ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೨೭: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
creating
 
No edit summary
೧ ನೇ ಸಾಲು:
[[Image:Corcovado_statue01_2005-03-14.jpg|thumb|180px|[[ರಿಯೊ ಡಿ ಜನೈರೊ]] ನಗರದಲ್ಲಿ ೭೧೦ ಮೀಟರ್ ಎತ್ತರದ ಕೊರ್ಕೊವಾಡೊ ಪರ್ವತದ ಮೇಲೆ ಸ್ಥಿತ '''ವಿಮೋಚಕ ಕ್ರಿಸ್ತ'''ನ ವಿಶ್ವ ವಿಖ್ಯಾತ ಪ್ರತಿಮೆ.]]
 
[[ದಕ್ಷಿಣ ಅಮೇರಿಕ]]ದ ಜನಸಂಖ್ಯೆ ಮತ್ತು ವಿಸ್ತೀರ್ಣಗಳ ಆಧಾರದ ಮೇಲೆ ಅತಿ ದೊಡ್ಡ ದೇಶ '''ಬ್ರೆಜಿಲ್'''. ದಕ್ಷಿಣ ಅಮೇರಿಕದ ಮಧ್ಯದಿಂದ [[ಅಟ್ಲಾಂಟಿಕ್ ಮಹಾಸಾಗರ]]ದ ವರೆಗೆ ಹಬ್ಬಿರುವ ಈ ದೇಶ ಯುರುಗ್ವೆ, [[ಅರ್ಜೆಂಟೀನ]], [[ಪೆರಗ್ವೆ]], ಬೊಲಿವಿಯಾ, ಪೆರು, ಕೊಲಂಬಿಯಾ, [[ವೆನೆಜುವೆಲಾ]], ಗಯಾನಾ, ಸುರಿನಾಮ್, ಮತ್ತು ಫ್ರೆಂಚ್ ಗಯಾನಾಗಳ ಜೊತೆ ಗಡಿಯನ್ನು ಹೊಂದಿದೆ. [[ಈಕ್ವೆಡಾರ್]] ಮತ್ತು [[ಚಿಲಿ]] ದೇಶಗಳನ್ನು ಹೊರತುಪಡಿಸಿ [[ದಕ್ಷಿಣ ಅಮೇರಿಕ]]ದ ಎಲ್ಲ ದೇಶಗಳ ಜೊತೆಯೂ ಗಡಿಯನ್ನು ಹೊಂದಿದೆ. ತನ್ನ ಬೃಹತ್ ನೈಸರ್ಗಿಕ ಸಂಪನ್ಮೂಲಗಳು ಮತ್ತು ಅಗ್ಗವಾದ ಕಾರ್ಮಿಕರ ದೆಸೆಯಿಂದ ದಕ್ಷಿಣ ಅಮೆರಿಕದ ಅತಿ ಪ್ರಮುಖ ಆರ್ಥಿಕ ಶಕ್ತಿ ಹಾಗೂ ಪ್ರಾದೇಶಿಕ ನಾಯಕತ್ವವಾಗಿ ಬೆಳೆದಿದೆ. ಪೋರ್ಚುಗಲ್ ದೇಶದ ವಸಾಹತು ಆಗಿದ್ದ ಕಾರಣ [[ಪೋರ್ಚುಗೀಸ್ ಭಾಷೆ|ಪೋರ್ಚುಗೀಸ್]] ಬ್ರೆಜಿಲ್ ದೇಶದ ಅಧಿಕೃತ ಭಾಷೆಯಾಗಿದೆ. ಪ್ರಪಂಚದ ಎರಡನೇ ಅತಿ ದೊಡ್ಡ [[ಕ್ರೈಸ್ತ ಧರ್ಮ|ಕ್ರೈಸ್ತ ಧರ್ಮೀಯರ]] ದೇಶವೂ ಇದಾಗಿದೆ.