ನಾಡಕಲಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೦ ನೇ ಸಾಲು:
 
=== ಶಿಲ್ಪಕಲೆ ===
ರಂಗಮಂಟಪವು ದೊಡ್ಡ ಎಂಟು ಕಂಬಗಳಿಂದ ಕೂಡಿದ್ದು, ಕಂಬದ ಬುಡವು ಚೌಕಾಕಾರ ಮತ್ತು ಮೇಲ್ಭಾಗ ದುಂಡಾಕಾರದಲ್ಲಿದೆ. ಇವು ಕಡಗೋಲಿನಂತೆ ಕಡಹಿಡಿದ ನುಣುಪಾದ ಹೊಳೆಯುವ ಚಕ್ರಗಳುಳ್ಳ ಕಂಬಗಳು. ಪ್ರತಿಯೊಂದು ಕಂಬದಲ್ಲಿಯೂ ಸುತ್ತುವರಿದ ಆರು ಅಂಗುಲ ವ್ಯಾಸದ ಅರಳೀ ಎಲೆಯ ಬಳ್ಳಿಯ ಸುಂದರ ರೇಖಾಚಿತ್ರ ; ಅದರಲ್ಲಿ ಚಿಂತಾಮಗ್ನೆ , ದರ್ಪಣೋತ್ಸುಖೆ, ನಾಟ್ಯಮಯೂರಿ, ವಾದನ ವಿಶಾರದೆ, ಮುಂತಾದ ರೇಖಾಚಿತ್ರಗಳಿವೆ. ಕಂಬದ ಸುತ್ತ ಕೊರೆದಿರುವ ವಿವಿಧ ರೇಖಾ ಚಿತ್ರಗಳು ಇಂದಿಗೊ ಅನುಕರಣೀಯವಾಗಿವೆ. ಕಂಬದ ಮೇಲ್ಭಾಗದಲ್ಲಿ ವಿವಿಧ ಚಿತ್ತಾರಗಳಿಂದ ಕೂಡಿದ ಕಲ್ಲಿನ ಬೋದಿಗೆ, ಕಲ್ಲಿನ ತೊಲೆ, ಮುಚ್ಚಿಗೆಯಲ್ಲಿ ಅಂದದ ನವರಂಗ, ಕಮಲಗಳನ್ನು ಕೆತ್ತಲಾಗಿದೆ. ಮೇಲ್ಚಾವಣಿಯ ಸೂರಂಚು, ಹೆಂಚನ ಮನೆಗಳಿಗಿರುವಂತೆ ಕಲ್ಲಿನಲಿ ಕೊರೆದ ರೀಪು ಪಕಾಶಿಗಳಿಂದ ಕೂಡಿರುವುದು ವಿಶೇಷ. ನಾಲ್ಕು ಇಂಚು ಕಲ್ಲಿನ ಪಕಾಶಿಗಳು ನಕ್ಷೆಗಳಿಂದ ಕೂಡಿದೆ. ಎರಡು ಪಕಾಶಿಗಳ ನಡುವೆ ವೃತ್ತಾಕಾರದ ಬಳೆಗಳ ನಡುವೆ ಆನೆ, ಹಂಸ ಮೊದಲಾದ ಚಿತ್ರಗಳನ್ನು ಕೆತ್ತಲಾಗಿದೆ.
*[[ನಂದಿ]] ಮಂಟಪದಲ್ಲಿ ದೊಡ್ಡ ಸುಂದರ ನಂದಿಯ ವಿಗ್ರಹವು ಮುಖ ಕಾಣುವಷ್ಟು ನುಣುಪಾಗಿದೆ. ಕತ್ತು ಕೊಂಕಿಸಿ [[ಶಿವಲಿಂಗ|ಶಿವಲಿಂಗವನ್ನೇ]] ನೋಡುತ್ತಿದೆ. ಅದಕ್ಕೆ ಅಂದವಾದ ಗಂಟೆ ಸರ, ಗೆಜ್ಜೆ ಸರ ಆಭರಣಗಳಿಂದ ಅಲಂಕೃತವಾಗಿದ್ದು ಬಹಳ ಆಕರ್ಷಣೀಯವಾಗಿದೆ. [[ಚಿತ್ರ:DSC0077.JPG|thumb|right]]
ಇದು ಪ್ರಾಚೀನ [[ಹೊಯ್ಸಳ ಇತಿಹಾಸ|ಹೊಯ್ಸಳ ಇತಿಹಾಸಕ್ಕೆ]] ಮಲೆನಾಡಿನ ಒಂದು ವಿಶೇಷ ಕೊಡಿಗೆ ಮತ್ತು ಕುರುಹು.
 
"https://kn.wikipedia.org/wiki/ನಾಡಕಲಸಿ" ಇಂದ ಪಡೆಯಲ್ಪಟ್ಟಿದೆ