ಅ.ನಾ.ಪ್ರಹ್ಲಾದರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಕಿಪಿಡಿಯಾ ಶೈಲಿಗೆ ತಕ್ಕಂತೆ ಬದಲಾಯಿಸುವ ಪ್ರಯತ್ನ
೩೬ ನೇ ಸಾಲು:
 
*'''ವಸಂತ ಮಲ್ಲಿಕಾ''' : ಅ.ನಾ.ಪ್ರಹ್ಲಾದ ರಾವ್‌ ಕವಿಗಳು ಆಗಿದ್ಫ್ದು ಇವರು ಬರೆದ ೯ ಭಾವಗೀತೆಗಳ ಸಿ.ಡಿ ವಸಂತ ಮಲ್ಲಿಕಾ ೨೦೦೮ರ ಡಿಸೆಂಬರ್ ತಿಂಗಳಿನಲ್ಲಿ ಲೋಕಾಪ೯ಣೆಗೊಂಡಿತು. ಅಮೆರಿಕ ದೇಶದ ನ್ಯೂಜಸಿ೯ ನಗರದಲ್ಲಿ ನೆಲೆಸಿರುವ ಐ.ಟಿ ಎಂಜನಿಯರ್ ಶ್ರೀಮತಿ ವಸಂತ ಶಶಿ ಅವರು ಗೀತೆಗಳನ್ನು ಹಾಡಿದ್ದು, ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ್ ಸಂಗೀತ ಸಂಯೋಜಿಸಿದ್ದಾರೆ.
 
*'''ಪದಲೋಕ''' ಮತ್ತು '''ಪದಕ್ರೀಡೆ''' 2013ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾದ ಮತ್ತೆರಡು ಪದಬಂಧ ಪುಸ್ತಕಗಳು. ವಿಶ್ವ ಪದಬಂಧ ಶತಮಾನೋತ್ಸವದ ಅಂಗವಾಗಿ ಅ.ನಾ.ಪ್ರಹ್ಲಾದರಾವ್ ಅವರು ಈ ಎರಡು ಪದಬಂಧ ಪುಸ್ತಕಗಳನ್ನು ಹೊರತಂದರು. ವಸಂತ ಪ್ರಕಾಶನ ಪ್ರಕಾಶನಗೊಳಿಸಿದ ಈ ಪುಸ್ತಕಗಳಲ್ಲಿ ತಲಾ 160 ಪದಬಂಧಗಳನ್ನು ಅಡಕಗೊಳಿಸಲಾಗಿದೆ. ಪತ್ರಿಕೆಗಳ ಬಹುಪಾಲು ಓದುಗರ ನೆಚ್ಚಿನ ಅಂಕಣ `ಪದಬಂಧ`. ಭಾಷಾ ಪ್ರೌಢಿಮೆ, ಮನೋವಿಕಾಸ ಮತ್ತು ಮನೋಲ್ಲಾಸಕ್ಕೆ ಪೂರಕವಾಗುವ `ಪದಬಂಧ`ದ ಇತಿಹಾಸ ಒಂದು ಶತಮಾನದ್ದ್ಲು. ಇಂಗ್ಲೆಂಡಿನ ರಾಜನೊಬ್ಬ ಕಾಲಹರಣಕ್ಕಾಗಿ ಎಡದಿಂದ ಬಲಕ್ಕೆ ಮತ್ತು ಮೇಲಿಂದ ಕೆಳಕ್ಕೆ ಅಕ್ಷರಗಳ ಜೋಡಿಸಿ ಮಾಡಿದ ಪದರಚನೆಯೇ ಪದಬಂಧದ ಉಗಮವಾಗಲು ಕಾರಣ. ಪತ್ರಿಕೆಯಲ್ಲಿ ಪದಬಂಧ ಮೊದಲು ಮೂಡಿದ್ದು 1913ರ ಡಿಸೆಂಬರ್ 21ರ ಸಂಚಿಕೆಯಲ್ಲಿ. ಕ್ರಿಸ್‍ಮಸ್ ವಿಶೇóಷಾಂಕದಲ್ಲಿ ಏನಾದರೊಂದು ವಿಶೇಷ ಆಳವಡಿಸಬೇಕೆಂದು ನಿರ್ಧರಿಸಿದ `ದಿ ನ್ಯೂಯಾರ್ಕ್ ವರ್ಡ್` ಪತ್ರಿಕೆಯ ಸಂಪಾದಕ ಆರ್ಥರ್ ವಿನ್ನೆ ಪದಗಳ ಆಟದೊಂದಿಗೆ ಓದುಗರ ನೋಟವನ್ನು ಸೆಳೆಯಲು `ವರ್ಡ್‍ಕ್ರಾಸ್` ಎಂಬ ಅಂಕಣವನ್ನು ಸೃಷ್ಟಿಸಿದ. ನಂತರ, ಆ ಆಂಕಣ ಎಷ್ಟು ಜನಪ್ರಿಯವಾಯಿತೆಂದರೆ ಇತರೆ ಪತ್ರಿಕೆಗಳೂ ಇಂತಹುದೇ ಅಂಕಣವನ್ನು ತಮ್ಮ ಪುರವಣಿಗಳಲ್ಲಿ ಪ್ರಕಟಿಸಲೇ ಬೇಕಾದ ಅನಿವಾರ್ಯತೆಯುಂಟಾಯಿತು. ಅ.ನಾ.ಪ್ರಹ್ಲಾದರಾವ್ ಅವರ ಪದಬಂಧಗಳು ಪ್ರತಿ ನಿತ್ಯ `ವಿಜಯಕರ್ನಾಟಕ` ಹಾಗೂ `ಸಂಯುಕ್ತ ಕರ್ನಾಟಕ` ದಿನ ಪತ್ರಿಕೆಗಳಲ್ಲಿ, `ಮಂಗಳ` ಮತ್ತು `ಅರಗಿಣಿ` ವಾರ ಪತ್ರಿಕೆಗಳು, 'ಪ್ರಿಯಾಂಕ` `ಚಿತ್ರ` `ಕಂದಾಯವಾರ್ತೆ` ಮಾಸ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ. `ಪ್ರಜಾವಾಣಿ` ಸಿನಿಮಾರಂಜನೆ, `ಕರ್ಮವೀರ`, `ಸಂಯುಕ್ತಕರ್ನಾಟಕ ಸಾಪ್ತಾಹಿಕ, `ಕನ್ನಡಪ್ರಭ` ಸೇರಿದಂತೆ 40ಕ್ಕೂ ಹೆಚ್ಚು ನಿಯತಕಾಲಿಕೆಗಳಲ್ಲಿ ಇವರ ಪದಬಂಧಗಳು ಪ್ರಕಟಗೊಂಡಿವೆ. ಆನ್‍ಲೈನ್‍ನಲ್ಲಿ ಪ್ರತಿ ನಿತ್ಯ ಅನಾವರಣಗೊಳ್ಳುತ್ತಿರುವ `ಇಂಡಿಕ್ರಾಸ್.ಕಾಮ್`ಗಾಗಿಯೂ ಪದಬಂಧಗಳನ್ನು ರಚಿಸಿಕೊಡುತ್ತಿದ್ದಾರೆ.
 
*'''ಪ್ರಾಣಪದಕ''' ಡಾ.ರಾಜಕುಮಾರ್ ಅವರನ್ನು ಕುರಿತ 2013ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾದ ಸ್ವಾರಸ್ಯಕರ ಸಂಗತಿಗಳ ಮತ್ತೊಂದು ಪುಸ್ತಕ. ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ನೆನಪಿನಾಳದಲ್ಲಿನ ಡಾ.ರಾಜಕುಮಾರ್ ಸಂಗತಿಗಳನ್ನು ಅನಾವರಣಗೊಳಿಸುವ, ವಸಂತ ಪ್ರಕಾಶನ ಪ್ರಕಾಶನಗೊಳಿಸಿರುವ ವಿಶಿಷ್ಟ ಪುಸ್ತಕ `ಪ್ರಾಣಪದಕ`. ಸುಮಾರು 120 ಪುಟಗಳ ಈ ಪುಸ್ತಕದ ಲೇಖನಗಳು `ಮಂಗಳ` ವಾರಪತ್ರಿಕೆಯಲ್ಲಿ ಪ್ರಕಟಿಗೊಂಡಿದ್ದವು. ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರು ಬೇರೆ ಬೇರೆ ಸಂದರ್ಭಗಳÀಲ್ಲಿ ಲೇಖಕರೊಂದಿಗೆ ಹಲವು ವಿಷಯಗಳನ್ನು ನೆನಪು ಮಾಡಿಕೊಂಡರು. `ಪ್ರಾಣಪದಕ` ಹೆಸರಿನಲ್ಲಿ `ಮಂಗಳ` ವಾರಪತ್ರಿಕೆ ಈ ಲೇಖನಗಳನ್ನು ಪ್ರಕಟಿಸಿತ್ತು. ಕನ್ನಡದ ವರನಟ ಡಾ.ರಾಜಕುಮಾರ್ ಅವರ ಐವತ್ತು ವರ್ಷಗಳ ಚಿತ್ರರಂಗದ ಬದುಕಿನ ನೆನಪಿನಲ್ಲಿ ಕರ್ನಾಟಕ ಸರ್ಕಾರಕ್ಕಾಗಿ ಅ.ನಾ.ಪ್ರಹ್ಲಾದರಾವ್ ಬರೆದ `ಬಂಗಾರದ ಮನುಷ್ಯ` ಜನಪ್ರಿಯತೆ ಗಳಿಸಿದ ಪುಸ್ತಕ. ಈ ಪುಸ್ತಕ ಇಂಗ್ಲಿಷ್ ಭಾಷೆಗೆ `ಡಾ.ರಾಜಕುಮಾರ್ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್` ಹೆಸರಿನಲ್ಲಿ ಭಾಷಾಂತರಗೊಂಡು ಅಮೆರಿಕದ ನ್ಯೂಜರ್ಸಿ ನಗರದಲ್ಲಿ ಬಿಡುಗಡೆಗೊಂಡಿತು. ಕನ್ನಡದ ನಟರೊಬ್ಬರನ್ನು ಕುರಿತ ಇಂಗ್ಲಿಷ್ ಪುಸ್ತಕವೊಂದು ಭಾರತದ ಹೊರಗಡೆ ಬಿಡುಗಡೆಗೊಂಡ ಮೊದಲ ಪುಸ್ತಕ ಇದೆಂಬ ದಾಖಲೆಯನ್ನೂ ಮಾಡಿತು. ಕನ್ನಡ ಪುಸ್ತಕ ಬಿಡುಗಡೆಗೊಂಡ ಸಂದರ್ಭದಲ್ಲಿ ಡಾ.ರಾಜಕುಮಾರ್ ಹಾಗೂ ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರು ತಮ್ಮ ಮನೆಗೆ ಲೇಖಕರ ಕುಟುಂಬವನ್ನು ಬರಮಾಡಿಕೊಂಡು ಆತಿಥ್ಯ ನೀಡಿದ್ದರು.
 
*'''ನನ್ನ ದಾರಿ ವಿಭಿನ್ನ ದಾರಿ-ರಜನಿಕಾಂತ್''' 2013ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾದ ಮತ್ತೊಂದು ವಿಭಿನ್ನ ಪುಸ್ತಕ. ನನ್ನ ದಾರಿ ವಿಭಿನ್ನ ದಾರಿ-ರಜನಿಕಾಂತ್` ಕೃತಿಯಲ್ಲಿ ಮೇರು ನಟ ರಜನಿಕಾಂತ್ ಅವರ ಜೀವನ-ಸಾಧನೆಯನ್ನು ಕನ್ನಡ ನೆಲದ ಸಂಬಂಧಗಳನ್ನು ಆಧರಿಸಿ ಚಿತ್ರಿಸಲಾಗಿದೆ. ರಜನಿಕಾಂತ್ ಚಿತ್ರಗಳ ಪಟ್ಟಿಯನ್ನೂ ಕೊಟ್ಟಿದ್ದಾರೆ. ಚಿತ್ರರಂಗದಲ್ಲಷ್ಟೆ ಅಲ್ಲ, ಸಮಾಜ ಸೇವೆಯಲ್ಲೂ ರಜನಿಕಾಂತ್ ಅವರ ಪಾತ್ರ ಹಿರಿದೆಂಬುದನ್ನು ಈ ಪುಸ್ತಕದಲ್ಲಿ ನಿರೂಪಿಸಲಾಗಿದೆ. ಬಳೇಪೇಟೆಯ `ನವಭಾರತ್ ಪಬ್ಲಿಕೇಷನ್` ಸಂಸ್ಥೆ ಈ ಪುಸ್ತಕದ ಪ್ರಕಾಶಕರಾಗಿದ್ದಾರೆ. ಪುಸ್ತಕದ ಮುನ್ನುಡಿಯಲ್ಲಿ ಹಿರಿಯ ಪತ್ರಕರ್ತ ವೈ.ಜಿ.ಗಿರಿಶಾಸ್ತ್ರಿ ಅವರು ಹೀಗೆ ಬರೆದಿದ್ದಾರೆ: `ರಜನಿಕಾಂತ್ ಅವರ ಬದುಕಿನ ಚಿತ್ರಣವನ್ನು ಅ.ನಾ.ಪ್ರಹ್ಲಾದರಾವ್ ಅವರು ಈ ಕೃತಿಯಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ವಸ್ತುನಿಷ್ಠವಾದ ಶ್ರೀಯುತರ ಬರವಣಿಗೆಯಲ್ಲಿ ರಜನಿಕಾಂತ್ ಸುಂದರವಾಗಿ ಅನಾವರಣಗೊಂಡಿದ್ದಾರೆ. ಪ್ರಹ್ಲಾದರಾಯರದು ಸುಭಗ ಶೈಲಿಯ ಬರವಣಿಗೆ. ಪ್ರಗಲ್ಭವಾದ ವಿಷಯವನ್ನು ಅತ್ಯಂತ ಸರಳವಾಗಿ ನಿರೂಪಿಸುವುದರಲ್ಲಿ ಅ.ನಾ.ಪ್ರ ನುರಿತವರು. ಕ್ಲಿಷ್ಟ ಪದಗಳನ್ನು ಬಳಸಿ ಓದುಗರಿಗೆ ಕಷ್ಟಕೊಡುವವರಲ್ಲ.`
 
*'''ಪದಬಂಧು''' ` 2013ರ ಅಕ್ಟೋಬರ್ ತಿಂಗಳಿನಲ್ಲಿ ಅ.ನಾ.ಪ್ರಹ್ಲಾದರಾವ್ ಅವರ ಅಭಿನಂದನಾ ಸಮಾರಂಭದಲ್ಲಿ ಹೊರ ತಂದ ಸಂಭಾವನಾಗ್ರಂಥ. ಕವಿಗಳಾದ ಪ್ರೊ.ಕೆ.ಎಸ್.ನಿಸಾರ್ ಅಹಮದ್, ಡಾ.ದೊಡ್ಡರಂಗೇಗೌಡ; ನಿವೃತ್ತ ಐ.ಎ.ಎಸ್ ಅಧಿಕಾರಿ ಕೆ.ಜೈರಾಜ್; ಲೇಖಕರಾದ ಜಾಣಗೆರೆ ವೆಂಕಟರಾಮಯ್ಯ, ನಾರಾಯಣ ರಾಯಚೂರ್; ಚಲನಚಿತ್ರರಂಗದ ದಿಗ್ಗಜರಾದ ಕೆ.ಎಸ್.ಎಲ್.ಸ್ವಾಮಿ, ಎಸ್.ಶಿವರಾಮ್, ನಾಗಾಭರಣ, ವಿ.ಮನೋಹರ್, ಕೆ.ಕಲ್ಯಾಣ್; ಪತ್ರಕರ್ತರಾದ ವೆಂಕಟನಾರಾಯಣ, ಖಾದ್ರಿ ಅಚ್ಚುತನ್, ಎ.ಎಸ್.ನಾರಾಯಣರಾವ್; ಗಾಯಕರಾದ ಶ್ರೀಮತಿ ಚಂದ್ರಿಕಾ ಗುರುರಾಜ್, ಕಿಕ್ಕೇರಿ ಕೃಷ್ಣಮೂರ್ತಿ ಮುಂತಾದ ಹಿರಿಯರು, ಸ್ನೇಹಿತರು, ಕುಟುಂಬ ಸದಸ್ಯರೂ ಸೇರಿದಂತೆ ಸುಮಾರು 80 ಮಂದಿ ಅ.ನಾ.ಪ್ರಹ್ಲಾದರಾವ್ ಅವರ ವ್ಯಕ್ತ್ತಿತ್ವವನ್ನು ಈ ಪುಸ್ತಕದಲ್ಲಿ ಅನಾವರಣಗೊಳಿಸಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಕೆ.ಆರ್.ನರಸಿಂಹನ್, ಕರ್ನಾಟಕ ಗ್ಯಾಜೆಟಿಯರ್ನ ನಿವೃತ್ತ ಹಿರಿಯ ಸಂಪಾದಕರಾದ ಎಸ್.ಎ.ಜಗನ್ನಾಥ ಹಾಗೂ ಹಿರಿಯ ಪತ್ರಕರ್ತರಾದ ವೈ.ಜಿ.ಗಿರಿಶಾಸ್ತ್ರಿ ಸಂಪಾದಕೀಯ ಮಂಡಳಿಯಲ್ಲಿರುತ್ತಾರೆ.
 
==ಪ್ರಶಸ್ತಿ ಪುರಸ್ಕಾರಗಳು==
"https://kn.wikipedia.org/wiki/ಅ.ನಾ.ಪ್ರಹ್ಲಾದರಾವ್" ಇಂದ ಪಡೆಯಲ್ಪಟ್ಟಿದೆ