ದಸರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Mysore-palace-at-night.jpg ಹೆಸರಿನ ಫೈಲು Fastilyರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕ...
೩ ನೇ ಸಾಲು:
== ಮೈಸೂರು ದಸರಾ ==
[[ಚಿತ್ರ:Dasara.jpg|right|thumb|200px|ಮೈಸೂರು ದಸರಾದ ಪ್ರಸಿದ್ಧ ಜಂಬೂಸವಾರಿ]]
ಈ ಹತ್ತು ದಿನಗಳನ್ನು [[ಮೈಸೂರು|ಮೈಸೂರಿನಲ್ಲಿ]] ವಿಶೇಷ ರೀತಿಯಿಂದ ಆಚರಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ಮೈಸೂರಿನ [[ಅರಮನೆ]] ದೀಪಾಲಂಕಾರಗೊಳಿಸಲಾಗುತ್ತದೆ. ಮೈಸೂರನ್ನು ಆಳಿದ ರಾಜ ಮನೆತನವಾದ[[ಒಡೆಯರ್|ಒಡೆಯರ]] ಕುಲದೇವತೆಯಾದ [[ಚಾಮುಂಡೇಶ್ವರಿ|ಚಾಮುಂಡೇಶ್ವರಿಗೆ]] ಪೂಜೆ ಸಲ್ಲಿಸಲಾಗುತ್ತದೆ. [[ವಿಜಯದಶಮಿ|ವಿಜಯದಶಮಿಯಂದು]] ಯುದ್ಧಕ್ಕಾಗಿ ಬಳಸುವ ಎಲ್ಲಾ [[:ವರ್ಗಅಯುಧಗಳು|ಆಯುಧ]], ಪರಿಕರಗಳನ್ನು ಪೂಜಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು ಮೈಸೂರಿನ ವಿಶೇಷತೆ. ಸಿಂಹದ ಮೇಲೆ ಕುಳಿತು [[ಮಹಿಷಾಸುರ]] ಎಂಬ ರಕ್ಕಸನನ್ನು ಕೊಂದು ಪ್ರಜೆಗಳನ್ನು ಕಾಪಾಡಿದ [[ಚಾಮುಂಡಿ]] ದೇವತೆಯನ್ನು ಪೂಜಿಸುವುದು ಮೈಸೂರಿನ ವಿಶೇಷತೆ.
 
==ಮೈಸೂರು ಪ್ರಜೆಗಳ ಕಣ್ಣಲ್ಲಿ ದಸರಾ. ==
 
ದಸರಾ ಹಳೆಯ ಮೈಸೂರಿಗರಿಗೆ ಇಂದಿಗೂ ನಾಡಹಬ್ಬ. ಸಂಭ್ರಮದ ಸಂದರ್ಭ. ರಾಜರ ಆಳ್ವಿಕೆಯ ಕಾಲದ ನೆನಪಿನಲ್ಲಿ ಈಗಿನ ಆಚರಣೆಗಳನ್ನು ನೋಡುವ ಹಿರಿಯ ತಲೆಗಳಿಗೆ ಆಗಿನ ದಿನಗಳೇ ಚಂದ ಎಂಬ ಹಳಹಳಿಕೆ. ಮೈಸೂರು ನಗರದಲ್ಲಿ ಮಾತ್ರವಲ್ಲದೆ, ಸುತ್ತಮುತ್ತಲ ಗ್ರಾಮಾಂತರ ಪ್ರದೇಶಗಳಲ್ಲಿ, ದಸರೆಯ ದಿನಗಳಲ್ಲಿ ಮೈಸೂರಿಗೆ ಭೇಟಿ ನೀಡುತ್ತಿದ್ದ ಮಂಡ್ಯ, ಚಾಮರಾಜನಗರ ಜಿಲ್ಲೆಯ ಗ್ರಾಮೀಣರಿಗೆ ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಯ ನೆನಪನ್ನೇ ಪ್ರಧಾನವಾಗಿ ಉಳಿಸಿದೆ. ಈಗಿನ ಚಾಮುಂಡೇಶ್ವರಿ ಮೆರವಣಿಗೆ ಹಿರಿಯ ತಲೆಗಳಿಗೆ ಮಹಾರಾಜರು ಅಂಬಾರಿಯ ಮೇಲೆ ಸಾಗುತ್ತಿದ್ದ ಅಂದಿನ ದೃಶ್ಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡುತ್ತದೆ.
"https://kn.wikipedia.org/wiki/ದಸರ" ಇಂದ ಪಡೆಯಲ್ಪಟ್ಟಿದೆ