ಚಿಂತಾಮಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೫೦ ನೇ ಸಾಲು:
==ಮುರುಗಮಲ್ಲಾ==
ಚಿಂತಾಮಣಿಯಿಂದ ೧೧ ಕಿ. ಮೀ ದೂರದಲ್ಲಿರುವ ಗ್ರಾಮ ’ಮರುಗಮಲ್ಲಾ’. ಕರ್ನಾಟಕದ ಸುಪ್ರಸಿದ್ಧ ದರ್ಗಾ ’ಫಲಿಶಾವಾಲಿಯ ಮುರುಗಮಲ್ಲಾ ದರ್ಗಾ’ ಇಲ್ಲಿದೆ. ’ವಾರ್ಷಿಕ ಉರುಸ್’ ಸಾವಿರಾರು ಶ್ರದ್ಧಾಳುಗಳಿಗೆ ಅವರ ಮನೋಕಾಮನೆಗಳನ್ನಲ್ಲದೆ, ರೋಗ-ರುಜಿನಗಳನ್ನೂ ’ಪೀರ್ ನಿವಾರಿಸಬಲ್ಲ’ ಶಕ್ತಿಯನ್ನು ಹೊಂದಿದೆಯೆಂಬ ಬಲವಾದ ನಂಬಿಕೆಯಿದೆ. ಹಿಂದೂ-ಮುಸಲ್ಮಾನರ ಭಾವೈಕ್ಯತೆಯ ಸಂಕೇತವಾಗಿರುವ ’ದರ್ಗಾ’ ಒಂದು ಸಂಕೇತ. ಕ್ರಿ. ಶ. ೧೮ ನೆಯ ಶತಮಾನದಲ್ಲಿ ನಿರ್ಮಿಸಲಾದ, ೬೦೦ ಅಡಿ ಎತ್ತರದ ಕಲ್ಲಿನ ಕೋಟೆ ಬೆಟ್ಟದಮೇಲಿದೆ. ಕೋಟೆ ಗಾಳಿ-ಮಳೆಗಳಿಗೆ ತುತ್ತಾಗಿ ಶಿಥಿಲವಾಗುತ್ತಿದೆ. ಶಿವಲಿಂಗವಿರುವ ದೇವಾಲಯ ಬೆಟ್ಟದ ತಪ್ಪಲಿನಲ್ಲಿದೆ.
==’ಯಗವ ಕೋಟೆ’==
ಚಿಂತಾಮಣಿಯಿಂದ, ’ಬಟ್ಲಹಳ್ಳಿ’ ಗೆ ಹೋಗುವ ಹಾದಿಯಲ್ಲಿ ೧೫ ಕಿ. ಮೀ ದೂರ ಸಾಗಿದರೆ, ಸಿಕ್ಕುತ್ತದೆ. ಹತ್ತಿರದಲ್ಲೇ ’ವೀರನಾರಾಯಣ ಮಂದಿರ’ ವಿದೆ. ಬೃಹದಾಕಾರದ ಬೆಟ್ಟದ ಮೇಲೆ, ’[[ವಿಷ್ಣುಪಾದಗಳಿವೆ’]]. ಇದರ ತಪ್ಪಲಿನಲ್ಲೇ [[ಮುತ್ತಿನ ಕೊಳ]] ವೆಂಬ, ವಿಶಾಲ ಕೊಳವೊಂದು ಗೋಚರಿಸುತ್ತದೆ. ಫಾಲ್ಗುಣ ಮಾಸದಲ್ಲಿ ’ವೀರನಾರಾಯಣ ಸ್ವಾಮಿ ಬ್ರಹ್ಮ ರಥೋತ್ಸವ’ ಜರುಗುತ್ತದೆ.
|