ಫ್ರೆಂಡ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೫ ನೇ ಸಾಲು:
ಚ್ಯಾಂಡ್ಲರ್ ಮತ್ತು ಮೋನಿಕಾ ತಮ್ಮ ಹೊಸ ಸಂಬಂಧವನ್ನು ಇತರರಿಂದ ರಹಸ್ಯವಾಗಿಡಲು ನಡೆಸುವ ಪ್ರಯತ್ನವನ್ನು '''ಐದನೇ ಸರಣಿ'''ಯು ಪ್ರಮುಖವಾಗಿ ಚಿತ್ರಿಸುತ್ತದೆ. ಸರಣಿಯ ೧೦೦ನೇ ಸಂಚಿಕೆಯಲ್ಲಿ ಫೀಬಿ ತ್ರಿವಳಿ ಮಕ್ಕಳಿಗೆ ಜನ್ಮ ಕೊಡುತ್ತಾಳೆ. ಮೊದಲ ಗಂಡು ಮಗುವಿಗೆ ಫ್ರ್ಯಾಂಕ್ ಜೂನಿಯರ್ ಜೂನಿಯರ್ ಎಂದೂ ನಂತರದ ಎರಡು ಹೆಣ್ಣು ಮಕ್ಕಳಿಗೆ ಲೆಸ್ಲಿ ಹಾಗೂ ಚ್ಯಾಂಡ್ಲರ್ ಎಂದೂ ಹೆಸರಿಡುತ್ತಾರೆ. (ಆರಂಭದಲ್ಲಿ ಅವರು ಎರಡು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗು ಎಂದು ಭಾವಿಸಿಕೊಂಡಿರುತ್ತಾರೆ ಆದರೆ ನಂತರ ಅದರಲ್ಲಿ ಒಂದು ಮಗು ಹೆಣ್ಣು ಎಂದು ಗೊತ್ತಾದ ಬಳಿಕವೂ ಚ್ಯಾಂಡ್ಲರ್ ಎಂಬ ಹೆಸರನ್ನೇ ಇಡಲು ನಿರ್ಧರಿಸುತ್ತಾರೆ.) ಎಮಿಲಿಯು ರೇಚಲ್ ಳನ್ನು ಇಷ್ಟಪಡದ ಕಾರಣ ಹಾಗೂ ರಾಸ್ ರೇಚಲ್ ನೊಂದಿಗಿನ ತನ್ನ ಸ್ನೇಹವನ್ನು ಬಿಟ್ಟು ಕೊಡಲು ಸಿದ್ಧನಿರದ ಕಾರಣ ರಾಸ್ ಮತ್ತು ಎಮಿಲಿಯ ಮದುವೆಯು ಮುರಿದುಬೀಳುತ್ತದೆ. ಫೀಬಿ ಪೋಲಿಸ್ ಅಧಿಕಾರಿ '''ಗ್ಯಾರಿ'''ಯೊಂದಿಗೆ ಸಂಬಂಧವನ್ನು ಆರಂಭಿಸುತ್ತಾಳೆ. ಮೋನಿಕಾ ಮತ್ತು ಚ್ಯಾಂಡ್ಲರ್ ತಮ್ಮ ಪ್ರೇಮ ಸಂಬಂಧವನ್ನು ಬಹಿರಂಗಪಡಿದಾಗ ಇತರರು ಮೊದಲಿಗೆ ಅಚ್ಚರಿಪಟ್ಟುಕೊಳ್ಳುತ್ತಾರೆ ಆದರೆ ನಂತರ ಸಂತೋಷಪಟ್ಟುಕೊಳ್ಳುತ್ತಾರೆ. ಅವರು ಲಾಸ್ ವೇಗಸ್ ನ ಪ್ರವಾಸದಲ್ಲಿರುವಾಗ ಮದುವೆಯಾಗಲು ತೀರ್ಮಾನಿಸುತ್ತಾರೆ. ಆದರೆ ರಾಸ್ ಹಾಗೂ ರೇಚಲ್ ರನ್ನು ಪಾನಮತ್ತರಾಗಿ ಚರ್ಚಿನಿಂದ ಮದುವೆಯಾಗಿ ಹೊರಬರುತ್ತಿರುವುದನ್ನು ನೋಡಿದ ನಂತರ ತಮ್ಮ ನಿರ್ಣಯವನ್ನು ಬದಲಾಯಿಸುತ್ತಾರೆ.
 
'''ಆರನೇ ಸರಣಿ'''ಯ ಪ್ರಥಮ ಸಂಚಿಕೆಯಲ್ಲಿ ರಾಸ್ ಹಾಗೂ ರೇಚಲ್ ರ ಮದುವೆಯು ಮದ್ಯದ ಅಮಲಿನಲ್ಲಿ ನಡೆದ ಒಂದು ತಪ್ಪೆಂದು ಪ್ರಚುರವಾಗುತ್ತದೆ ಮತ್ತು ಕೆಲವು ಸಂಚಿಕೆಗಳ ನಂತರ ಅವರು ವಿಚ್ಛೇದನ ಪಡೆದುಕೊಳ್ಳುತ್ತಾರೆ. ಚಾಂಡ್ಲರ್ ಮತ್ತು ಮೋನಿಕಾ ಜೊತೆಗೆ ಇರಲು ಪ್ರಾರಂಭಿಸುತ್ತಾರೆ. ಇದರಿಂದ ರೇಚಲ್, ಫೀಬಿಯ ಮನೆಗೆ ತನ್ನ ವಾಸವನ್ನು ಬದಲಾಯಿಸಿಕೊಳ್ಳುತ್ತಾಳೆ. ಜೋಯಿಗೆ 'ಮ್ಯಾಕ್ ಆಂಡ್ ಚೀಸ್' ಎಂಬ ಕೇಬಲ್ ಟಿ.ವಿ ಸರಣಿಯಲ್ಲಿ ಪಾತ್ರವೊಂದು ಸಿಗುತ್ತದೆ ಮತ್ತು ಅಲ್ಲಿ ಅವನು ಓಂದು ರೋಬೋಟಿನೊಂದಿಗೆ ಅಭಿನಯಿಸುತ್ತಾನೆ. ರಾಸ್ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಪ್ರ್ರಾಧ್ಯಾಪಕನಾಗಿ ಕೆಲಸಕ್ಕೆ ಸೇರುತ್ತಾನೆ ಹಾಗೂ ತನ್ನ ವಿದ್ಯಾರ್ಥಿಗಳಲ್ಲಿ ಒಬ್ಬಳದ '''ಎಲಿಜ಼ಬೆತ್''' ಳನ್ನು ಡೇಟ್ ಮಾಡಲು ಆರಂಭಿಸುತ್ತಾನೆ. ತಮ್ಮ ವಯಸ್ಸಿನ ಪ್ರೌಢತೆಯ ಅಂತರದಿಂದಾಗಿ ಆ ಸಂಬಂಧವು ಮುರಿದು ಬೀಳುತ್ತದೆ. ಬೆಂಕಿ ತಗುಲಿ ರೇಚಲ್ ಫೀಬಿಯರ ಅಪಾರ್ಟ್ಮೆಂಟ್ ಸುಟ್ಟುಹೋಗುತ್ತದೆ. ಇದರಿಂದಾಗಿ ರೇಚಲ್ ಜೋಯಿಯ ಮನೆಗೂ, ಫೀಬಿ ಚಾಂಡ್ಲರ್-ಮೋನಿಕಾ ಮನೆಗೂ ತಮ್ಮ ವಾಸವನ್ನು ಬದಲಾಯಿಸಿಕೊಳ್ಳುತ್ತಾರೆ. ಚಾಂಡ್ಲರ್ ಮೋನಿಕಾಳನ್ನು ಮದುವೆಯಾಗಲು ಕೇಳಿಕೊಳ್ಳುತ್ತಾನೆ. ತನ್ನ ಹಳೆಯ ಗೆಳೆಯನಾದ ರಿಚರ್ಡ್ ತನ್ನ ಪ್ರೀತಿಯನ್ನು ಒಪ್ಪಿಕೊಂಡರೂ, ಮೋನಿಕಾಚಾಂಡ್ಲರ್ ಜೊತೆ ತನ್ನ ಮದುವೆಗೆ ಮೋನಿಕಾ ಒಪ್ಪಿಗೆ ನೀಡುತ್ತಾಳೆ.
 
[[ಚಿತ್ರ:Paul Rudd LF.JPG|thumb|upright| ಫೀಬಿಯ ಪ್ರೇಮಿ ಹಾಗೂ ನಂತರ ಗಂಡನ ಪಾತ್ರವನ್ನು ನಿರ್ವಹಿಸಿದ '''ಪಾಲ್ ರುಡ್''' ತಮ್ಮ ಪಾತ್ರವು ಆವರ್ತಗೊಳ್ಳಲು ಶುರುವಾದಾಗ ಆಶ್ಚರ್ಯಗೊಂಡರು.<ref>{{cite web |url=http://www.cjonline.com/stories/010404/mid_rudd.shtml |title=Paul Rudd |accessdate=February 13, 2009 |author=Henrikson, Alicia |date=April 1, 2004 |work=[[The Topeka Capital-Journal]]}}</ref>]]
"https://kn.wikipedia.org/wiki/ಫ್ರೆಂಡ್ಸ್" ಇಂದ ಪಡೆಯಲ್ಪಟ್ಟಿದೆ