ಕೆಫೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೪ ನೇ ಸಾಲು:
 
==ಅತಿಸೇವನೆ==
 
ಕೆಫೀನ್ ಅನ್ನು ಹೆಚ್ಚು ಪ್ರಮಾಣಗಳಲ್ಲಿ ಸೇವಿಸಿದಾಗ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. "ಕೆಫೀನಿಸಮ್" ಎಂಬ ಸ್ಥಿತಿ ಸೇವಿಸುವವರಲ್ಲಿ ಉಂಟಾಗುತ್ತದೆ - ಕೆಫೀನ್ ನ "ಚಟ" ಆರಂಭವಾಗುವುದಲ್ಲದೆ, ಆತಂಕ, ಅಸಹನೆ, ಮಾಂಸಖಂಡಗಳ ಅನೈಚ್ಛಿಕ ಅದುರುವಿಕೆ (muscle twitching), ನಿದ್ರಾಹೀನತೆ ಮತ್ತು ಹೃದಯ ಬಡಿತದಲ್ಲಿ ಏರುಪೇರು - ಮೊದಲಾದ ಪರಿಣಾಮಗಳು ಕಂಡುಬರತೊಡಗುತ್ತವೆ. ಇಷ್ಟಲ್ಲದೆ, ಕೆಫೀನ್ ಜಠರದಲ್ಲಿ ಆಮ್ಲವಸ್ತುಗಳ ಉತ್ಪತ್ತಿಯನ್ನು ಪ್ರಚೋದಿಸುತ್ತದೆ. ಹೀಗಾಗಿ, ದೀರ್ಘ ಕಾಲ ಕೆಫೀನ್ ನ ಸೇವನೆಯನ್ನು ಹೆಚ್ಚಿನ ಪ್ರಮಾಣಗಳಲ್ಲಿ ಮಾಡಿದ್ದಾದರೆ ಅಸಿಡಿಟಿ, ಅಲ್ಸರ್ ಗಳು ಮೊದಲಾದ ತೊಂದರೆಗಳು ಆರಂಭವಾಗುವ ಸಾಧ್ಯತೆ ಹೆಚ್ಚುತ್ತದೆ.
 
ಕೆಫೀನ್ ನ ಅತಿಸೇವನೆಗೆ ಸಂಬಂಧಪಟ್ಟ ನಾಲ್ಕು ಮಾನಸಿಕ ತೊಂದರೆಗಳಿವೆ: ಕೆಫೀನ್ ಚಟ, ಕೆಫೀನ್ ಗೆ ಸಂಬಂಧಪಟ್ಟ ಆತಂಕ ಮನೋಭಾವ, ಕೆಫೀನ್ ಗೆ ಸಂಬಂಧಪಟ್ಟ ನಿದ್ರಾಹೀನತೆ, ಮತ್ತು ಇತರ ತೊಂದರೆಗಳು.
 
 
[[Category:ರಸಾಯನಶಾಸ್ತ್ರ]]
"https://kn.wikipedia.org/wiki/ಕೆಫೀನ್" ಇಂದ ಪಡೆಯಲ್ಪಟ್ಟಿದೆ