ವೀರೇಶ ಹೊಟೇಲ್, ವಿಜಾಪುರ
 
* ಸತ್ಕಾರ ಹೊಟೇಲ್, ವಿಜಾಪುರ
 
* ಭವಾನಿ ಹೊಟೇಲ್, ವಿಜಾಪುರ
 
* ನೀಲಕಮಲ ಹೊಟೇಲ್, ವಿಜಾಪುರ
 
* ತೃಪ್ತಿ ಹೊಟೇಲ್, ವಿಜಾಪುರ
 
* ನೀಲಮ ಹೊಟೇಲ್, ವಿಜಾಪುರ
 
* ನ್ಯೂ ಬೆಂಗಳೂರ ಹೊಟೇಲ್, ವಿಜಾಪುರ
 
* ಶ್ರೀನಿಧಿ ಹೊಟೇಲ್, ವಿಜಾಪುರ
 
* ಸಂದೇಶ ಹೊಟೇಲ್, ವಿಜಾಪುರ
 
* ಪವನ ಹೊಟೇಲ್, ವಿಜಾಪುರ
 
* ಶಾಂತಿನಗರ ಹೊಟೇಲ್, ವಿಜಾಪುರ
 
* ದುರ್ಗಾ ಹೊಟೇಲ್, ವಿಜಾಪುರ
 
* ಶಂಕರ ಹೊಟೇಲ್, ವಿಜಾಪುರ
 
* ಗೂಗಲ್ ಹೊಟೇಲ್, ವಿಜಾಪುರ
 
* ಪ್ರಶಾಂತ ಹೊಟೇಲ್, ವಿಜಾಪುರ
 
 
=='''ಉಲ್ಲೇಖಗಳು'''==
<References/>
 
{{geographic location
|Center=[[ವಿಜಾಪುರ ಜಿಲ್ಲೆ]]
|Southwest= [[ಬಾಗಲಕೋಟೆ ಜಿಲ್ಲೆ]]
|Southeast= [[ರಾಯಚೂರು ಜಿಲ್ಲೆ]]
|West= [[ಬೆಳಗಾವಿ ಜಿಲ್ಲೆ]]
|Northwest=[[ಸಾಂಗಲಿ ಜಿಲ್ಲೆ]]
|Northeast=[[ಗುಲ್ಬರ್ಗ ಜಿಲ್ಲೆ‎]]
|East=[[ಗುಲ್ಬರ್ಗ ಜಿಲ್ಲೆ‎]]
|North=[[ಸೊಲ್ಲಾಪುರ ಜಿಲ್ಲೆ]]
|South=[[ಬಾಗಲಕೋಟೆ ಜಿಲ್ಲೆ]]
}}
 
 
=='''ಬಾಹ್ಯ ಸಂಪರ್ಕಗಳು'''==
 
* [http://www.bijapur.nic.in ವಿಜಾಪುರ ಜಿಲ್ಲೆಯ ಅಧಿಕೃತ ಸರ್ಕಾರಿ ತಾಣ]
*
* [http://www.bijapur.nic.in/PDF/Bijapur_district_profile.pdf ವಿಜಾಪುರ ಜಿಲ್ಲೆಯ ಸಂಪೂರ್ಣ ಮಾಹಿತಿ]
*
* [http://www.bijapurcity.gov.in/ ವಿಜಾಪುರ ನಗರಸಭೆ, ವಿಜಾಪುರ]
*
* [http://www.bldeuniversity.org ಬಿ ಎಲ್ ಡಿ ಇ ವಿಶ್ವವಿದ್ಯಾಲಯ, ವಿಜಾಪುರ]
*
* [http://www.kar.nic.in/dio/bijapur.htm ವಿಜಾಪುರ ಜಿಲ್ಲೆಯ ನಕಾಶೆ]
*
* [http://maps.google.co.in/maps?hl=en&psj=1&bav=on.2,or.r_qf.&bvm=bv.43287494,d.bmk&biw=1024&bih=677&q=bijapur&um=1&ie=UTF-8&hq=&hnear=0x3bc6557d98aa706f:0xedd4a1794e8fe8d2,Bijapur,+Karnataka&gl=in&sa=X&ei=PeA9Ue6gB8HXrQewrYGIBw&ved=0CKIBELY ವಿಜಾಪುರ ಜಿಲ್ಲೆಯ ಗೂಗಲ್ ನಕಾಶೆ]
*
* [http://wikimapia.org/#lang=en&lat=16.835022&lon=75.717087&z=13&m=w ವಿಜಾಪುರ ಜಿಲ್ಲೆಯ ವಿಕಿಮ್ಯಾಪಿಯ ನಕಾಶೆ]
 
{{ಕರ್ನಾಟಕದ ಜಿಲ್ಲೆಗಳು}}
 
[[ವರ್ಗ:ವಿಜಾಪುರ ಜಿಲ್ಲೆ|*]]
[[ವರ್ಗ:ಕರ್ನಾಟಕದ ಜಿಲ್ಲೆಗಳು]]
[[ವರ್ಗ: ವಿಜಾಪುರ ಜಿಲ್ಲೆಯ ತಾಲೂಕುಗಳು]]
 
[[ca:Districte de Bijapur]]
[[hi:बिजापुर जिला]]
[[pl:Bidźapur]]
[[ta:பீசப்பூர் மாவட்டம்]]
"https://kn.wikipedia.org/wiki/ಬಿಜಾಪುರ" ಇಂದ ಪಡೆಯಲ್ಪಟ್ಟಿದೆ