ಬಾಗಲಕೋಟ ನಾಟಕ ಪರಂಪರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಬಾಗಲಕೋಟ ರಂಗ ಪರಂಪರೆ.
( ಯಾವುದೇ ವ್ಯತ್ಯಾಸವಿಲ್ಲ )

೦೮:೦೩, ೨೦ ಅಕ್ಟೋಬರ್ ೨೦೧೩ ನಂತೆ ಪರಿಷ್ಕರಣೆ


ಬಾಗಲಕೋಟೆಯ ರಂಗ ಪರಂಪರೆ .ಕಲೆ,ಸಾಹಿತ್ಯ,ನಾಟಕ,ಜಾನಪದ ಹೀಗೆ ಸಾಸ್ಕೃತಿಕವಾಗಿ ಬಾಗಲಕೋಟೆ ನಗರವು ಮೊದಲಿನಿಂದಲೂ ಶ್ರೀಮಂತವಾಗಿದೆ.ಬಹಳ ಹಿಂದಿನ ಕಾಲದಿಂದಲೂ ಬಾಗಲಕೋಟೆಯಲ್ಲಿ ಶ್ರೀ ಮೋಟಗಿ ಬಸವೇಶ್ವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದೊಡ್ಡಾಟಗಳನ್ನು ಆಡುತ್ತಿದ್ದರು.ಮಹಾಭಾರತದ ಪ್ರಸಂಗಗಳನ್ನು ಕೌಲಪೇಟೆಯ ಕಲಾ ತಂಡದವರು ಆಡುತ್ತಿದ್ದರು.ಶ್ರೀ ಕೃಷ್ಣನ ಪಾತ್ರವನ್ನು ನಿರ್ವಹಿಸುತ್ತಿದ್ದ ವೀರಪ್ಪ ಶೆಟ್ಟರ ಅವರು ದೊಡ್ಡಾಟಕ್ಕಾಗಿಯೇ ತಮ್ಮ ಜೀವವನ್ನು ಮುಡುಪಾಗಿಟ್ಟಿದ್ದರು.ಗೋಲಪ್ಪನವರ ಓಣಿಯಲ್ಲಿ ಒಂದು ಹವ್ಯಾಸ ನಾಟಕ ತಂಡ ಪೌರಾಣಿಕ ನಾಟಕಗಳನ್ನು ಆಡಲು ಖ್ಯಾತಿ ಪಡೆದಿತ್ತು. ಹಳೆಯ ಬಾಗಲಕೋಟೆಯಲ್ಲಿ ‘ಮಡು’ ಎಂದು ಪ್ರಸಿದ್ದವಾದ ಹಳಪೇಟೆಯ ಭಾಗದಲ್ಲಿ ಇಂದಿಗೂ ಆಟದ ಮನೆ ಇದೆ.ಚರಂತಿಮಠದ ಹತ್ತಿರ ಹುಂಡೇಕಾರ ಓಣಿಯಲ್ಲಿ ಶ್ರೀ ಅನ್ನದಾನೇಶ್ವರ ನಾಟ್ಯ ಸಂಘ ಹುಟ್ಟಿಕೊಂಡಿತು.’ಬಾಗಲಕೋಟ್ಯಾಗ ನಾಟಕ ಎದ್ರ ಅದು ಎಲ್ಲಾ ಕಡೆ ಗೆದಿತೈತಿ’ಎನ್ನುವ ಮಾತು ಇಲ್ಲಿ ಹಲವಾರು ಪ್ರಸಿದ್ದ ವೃತ್ತಿ ನಾಟಕ ಕಂಪನಿಗಳು ತಮ್ಮ ಪ್ರಥಮ ಪ್ರದರ್ಶನಗಳನ್ನು ಇಲ್ಲಿಯೇ ಏರ್ಪಡಿಸುತ್ತಿರುವುದು ತುಂಬಾ ಜನಜನಿತ ಮಾತು.

 ಬಾಗಲಕೋಟೆಯ ಹವ್ಯಾಸಿ ರಂಗಭೂಮಿಯ ಇತಿಹಾಸದಲ್ಲಿ ಕೇಳಿಬರುವ ಇಂದಿಗೂ ಪ್ರಚಲಿತವಾಗಿರುವ ಹೆಸರು 1927 ರಲ್ಲಿ ಸ್ಥಾಪಿತವಾದ ‘ವಾಸುದೇವ ವಿನೋದಿನಿ ನಾಟ್ಯ ಸಭೆ’ .1948 ರಲ್ಲಿ ಪ್ರದರ್ಶಿಸಿದ ‘ನಳ ದಮಯಂತಿ’ ನಾಟಕದಲ್ಲಿ ಪಂಡಿತ ಭೀಮಸೇನ ಜೋಶಿಯವರು ಪಾತ್ರವಹಿಸಿದ್ದು ಒಂದು ಮೈಲಿಗಲ್ಲು. ಪಿ.ಎ.ಕುಲಕರ್ಣಿ,ವಂಕಣ್ಣ ಪರ್ವತಿಕರ,ಎಂ.ಸಿ.ಹಿರೇಮಠ,ಅನಂತ ಕುಲಕರ್ಣಿ, ಅನಂತ ಪುರೋಹಿತ ಅನೇಕರ ಸಹಕಾರದಿಂದ ಡಾ.ಶ್ರೀರಾಮ ಇಟ್ಟಣ್ಣವರ ರಚಿಸಿದ ‘ಪಾರಿಜಾತದವರು’.ಆನಂದ ಝುಂಜರವಾಡ ಅವರ ‘ಹಕ್ಕಿಯ ಹೆಗಲೇರಿ’ ನಾಟಕಗಳು ಅತ್ಯಂತ ಜನಪ್ರಿಯವಾದವು.
   ಶ್ರೀ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಸ್ಥೆಯ ಪ್ರಾಧ್ಯಾಪಕ ವರ್ಗದವರಾದ  ಉಮಾಪತಿಶಾಸ್ತ್ರೀ,ಪ್ರಿ.ಗಿರಡ್ಡಿ,                 ಡಾ.ಬಿ.ಕೆ.ಹಿರೇಮಠ,ಪ್ರೋ.ಡಿ,ವಿ,ಅಸ್ವಾಲೆ,ಪ್ರೋಎಂ.ಎ.ಟೆಂಗಿನಕಾಯಿ,ಡಾ.ರಾಜಶೇಖರಯ್ಯ,ಎಂ.ಬಿ.ಬಾಳಿಕಾಯಿ ಇವರೆಲ್ಲ ಸೇರಿ ಸೃಜನ ವೇದಿಕೆಯನ್ನು ಹುಟ್ಟು ಹಾಕಿ ‘ದೊಡ್ಡಪ್ಪ’ ಮೊದಲಾದ ನಾಟಕಗಳನ್ನು ಆಡಿದರು.ಕಲಾ ಸಂಗಮ ಎಂಬ ಹವ್ಯಾಸಿ ನಾಟಕ ತಂಡವೊಂದು ಸ್ಪಿನ್ನಿಂಗ ಮಿಲ್ಲ ಕಲಾವಿದರನ್ನೊಳಗೊಂಡು ಕೆಲ ನಾಟಕ ಪ್ರದರ್ಶಿಸಿದರು. ಶ್ರೀನಿವಾಸ ಕರ್ಜಗಿ,ರಂಗಶ್ರೀ ಶಂಕರ ಲಮಾಣಿ,ಗಂಗಾಧರ ಪಾಟೀಲ ಇವರೆಲ್ಲ ಈ ತಂಡದ ಚಾಲಕ ಶಕ್ತಿಯಾಗಿದ್ದರು.
     1978 ರಲ್ಲಿ ವಾಸುದೇವ ವಿನೋದಿನಿ ನಾಟ್ಯ ಸಭಾ, ಸೃಜನ ವೇದಿಕೆ,ಕಲಾಸಂಗಮ ಈ ಮೂರು ವೇದಿಕೆಗಳು ಸೇರಿ ವಿಭಾಗೀಯ ನಾಟಕೋತ್ಸವವನ್ನು ಅತ್ಯಂತ ವೈಭವವಾಗಿ ನೆರವೇರಿಸಿದ ಸಾಹಸಕ್ಕೆ ಬಾಗಲಕೋಟೆಯ ಗಣ್ಯ ನಾಗರಿಕರ ಸಹಕಾರ ಚರಂತಿಮಠ ಪೂಜ್ಯಶ್ರೀ ಪ್ರಭುಸ್ವಾಮಿಗಳ ಕೃಪಾಶೀರ್ವಾದ ಕಾರಣವಾದದ್ದು ಈಗ ಇತಿಹಾಸವಾಗಿದೆ. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ವೀರಣ್ಣ ಚರಂತಿಮಠ ಅವರ ಮಾರ್ಗದರ್ಶನದಲ್ಲಿ ಪ್ರಿ,ಬಿ.ಆರ್.ಬೊಳಿಶೆಟ್ಟಿ,ಪ್ರಿ.ಎ.ಎಸ್.ಪಾವಟೆ ಮತ್ತು ಹಲವಾರು ಮಿತ್ರವೃಂದದ ಸಹಾಯ ಸಹಕಾರದಿಂದ ಶ್ರೀ ಬೀಳೂg ಗುರುಬಸವ ವೇದಿಕೆಯುÀ ಮುನ್ನಡೆಸುತ್ತಾ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿರುವುದುಆಶಾದಾಯಕ ಸಂಗತಿ.ಶ್ರೀ ಗುರುಬಸವ ವೇದಿಕೆಯು ಪಿ.ಗಂಗಾಧರ ಸ್ವಾಮಿ ನಿರ್ದೆಶನದ ‘ಕಿತ್ತೂರು ಚೆನ್ನಮ್ಮ’,ಹಾಗೂ ‘ಏಳು ಕೊಳ್ಳದ ಎಲ್ಲಮ್ಮ’ ಈ ಕಥಾನಕಗಳನ್ನು ಬಯಲಾಟದ ಶೈಲಿಯಲ್ಲಿ ನೀಡಿದ್ದು ವಿಶೇಷ.

ರಂಗಕೋಟೆ ಬಾಗಿಲುಕೋಟೆ :

       ಕ್ರಿಯಾಶೀಲ ರಂಗ ಸಂಘಟಕ ಸಾಹಿತಿ ಡಾ.ಪ್ರಕಾಶ ಖಾಡೆ ಅವರ ಅಧ್ಯಕ್ಷತೆಯಲ್ಲಿ 2006 ರಿಂದ ‘ರಂಗಕೋಟೆ ಬಾಗಿಲುಕೋಟೆ’ ಎಂಬ ಹೊಸ ರಂಗ ವೇದಿಕೆಯು ಕ್ರಿಯಾಶೀಲವಾಗಿದೆ.. ಉಮೇಶ ತಿಮ್ಮಾಪುರ,ವಿನೋದ ಯಡಹಳ್ಳಿ. ಎಂ.ಎಸ್.ಬಸವರಾಜ,ಪ್ರಾ.ಎ.ಎಸ್.ಪಾವಟೆ,ಡಾ.ಪ್ರಕಾಶ ಖಾಡೆ,ನಾರಾಯಣ ಯಳ್ಳಿಗುತ್ತಿ,ಬಸವರಾಜ ಮುಕ್ಕುಪ್ಪಿ, ಎಸ್.ಎನ್.ಗೌಡರ,ಶಂಕರ ಲಮಾಣಿ,ಚಂದ್ರಶೇಖರ ಭಾವಿ,ಪಿ.ಆರ್.ಹೊಸಮನಿ,ಸಿದ್ದಣ್ಣ ಕಾಯಿ,ಸಿದ್ದಣ್ಣ ಯೆಂಡಿಗೇರಿ,ಪುಂಡಲೀಕ ಹಲಕುರ್ಕಿ ಡಾ.ಮೈನುದ್ದೀನ ರೇವಡಿಗಾರ,ವೀರೇಶ ಬಾಣಲದಿನ್ನಿ ,ದಾಸಪ್ಪನವರ,ಎಸ್,ಎಂ.ಹೂಗಾರ,ಟಿ.ಟಿ.ಲಮಾಣಿ,ವಿಕ್ಷೀತ ಮಠ ಕುಮಾರಿಯರಾದ ರಚನಾ ಕಳ್ಳಿಮಠ,ಶಿಲ್ಪಾ,ಶೃತಿ,ಅನ್ನಪೂರ್ಣ ಮೊದಲಾದ ‘ರಂಗ ಕೋಟೆ ಬಾಗಿಲುಕೋಟೆ’ಕಲಾವಿದರು ಮುಳುಗಡೆ ಊರಲ್ಲಿ ಹೊಸತನದ ಹರಿಗೋಲು ಹಾಕಿದ್ದಾರೆ.ಈಗಾಗಲೇ ‘ರಂಗಕೋಟೆ ಬಾಗಿಲು ಕೋಟೆ ತಂಡವು ಎಂ.ಎಸ್.ಬಸವರಾಜರ ರಚನೆ ಮತ್ತು ನಿರ್ದೇಶನದಲ್ಲಿ 2006 ರಲ್ಲಿ ‘ಮುಟ್ಟಿದರೆ ಶಿವನಾಣೆ’ ಎಂಬ ಧಾರ್ಮಿಕ ನಾಟಕವನ್ನು ನವನಗರ ಕಲಾಭವನದಲ್ಲಿ ಯಶಸ್ವಿಯಾಗಿ ನೀಡಿತು.2007 ರಲ್ಲಿ ಈ ತಂಡ ನೀಡಿದ ಎರಡನೆಯ ನಾಟಕ  ಎಂ.ಎಸ್.ಬಸವರಾಜ ಅವರು ರಚಿಸಿ ನಿರ್ದೇಶಿಸಿದ ’ಬೀಳೂರು ಶ್ರೀ ಗುರುಬಸವ ಜ್ಯೋತಿ ‘ಎಂಬ ನಾಟಕವು ಅತ್ಯಂತ ಜನಪ್ರಿಯವಾಗಿ ಅಪಾರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು..ಇಂದು ರಂಗಕೋಟೆ ಬಾಗಿಲುಕೋಟೆಯು ‘ಸಾಹಿತ್ಯ ಸಂಜೆ’ ಚಿಂತನ ಕಾರ್ಯಕ್ರಮ ಮೂಲಕ ಹೊಸ ಸಾಹಿತ್ಯ ಮತ್ತು ರಂಗ ಚಳುವಳಿಗೆ ತನ್ನನ್ನು ಅರ್ಪಿಸಿಕೊಂಡಿದೆ,ನಗರದ ಕಲೆ,ಸಾಹಿತ್ಯ ,ಸಂಸ್ಕೃತಿ ಕಾರ್ಯಕ್ರಮಗಳ ಮೂಲಕ ತನ್ನ  ಅಸ್ತಿತ್ವದ  ಗುರುತಿಸಿಕೊಂಡಿದೆ..*