ಕೃಷ್ಣರಾಜಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೪ ನೇ ಸಾಲು:
==ಧಾರ್ಮಿಕ ಹಿನ್ನಲೆ==
ತಾಲ್ಲೂಕಿನಲ್ಲಿ ಪ್ರಮುಖವಾಗಿ ಹಿಂದೂ, ಇಸ್ಲಾಂ, ಜೈನ, ಕ್ರೈಸ್ತ, ಮತ್ತು ಸಿಖ್ ಧರ್ಮೀಯರನ್ನು ಕಾಣಬಹುದಾಗಿದೆ. ಅವರವರ ಧರ್ಮದ ಆಚರಣೆಗಳು, ಪೂಜಾ ಸ್ಥಳಗಳನ್ನು ಸಹ ಇಲ್ಲಿ ಕಾಣಬಹುದಾಗಿದೆ.
ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ [[ಕಾಪನಹಳ್ಳಿ ಗವಿಮಠ]]ದಲ್ಲಿ ೧೩ನೆಯ ಶತಮಾನದಲ್ಲಿದ್ದ ಪವಾಡಪುರುಷ ಎನಿಸಿಕೊಂಡಿದ್ದ [[ಸ್ವತಂತ್ರ ಸಿದ್ದಲಿಂಗೇಶ್ವರಸಿದ್ದಲಿಂಗೇಶ್ವರರು]]ರು ಇಲ್ಲಿ ಐಕ್ಯವಾಗಿದ್ದಾರೆ ಎನ್ನಲಾಗಿದ್ದು, ಅವರ ಗದ್ದುಗೆ ಸಹ ಇಲ್ಲಿದೆ. ಈ ಗದ್ದುಗೆ ಒಮ್ಮೆ ಅತಿವೃಷ್ಟಿಯಿಂದಾದ ಪ್ರವಾಹದಿಂದ ನಾಶವಾಗಿದ್ದು, ಇದೀಗ ಪುನರ್‌ನವೀಕರಣ ಗೊಂಡಿದೆ. ೧೫೦ ಅಂಕಣದ ಮೂಲ ಮಂಟಪವನ್ನು ಹೈದರಾಲಿ ಕಟ್ಟಿಸಿಕೊಟ್ಟ ಮತ್ತು ಸುಮಾರು ೯೦೦ ಎಕರೆಯಷ್ಟು ಭೂಮಿಯನ್ನು ಈ ಗದ್ದುಗೆಗೆ ಬಿಟ್ಟುಕೊಟ್ಟ ಎಂಬ ಬಗ್ಗೆ ದಾಖಲೆಗಳಿವೆ. ಪ್ರತಿವರ್ಷ ಮಾಘಮಾಸದಲ್ಲಿ ಇಲ್ಲಿ ಜಾತ್ರೆ ಮತ್ತು ರಥೋತ್ಸವಗಳು ನಡೆಯುತ್ತದೆ.
ತಾಲ್ಲೂಕು ಕೇಂದ್ರಕ್ಕೆ ಸಮೀಪದಲ್ಲಿ ತಾಲ್ಲೂಕಿನ ಜೀವನದಿ ಹೇಮಾವತಿಯ ತಟದಲ್ಲಿಯೇ ಇರುವ ಹೇಮಗಿರಿ ಕ್ಷೇತ್ರ ಪ್ರಸಿದ್ಧವಾದುದು. ವಿಷ್ಣುವು ವೈಕುಂಠದಲ್ಲಿ ಬೇಸರವಾದಾಗ ವಿಶ್ರಾಂತಿ ಪಡೆಯಲು ಇಲ್ಲಿಗೆ ಬರುತ್ತಿದ್ದ ಎಂಬ ಸ್ಥಳಗಥೆ ಇದೆ. ಜೊತೆಗೆ ಭೃಗು ಮಹರ್ಷಿಗಳು ಸಹ ಇಲ್ಲಿನ ಪ್ರಶಾಂತ ವಾತಾವರಣಕ್ಕೆ ಮನಸೋತು, ಕೆಲಕಾಲ ತಪೋನಿರತರಾಗಿದ್ದರು ಎಂದು ಪುರಾಣಕಥೆಗಳು ಹೇಳುತ್ತವೆ. ಪ್ರತಿವರ್ಷ ರಥಸಪ್ತಮಿಯ ದಿನ ಇಲ್ಲಿ ಕಲ್ಯಾಣ ವೆಂಕಟರಮಣ ಸ್ವಾಮಿಯ ರಥೋತ್ಸವ ಜರುಗುತ್ತದೆ. ಒಂದು ವಾರದ ಕಾಲ ಜಾತ್ರೆ ನಡೆಯುತ್ತದೆ. ಆದಿಚುಂಚನಗಿರಿ ಮಠದ ಶಾಖೆಯೊಂದು ಇಲ್ಲಿದೆ. ಇಲ್ಲಿನ ಕಲ್ಯಾಣ ವೆಂಕಟರಮಣಸ್ವಾಮಿ ಪ್ರೌಢಶಾಲೆಯ ನಿರ್ವಹಣೆಯನ್ನು ಮಠದ ವತಿಯಿಂದ ನಡೆಸಲಾಗುತ್ತಿದೆ. ಸಮೀಪದಲ್ಲಿ ಒಡೆಯರ ಕಾಲದಲ್ಲಿ ನಿರ್ಮಾಣವಾದ ಅಣೆಯ ಮೇಲಿಂದ ಧುಮ್ಮಿಕ್ಕುವ ಹೇಮಾವತಿ ಪುಟ್ಟ ಜಲಪಾತವನ್ನು ಸೃಷ್ಟಿಸಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದಾಳೆ. ಇಲ್ಲಿನ ನದಿಯ ಮಧ್ಯದ ನಡುಗಡ್ಡೆಯಲ್ಲಿ ಸಣ್ಣ ಪ್ರಮಾಣದ ಪಕ್ಷಿಧಾಮವೇ ಕಂಡುಬರುತ್ತದೆ. ದೇಶ ವಿದೇಶಗಳ ವಿವಿಧ ಜಾತಿಯ ಪಕ್ಷಿಗಳು ಇಲ್ಲಿಗೆ ವಲಸೆ ಬಂದು ಗೂಡುಕಟ್ಟಿ ಮರಿಗಳನ್ನು ಮಾಡುತ್ತವೆ.
 
"https://kn.wikipedia.org/wiki/ಕೃಷ್ಣರಾಜಪೇಟೆ" ಇಂದ ಪಡೆಯಲ್ಪಟ್ಟಿದೆ