ಅ.ನಾ.ಪ್ರಹ್ಲಾದರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೮ ನೇ ಸಾಲು:
 
ಬೆಂಗಳೂರು, ಮಂಡ್ಯ ಹಾಗೂ ಕೋಲಾರದಲ್ಲಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ `ಪ್ರಜಾರತ್ನ`, `ಪದಬಂಧಬ್ರಹ್ಮ`, `ಪದಬಂಧಸಾಮ್ರಾಟ್` ಮುಂತಾದ ಬಿರುದುಗಳನ್ನು ನೀಡಿವೆ. `ವಿಶ್ವೇಶ್ವರಯ್ಯಪ್ರಶಸ್ತಿ`, `ಕರುನಾಭೂಷಣ` `ಕರ್ನಾಟಕ ವಿಭೂಷಣ` ಮಂಡ್ಯ ಕರ್ನಾಟಕ ಸಂಘ ಪ್ರಶಸ್ತಿಗಳೇ ಅಲ್ಲದೆ ಪ್ರತಿಷ್ಠಿತ `ಆರ್ಯಭಟ`, ಬೆಂಗಳೂರು ಮಹಾನಗರಪಾಲಿಕೆ ಕೊಡಮಾಡುವ `ಕೆಂಪೇಗೌಡ ಪ್ರಶಸ್ತಿ` `ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಸದ್ಬಾವನ ಪ್ರಶಸ್ತಿ, `ಶ್ರೀಕಾಣ್ವಶ್ರೀ`, `ಶಿಂಷಾಶ್ರೀ` `ಬೆಂಗಳೂರು ರತ್ನ`, `ಹಂಸರತ್ನ` ಮುಂತಾದ ಪ್ರಶಸ್ತಿಗಳು ಸಂದಿವೆ.
 
*'''ಅನಾಪ್ರ ಅರವತ್ತು''': ವಿಶ್ವ ಇಂದು `ಪದಬಂಧ ಶತಮಾನೊತ್ಸವ` ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಕನ್ನಡದ ಪದಬಂಧ ರಚನೆಕಾರ ಅ.ನಾ.ಪ್ರಹ್ಲಾದರಾವ್ 60 ವಸಂತಗಳನ್ನು ದಾಟಿ ಮುನ್ನಡಿ ಇಟ್ಟಿದ್ದಾರೆ. ಕನ್ನಡ ಪತ್ರಿಕೆಗಳಿಗೆ ಕಳೆದ 30 ವರ್ಷಗಳಿಂದ ಪದಬಂಧ ಸಿದ್ಧಪಡಿಸುತ್ತಾ ಬಂದಿರುವ ಅ.ನಾ.ಪ್ರಹ್ಲಾದರಾವ್ ಇಲ್ಲಿಯವರೆವಿಗೂ 40,000 ಪದಬಂಧಗಳನ್ನು ರಚಿಸಿದ್ದು, ಇವುಗಳಿಗಾಗಿ ಸುಮಾರು 12 ಲಕ್ಷ ಸುಳುಹುಗಳನ್ನು ನೀಡಿದ್ದ್ದಾರೆ. ಈ ಸಂಬಂಧ 2013ರ ಅಕ್ಟೋಬರ್ 7 ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಡೀ ದಿನದ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಪದಬಂಧ ಕಮ್ಮಟ, ಸಂಜೆ ಅನಾಪ್ರ ರಚಿಸಿದ ಗೀತೆಗಳ ಗಾಯನ, ಅ.ನಾ.ಪ್ರಹ್ಲಾದರಾವ್ ಅವರ ನಾಲ್ಕು ಪುಸ್ತಕಗಳ ಲೋಕಾರ್ಪಣೆ, ಸಂಭಾವನಾಗ್ರಂಥ ಬಿಡುಗಡೆ ಹಾಗೂ ಅಭಿನಂದನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಪಂಚದಲ್ಲಿ ಮೊದಲ `ಪದಬಂಧ ಶತಮಾನೋತ್ಸವ` ಆಚರಿಸುತ್ತಿರುವ ಹೆಗ್ಗಳಿಕೆ ಕನ್ನಡಿಗರದು. ಕವಿ, ವಿಧಾನ ಪರಿಷತ್ ಸದಸ್ಯರಾದ ಪ್ರೊ.ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ನಿವೃತ್ತ ಐ.ಎ.ಎಸ್ ಅಧಿಕಾರಿ ಕೆ.ಜೈರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಚಲನಚಿತ್ರ ನಿರ್ದೇಶಕ ನಾಗಣ್ಣ, ಚಲನಚಿತ್ರ ಸಾಹಿತಿಗಳಾದ ವಿ.ಮನೋಹರ್ ಮುಖ್ಯ ಅತಿಥಿಗಳಾಗಿದ್ದರು. ಸಂಜೆ 5 ಗಂಟೆಗೆ ಅನಾಪ್ರ ವಿರಚಿತ ಗೀತೆಗಳನ್ನು ಎಲ್.ಎನ್.ಶಾಸ್ತ್ರಿ, ಚಂದ್ರಿಕಾ ಗುರುರಾಜ್, ಆಕಾಂಕ್ಷ ಬಾದಾಮಿ, ಹೇಮಾಪ್ರಸಾದ್, ಅನುಪಮಾರಾವ್, ರಮ್ಯ ಹಾಡಿದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ `ಅನಾಪ್ರ ಅರವತ್ತು` ಸಂಭಾವನಾಗ್ರಂಥ `ಪದಬಂಧು` ಬಿಡುಗಡೆ ಮಾಡಿದರು. ಲೋಕಸಭಾ ಸದಸ್ಯರಾದ ಅನಂತಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಪ್ರೊ.ಎಂ.ಎಚ್.ಕೃಷ್ಣಯ್ಯ ಅಭಿನಂದನಾ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅ.ನಾ.ಪ್ರಹ್ಲಾದರಾವ್ ಅವರ ನಾಲ್ಕು ಪುಸ್ತಕಗಳು ಬಿಡುಗಡೆಗೊಂಡವು. `ಪದಕ್ರೀಡೆ` `ಪದಲೋಕ` `ಪ್ರಾಣಪದಕ` ಮತ್ತು `ನನ್ನ ದಾರಿ ವಿಭಿನ್ನ ದಾರಿ-ರಜನಿಕಾಂತ್` ಪುಸ್ತಕಗಳನ್ನು ಚಲನಚಿತ್ರ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ವಿಜಯಕುಮಾರ್, ನಿರ್ಮಾಪಕ-ನಟ ಎಸ್.ಶಿವರಾಂ ಮತ್ತು ಚಲನಚಿತ್ರ ನಿರ್ದೇಶಕ ನಾಗಾಭರಣ ಲೋಕಾರ್ಪಣೆ ಮಾಡಿದರು.
 
==ಹೊರಸಂಪರ್ಕಗಳು==
"https://kn.wikipedia.org/wiki/ಅ.ನಾ.ಪ್ರಹ್ಲಾದರಾವ್" ಇಂದ ಪಡೆಯಲ್ಪಟ್ಟಿದೆ