ಕೆ. ಎಸ್. ನರಸಿಂಹಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
'''ಕೆ.ಎಸ್.ನರಸಿಂಹಸ್ವಾಮಿ''' ([[ಜನವರಿ ೨೬]] [[೧೯೧೫]] - [[ಡಿಸೆಂಬರ್ ೨೮]] [[೨೦೦೩]])
 
[[ಮಂಡ್ಯ]] ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದ ಕೆಎಸ್‌ನ,{"ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ"} [[ಮೈಸೂರು|ಮೈಸೂರಿನಲ್ಲಿ]] ಇಂಟರ್ ಮೀಡಿಯಟ್ ಹಾಗೂ [[ಬೆ೦ಗಳೂರು|ಬೆಂಗಳೂರಿನಲ್ಲಿ]] ಸೆಂಟ್ರಲ್ ಕಾಲೇಜಿನಲ್ಲಿ ಬಿ. ಎ. (ಅಪೂರ್ಣ) ವ್ಯಾಸಾಂಗ ಮಾಡಿದರು ೧೯೩೭ರಲ್ಲಿ ಸರಕಾರಿ ಸೇವೆಗೆ ಸೇರಿ ೧೯೭೦ರಲ್ಲಿ ನಿವೃತ್ತರಾದರು.
 
'''ಮೈಸೂರು ಮಲ್ಲಿಗೆ''' ಕೆ. ಎಸ್. ನರಸಿಂಹಸ್ವಾಮಿ ಅವರ ಮೊದಲ ಕವನ ಸಂಕಲನ. ಇದು ಮನೆ ಮನೆಯ ಮಾತಾಗಿ, ಕಾವ್ಯವಾಗಿ, ಹಾಡಾಗಿ ಹರಿದಿದೆ. ಇದುವರೆವಿಗೂ ಇಪ್ಪತ್ತೈದಕ್ಕೂ ಮಿಕ್ಕಿ ಮುದ್ರಣ ಭಾಗ್ಯ ಪಡೆದಿದೆ. ಕನ್ನಡದ ಕೆಲವೇ ಕೃತಿಗಳಿಗೆ ಇಂಥ ಮರುಮುದ್ರಣದ ಭಾಗ್ಯ- ಅಧುನಿಕ ಕನ್ನಡ ಕಾವ್ಯ ಹಲವು ರೂಪಗಳನ್ನು ಪಡೆಯುತ್ತಾ ಬಂದಿದೆ. ಹಲವು ಸಾಹಿತ್ಯ ಚಳುವಳಿಗಳು ಬಂದುಹೋಗಿವೆ. ಕೆಎಸ್‌ನ ಎಲ್ಲ ಕಾಲಕ್ಕೂ ಸಲ್ಲುವ ಜನಪ್ರೀತಿಯ ಕಾವ್ಯ ಕೃಷಿಗೆ ದೊಡ್ಡ ಹೆಸರು. ಕವಿ ವಿಮರ್ಶಕ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರು ಕೆಎಸ್‌ನ ಬಗ್ಗೆ ಬರೆಯುತ್ತ ``ನವೋದಯದ ಕಾವ್ಯ ಸಂದರ್ಭದಲ್ಲಿ ಹೆಸರು ಮಾಡಿದ್ದ ಈ ಕವಿ ತಮ್ಮ ಸುಕುಮಾರ ಜಗತ್ತಿನಿಂದ, ನಿಷ್ಠುರವಾದ ಬದುಕಿನ ಸಂದರ್ಭಕ್ಕೆ ಹೊರಳಿದ್ದು `ಶಿಲಾಲತೆ'ಯಲ್ಲಿ. ಆದ್ದರಿಂದ ಸಂಗ್ರಹಕ್ಕೆ ಒಂದು ಐತಿಹಾಸಿಕ ಮಹತ್ವವಿದೆ" -ಎಂದು ದಾಖಲಿಸಿದ್ದಾರೆ. ಜೊತೆಗೆ ಮೈಸೂರು ಮಲ್ಲಿಗೆಯ ಕವಿತೆಯ ಭಾಷೆ, ವಸ್ತು, ಲಯಗಳ ಮೇಲೆ ಇಂಗ್ಲಿಷ್ ಗೀತೆಗಳ ಪ್ರಭಾವವನ್ನು ಗುರುತಿಸಬಹುದು ಎಂದು ಹೆಚ್. ಎಸ್. ವಿ. ಗುರ್ತಿಸಿದ್ದಾರೆ.