ಶ್ರೀಶೈಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೫೫ ನೇ ಸಾಲು:
| website =
}}
'''ಶ್ರೀಶೈಲ''' ಕ್ಷೇತ್ರವು, ಭಾರತದ ಪ್ರಾಚೀನ ಧಾರ್ಮಿಕ ಕ್ಷೇತ್ರಗಳ ಇತಿಹಾಸದಲ್ಲಿ ತುಂಬಾ ಪ್ರಾಚೀನವಾದುದು . [[ವೇದ]]ಗಳಲ್ಲಿ, [[ಪುರಾಣ ]], [[ಆಗಮ]]ಗಳಲ್ಲಿ ಇದನ್ನು ತುಂಬಾ ಪವಿತ್ರ ಕ್ಷೇತ್ರವೆಂದು ಪರಿಗಣಿಸಲಾಗಿದೆ .[[ಆಂಧ್ರ ಪ್ರದೇಶ]]ದ [[ಕರ್ನೂಲು]] ಜಿಲ್ಲೆಯ ನಂದಿಕೊಟಕೂರು ತಾಲ್ಲೋಕಿನಲ್ಲಿ ಹಬ್ಬಿರುವ ನಲ್ಲಮಲೈ ಪರ್ವತ ಶ್ರೇಣಿಯಲ್ಲಿ, ದಟ್ಟ ಕಾನನದ ಮಧ್ಯದಲ್ಲಿ , ಕೃಷ್ಣಾನದಿಯ ದಕ್ಷಿಣ ಭಾಗದಲ್ಲಿರುವ ಪ್ರಸಿದ್ದ ಶೈವ ಕ್ಷೇತ್ರವೇ ಶ್ರೀಶೈಲ .ಇಲ್ಲಿ ಹರಿಯುವ ಕೃಷ್ಣಾ ನದಿಯು ಆಳವಾದ ಕಮರಿಯಲ್ಲಿ ಹರಿದು ಬರುವುದರಿಂದ ತುಂಬಾ ರುದ್ರ ಭಯಾನಕವಾಗಿದೆ . ಇದನ್ನೇ ಪಾತಾಳ ಗಂಗೆ ಎಂದು ಕರೆಯುತ್ತಿದ್ದರು .ಇತ್ತೀಚೆಗೆ ಇಲ್ಲಿ ಜಲ ವಿದ್ಯುತ್ ಯೋಜನೆ ಆರಂಭವಾಗಿ ಇದೇ ಪ್ರದೇಶದಲ್ಲಿ ಅಣೆಕಟ್ಟೆ ನಿರ್ಮಾಣವಾಗಿರುವುದರಿಂದ ಪಾತಾಳ ಗಂಗೆಯ ಪ್ರದೇಶವನ್ನು ಸ್ಥಳಾಂತರಿಸಲಾಗಿದೆ .ಈ ಕ್ಷೇತ್ರದ ಅಧಿದೇವತೆಗಳು [[ಶ್ರೀ ಮಲ್ಲಿಕಾರ್ಜುನ]] ,ಭ್ರಮರಾಂಬೆಯರು. ಸಮುದ್ರ ಮಟ್ಟದಿಂದ ೫೫೦೦ ಅಡಿಗಳ ಎತ್ತರದಲ್ಲಿ ಮಲ್ಲಿಕಾರ್ಜುನ ಭ್ರಮರಾಂಬ ದೇವಸ್ಥಾನಗಳಿವೆ .ಪ್ರಾಚೀನ ಕಾಲದಿಂದಲೂ ಶ್ರೀಶೈಲ ಯಾತ್ರೆಯು ಮೋಕ್ಷದಾಯಕವೆಂದು ಭಕ್ತರ ನಂಬಿಕೆ .ಉತ್ತರದಲ್ಲಿ [[ಕಾಶಿ]]ಯಂತೆಯೇ ದಕ್ಷಿಣದಲ್ಲಿ ಶ್ರೀಶೈಲವು ಪವಿತ್ರವೆಂದು ಭಾರತೀಯರ ನಂಬಿಕೆ .ಶ್ರೀಶೈಲ ಪರ್ವತದ ಬಗ್ಗೆ ಪೌರಾಣಿಕವಾಗಿ ಅನೇಕ ಕಥೆಗಳು ಪ್ರಚಲಿತದಲ್ಲಿವೆ . ಸ್ಥಳೀಯವಾದ ಜಾನಪದ ಇತಿಹಾಸವೂ ಹೇರಳವಾಗಿದೆ .
==ಶ್ರೀಶೈಲದ ಇತಿಹಾಸ<ref> http://srisailamtemple.com/Srisaila_devasthanam/history.html,</ref>==
"https://kn.wikipedia.org/wiki/ಶ್ರೀಶೈಲ" ಇಂದ ಪಡೆಯಲ್ಪಟ್ಟಿದೆ