ಸಂಸ್ಕೃತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 117.200.101.116 (talk) to last revision by Addbot
೨೬ ನೇ ಸಾಲು:
ಜಗತ್ತಿನ ಎಲ್ಲ ಭಾಷೆಗಳಿಗೂ ಮೂಲ ಎಂದು ನಂಬಲಾಗಿರುವ ಸಂಸ್ಕೃತವನ್ನು ನೂರಾರು ಮಹಾಕವಿಗಳು, ದಾರ್ಶನಿಕರು ಸಮೃದ್ಧಗೊಳಿಸಿದ್ದಾರೆ. ಆ ಪಟ್ಟಿಯಲ್ಲಿ ಮೊದಲು ಬರುವವರು ವಾಲ್ಮೀಕಿ ಮುನಿ. ಅವರಿಂದಲೇ ಸಂಸ್ಕೃತದ ಮೊದಲ ಶ್ಲೋಕ ಹುಟ್ಟಿತು. ಅದು 'ಮಾ ನಿಷಾದ ಪ್ರತಿಷ್ಟಾಂ ತ್ವಮಗಮಃ ಶಾಶ್ವತೀ ಸಮಾಃ. ಯತ್ಕ್ರೌಂಚ ಮಿಥುನಾತ್ ಏಕಮವಧೀಹಿ ಕಾಮಮೋಹಿತಂ' ಎಂಬುದು. ಬೇಡನೊಬ್ಬ ಕಾಮಮೋಹಿತವಾಗಿದ್ದ ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದಾಗ ಅದನ್ನು ನೋಡಿ ಸಿಟ್ಟುಗೊಂಡ ವಾಲ್ಮೀಕಿ ಮುನಿ ತಮಗೇ ಗೊತ್ತಿಲ್ಲದಂತೆ ಈ ಶ್ಲೋಕ ಹೇಳಿ ಬೇಡನಿಗೆ ಶಾಪ ಕೊಟ್ಟರು. ಶೋಕದಲ್ಲಿ ಹುಟ್ಟಿದ ಅದು ಶ್ಲೋಕವೆಂದು ಪ್ರಸಿದ್ಧಿಗೆ ಬಂತು. ಅವರ ಶಿಷ್ಯ ಭರಧ್ವಾಜ ಮುನಿ ಇದನ್ನು ದಾಖಲಿಸಿದ. ಇದೇ ವಾಲ್ಮೀಕಿ ಮುನಿಗಳು ರಾಮಾಯಣವನ್ನೂ ರಚಿಸಿದರು. ನಂತರ ವ್ಯಾಸರಿಂದ ಮಹಾಭಾರತ ರಚಿತವಾಯಿತು. ಇವರಿಬ್ಬರು ಸಂಸ್ಕೃತದ ಮೂಲ ಕವಿಗಳಾದರೆ, ಈ ಭಾಷೆಯ ಆದಿಕವಿ ಎಂದು ಹೆಸರಾದವನು ಕಾಳಿದಾಸ. ಕಾಳಿದಾಸನಿಗೆ ಭಾರತದ ಶೇಕ್ಸ್ ಪಿಯರ್ ಎಂಬ ಅಭಿದಾನವೂ ಇದೆ. ಅಭಿಜ್ಞಾನ ಶಾಕುಂತಲ ನಾಟಕ ಈತನ ಮಹತ್ವದ ಕೃತಿ. ಇದಲ್ಲದೆ ಮಾಲವಿಕಾಗ್ನಿಮಿತ್ರ, ವಿಕ್ರಮೋರ್ವಶೀಯ ಎಂಬ ನಾಟಕಗಳನ್ನೂ, ಕುಮಾರಸಂಭವ, ರಘುವಂಶ ಎಂಬ ಮಹಾಕಾವ್ಯಗಳನ್ನೂ, ಮೇಘದೂತ, ಋತುಸಂಹಾರ ಎಂಬ ಖಂಡ ಕಾವ್ಯಗಳನ್ನೂ ಕಾಳಿದಾಸ ಬರೆದಿದ್ದಾನೆ. ಈತನ ಜೊತೆಗೆ ಭಾಸ, ಭಾರವಿ, ಶ್ರೀಹರ್ಷ, ಬಾಣ ಮುಂತಾದ ಮಹತ್ವದ ಕವಿಗಳು ಸಂಸ್ಕೃತದಲ್ಲಿ ಆಗಿಹೋಗಿದ್ದಾರೆ.
[[ಚಿತ್ರ:Phrase sanskrit.png|thumb|right]]
 
== External links ==
 
"https://kn.wikipedia.org/wiki/ಸಂಸ್ಕೃತ" ಇಂದ ಪಡೆಯಲ್ಪಟ್ಟಿದೆ