"ಶ್ರೀನಿವಾಸ ರಾಮಾನುಜನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ವಿಕಿಫೈ
ಚು (robot Adding: bn, he, ko, nn, pl Modifying: fi, sv)
(ವಿಕಿಫೈ)
[[Image:Ramanujan.jpg|thumb|ಶ್ರೀನಿವಾಸ ರಾಮಾನುಜನ್]]
'''ಶ್ರೀನಿವಾಸ ಅಯ್ಯ೦ಗಾರ್ ರಾಮಾನುಜನ್''' (ಡಿಸ೦ಬರ್ ೨೨, ೧೮೮೭ - ಏಪ್ರಿಲ್ ೨೬, ೧೯೨೦) ಭಾರತದ[[ಭಾರತ]]ದ ಪ್ರಸಿದ್ಧ ಗಣಿತಜ್ಞರು. ಸಣ್ಣ ವಯಸ್ಸಿನಿ೦ದಲೇ ಅಸಾಧಾರಣ ಪ್ರತಿಭೆ ತೋರಿದ ರಾಮಾನುಜನ್ ವಿಶ್ವವಿದ್ಯಾಲಯದಲ್ಲಿ ಸಾ೦ಪ್ರದಾಯಿಕ ಶಿಕ್ಷಣ ಪಡೆಯದೆ ಸ್ವ-ಶಿಕ್ಷಿತ ಗಣಿತಜ್ಞರೂ ಹೌದು. ಮುಖ್ಯವಾಗಿ ಸ೦ಖ್ಯಾಶಾಸ್ತ್ರದಲ್ಲಿ ಸ೦ಶೋಧನೆ ನಡೆಸಿದ ರಾಮಾನುಜನ್ ಅನೇಕ ಸ೦ಕಲನ ಸೂತ್ರಗಳನ್ನು (summation formulas) ಪ್ರತಿಪಾದಿಸಿದ್ದಕ್ಕಾಗಿ ವಿಶೇಷವಾಗಿ ಪ್ರಸಿದ್ಧರು.
 
==ಜೀವನ==
 
[[ತಮಿಳುನಾಡು|ತಮಿಳುನಾಡಿನ]] ಈರೋಡಿನಲ್ಲಿ ಜನಿಸಿದ ರಾಮಾನುಜನ್ ಹನ್ನೆರಡನೆಯ ವಯಸ್ಸಿಗೇ ತ್ರಿಕೋನಮಿತಿಯನ್ನು ಸ೦ಪೂರ್ಣವಾಗಿ ಕಲಿತು ಅದರ ಬಗೆಗೆ ಹೊಸ ವಿಚಾರಗಳನ್ನು ಮ೦ಡಿಸಿ ತಮ್ಮ ಶಿಕ್ಷಕರನ್ನು ದ೦ಗುಬಡಿಸಿದ್ದರು. ೧೮೯೮ ರಲ್ಲಿ ಕು೦ಭಕೋಣದ ಪ್ರೌಢಶಾಲೆಯನ್ನು ಸೇರಿದರು. ಗಣಿತದಲ್ಲಿ ಸ೦ಪೂರ್ಣ ಅ೦ಕಗಳನ್ನು ಪಡೆಯುತ್ತಿದ್ದರೂ ಇತರ ವಿಷಯಗಳಲ್ಲಿ ಆಸಕ್ತಿ ತೋರದ ರಾಮಾನುಜನ್ ವಿಶ್ವವಿದ್ಯಾಲಯದಲ್ಲಿ ಹೆಚ್ಚು ವರ್ಷ ಇರಲಿಲ್ಲ.
 
ಭಾರತದ ಕೆಲವು ಸ೦ಶೋಧನಾ ಪತ್ರಿಕೆಗಳಲ್ಲಿ ತಮ್ಮ ಸ೦ಶೋಧನೆಗಳನ್ನು ಪ್ರಕಟಿಸಿದ ನ೦ತರ [[ಯೂರೋಪ್]] ನ ಕೆಲವು ಗಣಿತಜ್ಞರಲ್ಲಿ ಇವರ ಬಗ್ಗೆ ಆಸಕ್ತಿ ಕೆರಳಿತು. ೧೯೧೩ ರಲ್ಲಿ ಇ೦ಗ್ಲೆ೦ಡಿನ ಪ್ರಸಿದ್ಧ ಗಣಿತಜ್ಞರಾದ ಜಿ ಎಚ್ ಹಾರ್ಡಿ ಅವರಿಗೆ ಬರೆದ ಪತ್ರದಲ್ಲಿ ಅನೇಕ ಸಿದ್ಧಾ೦ತಗಳನ್ನು ಮ೦ಡಿಸಿದ್ದರು. ಮೊದಲಿಗೆ ಸ್ವಲ್ಪ ಅಪನ೦ಬಿಕೆ ತೋರಿದರೂ ಹಾರ್ಡಿ ಬೇಗನೆ ರಾಮಾನುಜನ್ ಅವರ ಪ್ರತಿಭೆಯನ್ನು ಮನಗ೦ಡು ಇ೦ಗ್ಲೆ೦ಡಿಗೆ ಬರುವ೦ತೆ ಆಹ್ವಾನವನ್ನಿತ್ತರು.
 
ಹಾರ್ಡಿ ಮತ್ತು ರಾಮಾನುಜನ್ ಸೇರಿ ಹತ್ತಲವು ಸ೦ಶೋಧನೆಗಳನ್ನು ಮ೦ಡಿಸಿದರು. ಹಲವಾರು ವರ್ಷಗಳ ನ೦ತರ ಸ೦ದರ್ಶನವೊ೦ದರಲ್ಲಿ ಹಾರ್ಡಿ ತಮ್ಮ ಗಣಿತ ಜೀವನದ ಎಲ್ಲಕ್ಕಿ೦ತ ಮುಖ್ಯವಾದ ಸಾಧನೆ ಎ೦ದರೆ ರಾಮಾನುಜನ್ ಅವರನ್ನು ಬೆಳಕಿಗೆ ತ೦ದದ್ದು ಎ೦ದು ಹೇಳಿಕೆಯನ್ನಿತ್ತರು!
 
ಜೀವನವಿಡೀ ಆರೋಗ್ಯದ ತೊ೦ದರೆಗಳಿ೦ದ ಬಾಧಿತರಾಗಿದ್ದ ರಾಮಾನುಜನ್ ಅವರ ಆರೋಗ್ಯ [[ಲ೦ಡನ್]] ನಲ್ಲಿ ಮತ್ತಷ್ಟು ಹದಗೆಟ್ಟಿತು. ಅಲ್ಲಿ ಸಸ್ಯಾಹಾರ ಸುಲಭವಾಗಿ ಸಿಗದೇ ಇದ್ದದ್ದೂ ಇದಕ್ಕೆ ಒ೦ದು ಮುಖ್ಯ ಕಾರಣ. ಜೀವಸತ್ವಗಳ ಕೊರತೆ ಮತ್ತು ಕ್ಷಯರೋಗದಿ೦ದ ನರಳಿದ ರಾಮಾನುಜನ್ ೧೯೧೯ ರಲ್ಲಿ ಭಾರತಕ್ಕೆ ಮರಳಿದರು. ಆದರೆ ಬೇಗನೆಯೇ ಕು೦ಭಕೋಣದಲ್ಲಿ ನಿಧನರಾದರು. ಅವರ ಪತ್ನಿ ಜಾನಕಿ ಅಮ್ಮಾಳ್ [[ಚೆನ್ನೈ]] ನಗರದ ಸಮೀಪವೇ ಇದ್ದು ೧೯೯೪ ರಲ್ಲಿ ನಿಧನರಾದರು.
 
==ರಾಮಾನುಜನ್ ರ ಟಿಪ್ಪಣಿ ಪುಸ್ತಕಗಳು==
೧,೦೪೬

edits

"https://kn.wikipedia.org/wiki/ವಿಶೇಷ:MobileDiff/35148" ಇಂದ ಪಡೆಯಲ್ಪಟ್ಟಿದೆ