ನರಹರಿ ಬೆಟ್ಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
 
ನರಹರಿ ಬೆಟ್ಟವು ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ೩೦ ಕಿ.ಮೀ. ದೂರದಲ್ಲಿದೆ. ಇದು ಸುಮಾರು ೩೫೦ ಅಡಿ ಎತ್ತರವಿದೆ. ಈ ಬೆಟ್ಟದ ತುದಿಯಲ್ಲಿ ನರಹರಿ ದೇವರ ದೇವಸ್ಥಾನವಿದೆ. ಇಲ್ಲಿಂದ ಸಾಯಂಕಾಲದ ಸಮಯದಲ್ಲಿ ಸೂರ್ಯಾಸ್ಥವು ನೋಡಲು ಅತಿ ಸುಂದರವಾಗಿರುತ್ತದೆ. ಬೆಟ್ಟದ ಮೇಲಕ್ಕೆ ಹೋಗಲು ರಸ್ತೆಯು ಇದೆ. ಕೊನೆಯಲ್ಲಿ ಕೆಲವು ಮೆಟ್ಟಲುಗಳನ್ನು ಹತ್ತಬೇಕಾಗುತ್ತದೆ. [[ಚಿತ್ರ:File.jpg]
 
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ನರಹರಿ ಪರ್ವತ ಸದಾಶಿವ ದೇವಸ್ಥಾನ ಸಿಗುತ್ತದೆ. ಮಂಗಳೂರಿಗೆ ಬಂದು ಅಲ್ಲಿಂದ ಪುತ್ತೂರು ಮಾರ್ಗವಾಗಿ ೨೮ ಕಿಮೀ ಬರಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೇಂದ್ರ ಬಿಸಿರೋಡ್ ಜಂಕ್ಷನ್‌ನಿಂದ ೫ ಕಿ.ಮೀ. ದೂರದಲ್ಲಿ (ಪಾಣೆಮಂಗಳೂರು ಪೇಟೆಯಿಂದ ಸಾಧಾರಣ ೨ ಕಿ.ಮೀ.) ಬಲಬದಿಗೆ ನರಹರಿಪರ್ವತದ ಸದಾಶಿವ ದೇವಸ್ಥಾನದ ಮಹಾದ್ವಾರ ಕಾಣಿಸುತ್ತದೆ. ಒಂದು ಕಿಮೀ. ದೂರ ವಾಹನದಲ್ಲಿ ಪ್ರಯಾಣಿಸಿ ನಂತರ ಮೆಟ್ಟಿಲುಗಳನ್ನು ಹತ್ತಿ ಹೋಗುವುದರ ಮೂಲಕ ದೇವಸ್ಥಾನವನ್ನು ತಲುಪಬಹುದು.
"https://kn.wikipedia.org/wiki/ನರಹರಿ_ಬೆಟ್ಟ" ಇಂದ ಪಡೆಯಲ್ಪಟ್ಟಿದೆ