ಗೋಪಾಲಕೃಷ್ಣ ಗೋಖಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಗೋಪಾಲಕೃಷ್ಣ ಗೋಖಲೆ
 
೨೪ ನೇ ಸಾಲು:
 
==ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ==
ಗೋಖಲೆಯವರು 1889ರ ವರ್ಷದಲ್ಲಿ ಮಹಾನ್ ಸಮಾಜ ಸುಧಾರಕರಾದ ಮಹಾದೇವ ಗೋವಿಂದ ರಾನಡೆಯವರಿಂದ ಪ್ರಭಾವಿತರಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸದಸ್ಯರಾದರು. ತಮ್ಮ ಸಮಕಾಲೀನರಾದ ಬಾಲ ಗಂಗಾಧರ ತಿಲಕ್, ದಾದಾಬಾಯ್ ನವರೋಜಿ, ಬಿಪಿನ್ ಚಂದ್ರ ಪಾಲ್, ಲಾಲಾ ಲಜಪತ್ ರಾಯ್ ಮತ್ತು ಅನ್ನಿ ಬೆಸೆಂಟ್ ಮುಂತಾದವರ ಜೊತೆಗೂಡಿ ಹಲವಾರು ವರ್ಷಗಳ ಕಾಲ ಬ್ರಿಟಿಷ್ ರಾಜಕೀಯ ವ್ಯವಸ್ಥೆಯಲ್ಲಿ ಭಾರತೀಯರಿಗೆ ಹೆಚ್ಚಿನ ಪ್ರಾತಿನಿಧ್ಯ ದೊರಕಿಸಿಕೊಡಲು ಹೋರಾಡಿದರು. ಬ್ರಿಟಿಷರೊಡನೆ ಸೌಹಾರ್ದಯುತವಾಗಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂಬುದು ಗೋಖಲೆಯವರ ಸಹನಶೀಲ ನಡೆಯಾಗಿತ್ತು. ಐರ್ ಲ್ಯಾಂಡ್ ದೇಶಕ್ಕೆ ಭೇಟಿಕೊಟ್ಟ ಗೋಖಲೆಯವರು ಆ ದೇಶದ ಆಲ್ಫ್ರೆಡ್ ಎಂಬಾತನನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಕೆಲಸ ಮಾಡುವ ಏರ್ಪಾಡು ಮಾಡಿದ್ದರು. ಅದರ ಮುಂದಿನ ವರ್ಷದಲ್ಲಿ ಬಾಲ ಗಂಗಾಧರ ತಿಲಕ್ಕರ ಜೊತೆಗೆ ಕಾಂಗ್ರೆಸ್ಸಿನ ಜಂಟಿ ಕಾರ್ಯದರ್ಶಿಯಾದರು. ತಿಲಕ್ ಮತ್ತು ಗೋಖಲೆಯವರು ಒಂದೇ ರೀತಿಯ ಕೌಟುಂಬಿಕ ಹಿನ್ನಲೆಯಿಂದ ಬಂದರು. ಇಬ್ಬರೂ ವಿದ್ಯಾಭ್ಯಾಸದಲ್ಲಿ ಸಮಾನ ಸಾಧಕರು. ಗಣಿತ ಶಾಸ್ತ್ರದ ಮಹಾನ್ ವಿದ್ವಾಂಸರು. ಇಬ್ಬರೂ ಡೆಕ್ಕನ್ ಎಜುಕೇಶನ್ ಸೊಸೈಟಿಯ ಪ್ರಮುಖ ಸದಸ್ಯರಾಗಿದ್ದರು. ಇಷ್ಟಾದ್ದರೂ ಕಾಂಗ್ರೆಸ್ಸಿನಲ್ಲಿ ಈ ಈರ್ವರೂ ನಾಯಕರಾದಾಗ, ಭಾರತೀಯ ಸಮುದಾಯಕ್ಕೆ ಯಾವ ರೀತಿಯಲ್ಲಿ ಉಪಯುಕ್ತತೆ ದೊರಕಿಸಿಕೊಡಬಹುದು ಎಂಬ ನಿಲುವಿನಲ್ಲಿ ತೀವ್ರಸ್ವರೂಪದ ಭಿನ್ನಾಭಿಪ್ರಾಯಗಳನ್ನು ತಳೆದವರಾಗಿದ್ದರು. ೧೯೦೫ರ ವರ್ಷದಲ್ಲಿ ಗೋಖಲೆಯವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾದರು.
 
==ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ==
"https://kn.wikipedia.org/wiki/ಗೋಪಾಲಕೃಷ್ಣ_ಗೋಖಲೆ" ಇಂದ ಪಡೆಯಲ್ಪಟ್ಟಿದೆ