ಕೃಷ್ಣಾ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 41 interwiki links, now provided by Wikidata on d:q193499 (translate me)
No edit summary
೩ ನೇ ಸಾಲು:
 
==ಜಲಾನಯನ ಪ್ರದೇಶ==
 
ಕೃಷ್ಣಾ ನದಿಯ ಒಟ್ಟು ಜಲಾನಯನ ಪ್ರದೇಶ ಸುಮಾರು ೨,೬೦,೦೦೦ ಚದುರು ಕಿ.ಮಿ. ಇರುತ್ತದೆ. ಇದರಲ್ಲಿ ಮಹಾರಾಷ್ಟ್ರದಲ್ಲಿ ೬೮,೦೦೦ ಚ.ಕಿ.ಮಿ.,ಕರ್ನಾಟಕದಲ್ಲಿ ೧,೧೨,೬೦೦ ಚ.ಕಿ.ಮಿ. ಹಾಗು ಆಂಧ್ರ ಪ್ರದೇಶದಲ್ಲಿ ೭೫,೬೦೦ ಚ.ಕಿ.ಮಿ. ವ್ಯಾಪಿಸಿದೆ.
 
 
==ಆಣೆಕಟ್ಟುಗಳು==
 
ಮಹಾರಾಷ್ಟ್ರದಲ್ಲಿ ಹರಿಯುತ್ತಿರುವ ನದೀಭಾಗಕ್ಕೆ ಕೊಯ್ನಾದ ಹತ್ತಿರ, ಕರ್ನಾಟಕದಲ್ಲಿ ಆಲಮಟ್ಟಿ ಮತ್ತು ನಾರಾಯಣಪುರಗಳಲ್ಲಿ ಹಾಗೂ ಆಂಧ್ರಪ್ರದೇಶದಲ್ಲಿ [[ಶ್ರೀಶೈಲಂ]] ಮತ್ತು [[ನಾಗಾರ್ಜುನಸಾಗರ]]ದಲ್ಲಿ ಕೃಷ್ಣಾಗೆ ಆಣೆಕಟ್ಟುಗಳನ್ನು ಕಟ್ಟಲಾಗಿದೆ.
 
 
==ಶಿಲಾನ್ಯಾಸ==
 
[[೧೯೬೨]]ರಲ್ಲಿ [[ಭಾರತ]]‍ದ [[ಪ್ರಧಾನ ಮಂತ್ರಿ]]‍ಯಾದ ಶ್ರೀ [[ಲಾಲ ಬಹಾದ್ದೂರ ಶಾಸ್ತ್ರಿ]]‍ಯವರು '''ಕೃಷ್ಣಾ ಮೇಲ್ದಂಡೆ ಯೋಜನೆ'''ಗೆ ಅಡಿಗಲ್ಲನ್ನಿಟ್ಟರು. ಈ ಯೋಜನೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಜಲಾಶಯ ಹಾಗು ಅದರ ಕೆಳಗೆ ಸುಮಾರು ೭೦ ಕಿ.ಮಿ. ದೂರದಲ್ಲಿ ಕೃಷ್ಣಾ ಹಾಗು [[ಮಲಪ್ರಭಾ]]ಗಳ ಸಂಗಮದ ಕೆಳಭಾಗದಲ್ಲಿ '''ನಾರಾಯಣಪುರ ಜಲಾಶಯ'''ಗಳಿವೆ. [[೧೯೯೪]]ರಲ್ಲಿ '''ಕೃಷ್ಣಾ ಭಾಗ್ಯ ಜಲ ನಿಗಮ'''ದ ರಚನೆಯಾಯಿತು. ಆಬಳಿಕ ಕೆಲಸ ಚುರುಕಾಗಿ ನಡೆದರೂ ಸಹ ಆಂಧ್ರ ಹಾಗು ಮಹಾರಾಷ್ಟ್ರ ರಾಜ್ಯಗಳು [[ಸರ್ವೋಚ್ಚ ನ್ಯಾಯಾಲಯ]]‍ದಲ್ಲಿ ತಕರಾರು ಮಾಡಿದ್ದರಿಂದ, ಆಣೆಕಟ್ಟಿನ ಪೂರ್ಣಪ್ರಮಾಣದ ಎತ್ತರವಾದ ೫೨೪ ಮೀಟರುಗಳ ಬದಲಾಗಿ ೫೧೯.೬೦ ಮೀಟರುಗಳಿಗೆ ಕಾಮಗಾರಿಯನ್ನು ಮಿತಿಗೊಳಿಸಲಾಗಿದೆ.
 
 
==ಮುಳುಗಡೆ ಪ್ರದೇಶ==
 
ಆಲಮಟ್ಟಿಯಿಂದ ಹಿಪ್ಪರಗಿವರೆಗೆ ೧೩೬ ಕಿ.ಮಿ.ವರೆಗೆ ಹಿನ್ನೀರು ವ್ಯಾಪಿಸಿದ್ದು ೨೦೧ ಗ್ರಾಮಗಳು ಹಾಗು [[ಬಾಗಲಕೋಟೆ]]ಯ ಬಹುತೇಕ ಭಾಗ ಮುಳುಗಡೆಯಾಗಿವೆ.
 
 
==ಜಲ ಸಂಗ್ರಹ==
 
ಹಿಪ್ಪರಗಿಯಲ್ಲಿ ೧೩ ಟಿ.ಎಮ್.ಸಿ., ಆಲಮಟ್ಟಿಯಲ್ಲಿ ೧೨೩ ಟಿ.ಎಮ್.ಸಿ. (೫೧೯.೬೦ ಮೀಟರವರೆಗೆ) ಹಾಗು ನಾರಾಯಣಪುರದಲ್ಲಿ ೩೭ ಟಿ.ಎಮ್.ಸಿ. ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ [[ಬಚಾವತ್ ಆಯೋಗ]]‍ದ ಸ್ಕೀಮ್ ಎ ದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀಡಲಾದ ೧೭೩ ಟಿ.ಎಮ್.ಸಿ. ನೀರಿನ ಪೂರ್ಣ ಸಂಗ್ರಹವಾದಂತಾಗಿದೆ.
 
 
==ನೀರಾವರಿ ಪ್ರದೇಶ==
 
ಪ್ರಥಮ ಘಟ್ಟದಲ್ಲಿ ೧೧೯ ಟಿ.ಎಮ್.ಸಿ. ನೀರನ್ನು ಬಳಸಿಕೊಂಡು ಸುಮಾರು ೬,೨೨,೦೦೦ ಹೆಕ್ಟೇರ್ ಜಮೀನಿಗೆ ಹಾಗು ದ್ವಿತೀಯ ಘಟ್ಟದಲ್ಲಿ ಸ್ಕೀಮ್ ಬಿ ಯಲ್ಲಿ ದೊರೆಯುವ ನೀರನ್ನೂ ಸಹ ಬಳಸಿಕೊಂಡು ಹೆಚ್ಚಿನ ೩,೯೭,೦೦೦ ಹೆಕ್ಟೇರ್ ಜಮೀನಿಗೆ ನೀರಾವರಿ ಒದಗಿಸುವ ಉದ್ದೇಶವಿದೆ.
 
 
==ವಿದ್ಯುತ್ ಉತ್ಪಾದನೆ==
 
೧೫ ಮೆಗಾವ್ಯಾಟ್ ಉತ್ಪಾದಿಸುವ ೧ ಹಾಗು ೫೫ ಮೆಗಾವ್ಯಾಟ್ ಉತ್ಪಾದಿಸುವ ೩ ಘಟಕಗಳನ್ನು ಸ್ಥಾಪಿಸಲಾಗಿದೆ.
 
 
==ವೆಚ್ಚ==
 
ಜಲಾಶಯ ನಿರ್ಮಾಣಕ್ಕಾಗಿ ೫೫೦೦ ಕೋಟಿ, ಸಂಪರ್ಕ ವ್ಯವಸ್ಥೆಗಾಗಿ ೪೦೦ ಕೋಟಿ ಹಾಗು ಪುನರ್ವಸತಿಗಾಗಿ ೨೧೦೦ ಕೋಟಿ ರೂಪಾಯಿಗಳಷ್ಟು ವೆಚ್ಚವನ್ನು ಮಾಡಲಾಗಿದೆ.
 
 
==ಉದ್ಘಾಟನೆ==
 
೨೧ [[ಅಗಸ್ಟ]] [[೨೦೦೬]]ರಂದು [[ಭಾರತ]]‍ದ ಆಗಿನ[[ರಾಷ್ಟ್ರಪತಿ]]‍ಯಾಗಿದ್ದ ಶ್ರೀ [[ಅಬ್ದುಲ್ ಕಲಾಂ]] ಅವರು [[ಲಾಲ ಬಹಾದ್ದೂರ ಶಾಸ್ತ್ರಿ]] ಎಂದು ನಾಮಕರಣಗೊಂಡ ಆಲಮಟ್ಟಿ ಜಲಾಶಯವನ್ನು ರಾಷ್ಟ್ರಕ್ಕೆ ಅರ್ಪಿಸಿದರು.
 
 
==ಪ್ರೇಕ್ಷಣೀಯ ಸ್ಥಳ==
 
ಆಲಮಟ್ಟಿಯಿಂದ ಸುಮಾರು ೪೦ ಕಿ.ಮಿ.ದೂರದಲ್ಲಿರುವ [[ಕೂಡಲ ಸಂಗಮ]]‍ವು [[ಬಸವೇಶ್ವರ|ಬಸವಣ್ಣನವರ]] ಐಕ್ಯ ಸ್ಥಳವಾಗಿದ್ದು ಕರ್ನಾಟಕ ಸರಕಾರವು ಇದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಗೊಳಿಸಿದೆ.
 
"https://kn.wikipedia.org/wiki/ಕೃಷ್ಣಾ_ನದಿ" ಇಂದ ಪಡೆಯಲ್ಪಟ್ಟಿದೆ