"ಕೆಫೀನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

(+ಚರಿತ್ರ ಭಾಷಾಂತರ ಆರಂಭ)
 
ಮಾನವರು ಶಿಲಾಯುಗದ ಕಾಲದಿಂದಲೂ ಕೆಫೀನ್ ಅನ್ನು ಸೇವಿಸುತ್ತಾ ಬಂದಿದ್ದಾರೆ. ಕೆಲವು ಗಿಡಗಳ ಬೀಜ, ತೊಗಟೆ ಅಥವಾ ಎಲೆಗಳನ್ನು ಜಗಿಯುವುದರಿಂದ ಸುಸ್ತು ಕಡಿಮೆಯಾಗಿ ಮನಸ್ಸಿಗೆ ಮುದ ದೊರಕುತ್ತದೆಂಬುದನ್ನು ಜನ ಅರಿತುಕೊಂಡರು. ನಂತರ, ಈ ಗಿಡಗಳನ್ನು ಬಿಸಿ ನೀರಿನಲ್ಲಿ ಅದ್ದಿ ತೆಗೆದ ನಂತರ ಸೇವಿಸುವ ಮೂಲಕ ಅವುಗಳ ಪ್ರಭಾವ ಹೆಚ್ಚುತ್ತದೆ ಎಂಬುದನ್ನು ಅರಿತುಕೊಂಡರು.
 
ಕಾಫಿಯ ಮೊದಲ ಲಿಖಿತ ಉಲ್ಲೇಖ ದೊರಕುವುದು ೯ ನೆಯ ಶತಮಾನದ ಪರ್ಷಿಯನ್ ವೈದ್ಯ ಅಲ್-ರಾಜಿ ಅವರ ಲೇಖನಗಳಲ್ಲಿ. ೧೫೮೭ ರಲ್ಲಿ, ಅರಾಬಿಕ್ ಲೇಖಕ ಮಲಾಯೆ ಜಜೀರಿ ಕಾಫಿಯ ಚರಿತ್ರೆ ಮತ್ತು ಕಾನೂನಿಗೆ ಸಂಬಂಧಪಟ್ಟ ವಿವಾದಗಳ ಬಗ್ಗೆ ಒಂದು ಪುಸ್ತಕವನ್ನು ಸಂಪಾದಿಸಿದರು. ಈ ಪುಸ್ತಕದಲ್ಲಿನ ವಿವರದಂತೆ, ೧೫ ನೆಯ ಶತಮಾನ ಯೆಮೆನ್ ದೇಶದ ಸೂಫಿ ಸಂತರು ರಾತ್ರಿ ಪ್ರಾರ್ಥನೆಯ ಸಮಯ ಎಚ್ಚರವಿರುವುದಕ್ಕಾಗಿ ಸರ್ವೇಸಾಮಾನ್ಯವಾಗಿ ಕಾಫಿಯನ್ನು ಉಪಯೋಗಿಸುತ್ತಿದ್ದರು.
 
 
೧,೦೪೬

edits

"https://kn.wikipedia.org/wiki/ವಿಶೇಷ:MobileDiff/35087" ಇಂದ ಪಡೆಯಲ್ಪಟ್ಟಿದೆ