ಸೈನಿಕ ಶಾಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|ಸೈನಿಕ ಶಾಲೆ, ಬಿಜಾಪುರ File:Sainik school bijapur.JPG|thumb|ಸೈನಿಕ ಶಾಲೆ,ಮುಖ್...
( ಯಾವುದೇ ವ್ಯತ್ಯಾಸವಿಲ್ಲ )

೧೪:೩೮, ೨೩ ಅಕ್ಟೋಬರ್ ೨೦೧೩ ನಂತೆ ಪರಿಷ್ಕರಣೆ

ಸೈನಿಕ ಶಾಲೆ, ಬಿಜಾಪುರ ದೇಶದಲ್ಲಿ ಪ್ರಸ್ತುತ 13ನೇ ಸೈನಿಕ್ ಶಾಲೆ ಆಗಿದೆ. ಇದರ ಅಡಿಪಾಯವನ್ನು ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರು ಹಾಕಿದರು. ೧೬ನೇ ಸೆಪ್ಟೆಂಬರ್ ೧೯೬೧ ರಂದು ಕಾರ್ಯ ಆರಂಭಗೊಂಡಿತು. ಪ್ರಸ್ತುತ ಕ್ಯಾಂಪಸ್ 17 ಡಿಸೆಂಬರ 1966 ರಂದು ಭಾರತದ ಅಂದಿನ ಉಪಾಧ್ಯಕ್ಷರಾದ ಡಾ. ಜಾಕಿರ್ ಹುಸೇನ್ ಉದ್ಘಾಟಿಸಿದರು.

ಚಿತ್ರ:Sainik School,Bijapur.JPG
ಸೈನಿಕ ಶಾಲೆ, ಬಿಜಾಪುರ
ಚಿತ್ರ:Sainik school bijapur.JPG
ಸೈನಿಕ ಶಾಲೆ,ಮುಖ್ಯ ಕಟ್ಟಡ, ಬಿಜಾಪುರ
ಚಿತ್ರ:50 sainik bijapur.JPG
ಸೈನಿಕ ಶಾಲೆ, ಬಿಜಾಪುರದ ಲಾಂಛನ ಸುವರ್ಣ ಮಹೋತ್ಸವ
ಚಿತ್ರ:50 year sainik bijapur.JPG
ಸೈನಿಕ ಶಾಲೆ, ಬಿಜಾಪುರದ ಲಾಂಛನ ಸುವರ್ಣ ಮಹೋತ್ಸವ

ಇತಿಹಾಸ

ಭಾರತದಲ್ಲಿ ಇರುವ 25 ಸೈನಿಕ ಶಾಲೆಗಳಲ್ಲಿ 13ನೇ ಶಾಲೆಯಾಗಿ ಆರಂಭವಾದ ವಿಜಾಪುರ ಸೈನಿಕ ಶಾಲೆ ಕರ್ನಾಟಕದ ಮಾಜಿ ಸಚಿವ ಎಸ್.ಆರ್. ಕಂಠಿ ಅವರ ಕನಸಿನ ಕೂಸು. ಅವರ ಸತತ ಪ್ರಯತ್ನ ಮತ್ತು ಕೇಂದ್ರ ರಕ್ಷಣಾ ಖಾತೆಯ ಸಹಯೋಗದೊಂದಿಗೆ ಸೆಪ್ಟೆಂಬರ್ 16ರಂದು ಬಿಜಾಪುರದ ವಿಜಯಾ ಕಾಲೇಜು ಆವರಣದ ಮೂಲೆಯಲ್ಲಿ ತಾತ್ಕಾಲಿಕವಾಗಿ ಶುರುವಾಯಿತು.

1966ರಲ್ಲಿ ಹೊಸ ಸ್ಥಳಕ್ಕೆ ಸ್ಥಳಾಂತರ ಮೂರು ವರ್ಷಗಳ ನಂತರ ಡಿಸೆಂಬರ್ 17, 1966ರಲ್ಲಿ 406 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕಟ್ಟಡಕ್ಕೆ ಸೈನಿಕ ಶಾಲೆ ಸ್ಥಳಾಂತರವಾಯಿತು. ಇದನ್ನು ಭಾರತದ ಅಂದಿನ ಉಪರಾಷ್ಟ್ರಪತಿ ಡಾ. ಝಾಕಿರ್ ಹುಸೇನ್ ಅವರು ಉದ್ಘಾಟಿಸಿದರು. ಅಂದಿನಿಂದ ನಾಲ್ಕೂವರೆ ದಶಕಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಸೈನಿಕರನ್ನು ದೇಶಕ್ಕೆ ಸೈನಿಕ ಶಾಲೆ ಅರ್ಪಣೆ ಮಾಡಿದೆ.


ಸ್ಥಳ

ಕೇಂದ್ರ ಬಸ್ ನಿಲ್ದಾಣದಿಂದ ಪಶ್ಚಿಮಕ್ಕೆ ೪ ಕಿ.ಮೀ. ದೂರದಲ್ಲಿರುವ ಸೈನಿಕ ಶಾಲೆಯು ಒಂದು ಮುಖ್ಯ ಶಿಕ್ಷಣ ಸಂಸ್ಥೆಯಾಗಿದೆ. ಇದು ಕರ್ನಾಟಕ ರಾಜ್ಯದ ಏಕೈಕ ಸೈನಿಕ ಶಿಕ್ಷಣ ನೀಡುವ ಶಾಲೆಯಾಗಿದೆ. ಕರ್ನಾಟಕದ ವಿದ್ಯಾರ್ಥಿಗಳನ್ನು ೬ನೇ ತರಗತಿಗೆ ಪ್ರವೇಶ ಪರೀಕ್ಷೆ ಮೂಲಕ ಇಲ್ಲಿ ಆಯ್ಕೆ ಮಾಡಲಾಗುತ್ತದೆ. ಕೇಂದ್ರ ಪಠ್ಯವಸ್ತುವಿನ ಬೋಧನೆ ಇಲ್ಲಿ ಜರುಗುತ್ತಿದ್ದು, ದೇಶಕ್ಕೆ ಧಿರೋದಾತ್ತ ಸೈನಿಕರನ್ನು ತಯಾರಿಸುವ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತದೆ. ಪ್ರತಿ ವರ್ಷ ೯೦ ರಿಂದ ೧೦೦ ಬಾಲಕರನ್ನು ಮೆರಿಟ್ ಆದಾರದ ಮೇಲೆ ಸೇರಿಸಿಕೊಳ್ಳಲಾಗುತ್ತದೆ. ಒಮ್ಮೆ ಸೇರಿದ ಮಕ್ಕಳು ೧೨ನೇ ತರಗತಿಯವರೆಗೆ ಶಿಕ್ಷಣ ಪಡೆಯುತ್ತಾರೆ. ಸಧ್ಯ ೬೦೦ಕ್ಕೂ ಹೆಚ್ಚು ಬಾಲಕರು ಶಿಕ್ಷಣ ಪಡೆಯುತ್ತಿದ್ದಾರೆ.


ಶುಲ್ಕ

ಪರೀಕ್ಷೆ ಪಾಸಾದವರಿಗೆ ಶುಲ್ಕ ಹೀಗಿರುತ್ತದೆ. ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ಸಂದರ್ಶನ ಪಾಸ್ ಆದವರು ವಾರ್ಷಿಕವಾಗಿ 52,345 ರು. ಟ್ಯೂಷನ್ ಶುಲ್ಕ ಮತ್ತು 20,650 ರು. ಪಥ್ಯ (ಡಯಟ್) ಶುಲ್ಕವನ್ನು ಒಂದೇ ಬಾರಿಗೆ ಭರ್ತಿ ಮಾಡಬೇಕು. ಇದು ಪ್ರತಿವರ್ಷ ಪರಿಷ್ಕರಣೆಗೊಳಗಾಗುತ್ತಿರುತ್ತದೆ. ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೂಡ ಇರುತ್ತದೆ.


ಆಯ್ಕೆ

ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಶೇ.15ರಷ್ಟು ಪರಿಶಿಷ್ಟ ಜಾತಿಗೆ ಮತ್ತು ಶೇ.7.5ರಷ್ಟು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಇರುತ್ತದೆ. ಶೇ.67ರಷ್ಟು ರಾಜ್ಯದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಇನ್ನೂ ನೀಟುಗಳು ಖಾಲಿ ಇದ್ದರೆ ಹೊರರಾಜ್ಯದವರಿಗೆ ಅವಕಾಶ ನೀಡಲಾಗುತ್ತದೆ. ಅದರಲ್ಲೂ ಸೇನೆಯಲ್ಲಿ ಸೇವೆ ಸಲ್ಲಿಸಿರುವವರ ಮಕ್ಕಳಿಗೆ ಶೇ.25ರಷ್ಟು ಸೀಟುಗಳು ಮೀಸಲು.


ಪ್ರವೇಶ ಪರೀಕ್ಷೆ

ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಇರುತ್ತದೆ. 6ನೇ ತರಗತಿಗೆ ಗಣಿತ, ಭಾಷಾ ಸಾಮರ್ಥ್ಯ, ಜಾಣ್ಮೆ ವಿಷಯದಲ್ಲಿ 100 ಅಂಕಗಳ ಪರೀಕ್ಷೆ. 9ನೇ ತರಗತಿಗೆ ಗಣಿತ, ಸಾಮಾಜಿಕ ವಿಜ್ಞಾನ, ಇಂಗ್ಲಿಷ್ ಮತ್ತು ಸಾಮಾನ್ಯ ವಿಜ್ಞಾನ ವಿಷಯದಲ್ಲಿ ಪರೀಕ್ಷೆ. ವಿದ್ಯಾರ್ಥಿ ಒಂದು ಬಾರಿ ಮಾತ್ರ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಬಹುದು. ಜೊತೆಗೆ ಸಂದರ್ಶನ ಮತ್ತು ದೈಹಿಕ ಪರೀಕ್ಷೆಯಲ್ಲಿಯೂ ತೇರ್ಗಡೆಯಾಗಬೇಕು.

6ನೇ ತರಗತಿಯಿಂದ ವಿದ್ಯಾರ್ಥಿಗಳಿಗೆ ಮಾತ್ರ ಇಲ್ಲಿ ಪ್ರವೇಶ. ಜುಲೈ 1ರೊಳಗೆ 10ರಿಂದ 11 ವರ್ಷ ಪೂರೈಸಿರುವ ಹುಡುಗರು ಭರ್ತಿಗೆ ಅರ್ಹರು. 13ರಿಂದ 14 ವರ್ಷ ಪೂರೈಸಿರುವ ವಿದ್ಯಾರ್ಥಿಗಳಿಗೆ 9ನೇ ಈಯತ್ತೆಗೂ ಪ್ರವೇಶವಿರುತ್ತದೆ. ವಿದ್ಯಾರ್ಥಿಯ ವಯಸ್ಸಿನ ಮಿತಿಯನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.


ಸೌಲಭ್ಯಗಳು

ಬೃಹತ್ತಾದ ಕಟ್ಟಡದಲ್ಲಿ ಹಾಸ್ಟೆಲ್, ಆಡಿಟೋರಿಯಂ, ಕೆಡೆಟ್ ಮೆಸ್ (ಸಸ್ಯಾಹಾರ, ಮಾಂಸಾಹಾರ), ಸ್ವಿಮ್ಮಿಂಗ್ ಪೂಲ್, ಜಿಮ್ನಾಶಿಯಂ, ಆರೋಗ್ಯ ಕೇಂದ್ರ, ಸಿಬ್ಬಂದಿ ನಿವಾಸ, ಅತಿಥಿ ಗೃಹ, ಆಟದ ಮೈದಾನ, ಹೆಲಿಪ್ಯಾಡ್ ಮುಂತಾದ ವ್ಯವಸ್ಥೆಯಿದೆ. ಶೈಕ್ಷಣಿಕ ಅಧ್ಯಯನದ ಜೊತೆಗೆ, ಸಾಹಸಮಯ ಚಟುವಟಿಕೆ, ದೈಹಿಕ ತರಬೇತಿ, ಸಾಂಸ್ಕೃತಿಕ ಚಟುವಟಿಕೆ, ಸ್ಪರ್ಧೆ, ಪ್ರವಾಸಗಳನ್ನು ಆಯೋಜಿಸಲಾಗುತ್ತದೆ.


ಗಂಢಬೇರುಂಡ ಶಾಲಾ ಲಾಂಛನ

ಚಿತ್ರ:Sainik bijapur logo.JPG
ಸೈನಿಕ ಶಾಲೆ, ಬಿಜಾಪುರದ ಲಾಂಛನ

ವಿದ್ಯಾರ್ಥಿಗಳಲ್ಲಿ ಸಂಕಲ್ಪ ಮತ್ತು ಸಮರ್ಪಣಾ ಮನೋಭಾವವನ್ನು ಬಿತ್ತುವ ಉದ್ದೇಶದಿಂದ ಕಾಲ್ಪನಿಕ ಪಕ್ಷಿಯಾದ ಗಂಢಬೇರುಂಢವನ್ನೇ ಶಾಲೆ ಲಾಂಛನವನ್ನಾಗಿ ಮಾಡಿಕೊಂಡಿದೆ. ಗಂಢಬೇರುಡ ಅಸಾಧಾರಣ ಶಕ್ತಿ, ಧರ್ಮ, ಧೈರ್ಯ, ಸತ್ಯ ಮತ್ತು ಹೃದಯ ವೈಶಾಲ್ಯದ ಸಂಕೇತವೂ ಆಗಿದೆ. 1964ರಲ್ಲಿ ಶಾಲೆಯ ಲಾಂಛನವಾದ ಇದರ ಎರಡೂ ಬದಿಯಲ್ಲಿ ವಿದ್ಯೆ ಮತ್ತು ಜ್ಞಾನೋದಯದ ಸಂಕೇತವಾಗಿರುವ ಎರಡು ದೀಪಗಳಿವೆ.


ಒಳಾಂಗಣ ಕ್ರೀಡಾಂಗಣ

ಚಿತ್ರ:Sainik bijapur indoor.JPG
ಒಳಾಂಗಣ ಕ್ರೀಡಾಂಗಣ,ಸೈನಿಕ ಶಾಲೆ, ಬಿಜಾಪುರ

ಸೈನಿಕ ಶಾಲೆಯಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣವನ್ನು ರಾಷ್ಟ್ರಪತಿ ಪ್ರಣಬ್ ಮುಕರ್ಜಿ ಅವರಿಂದ ಉದ್ಘಾಟನೆಯಾಯಿತು.

ಈ ಒಳಾಂಗಣ ಕ್ರೀಡಾಂಗಣದಲ್ಲಿ ಬಾಸ್ಕೆಟ್‌ ಬಾಲ್‌, ಸ್ಕ್ವಾಷ್‌, ಬಾಕ್ಸಿಂಗ್‌, ವಾಲಿಬಾಲ್‌, ಟೇಬಲ್‌ ಟೆನ್ನಿಸ್‌, ಬಿಲಿಯರ್ಡ್ಸ್‌, ಚೆಸ್‌, ಕೇರಂ ಸೇರಿದಂತೆ 10 ಬಗೆಯ ಆಟಗಳನ್ನು ಆಡಲು ಅವಕಾಶ ಮತ್ತು ಸೌಲಭ್ಯ ಕಲ್ಪಿಸಲಾಗುತ್ತಿದೆ. ವೈದ್ಯರ ಕೊಠಡಿ, ಸಾಮಗ್ರಿ ಕೊಠಡಿ, ಶೌಚಾಲಯ ಮತ್ತು ಸ್ನಾನಗೃಹಗಳು ಇರಲಿವೆ.

ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಲಿ­ರುವ ಉತ್ತರ ಕರ್ನಾಟಕದ ಮೊದಲ ಒಳಾಂಗಣ ಕ್ರೀಡಾಂಗಣ.

ಈ ಒಳಾಂಗಣ ಕ್ರೀಡಾಂಗಣದ ನೆಲ ಮಹಡಿ 2,417 ಚದುರ ಮೀಟರ್‌ ಹಾಗೂ ಮೊದಲ ಮಹಡಿ 505 ಚದರ ಮೀಟರ್‌ನಷ್ಟು ವಿಶಾಲವಾಗಿದೆ. ಕಟ್ಟಡದ ಮಧ್ಯಭಾಗದಲ್ಲಿ ಬಾಸ್ಕೆಟ್‌ ಬಾಲ್‌ ಅಂಕಣ ಇದ್ದು, ಸಾವಿರ ಜನ ಕುಳಿತು ನೋಡುವಷ್ಟು ಸ್ಥಳಾವಕಾಶ ಇದೆ.


ಸೈನಿಕ ಶಾಲೆ, ಬಿಜಾಪುರ ಅಧಿಕೃತ ಅಂತರ್ಜಾಲ ತಾಣ