ಗೋಕಾಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫ ನೇ ಸಾಲು:
'''ಗೋಕಾಕ್''' [[ಬೆಳಗಾವಿ]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ಈ ಜಿಲ್ಲೆಯಲ್ಲಿ ಸುಪ್ರಸಿದ್ಧ [[ಗೋಕಾಕ ಜಲಪಾತ]]ವಿದೆ. ಈ ಜಲಪಾತದಡಿಯಲ್ಲಿ ವಿದ್ಯುತ್ಚಕ್ತಿಯನ್ನು ಉತ್ಪಾದಿಸಲಾಗುತ್ತದೆ.ಗೋಕಾಕ ನಗರವು ಮೂಲತ: ಒಂದು ವಾಣಿಜ್ಯ ನಗರವಾಗಿದೆ. ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯು ಬೆಲ್ಲ , ಗೋವಿನ ಜೊಳ ಮತ್ತು ಹತ್ತಿಯ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ. ಇತ್ತಿಚಿಗೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಕೈಗಾರಿಕಾ ನಗರವಾಗಿಯೂ ಗುರುತಿಸಿಕೊಂಡಿದೆ. ಇಲ್ಲಿ ಮುಖ್ಯವಾಗಿ ಜವಳಿ, ಸಕ್ಕರೆ, ಮತ್ತು ಗೊವಿನ ಜೊಳ ಸಂಸ್ಕರಣೆ, ಮತ್ತು ಸಿಮೆಂಟ್ ಕೈಗಾರಿಕೆಗಳು ನೆಲೆಗೊಂಡಿವೆ. ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ ನಗರವನ್ನು ಹೊರತುಪಡಿಸಿ ಇದೆ ಅತ್ಯಂತ ಜನನಿಬಿಡ ಹಾಗೂ ದೊಡ್ಡ ನಗರವಾಗಿದೆ.
== ಇತಿಹಾಸ ==
ಗೋಕಾಕ್ ನಗರವು ಐತಿಹಾಸಿಕವಾಗಿಯೂ ಪ್ರಾಮುಖ್ಯತೆ ಪಡೆದ ಸ್ಥಳವಾಗಿದೆ. ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು ಈ ಪ್ರದೇಶವನ್ನು ಆಳಿದ್ದಾರೆ. ತದನಂತರ ಮೊಘಲರ್ ಆಡಳಿತದಲ್ಲಿ ಬಿಜಾಪುರ ಸುಲ್ತಾನರು ಗೋಕಾಕ್ ಕೋಟೆಯನ್ನು ವಶಪಡಿಸಿಕೊಂಡರು. ಬಳಿಕ ಸವಣೂರಿನ ನವಾಬರು ಇದನ್ನು ಜಹಗೀರಾಗಿ ಪಡೆದುಕೊಂಡರು. ಇದಲ್ಲದೆ ಆಯಕಟ್ಟಿನ ಸ್ಥಳವಾಗಿದ್ದ ಹಿನ್ನೆಲೆಯಲ್ಲಿ ಈ ಪ್ರದೇಶ ಕೆಲಕಾಲ ಜಮಖಂಡಿ ಸಂಸ್ಥಾನ, ಕಿತ್ತೂರು ಸಂಸ್ಥಾನ ಹಾಗೂ ಮರಾಠಾ ಪೆಶ್ವೆಗಳ ಆಡಳಿತಕ್ಕೂ ಒಳಪಟ್ಟಿತ್ತು. ನಂತರದ ಬ್ರಿಟಿಷ್ ಆಡಳಿತಾವಧಿಯಲ್ಲಿ ಬೆಳಗಾಂ ಜಿಲ್ಲೆಯ ಉಪವಿಭಾಗದ ಕೇಂದ್ರವಾಗಿತ್ತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಮುಂಬೈ ಸರ್ಕಾರದಿಂದ ಬೇರ್ಪಟ್ಟು ಕರ್ನಾಟಕದೊಂದಿಗೆ ಸೇರಿಸಲ್ಪಟ್ಟಿತು.
 
== ನಗರಾಡಳಿತ ==
"https://kn.wikipedia.org/wiki/ಗೋಕಾಕ" ಇಂದ ಪಡೆಯಲ್ಪಟ್ಟಿದೆ