ಕೆಫೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೦ ನೇ ಸಾಲು:
 
==ಚರಿತ್ರೆ==
[[Image:CoffeePalestineStereo.jpg|thumb|right|220px|೧೯೦೦ ರ ಸುಮಾರಿನಲ್ಲಿ ಪ್ಯಾಲೆಸ್ಟೈನ್ ನ ಒಂದು ಕಾಫಿ ಮನೆ]]
 
ಮಾನವರು ಶಿಲಾಯುಗದ ಕಾಲದಿಂದಲೂ ಕೆಫೀನ್ ಅನ್ನು ಸೇವಿಸುತ್ತಾ ಬಂದಿದ್ದಾರೆ. ಕೆಲವು ಗಿಡಗಳ ಬೀಜ, ತೊಗಟೆ ಅಥವಾ ಎಲೆಗಳನ್ನು ಜಗಿಯುವುದರಿಂದ ಸುಸ್ತು ಕಡಿಮೆಯಾಗಿ ಮನಸ್ಸಿಗೆ ಮುದ ದೊರಕುತ್ತದೆಂಬುದನ್ನು ಜನ ಅರಿತುಕೊಂಡರು. ನಂತರ, ಈ ಗಿಡಗಳನ್ನು ಬಿಸಿ ನೀರಿನಲ್ಲಿ ಅದ್ದಿ ತೆಗೆದ ನಂತರ ಸೇವಿಸುವ ಮೂಲಕ ಅವುಗಳ ಪ್ರಭಾವ ಹೆಚ್ಚುತ್ತದೆ ಎಂಬುದನ್ನು ಅರಿತುಕೊಂಡರು.
 
ಕಾಫಿಯ ಮೊದಲ ಲಿಖಿತ ಉಲ್ಲೇಖ ದೊರಕುವುದು ೯ ನೆಯ ಶತಮಾನದ ಪರ್ಷಿಯನ್ ವೈದ್ಯ ಅಲ್-ರಾಜಿ ಅವರ ಲೇಖನಗಳಲ್ಲಿ. ೧೫೮೭ ರಲ್ಲಿ, ಅರಾಬಿಕ್ ಲೇಖಕ ಮಲಾಯೆ ಜಜೀರಿ ಕಾಫಿಯ ಚರಿತ್ರೆ ಮತ್ತು ಕಾನೂನಿಗೆ ಸಂಬಂಧಪಟ್ಟ ವಿವಾದಗಳ ಬಗ್ಗೆ ಒಂದು ಪುಸ್ತಕವನ್ನು ಸಂಪಾದಿಸಿದರು. ಈ ಪುಸ್ತಕದಲ್ಲಿನ ವಿವರದಂತೆ, ೧೫ ನೆಯ ಶತಮಾನ ಯೆಮೆನ್ ದೇಶದ ಸೂಫಿ ಸಂತರು ರಾತ್ರಿ ಪ್ರಾರ್ಥನೆಯ ಸಮಯ ಎಚ್ಚರವಿರುವುದಕ್ಕಾಗಿ ಸರ್ವೇಸಾಮಾನ್ಯವಾಗಿ ಕಾಫಿಯನ್ನು ಉಪಯೋಗಿಸುತ್ತಿದ್ದರು.
 
೧೬ ನೆಯ ಶತಮಾನದ ಕೊನೆಯ ಕಾಲಕ್ಕೆ [[ಈಜಿಪ್ಟ್]] ನಲ್ಲಿದ್ದ ಯುರೋಪಿಯನ್ ರೆಸಿಡೆಂಟ್ ಒಬ್ಬರು ಅಲ್ಲಿ ಕಾಫಿಯ ಉಪಯೋಗವನ್ನು ದಾಖಲಿಸಿದರು. ಯುರೋಪಿನಲ್ಲಿ ೧೭ನೆಯ ಶತಮಾನದಿಂದ ಮುಂದಕ್ಕೆ ಕಾಫಿಯ ಉಪಯೋಗ ಜನಪ್ರಿಯವಾಯಿತು. ಈ ಕಾಲಕ್ಕೆ ಕಾನ್‍ಸ್ಟಾಂಟಿನೋಪಲ್ ಮತ್ತು ವೆನೀಸ್ ನಗರಗಳಲ್ಲಿ "ಕಾಫಿ ಹೋಟಲುಗಳು" ಆರಂಭವಾದವು. ಅಲ್ಲಿಂದ ಮುಂದಕ್ಕೆ ಯುರೋಪಿಯನ್ ದೇಶಗಳ ಮುಖಾಂತರ ಕಾಫಿಯ ಉಪಯೋಗ ಪ್ರಪಂಚದಾದ್ಯಂತ ಹರಡಿತು.
 
ಕಾಫಿ ಮತ್ತು ಚಹಾ ಗಿಡಗಳಂತೆ, ಕೆಫೀನ್ ನ ಇನ್ನೊಂದು ಆಕರವಾದ ಕೋಲಾ ಬೀಜಗಳ ಉಪಯೋಗ ಸಹ ಪುರಾತನ ಕಾಲದಿಂದ ಪ್ರಚಲಿತದಲ್ಲಿದೆ. ಅನೇಕ ಪಶ್ಚಿಮ [[ಆಫ್ರಿಕ]]ದ ದೇಶಗಳಲ್ಲಿ ಹಸಿವಿನ ನಿಯಂತ್ರಣಕ್ಕೆ ಮತ್ತು ಸುಸ್ತಿನ ನಿವಾರಣೆಗಾಗಿ ಇದನ್ನು ಜಗಿಯಲಾಗುತ್ತದೆ. ಕೋಲಾ ಸಸ್ಯದ ಉತ್ಪನ್ನಗಳನ್ನು ಕೋಕಾ ಕಾಲ ಮೊದಲಾದ ತಂಪು ಪಾನೀಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
 
ಕೋಕೋ ಬೀಜಗಳ ಉಪಯೋಗದ ಮೊದಲ ಪುರಾವೆ ದೊರಕುವುದು ಕ್ರಿ.ಪೂ. ೬೦೦ ರ ಮಾಯಾ ನಾಗರೀಕತೆಯ ಒಂದು ಮಡಕೆಯಿಂದ. ಮಾಯಾ ನಾಗರೀಕತೆಯಲ್ಲಿ ಚಾಕೊಲೇಟ್ ಅನ್ನು ಶೊಕೋಟಲ್ ಎಂಬ ಕಹಿ ಮತ್ತು ಮಸಾಲೆ-ಭರಿತ ಪೇಯದ ರೂಪದಲ್ಲಿ ಸೇವಿಸಲಾಗುತ್ತಿತ್ತು. ಈ ಪೇಯ ದಣಿವಿನ ನಿವಾರಣೆಗೆ ಸಹಾಯ ಮಾಡುತ್ತದೆ ಎಂದು ನಂಬಲಾಗಿತ್ತು. ಇದು ಕೋಕೋ ಬೀಜಗಳ ಕೆಫೀನ್ ಮತ್ತು ಥಿಯೋಬ್ರೋಮೀನ್ ರಾಸಾಯನಿಕದ ದೆಸೆಯಿಂದ ಎಂದು ಊಹಿಸಲಾಗಿದೆ.
 
ಶುದ್ಧ ಕೆಫೀನ್ ಅನ್ನು ಮೊದಲ ಬಾರಿಗೆ ೧೮೧೯ ರಲ್ಲಿ ಬೇರ್ಪಡಿಸಲಾಯಿತು. ಇದನ್ನು ಸಾಧಿಸಿದವರು [[ಜರ್ಮನಿ|ಜರ್ಮನ್]] ರಸಾಯನಶಾಸ್ತ್ರಜ್ಞ ಫ್ರೆಡೆರಿಕ್ ರುಂಜ್.
 
ಪ್ರಪಂಚದಲ್ಲಿ ಒಟ್ಟು ವರ್ಷಕ್ಕೆ ೧,೨೦,೦೦೦ ಟನ್ ಗಳಷ್ಟು ಕೆಫೀನ್ ಸೇವನೆ ನಡೆಯುತ್ತದೆ.
 
[[Category:ರಸಾಯನಶಾಸ್ತ್ರ]]
"https://kn.wikipedia.org/wiki/ಕೆಫೀನ್" ಇಂದ ಪಡೆಯಲ್ಪಟ್ಟಿದೆ