ಶ್ರೀಶೈಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫೭ ನೇ ಸಾಲು:
'''ಶ್ರೀಶೈಲ''' ಕ್ಷೇತ್ರವು, ಭಾರತದ ಪ್ರಾಚೀನ ಧಾರ್ಮಿಕ ಕ್ಷೇತ್ರಗಳ ಇತಿಹಾಸದಲ್ಲಿ ತುಂಬಾ ಪ್ರಾಚೀನವಾದುದು . [[ವೇದ]]ಗಳಲ್ಲಿ, [[ಪುರಾಣ ]], [[ಆಗಮ]]ಗಳಲ್ಲಿ ಇದನ್ನು ತುಂಬಾ ಪವಿತ್ರ ಕ್ಷೇತ್ರವೆಂದು ಪರಿಗಣಿಸಲಾಗಿದೆ .[[ಆಂಧ್ರ ಪ್ರದೇಶ]]ದ [[ಕರ್ನೂಲು]] ಜಿಲ್ಲೆಯ ನಂದಿಕೊಟಕೂರು ತಾಲ್ಲೋಕಿನಲ್ಲಿ ಹಬ್ಬಿರುವ ನಲ್ಲಮಲೈ ಪರ್ವತ ಶ್ರೇಣಿಯಲ್ಲಿ, ದಟ್ಟ ಕಾನನದ ಮಧ್ಯದಲ್ಲಿ , ಕೃಷ್ಣಾನದಿಯ ದಕ್ಷಿಣ ಭಾಗದಲ್ಲಿರುವ ಪ್ರಸಿದ್ದ ಶೈವ ಕ್ಷೇತ್ರವೇ ಶ್ರೀಶೈಲ .ಇಲ್ಲಿ ಹರಿಯುವ ಕೃಷ್ಣಾ ನದಿಯು ಆಳವಾದ ಕಮರಿಯಲ್ಲಿ ಹರಿದು ಬರುವುದರಿಂದ ತುಂಬಾ ರುದ್ರ ಭಯಾನಕವಾಗಿದೆ . ಇದನ್ನೇ ಪಾತಾಳ ಗಂಗೆ ಎಂದು ಕರೆಯುತ್ತಿದ್ದರು .ಇತ್ತೀಚೆಗೆ ಇಲ್ಲಿ ಜಲ ವಿದ್ಯುತ್ ಯೋಜನೆ ಆರಂಭವಾಗಿ ಇದೇ ಪ್ರದೇಶದಲ್ಲಿ ಅಣೆಕಟ್ಟೆ ನಿರ್ಮಾಣವಾಗಿರುವುದರಿಂದ ಪಾತಾಳ ಗಂಗೆಯ ಪ್ರದೇಶವನ್ನು ಸ್ಥಳಾಂತರಿಸಲಾಗಿದೆ .ಈ ಕ್ಷೇತ್ರದ ಅಧಿದೇವತೆಗಳು ಮಲ್ಲಿಕಾರ್ಜುನ ,ಭ್ರಮರಾಂಬೆಯರು. ಸಮುದ್ರ ಮಟ್ಟದಿಂದ ೫೫೦೦ ಅಡಿಗಳ ಎತ್ತರದಲ್ಲಿ ಮಲ್ಲಿಕಾರ್ಜುನ ಭ್ರಮರಾಂಬ ದೇವಸ್ಥಾನಗಳಿವೆ .ಪ್ರಾಚೀನ ಕಾಲದಿಂದಲೂ ಶ್ರೀಶೈಲ ಯಾತ್ರೆಯು ಮೋಕ್ಷದಾಯಕವೆಂದು ಭಕ್ತರ ನಂಬಿಕೆ .ಉತ್ತರದಲ್ಲಿ [[ಕಾಶಿ]]ಯಂತೆಯೇ ದಕ್ಷಿಣದಲ್ಲಿ ಶ್ರೀಶೈಲವು ಪವಿತ್ರವೆಂದು ಭಾರತೀಯರ ನಂಬಿಕೆ .ಶ್ರೀಶೈಲ ಪರ್ವತದ ಬಗ್ಗೆ ಪೌರಾಣಿಕವಾಗಿ ಅನೇಕ ಕಥೆಗಳು ಪ್ರಚಲಿತದಲ್ಲಿವೆ . ಸ್ಥಳೀಯವಾದ ಜಾನಪದ ಇತಿಹಾಸವೂ ಹೇರಳವಾಗಿದೆ .
==ಶ್ರೀಶೈಲದ ಇತಿಹಾಸ<ref> http://srisailamtemple.com/Srisaila_devasthanam/history.html,</ref>==
 
ಶ್ರೀಶೈಲದ ಇತಿಹಾಸವು ಅತ್ಯಂತ ವರ್ಣರಂಜಿತವಾದುದು . ದಕ್ಷಿಣ ಭಾರತದ ಅತ್ಯಂತ ಆಯಕಟ್ಟಿನ ಸ್ಥಳದಲ್ಲಿ ಶ್ರೀಶೈಲವು ಇರುವುದರಿಂದ ,ಇಲ್ಲಿನ ಅಧಿಪತ್ಯಕ್ಕಾಗಿ ,ಅನೇಕ ರಾಜ ಮನೆತನಗಳ ನಡುವೆ ಸತತವಾಗಿ ಇತಿಹಾಸದುದ್ದಕ್ಕೂ ಸಂಗ್ರಾಮಗಳು ನಡೆದಿರುವ ಬಗ್ಗೆ ಮಾಹಿತಿ ಇದೆ .ಕ್ರಿ.ಶ. ೩ನೇ ಶತಮಾನದ ವರೆಗೆ [[ಗುಪ್ತರು]], [[ಶಾತವಾಹನರು]], [[ಮೌರ್ಯರು]]ಶ್ರೀಶೈಲ ಪ್ರದೇಶದಲ್ಲಿ ತಮ್ಮ ಆಡಳಿತವನ್ನು ನಡೆಸಿದರು .ನಂತರ ದಕ್ಷಿಣದ ಪ್ರಬಲ ಅರಸರಾದ ಪಲ್ಲವರ ವಶಕ್ಕೆ ಶ್ರೀಶೈಲದ ಅಧಿಪತ್ಯವು ಬಂದಿತು .ಅವರನ್ನು ಸೋಲಿಸಿ ಕದಂಬರು ೬ನೇ ಶತಮಾನದ ವೇಳೆಗೆ ಶ್ರೀಶೈಲವನ್ನು ತಮ್ಮ ಕೈವಶ ಮಾಡಿಕೊಂಡರು .೭ನೇ ಶತಮಾನದ ವೇಳೆಗೆ ಶ್ರೀಶೈಲವು ಚೋಳ ಸಾಮ್ರಾಜ್ಯದ ಭಾಗವಾಯಿತು .ಸುಮಾರು ಎಂಟನೇ ಶತಮಾನದ ವರೆಗೆ [[ಚೋಳ]]ರ ಅಧೀನದಲ್ಲಿದ್ದ ಶ್ರೀಶೈಲವು ,ನಂತರ [[ಚಾಲುಕ್ಯ#ಕಲ್ಯಾಣಿಯ ಚಾಲುಕ್ಯರು|ಕಲ್ಯಾಣಿ ಚಾಳುಕ್ಯರ ]] ವಶಕ್ಕೆ ಬಂದಿತು .ಚೋಳರು ಮತ್ತು ಚಾಳುಕ್ಯರ ನಡುವೆ ಶ್ರೀಶೈಲಕ್ಕಾಗಿ ಅನೇಕ ಕದನಗಳು ನಡೆದವು .ನಂತರ ಕಲ್ಯಾಣಿ ಚಾಳುಕ್ಯರನ್ನು ಹಿಮ್ಮೆಟ್ಟಿಸಿದ [[ರಾಷ್ಟ್ರಕೂಟರು]]ಶ್ರೀಶೈಲದ ಮೇಲೆ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದರು .
"https://kn.wikipedia.org/wiki/ಶ್ರೀಶೈಲ" ಇಂದ ಪಡೆಯಲ್ಪಟ್ಟಿದೆ