ಕೂಡಲ ಸಂಗಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೬೭ ನೇ ಸಾಲು:
 
* ವಸ್ತು ಸಂಗ್ರಹಾಲಯ - ಬಸವಾದಿ ಶರಣರ ಕಾಲದ ಶಿಲ್ಪಗಳು ಮತ್ತು ಕರ್ನಾಟಕದ ಇತಿಹಾಸಕ್ಕೆ ಸಂಬಂಧಪಟ್ಟ ವಸ್ತುಗಳ ಸಂಗ್ರಹ
 
'''ಕೂಡಲ ಸಂಗಮ'''
 
ಕೃಷ್ಣಾ ಮತ್ತು ಮಲಪ್ರಭಾ ನದಿ ಸಂಗಮಿಸುವ ಕ್ಡೇತ್ರ., ಕೂಡಲ ಸಂಗಮ ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಅಣೆಕಟ್ಟಿನಿಂದ ಸುಮಾರು ೩೫ ಕಿ.ಮಿ.ದೂರದಲ್ಲಿದೆ. ಇದು ಬಸವಣ್ಣನವರ ಐಕ್ಯ ಸ್ಥಳವಾಗಿದ್ದು, ಲಿಂಗಾಯತ ಧರ್ಮದ ಪ್ರಮುಖ ಕ್ಷೇತ್ರವಾಗಿದೆ. ಬಸವಣ್ಣನವರು ಚಿಕ್ಕ ವಯಸ್ಸಿನಲ್ಲಿ ಇಲ್ಲಿಗೆ ಬಂದು ಈಶಾನ್ಯ ಗುರುಗಳೆಂದು ಖ್ಯಾತರಾಗಿರುವ ಪರಮಪೂಜ್ಯ ಜಾತವೇದ ಮುನಿಗಳಿಂದ ಶಿಕ್ಷಣ ಮತ್ತು ಮಾರ್ಗ ದರ್ಶನ ಪಡೆದರು. ಇಲ್ಲಿ ಕೃಷ್ಣ ನದಿ ಮತ್ತು ಘಟಪ್ರಭ ನದಿ ವಿಲೀನವಾಗಿ ಪೂರ್ವ ದಿಕ್ಕಿನಲ್ಲಿ ಆಂಧ್ರ ಪ್ರದೇಶ ರಾಜ್ಯದ ಶ್ರೀಶೈಲದ (ಇನ್ನೊಂದು ಕ್ಷೇತ್ರ) ಕಡೆಗೆ ಹರಿಯುತ್ತದೆ.
 
'''ಕೂಡಲ ಸಂಗಮ ಸುಕ್ಷೇತ್ರ'''
 
ಓಂ ಶ್ರೀ ಗುರು ಬಸವ ಲಿಂಗಾಯ ನಮ:
ಕೂಡಲ ಸಂಗಮ ಸುಕ್ಷೇತ್ರವು ಹಿನ್ನೆಲೆಯನ್ನೊಳಗೊಂಡ ಸುಪ್ರಸಿದ್ಧ ಸಂಗಮೇಶ್ವರ ದೇವಾಲಯವನ್ನು ಹೊಂದಿದ ಧಾರ್ಮಿಕ ಸ್ಥಾನ, ಕೃಷ್ಣಾ-ಮಲಪ್ರಭಾ ನದಿಗಳ ಸಂಗಮದಿಂದಾಗಿ ಇದೀಗ ಬಸವ ಸಾಗರ ಜಲಾಶಯದ ನಿರ್ಮಾಣದಿಂದಾಗಿ ಪ್ರಾಕೃತಿಕ ಚೆಲುವಿನಿಂದ ಶೋಭಿಸುತ್ತಿರುವ ಸುಂದರ ತಾಣ. ಚಿನ್ನಕ್ಕೆ ಸುವಾಸನೆ ಬಂದಂತೆ ಇಂತಹ ಕ್ಷೇತ್ರದ ಮಹಿಮೆ ವಿಶ್ವವಿಖ್ಯಾತಿಯನ್ನು ಹೊಂದುವಂತಾಗಿರುವು ವಿಶ್ವಗುರು ಬಸವಣ್ಣನವರ ಪಾದ ಸ್ಪರ್ಶದಿಂದಾಗಿ
 
"ಮಹಾಮಹಿಮ ಸಂಗನ ಬಸವಣ್ಣನು ಪಾದವಿಟ್ಟ ಅವಿಮುಕ್ತ ಕ್ಷೇತ್ರ" ಎಂದು ಜಗನ್ಮಾತೆ ಅಕ್ಕ ಮಹಾದೇವಿ ನುಡಿದ ಪ್ರಕಾರ ಕೂಡಲ ಸಂಗಮವು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರವಾಗಿ ಇಂದು ಪುಣ್ಯಭೂಮಿಯಾಗಿ ಕಂಗೊಳಿಸುತ್ತಿದೆ. ಮುಸಲ್ಮಾನರಿಗೆ ಮೆಕ್ಕಾ, ಸಿಖ್ಖರಿಗೆ ಅಮೃತಸರ, ಬೌದ್ಧರಿಗೆ ಬುದ್ಧಗಯೆ ಮಹತ್ವದ ಧರ್ಮಕ್ಷೇತ್ರಗಳಾದಂತೆ ಬಸವ ಧರ್ಮೀಯರಾದ ಲಿಂಗಾಯತರಿಗೆ ಕೂಡಲ ಸಂಗಮವೇ ಧರ್ಮಕ್ಷೇತ್ರ.
 
ಕೂಡಲ ಸಂಗಮವು ಕರ್ನಾಟಕದ ಪ್ರಮುಖ ಪ್ರವಾಸಿ ತಾಣ. ರಾಷ್ಟ್ರೀಯ ಹೆದ್ದಾರಿ ನಂ.13ರಿಂದ ರಸ್ತೆ ಸಂಪರ್ಕವಿದೆ. ಆದರೆ, ನೇರವಾಗಿ ರೈಲು ಸಂಪರ್ಕ ಇಲ್ಲ. ರೈಲಿನ ಮೂಲಕ ಬರಬೇಕಿದ್ದರೆ ಬಾಗಲಕೋಟೆ, ಬಾದಾಮಿ, ಆಲಮಟ್ಟಿಗೆ ಬಂದು ಅಲ್ಲಿಂದ ರಸ್ತೆ ಮಾರ್ಗವಾಗಿ ಬರಬೇಕು. ಇಲ್ಲಿ ತಂಗಲು ಯಾತ್ರಿ ನಿವಾಸದಲ್ಲಿ 50 ಕೊಠಡಿ, 15 ಡಾರ್ಮೆಟರಿ ಇವೆ. ಸರ್ಕಾರಿ, ಪ್ರಾಧಿಕಾರದ ಅತಿಥಿಗೃಹ, ಉಪಹಾರ ಗೃಹಗಳಿವೆ. ಮಧ್ಯಾಹ್ನ ಮತ್ತು ರಾತ್ರಿ ದಾಸೋಹದ ವ್ಯವಸ್ಥೆ ಇದ್ದು, ಪ್ರವಾಸಿಗರ ನೆರವಿಗಾಗಿ ಮಾಹಿತಿ ಕೇಂದ್ರ ಸಹ ಇದೆ.
 
ಈಗ ಕೂಡಲಸಂಗಮವು ಅಂತರರಾಷ್ಟ್ರೀಯ ಬಸವ ಕೇಂದ್ರವಾಗಿ ಹೊರಹೊಮ್ಮುತ್ತಿದ್ದು, ಕರ್ನಾಟಕ ಸರಕಾರವು ಬಸವ ಗೋಪುರ/ಬಸವ ಅಂತರರಾಷ್ಟ್ರೀಯ ಕೇಂದ್ರವನ್ನು ನಿರ್ಮಿಸಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗಿರುವ ಐಕ್ಯ ಮಂಟಪವನ್ನು ವಿಶಿಷ್ಟ ರೀತಿಯ ಆಧುನಿಕ ವಾಸ್ತು ಶಿಲ್ಪ ದಲ್ಲಿ ಸಂರಕ್ಸಿಸಲಾಗಿದೆ. ಜೀವಿತದಲ್ಲಿ ಒಮ್ಮೆ ಸಂದರ್ಶಿಸಬೇಕಾದ ಸ್ಥಳವಿದು.
 
ಇಲ್ಲಿನ ಪ್ರಮುಖ ಪ್ರವಾಸ ಸ್ಥಳಗಳು ಇಂತಿವೆ:
ಚಾಲುಕ್ಯ ಶೈಲಿಯಲ್ಲಿರುವ ಸಂಗಮನಾಥ ದೇವಾಲಯ
ಬಸವೇಶ್ವರ ಐಕ್ಯ ಮಂಟಪ
ಬಸವ ಧರ್ಮ ಪೀಠದ ಮಹಾಮನೆ ಆವರಣ
ಪೂಜಾವನ
ಸಭಾಭವನ. ೬೦೦೦ ಜನರಿಗೆ ಸ್ಥಳಾವಕಾಶ ಇರುವ ಈ ಸಭಾಂಗಣದ ೪ ದ್ವಾರಗಳನ್ನು ಗಂಗಾಂಬಿಕೆ, ನೀಲಾಂಬಿಕೆ, ಚನ್ನಬಸವಣ್ಣ ಮತ್ತು ಅಕ್ಕ ನಾಗಮ್ಮ ಎಂದು ಹೆಸರಿಸಲಾಗಿದೆ.
ಬಸವ ಗೋಪುರ/ಬಸವ ಅಂತರರಾಷ್ಟ್ರೀಯ ಕೇಂದ್ರ
ವಸ್ತು ಸಂಗ್ರಹಾಲಯ - ಬಸವಾದಿ ಶರಣರ ಕಾಲದ ಶಿಲ್ಪಗಳು ಮತ್ತು ಕರ್ನಾಟಕದ ಇತಿಹಾಸಕ್ಕೆ ಸಂಬಂಧಪಟ್ಟ ವಸ್ತುಗಳ ಸಂಗ್ರಹ
 
ಕೂಡಲ ಸಂಗಮ ಸುಕ್ಷೆತ್ರದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ
ಶರಣಮೇಳ ಪ್ರತಿ ವರ್ಷ ಜನವರಿ 11, 12, 13, 14, ಮತ್ತು 15 ರಂದು
ಬಸವ ಪೀಠವು ಎದ್ದು | ಒಸೆದು ನಾಣ್ಯವ ಹುಟ್ಟಿ
ಬಸವನ ಮುದ್ರೆ ಮೆರೆದಾವು | ಧರೆಯವಗೆ
ವಶವಗದಿಹುದೆ ಸರ್ವಜ್ಞ ||
 
ಶರಣ ಬಂಧುಗಳೇ,
ಮಹಾಮಾನವತಾವಾದಿ, ಲಿಂಗಾಯತ ಧರ್ಮ ಸಂಸ್ಥಾಪಕ, ಧರ್ಮ ಗುರು ಬಸವಣ್ಣನವರ ಕಾರಣಿಕತ್ವ ಮತ್ತು ಸಂದೇಶಗಳಲ್ಲಿ ನಂಬಿಕೆ ಇಟ್ಟು ನಡೆಯುವ ಬಸವ ಭಕ್ತರು, ಬಸವ ಧರ್ಮಿಯರಾದ ಲಿಂಗಾಯತರು ಹಾಗೂ ಬಸವತತ್ವಾಭಿಮಾನಿಗಳೆಲ್ಲರು ವರ್ಷಕ್ಕೆ ಒಮ್ಮೆಯಾದರೂ ನಂಬಿಕೆ ಒಂದು ಸ್ಥಳದಲ್ಲಿ ಸಮವೇಷವಗುವುದು ಅತ್ಯಂತ ಅವಶ್ಯಕ. ಇದು ಸಮಾನತ್ವ ಮತ್ತು ಸಹೋದರತ್ವ ಬೆಳಸಲು ಸಹಕಾರಿಯಾಗುವುದು ಎಂಬ ಉದ್ದೇಶದಿಂದ ಅಡಿ ಶರಣರ ಸಂಕಲ್ಪದಂದೆ ಶರಣ ಮೇಳವನ್ನು ನಡೆಸಲಾಗುತ್ತಿದೆ, ಧರ್ಮಕರ್ತ ಬಸವಣ್ಣನವರ ವಿಧ್ಯಾಭೂಮಿ, ತಪೋಸ್ಥಾನ, ಐಕ್ಯ ಕ್ಷೇತ್ರ ಕೂಡಲ ಸಂಗಮದಲ್ಲಿ ಲಿಂಗಾಯತ (ಬಸವ) ಧರ್ಮಿಯರ ಧರ್ಮಕ್ಷೇತ್ರ ಎಂದು ಗುರುತಿಸಿಕೊಂಡ 1988 ರ ಜನವರಿ 14 15 ಮತ್ತು 16 ರಂದು ಪ್ರಥಮ ಚಾರಿತ್ರಿಕ ಶರಣಮೇಳವನ್ನು ನಡೆಸಲಾಯಿತು, ಮೊತ್ತ ಮೊದಲನೆಯ ಚಾರಿತ್ರಿಕ ಎರಡೂವರೆ ಲಕ್ಷಕ್ಕೂ ಮಿಕ್ಕಿದ ಜನ ಸಮೂಹವನ್ನ ಆಕರ್ಷಿಸಿತು.
 
ಇಂತಹ ಶರಣ ಮೇಳವು ಪರ್ತಿವರ್ಷ ಬಸವ ಧರ್ಮ ಸಂಸ್ಥಪಾನ ದಿನದ ಅಂಗವಾಗಿ ನಡೆಯುತ್ತಲಿದ್ದು 24 ನೇ ಶರಣ ಮೇಳ 2011 ರ ಜನವರಿ 11, 12, 13, 14, ಮತ್ತು 15 ರಂದು ನಡೆಯುವುದು ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ಇಷ್ಟ ಲಿಂಗ ಪೂಜೆ, ಗಣಲಿಂಗ ದರ್ಶನ ಶರಣ ಮೇಳದ ಪ್ರಮುಖ ದಾರ್ಮಿಕ ವಿಧಿಗಳು. ಜನವರಿ 14 ರಂದು ಬೆಳ್ಳಗೆ 10 ರಿಂದ ಧ್ವಜಾರೋಹಣ, ಪಥ ಸಂಚಲನ, ಸಮುದಾಯ ಪ್ರಾರ್ಥನೆ ಇರುತ್ತದೆ. ( ಐದು ದಿನ ಭಾಗವಹಿಸಲು ಆಗದೆ ಇದ್ದವರು ಸಮುದಾಯ ಪ್ರಾರ್ಥನೆಯಲ್ಲಿ ಭಾಗವಹಿಸುವದು ಕಡ್ದಾಯವಾಗಿರುತ್ತದೆ) ಸಂಜೆ ೭ ಗಂಟೆಗೆ ಸಾಮೂಹಿಕ ಇಷ್ಟಲಿಂಗಾರ್ಚನೆ ಇರುತ್ತದೆ. ಇವುಗಳಲ್ಲಿ ಶರಣ ವ್ರತಿಗಳು ಭಾಗವಹಿಸುವುದು ಕಡ್ದಾಯವಾಗಿರುತ್ತದೆ, 40, 30, 20, ಮತ್ತು 10 ಶರಣವ್ರತವನ್ನ ಅವರವರ ಸಮಯವಕಶಕ್ಕೆ ತಕ್ಕಂತೆ ಸ್ವೀಕರಿಸಿ, ಆಚರಿಸಿ ಯಾರು ಬೇಕಾದರೂ ಶರಣ ಮೇಳದಲ್ಲಿ ಭಾಗಿಗಳಾಗಬಹುದು. ಚಿಂತನ ಗೋಷ್ಠಿ ಉಪನ್ಯಾಸ, ಧಾರ್ಮಿಕ ರಸಪ್ರಶ್ನೆ ಮುಂತಾದ ಕಾರ್ಯಕ್ರಮಗಳಿಂದ ಕೂಡಿದ ಶರಣ ಮೇಳವು ಉತ್ತಮ ಜ್ಞಾನ ದಾಸೋಹದೊಡನೆ, ಅನ್ನದಾಸೋಹವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ, ದಿ 11 ಮತ್ತು 12 ರಂದು ಧರ್ಮ ಚಿಂತನಗೋಷ್ಠಿ ನಡಿಯುತತಿದ್ದು ಸಮಾಜ- ಧರ್ಮಗಳಿಗೆ ಸಂಭಂದಿಸಿದಂತೆ ಮುಕ್ತ ಚರ್ಚೆಗೆ ಅವಕಾಶವಿರುತ್ತದೆ.
 
ಮುಸಲ್ಮಾನ್ ಧರ್ಮೀಯರಿಗೆ ಮೆಕ್ಕಾ, ಸಿಖ್ಖರಿಗೆ ಅಮೃತಸರ, ಬೌದ್ದ ರಿಗೆ ಬುದ್ದಗಯೇ ಧರ್ಮಕ್ಷೆತ್ರಗಲ್ಗಿರುವಂತೆ ಧರ್ಮಾನುಯಾಯಿಗಳಿಗೆ ವಿಶ್ವಗುರು ಬಸವಣ್ಣನವರ ಐಕ್ಯಸ್ಥಳ ಕೂಡಲ ಸಂಗಮವೇ ಧರ್ಮಕ್ಷೇತ್ರ ತನ್ನ ಜೀವಮಾನದಲ್ಲಿ ಆಯುಷ್ಯ ಅರೋಗ್ಯ ಇರುವವರೆಗೆ ಎಷ್ಟು ಸಲ ಒಬ್ಬ ವ್ಯಕ್ತಿ ಶರಣ ಮೇಳದಲ್ಲಿ ಭಾಗಿಯಗುತ್ತಾನೋ ಅತ ನಿಜಕ್ಕೂ ಹೆಚ್ಚು ಪುಣ್ಯವಂತ. ಪ್ರತಿಯೊಬ್ಬ ಬಸವ ಧರ್ಮಾನುಯಾಯಿಯು ತನ್ನ ಜೀವಮಾನದಲ್ಲಿ ಎಷ್ಟೇ ಅನಾನುಕುಲತೆ ಇದ್ದರೂ ಒಮ್ಮೆಯಾದರೂ ಶರಣ ಮೇಳದ (ಜನವರಿ ೧೪ ರಂದು ನಡೆಯುವ) ಸಮುದಾಯ ಪ್ರಾರ್ಥನೆಯಲ್ಲಿ ಭಾಗಿಯಾಗಿ ಗಣಲಿಂಗ ದರ್ಷಣ ಪಡೆದು ತನ್ನ ಧಾರ್ಮಿಕ ಅನುಯಾಯಿತ್ವವನ್ನು ಸ್ವಿಕರಿಸದೇ ಇದ್ದರೆ ಅವನು ಪ್ರಾಮಾಣಿಕ ಲಿಂಗಾಯತನಗುವನು. ಇಂತಹ ಪವಿತ್ರ ಮೇಳಕ್ಕೆ ಸಹೋದರ ಭಾವನೆಯಿದಂದ ಎಲ್ಲಾ ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಾಲ್ಗೊಳ್ಳಿರಿ.
 
 
"https://kn.wikipedia.org/wiki/ಕೂಡಲ_ಸಂಗಮ" ಇಂದ ಪಡೆಯಲ್ಪಟ್ಟಿದೆ