ಕೆಂಗಲ್ ಹನುಮಂತಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೦ ನೇ ಸಾಲು:
ಕೆಂಗಲ್ ಹನುಮಂತಯ್ಯನವರು ೧೯೫೨ ರಿಂದ ೧೯೫೬ ರವರೆಗೆ ಈಗಿನ ಕರ್ನಾಟಕ ರಾಜ್ಯದ ಹಿಂದಿನ ಸ್ವರೂಪವಾದ ಹಳೇಮೈಸೂರು ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದವರು. ಅವರ ದೂರದೃಷ್ಟಿ ಮತ್ತು [[ವಿಧಾನಸೌಧ]]ದ ನಿರ್ಮಾಣಕ್ಕಾಗಿ ಅವರನ್ನು ನೆನೆಯಲಾಗುತ್ತದೆ.
==ಜನನ, ವಿದ್ಯಾಭ್ಯಾಸ, ಹಾಗೂ ವೃತ್ತಿ ಜೀವನ==
ಸ್ವತಂತ್ರ ಭಾರತದ ಪ್ರಮುಖ ರಾಜಕೀಯ ಮುತ್ಸದ್ದಿಯೂ , ಧೀಮಂತ ರಾಜಕಾರಣಿಯೂ ಆದ ಶ್ರೀ ಕೆಂಗಲ್ ಹನುಮಂತಯ್ಯನವರು ಬೆಂಗಳೂರು ಜಿಲ್ಲೆಯಲ್ಲಿನ [[ಲಕ್ಕಪ್ಪನಪಳ್ಳಿ]]ಯಲ್ಲಿ ೧೯೦೮ರಲ್ಲಿ ಒಕ್ಕಲಿಗ ಕುಟುಂಬವೊಂದರಲ್ಲಿ ಹುಟ್ಟಿದರು.೧೯೩೦ ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನಿಂದ ಆರ್ಟ್ಸ್ ಪದವಿಯನ್ನು ಪಡೆದರು. ನಂತರ ಪೂನಾ ಲಾ ಕಾಲೇಜಿನಿಂದ ಎಲ್. ಎಲ್. ಬಿ. ಯನ್ನು ಮುಗಿಸಿದರು.ಅದೇ ವರ್ಷ ಅವರು ಬಾರ್ ಪ್ರವೇಶಿಸಿ ಸತತ ಯಶಸ್ವೀ ವೃತ್ತಿಗೆ ನಾಂದಿ ಹಾಡಿದರು. ಕಾಲೇಜುದಿನಗಳಲ್ಲಿಯೇ ಅವರು ತಮ್ಮ ಉತ್ಸಾಹ ಮತ್ತು ಚುರುಕುತನವನ್ನು ಪ್ರದರ್ಶಿಸಿದ್ದರು . ವಿದ್ಯಾರ್ಥಿಸಂಘ ಮತ್ತು ಕರ್ನಾಟಕಸಂಘಗಳಿಗೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಮಹಾತ್ಮಾ ಗಾಂಧಿಯವರಿಂದ ಪ್ರೇರಿತರಾಗಿ ಸ್ವಾತಂತ್ರ್ಯಹೋರಾಟಕ್ಕಿಳಿದು ಅದಮ್ಯಶಕ್ತಿ ಮತ್ತು ಅರ್ಪಣಾಮನೋಭಾವವನ್ನು ಮೆರೆದರು. ಈ ಹೋರಾಟದ ಅವಧಿಯಲ್ಲಿ ಅವರು ಒಂಬತ್ತಕಿಂತಲೂ ಹೆಚ್ಚುಬಾರಿ ಬಂಧನಕ್ಕೊಳಗಾದರು.
 
==ಸ್ವತಂತ್ರ್ಯಾನಂತರ ಕೆಂಗಲ್ ರು ಕೆಲವು ಜವಾಬ್ದಾರಿ ಹುದ್ದೆಗಳನ್ನು ನಿಭಾಯಿಸಿದರು==
ಸುದೀರ್ಘಹೋರಾಟದ ನಂತರ ಭಾರತವು ೧೯೪೭ ರ ಅಗಸ್ಟ್ ೧೫ ರಂದು ಸ್ವತಂತ್ರವಾಯಿತು. ರಾಜಕಾರಣದಲ್ಲಿ ಅದಾಗಲೇ ಸುವಿಖ್ಯಾತರಾಗಿದ್ದ ಕೆಂಗಲ್ ಹನುಮಂತರಾಯರನ್ನು ಒಮ್ಮತದಿಂದ 'ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ'ರನ್ನಾಗಿ ೧೯೪೮ ರಲ್ಲಿ ಆರಿಸಲಾಯಿತು. ೧೯೫೧ ರಲ್ಲಿ ಮೈಸೂರು ರಾಜ್ಯಕ್ಕೆ[[ ಕೆಂಗಲ್ ಹನುಮಂತಯ್ಯನ]]ನವರು ಎರಡನೆ ಮುಖ್ಯಮಂತ್ರಿಯಾದರು. ಜನರ ನಿಜವಾದ
"https://kn.wikipedia.org/wiki/ಕೆಂಗಲ್_ಹನುಮಂತಯ್ಯ" ಇಂದ ಪಡೆಯಲ್ಪಟ್ಟಿದೆ