ಕೃಷ್ಣ ಜನ್ಮಾಷ್ಟಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ವರ್ಗ:ಹಿಂದೂ ಧರ್ಮ > ಹಿಂದೂ ಧರ್ಮದ ಹಬ್ಬಗಳು
ಚುNo edit summary
೧ ನೇ ಸಾಲು:
[[ಭಾರತ|ಭಾರತದಲ್ಲಿ]] ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ.
 
[[ಕೃಷ್ಣ ]] ಹುಟ್ಟಿದ ದಿನವನ್ನು '''ಕೃಷ್ಣ ಜನ್ಮಾಷ್ಟಮಿ''' ಅಥವಾ '''ಗೋಕುಲಾಷ್ಟಮಿ''' ಎಂದು ವೈಭವದಿಂದ ಆಚರಿಸಲಾಗುತ್ತದೆ.ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಾಗಿ ಶ್ರಾವಣ ಕೃಷ್ಣ ಅಷ್ಟಮಿಯಂದೂ,ಸೌರಮಾನ ರೀತಿಯಾಗಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನವೂ ಆಚರಿಸುತ್ತಾರೆ.
 
[[ಶ್ರಾವಣ]] ಮಾಸದಲ್ಲಿ ಬರುವ [[ಕೃಷ್ಣ ಪಕ್ಷ|ಕೃಷ್ಣ ಪಕ್ಷದ]] [[ಅಷ್ಟಮಿ]] ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. [[ಮಥುರಾ]] ಕೃಷ್ಣನ ಜನ್ಮಸ್ಥಳ. ಕೃಷ್ಣನು ಹುಟ್ಟಿದೊಡನೆ ಅವನನ್ನು ಸೋದರಮಾವನಾದ [[ಕಂಸ|ಕಂಸನಿಗೆ]] ತಿಳಿಯದಂತೆ [[ಗೋಕುಲ|ಗೋಕುಲಕ್ಕೆ]] ಕರೆದೊಯ್ಯಲಾಗುತ್ತದೆ. [[ದೇವಕಿ]] ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, [[ಯಶೋದೆ]] ಅವನನ್ನು ಸಾಕಿ ಬೆಳೆಸಿದ ತಾಯಿ.
 
 
ಕೃಷ್ಣಾಷ್ಟಮಿಯ ದಿನದಂದು ಮನೆ ಮತ್ತು ದೇವಾಯಲಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ವಿಧವಿಧವಾಗಿ ಅಲಂಕರಿಸಿ,ಬಗೆಬಗೆಯ ತಿಂಡಿಗಳನ್ನು ಮಾಡಿ [[ಕೃಷ್ಣ|ಬಾಲಕೃಷ್ಣನನ್ನು]]ಪೂಜಿಸಲಾಗುತ್ತದೆ. ಕೆಲವು ಕಡೆ, ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆ. [[ಉಡುಪಿ|ಉಡುಪಿಯಲ್ಲಿ]] ಈ ದಿನದಂದು ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.
 
 
"https://kn.wikipedia.org/wiki/ಕೃಷ್ಣ_ಜನ್ಮಾಷ್ಟಮಿ" ಇಂದ ಪಡೆಯಲ್ಪಟ್ಟಿದೆ