ಚಾಮುಂಡೇಶ್ವರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Camunda5.JPG|thumb|right|150px|ಹಳೆಬೀಡಿನಲ್ಲಿರುವ ಚಾಮುಂಡಿಯ ವಿಗ್ರಹ]]
[[ಹಿಂದೂ ಧರ್ಮ]]ದಲ್ಲಿ, '''ಚಾಮುಂಡೇಶ್ವರಿ''', '''ಚಾಮುಂಡಿ''' ಎಂದೂ ಪರಿಚಿತವಾಗಿರುವ [[ಹಿಂದೂ]] [[ದೇವಿ ಮಾತೆ]]ಯಾದ [[ದೇವಿ]]ಯ ಭಯಾನಕ ರೂಪ ಮತ್ತು ಏಳು [[ಮಾತೃಕೆ]]ಯರ ಪೈಕಿ ಒಬ್ಬಳು. ಅವಳು, ಯೋಧೆ [[ದುರ್ಗೆ|ದುರ್ಗಾ]] ದೇವಿಯ ಪರಿಚಾರಕಿಯರಾದ ಅರವತ್ತು ನಾಲ್ಕು ಅಥವಾ ಎಂಬತ್ತೊಂದು [[ತಂತ್ರ|ತಾಂತ್ರಿಕ]] ದೇವತೆಗಳಾದ,ಮುಖ್ಯ [[ಯೋಗಿನಿ]]ಗಳ ಪೈಕಿ ಕೂಡ ಒಬ್ಬಳು.ಈ ಹೆಸರು ಚಾಮುಂಡಿಯು ಕೊಂದ ಇಬ್ಬರು ಅಸುರರಾದ [[ಚಂಡ]] ಮತ್ತು [[ಮುಂಡ]]ರ ಸಂಯೋಗವಾಗಿದೆ. ಈಕೆಯು ಮೈಸೂರಿನ ಸಮಾತ್ಸನದ ದೇವತೆ, ಸಪ್ತಮಾತೃಕೆ ಯರಲ್ಲಿ ಏಳನೆಯವಳು ಹಿಂದೂ ಧರ್ಮದಲ್ಲಿ, '''ಚಾಮುಂಡೇಶ್ವರಿ''' ಪ್ರಬಲವಾದ ದೇವತೆ."ಚಾಮುಂಡಿ" ಎಂದೊಡನೆ ಈಕೆ ಶಿಷ್ಟ ಪುರಾಣದ ವಿಶಿಷ್ಟ ಶಕ್ತಿದೇವತೆ. ಆದಿಶಕ್ತಿಯಾಗಿ ಹುಟ್ಟಿ ದುಷ್ಟ ಶಿಕ್ಷಕಿ-ಶಿಷ್ಟರಕ್ಷಕಿಯಾಗಿ ಮಹಿಷೂರಿನ ಮಹಿಷನನ್ನು ಕೊಂದು,ಲೋಕ ಕಂಟಕರಾಗಿದ್ದ ಚಂಡ-ಮುಂಡರೆಂಬ ರಕ್ಕಸರನ್ನು ಸಂಹರಿಸಿ 'ಚಾಮುಂಡಿ'ಯಾಗಿದ್ದಾಳೆ. ಈಕೆ-ಅಂಬೆ ,ಈಶ್ವರಿ ,ಚಂಡಿ ,ಕಾಳಿ ,ಭಗವತೀ ,ಮಹೇಶ್ವರಿ ,ಮಹಾದೇವಿ,ದುರ್ಗೆ ಮುಂತಾದ ಹಲವು ಹೆಸರುಗಳಿಂದ ಕರೆಯಲ್ಪಡುತ್ತಾಳೆ. ಪುರಾಣವೂಂದರ ಪ್ರಕಾರ-ಬ್ರಹ್ಮನ ವರಬಲದಿಂದ ಮದೋನ್ಮತ್ತನಾಗಿದ್ದ "ಮಹಿಷಾಸುರ"ನ ಸಂಹಾರ ಮಾಡಲು, ದೇವತೆಗಳೆಲ್ಲ ತಮ್ಮ ಶರೀರದ ಒಂದೊಂದು ಅಂಶವನ್ನು ತೆಗೆದು ಆದಿಶಕ್ತಿಯನ್ನು ಸೃಷ್ಟಿ ಮಾಡಿ, ಮಹಿಷನ ಮೇಲೆ ಯುದ್ದಕ್ಕೆ ಕಳುಹಿಸಿ ಅವನನ್ನು ಸಂಹಾರ ಮಾಡಲು ನೆರವಾಗುತ್ತಾರೆ. ಚಾಮುಂಡಿ ಮಹಿಷಮಂಡಲವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಮಹಾಬಲಗಿರಿಯ ಮೇಲೆ ನೆಲೆಗೊಂಡಿದ್ದಾಳೆ. ಇನ್ನೊಂದೆಡೆ ಜನಪದ ಕಥೆಯ ಪ್ರಕಾರ ಚಾಮುಂಡಿ [[ಉಜ್ಜಯಿನಿ]] ದೇಶದ ಬಿಜ್ಜಳರಾಯನ ಕಿರಿಯ ಮಗಳು. ಚಾಮುಂಡಿಯ ಅಕ್ಕ ಉರಿಮಸಣಿ ಸೇರಿದಂತೆ ಒಟ್ಟು ಏಳುಜನ ಅಕ್ಕ-ತಂಗಿಯರು. ಇವರು ಕಾರಣಾಂತರಗಳಿಂದ ಪರಸ್ಪರ ಜಗಳ ಕಾದು,ಮನೆಬಿಟ್ಟು ಪರಿತ್ಯಕ್ತೆಯರಾಗುತ್ತಾರೆ. ಇವರೆಲ್ಲ ಉತ್ತರಪ್ರದೇಶದಿಂದ ಹೊರಟು, ದಕ್ಷಿಣ ಪ್ರಾಂತ್ಯದ ಭಿನ್ನ ಭಿನ್ನ ಸ್ಥಳಗಳಲ್ಲಿ ನೆಲೆ ಕಂಡು ಕೊಳ್ಳುತ್ತಾರೆ. ಮತ್ತೊಂದು ಕಥೆಯ ಪ್ರಕಾರ ಚಾಮುಂಡಿ ಚಾಮರಾಯನ ಮಗಳು. ಈಕೆಗೆ ಕುಚುಕುಚು ಮಾರಿ ಎಂಬ ಸೋದರಿ, ಮಹದೇಶ್ವರ ಮತ್ತು ಬ್ರಹ್ಮೇಶ್ವರ ಎಂಬ ಸೋದರರಿರುತ್ತಾರೆ. ಅನ್ಯ ಕಾರಣ ನಿಮಿತ್ತ ಈ ನಾಲ್ವರು ಮನೆ ಬಿಟ್ಟು ಹೊರಬರುವಾಗ, ಸುಳ್ವಾಡಿ ಎಂಬ ಊರಲ್ಲಿ ಲಂಬಾಣಿ ಜನಾಂಗದವರು ಮಾಂಸದಡುಗೆ ಮಾಡುತ್ತಿರುವುದನ್ನು ಕಂಡ ಕಿಚುಕುಚು ಮಾರಿಯ ಬಾಯಲ್ಲಿ ನೀರೂರಿ ಬಿಡುತ್ತದೆ. ಆಗ ಆಕೆ ತನ್ನ ಅಕ್ಕ ಮತ್ತು ಅಣ್ಣಂದಿರಿಗೆ ತಾನಿಲ್ಲೆ ಉಳಿಯುವುದಾಗಿ ಹೇಳುತ್ತಾಳೆ. ಅದಕ್ಕವರು ಸಮ್ಮತಿಸುತ್ತಾರೆ. ಸುಮಾರು ಒಂದು ಮೈಲಿ ದೂರ ಬಂದಾಗ ಮಹದೇಶ್ವರ, ತಮ್ಮನಾದ ಬ್ರಹ್ಮೇಶ್ವರನಿಗೆ ನೀನು ತಂಗಿಯ ರಕ್ಷಣೆಗಾಗಿ ಇಲ್ಲೇ ಉಳಿವಂತೆ ಆದೇಶಿಸುತ್ತಾನೆ. ನಂತರ ತಾನು ಮಹದೇಶ್ವರ ಬೆಟ್ಟದೆಡೆಗೆ ಸಾಗಿ ಏಳುಮಲೆಯಲ್ಲಿ ನೆಲೆಸುತ್ತಾನೆ. ಚಾಮುಂಡಿ ಮೈಸೂರಿನ [[ಚಾಮುಂಡಿ ಬೆಟ್ಟದಲ್ಲಿಬೆಟ್ಟ]]ದಲ್ಲಿ ರಕ್ಷಣಾದೇವತೆಯಾಗಿ ನೆಲೆ ನಿಲ್ಲುತ್ತಾಳೆ. ಮೈಸೂರಿನ ಚರಿತ್ರೆಯ ಪ್ರಕಾರ ಈಕೆ ಐತಿಹಾಸಿಕ ವೀರವನಿತೆ. ಮೈಸೂರು ಒಡೆಯರ ಕುಲದೇವತೆ, ರಕ್ಷಣಾದೇವತೆ, ಅಧಿದೇವತೆಯಾಗಿದ್ದಾಳೆ. ಈಕೆಯ ಕಾಲ ಸುಮಾರು-೧೬ನೇ ಶತಮಾನವೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಮಹಿಷಮಂಡಲ/ಮಹಾಬಲಬೆಟ್ಟ/ಚಾಮುಂಡಿ ಬೆಟ್ಟವಾಗಲು ಹಲವು ಕಾಲಾಂತರಗಳಾಗಿವೆ. ಮಹಿಷನನ್ನು ಕೊಂದ ನಂತರ ಚಾಮುಂಡಿ ಯುದ್ದದಿಂದಾದ ಶರೀರದ ಆಯಾಸವನ್ನು ನೀಗಿಸಿಕೊಳ್ಳಲು,ನಂಜನಗೂಡಿನ
ಕಪಿಲಾ ನದಿ ತಟಕ್ಕೆ ಬಂದು, ಮಧ್ಸ್ಯ ರಾತ್ರಿಯಲ್ಲಿ ಸ್ನಾನ ಮಾಡಿ, ತನ್ನ ತಲೆಗೂದಲನ್ನು ಹರವಿ ಒಣಗಿಸುತ್ತಾ ಇರಬೇಕಾದರೆ, ರಾತ್ರಿ ಸಂಚಾರಕ್ಕೆ ಬಂದ ಶಿವ, ಈಕೆಯಲ್ಲಿ ಅನುರಕ್ತನಾಗುತ್ತಾನೆ. ಶಿವನಿಗೆ ವಿವಾಹವಾಗಿರುವುದರ ಅರಿವಿರದ ಚಾಮುಂಡಿ ತಾನೂ ಕೂಡ ಶಿವನಲ್ಲಿ ಅನುರಕ್ತಳಾಗುತ್ತಾಳೆ. ತದ ನಂತರ ಈ ಸುದ್ದಿ ಶಿವನ ಧರ್ಮಪತ್ನೀಯಾದ
ಪಾರ್ವತಿಗೆ ಗೊತ್ತಾಗಿ ಅವಳು ಚಾಮುಂಡಿಯೊಂದಿಗೆ ಜಗಳವಾಡುತ್ತಾಳೆ. ಚಾಮುಂಡಿ-ಗೌರಿಯರ ಜಗಳ ಜನಪದಸಾಹಿತ್ಯದಲ್ಲಿ ನಿಚ್ಚಳವಾಗಿ ದಾಖಲಾಗಿದೆ. ಪಾರ್ವತಿಯ ಮಾತಿನಿಂದ ಮುಖಭಂಗಗೊಂಡ ಚಾಮುಂಡಿ ಮೈಸೂರಿಗೆ ಬರುವ ಹಾದಿಯಲ್ಲಿ ಆಕಸ್ಮಿಕವಾಗಿ ಸುತ್ತೂರಿನೆಡೆಗೆ ಸಾಗುತ್ತಿದ್ದ ಮಹದೇಶ್ವರನ ಬಳಿ ಹೋಗಿ ಪ್ರೇಮಭಿಕ್ಷೆ ಬೇಡುತ್ತಾಳೆ. ಇದರಿಂದ ಕಂಗಾಲಾದ ಮಹದೇಶ್ವರ ಏನೊಂದು ಮಾತನಾಡದೆ ಚಾಮುಂಡಿಯಿಂದ ತಪ್ಪಿಸಿ ಕೊಳ್ಳಲು ಬಿರಬಿರನೆ ನಡೆದು ಹೋಗುತ್ತಾನೆ. ಪಟ್ಟು ಬಿಡದ ಚಾಮುಂಡಿಯು ಆತನನ್ನು ಹಿಂಬಾಲಿಸಿದಾಗ, ಮಹದೇಶ್ವರ ಆಕೆಯಿಂದ ತಪ್ಪಿಸಿಕೊಳ್ಳಲು ಎಪ್ಪತ್ತೇಳು ಮಲೆಯಲ್ಲಿ ನೆಲೆಸಿದನಂತೆ. ನಂತರ ಚಾಮುಂಡಿ ಬೆಟ್ಟದ ಮೇಲೆ ನೆಲೆಸಿದಳಂತೆ. ಚಾಮುಂಡಿ ಬೆಟ್ಟವು ಸಮುದ್ರಮಟ್ಟಕ್ಕಿಂತ ಸುಮಾರು-೩೪೮೯ಅಡಿ ಎತ್ತರದಲ್ಲಿದೆ. ಮೈಸೂರಿನ ದೊಡ್ಡದೇವರಾಜ ಒಡೆಯರ್ ಅವರು ಬೆಟ್ಟವನ್ನೇರಲು ಬರುವ ಭಕ್ತಾದಿಗಳಿಗೆ ಅನುಕೂಲವಾಗಲೆಂದು ೧೦೦೦ಮೆಟ್ಟಲುಗಳನ್ನು ಕಟ್ಟಿಸಿ, ೭೦೦ನೇಮೆಟ್ಟಿಲ ಬಳಿ ಬೃಹತ್ ನಂದಿವಿಗ್ರಹವನ್ನು[[ನಂದಿವಿಗ್ರಹ]]ವನ್ನು ಸ್ಥಾಪಿಸಿದ್ದಾರೆ.ಆಶ್ವಯುಜ ಶುಕ್ಲಪಕ್ಷದ ನವರಾತ್ರಿಯ ಸಮಯದಲ್ಲಿ ಭಾರತಾದಾದ್ಯಂತ ಚಾಮುಂಡಿ ಆರಾಧನೆ "ದುರ್ಗೆ"ಯ ಹೆಸರಿನಲ್ಲಿ ಬಹಳ ವೈಭವಯುತವಾಗಿ ನಡೆಯುತ್ತದೆ. ಶಿಷ್ಟಪುರಾಣಗಳಾದ-"ಸ್ಕಂದ ಪುರಾಣ, ವರಾಹ ಪುರಾಣ, ಶ್ರೀದೇವಿ ಭಾಗವತ, ಕಾಳಿಕಾ ಪುರಾಣ,ವಿಷ್ಣು ಧರ್ಮೋತ್ತರ ಪುರಾಣ, ಸನತ್ಕುಮಾರ ಶಿಲ್ಪರತ್ನ ಪುರಾಣ ,ಮಾರ್ಕಂಡೇಯ ಪುರಾಣ"-ಮುಂತಾದ ಗ್ರಂಥಗಳು ಅಲ್ಪ-ಸ್ವಲ್ಪ ಪಾಠಾಂತರಗಳೊಂದಿಗೆ ಚಾಮುಂಡಿಯ ಪುರಾಣವನ್ನು ವಿಶದ ಪಡಿಸಿವೆ. ಚಾಮುಂಡಿಯ ವೀರೋಚಿತ ಕಥೆಗಳನ್ನು, ಪ್ರಣಯ ಪ್ರಸಂಗವನ್ನು- "ನೀಲಗಾರರು, ದೇವರಗುಡ್ಡರು,ಹೆಳವರು,ತಂಬೂರಿಯವರು,ಜನಪದ ಮಹಿಳೆಯರು "ವಿವರವಾಗಿ ಭಕ್ತಿಯಿಂದ ಹಾಡುತ್ತಾರೆ.[[ ಪದವಿವರಣಾ ಕೋಶದಪ್ರಕಾರಕೋಶ]]ದಪ್ರಕಾರ -"ಚಾಮುಂಡಿ"ಎಂಬ ಪದ 'ಚಾಮುಂಡ' ಶಬ್ದದ ಅಪಭ್ರಂಶ ರೂಪ. ಗ್ರಾಮವೃದ್ದ > ಶ್ಯಾಮವೃದ್ದ > ಚಾಮವೂಡ್ಡಿ > ಚಾಮಉಂಡಿ > ಚಾಮುಂಡಿ > ಚಾವುಡಿ > ಚೌಡಿ ಎಂದಾಗಿದೆ. ಒಟ್ಟಿನಲ್ಲಿ ಚಾಮುಂಡಿ ಒಬ್ಬ ಉಗ್ರದೇವತೆ. ಅಷ್ಟಕರಗಳನ್ನು ಹೊಂದಿದ್ದಾಳೆ. ಈಕೆಯ ಎಂಟು ಕೈಯಲ್ಲೂ ಆಯುಧಗಳಿರುತ್ತವೆ, ಕೊರಳ ಸುತ್ತ ರುಂಡಗಳ ಮಾಲೆ, ಕೆಂಪಾದ ನಾಲಿಗೆ ಚಾಚಿ ರಕ್ತಕ್ಕಾಗಿ ಹಂಬಲಿಸುತ್ತಾ ತ್ರಿಶೂಲಧಾರಿಣಿಯಾಗಿ ತಾಮಸಗುಣದ ಪ್ರಧಾನ ದೇವತೆಯಾಗಿದ್ದಾಳೆ. ಜೊತೆಗೆ ಕಾಳಿಕಾಮಾತೆಯಕಾಳಿಕಾ ಮಾತೆಯ ಪ್ರತಿರೂಪವಾಗಿದ್ದಾಳೆ.
 
 
"https://kn.wikipedia.org/wiki/ಚಾಮುಂಡೇಶ್ವರಿ" ಇಂದ ಪಡೆಯಲ್ಪಟ್ಟಿದೆ