ನರಹರಿ ಬೆಟ್ಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು ಮೂಲ ಲೇಖನವನ್ನು ಹಾಗೆ ಉಳಿಸಲಾಗಿದೆ.
೫ ನೇ ಸಾಲು:
 
[[ ಕರ್ನಾಟಕದ ಪ್ರಮುಖ ಪ್ರಮುಖ ಸ್ಥಳಗಳ ]]
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ನರಹರಿ ಪರ್ವತ ಸದಾಶಿವ ದೇವಸ್ಥಾನ ಸಿಗುತ್ತದೆ. ಮಂಗಳೂರಿಗೆ ಬಂದು ಅಲ್ಲಿಂದ ಪುತ್ತೂರು ಮಾರ್ಗವಾಗಿ ೨೮ ಕಿಮೀ ಬರಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೇಂದ್ರ ಬಿಸಿರೋಡ್ ಜಂಕ್ಷನ್‌ನಿಂದ ೫ ಕಿ.ಮೀ. ದೂರದಲ್ಲಿ (ಪಾಣೆಮಂಗಳೂರು ಪೇಟೆಯಿಂದ ಸಾಧಾರಣ ೨ ಕಿ.ಮೀ.) ಬಲಬದಿಗೆ ನರಹರಿಪರ್ವತದ ಸದಾಶಿವ ದೇವಸ್ಥಾನದ ಮಹಾದ್ವಾರ ಕಾಣಿಸುತ್ತದೆ. ಒಂದು ಕಿಮೀ. ದೂರ ವಾಹನದಲ್ಲಿ ಪ್ರಯಾಣಿಸಿ ನಂತರ ಮೆಟ್ಟಿಲುಗಳನ್ನು ಹತ್ತಿ ಹೋಗುವುದರ ಮೂಲಕ ದೇವಸ್ಥಾನವನ್ನು ತಲುಪಬಹುದು.
 
ಪ್ರಕೃತಿ ವಿಸ್ಮಯ ಮೂಡಿಸುವ ತಾಣವೇ ನರಹರಿ ಪರ್ವತ. ಸೂರ್ಯೋದಯ ಹಾಗೂ ಸೂರ್ಯಾಸ್ತದ ದೃಶ್ಯ ಸೊಬಗನ್ನು ಸವಿಯಲು ಪ್ರಕೃತಿಯ ಕೊಡುಗೆಯಾದ ಈ ಪರ್ವತ ಏರಿದರೆ ಆಕಾಶ ಮುಟ್ಟಿದ ಅನುಭವ. ನರಹರಿ ಬೆಟ್ಟ ಸಮುದ್ರ ಮಟ್ಟದಿಂದ ಸಾವಿರ ಅಡಿಗೂ ಹೆಚ್ಹು ಎತ್ತರದಲ್ಲಿದ್ದು ಪ್ರಕೃತಿಯ ಸೌಂದರ್ಯದ ನಡುವೆ ಸದಾಶಿವ ದೇವರ ಸಾನಿಧ್ಯವಿದೆ. (ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಅಭಿವೃದ್ಧಿಯ ಕಾರ್ಯಗಳು ನಡೆದಿವೆ. ಸುಮಾರು ಒಂದು ಫರ್ಲಾಂಗು ದೂರ ಬೆಟ್ಟ ಏರುವ ರಸ್ತೆಯ ನಿರ್ಮಾಣ, ವಿದ್ಯುತ್ ಸಂಪರ್ಕ, ದೇವರ ಧ್ಯಾನ ಮಂದಿರ, ಕಚೇರಿ ಕಟ್ಟಡಗಳ ನಿರ್ಮಾಣ ಆಗಿದೆ.ಮುಂದಿನ ಹೆಜ್ಜೆಯಾಗಿ ದೇವರ ಗರ್ಭಗುಡಿ ನಿರ್ಮಾಣ ವಾಸ್ತು ಪ್ರಕಾರ ರೂಪುಗೊಳ್ಳಲಿದೆ. ಪ್ರಾಂಗಣ ನಿರ್ಮಾಣ ಆಗಬೇಕಾಗಿದೆ. ಕುಡಿಯುವ ನೀರು, ಶೌಚಾಲಯ ರಚನೆ ಯೋಜನೆಯನ್ನು ದೇವಸ್ಥಾನದ ಸೇವಾ ಸಮಿತಿ ರೂಪಿಸಿದೆ.) ನರಹರಿ ಪರ್ವತ ಸದಾಶಿವ ದೇವಸ್ಥಾನಕ್ಕೆ ಹೋಗುವ ದಾರಿಯ ಎರಡೂ ಬದಿಗಳಲ್ಲಿ ಶಿವ ಶಿವ’ ಎನ್ನುವ ನಾಮಫಲಕ ಇದೆ. ಶಿವ ಶಿವ ನಾಮ ಜಪಿಸುತ್ತಾ ಮೆಟ್ಟಿಲುಗಳನ್ನೇರುತ್ತಾ ಹೋದರೆ ಬೆಟ್ಟ ಹತ್ತುವುದು ತ್ರಾಸ ಎನಿಸದು. ಇಲ್ಲಿ ವಿಘ್ನೇಶ್ವರ, ನಾಗದೇವರ ಮೂರ್ತಿಗಳೂ ಇವೆ.
 
 
ವೈಶಿಷ್ಟ್ಯ
ತುಳು ಪರಂಪರೆಯ ಆಷಾಢ (ಆಟಿ) ಅಮವಾಸ್ಯೆ ಮತ್ತು ಸೋಣ (ಶ್ರಾವಣ) ಅಮವಾಸ್ಯೆಯಂದು ಇಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಮುಂಜಾನೆಯೇ ಅಸಂಖ್ಯಾತ ಭಕ್ತರು ಮುಖ್ಯವಾಗಿ ನವವಧೂವರರು ನರಹರಿ ಪರ್ವತ ಏರಿ ಶಂಖ, ಚಕ್ರ, ಗದಾ, ಪದ್ಮಗಳೆಂಬ ನಾಲ್ಕು ತೀರ್ಥ ಕೂಪದಲ್ಲಿ ಮಿಂದು, ನಾಗರಾಜನಿಗೆ, ವಿನಾಯಕನಿಗೆ, ಸದಾಶಿವನಿಗೆ ಸೇವೆ ಸಲ್ಲಿಸುವುದು ಇಲ್ಲಿನ ವಾಡಿಕೆಯಾಗಿದೆ. ಭೂ ಲೋಕದ ಕೈಲಾಸ ಎಂದೇ ಪ್ರಸಿದ್ದವಾಗಿರುವ ತಾಣ ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ಶನಿವಾರ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಶ್ರದ್ದಾ ಭಕ್ತಿಯಿಂದ ಆಟಿ ಅಮಾವಾಸ್ಯೆ ತೀರ್ಥಸ್ನಾನ ಮಾಡುವರು. ಅಲ್ಲದೇ ಶಿವರಾತ್ರಿ, ನಾಗರಪಂಚಮಿ, ಗಣೇಶ ಚತುರ್ಥೀ ಹಬ್ಬಗಳನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ. ಕಾರ್ತೀಕ ಮಾಸದ ಸೋಮವಾರದಂದು ಪೂಜೆ ಹಮ್ಮಿಕೊಳ್ಳಲಾಗುತ್ತದೆ. ಹಬ್ಬಗಳ ಸಂದರ್ಭದಲ್ಲಿ ನರಹರಿ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಶ್ರದ್ಧಾ- ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಈ ದೇವಸ್ಥಾನದಲ್ಲಿ ಬಲಿವಾಡು ಪೂಜೆ ನೆರವೇರಿಸಿದರೆ ಯಾವುದೇ ಭಯದಿಂದ ಹೊರ ಬರಬಹುದು ಅನ್ನೋದು ಭಕ್ತರ ನಂಬಿಕೆ. ಮಕ್ಕಳಿಲ್ಲದವರು ಇಲ್ಲಿ ತೊಟ್ಟಿಲು ಸೇವೆ ಮಾಡಿಸಿದರೆ ಮಕ್ಕಳಾಗುತ್ತಾರೆ ಅನ್ನೋದು ನಂಬಿಕೆ. ಇಲ್ಲಿಗೆ ಭೇಟಿ ಕೊಡೋ ಭಕ್ತರು ದೇವರಿಗೆ ಎಳನೀರನ್ನು ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಕ್ಷೇತ್ರದಲ್ಲಿ ಪ್ರತೀ ಸಂಕ್ರಮಣ ಬ್ರಾಹ್ಮಿ ಮುಹೂರ್ತ ೫ಗಂಟೆಗೆ ದೀಪ ಬೆಳಗಿಸಿ ಪೂಜೆ ನಡೆಯುತ್ತದೆ. ವಾರ್ಷಿಕ ಮಹೋತ್ಸವ ಅಂಗವಾಗಿ ಬೆಳಗ್ಗೆ ೫ ಗಂಟೆಗೆ ಮಕರ ಸಂಕ್ರಮಣ ದೀಪ ಪ್ರಜ್ವಲನ, ಧ್ಯಾನ, ವಿಶೇಷ ಪೂಜೆ, ೮ರಿಂದ ಗಣಹೋಮ, ಮೃತ್ಯುಂಜಯ ಹೋಮ, ಮಹಾಪೂಜೆ, ಮಧ್ಯಾಹ್ನ ಅನ್ನಪ್ರಸಾದ ಸಂತರ್ಪಣೆ ನಡೆಯುವುದು. ಸಂಜೆ ೫ ಗಂಟೆಗೆ ಶ್ರೀ ದುರ್ಗಾ ನಮಸ್ಕಾರ ಪೂಜೆ, ಮಹಾಮಂಗಳ, ಭೂ ವರಾಹ ಪೂಜೆ ಜರಗಲಿದೆ. ಕಾರಣೀಕ ಕ್ಷೇತ್ರ ಕ್ಷೇತ್ರವು ಕಾರಣೀಕವಾಗಿ ಬೆಳಗುತ್ತಿದೆ. ಶ್ರೀಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಸ್ಥಳದ ಮಣ್ಣನ್ನು ಪ್ರಸಾದವಾಗಿ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಇಲ್ಲಿಯೂ ಮೃತ್ತಿಕಾ ಪ್ರಸಾದ ನೀಡಲಾಗುತ್ತದೆ. ಎಳ್ಳೆಣ್ಣೆ ಸೇವೆ, ಮುಷ್ಟಿ ಅಕ್ಕಿ ಸೇವೆ, ಪ್ರಸಾದ ರಕ್ಷಾ ಕಾಯಿ, ಪಾನಕ ಸೇವೆ ದೇವರಿಗೆ ಸಲ್ಲುವ ಹರಕೆಗಳು.
 
 
ಚಾರಣ ಪ್ರಿಯರ ಸ್ವರ್ಗ
ಚಾರಣ ಪ್ರಿಯರ ಸ್ವರ್ಗ-ಎಂದೇ ಕರೆಯಲ್ಪಡುವ ಕ್ಷೇತ್ರವೇ ನರಹರಿ ಪರ್ವತ. ಸೂರ್ಯೋದಯದ ಹೊಂಬೆಳಕು, ಆಕರ್ಷಕ ಗ್ರಾಮೀಣ ದೃಶ್ಯಗಳು, ನಿರ್ಮಲ ಪರಿಸರ, ಇವೆಲ್ಲ ಬೇಕಿದ್ದರೆ ನೋಡಬೇಕು ನರಹರಿ ಪರ್ವತ. ದೊಡ್ಡ ಗುಡ್ಡ, ಗುಡ್ಡದ ಮೇಲೊಂದು ದೇವಸ್ಥಾನ. ದೇವಸ್ಥಾನದ ಹತ್ತಿರದಲ್ಲಿಯೇ ನಾಲ್ಕು ಪವಿತ್ರ ತೀರ್ಥಗಳು. ಏರುತ್ತಾ ಹೋದಂತೆ ಸುತ್ತಲೂ ಕಾಣುವ ಹಸಿರು ಮರಗಳ ಸಮೃದ್ಧಿ. ದೂರದಲ್ಲಿ ಭತ್ತದ ಗದ್ದೆಗಳು. ನರಹರಿ ಪರ್ವತ ಮೇಲಿಂದ ಸುತ್ತಲೂ ನೋಡಿದರೆ ಹಸಿರು ದೃಶ್ಯಾವಳಿಯ ವಿಹಂಗಮ ನೋಟವಿದೆ. ದೇವಸ್ಥಾನದ ಮೇಲಿನಿಂದ ಪೂರ್ವಕ್ಕೆ ನೋಡಿದರೆ ಸುಳ್ಯಮಲೆ, ಬಲ್ಲಮಲೆ, ದಕ್ಷಿಣದ ಕಡೆಗೆ ಕಡೆಂಜ ಮಲೆಯನ್ನು ಕಾಣಬಹುದು. ಒಂದು ಕಡೆ ರಾಷ್ಟ್ರೀಯ ಹೆದ್ದಾರಿ, ಇನ್ನೊಂದು ಕಡೆ ಮಂಗಳೂರು -ಹಾಸನ ರೈಲ್ವೇ ಮಾರ್ಗ ಕಾಣಿಸುತ್ತದೆ. ಸೂರ್ಯಾಸ್ತದ ಹೊತ್ತು ಬೀಳುವ ಸೂರ್ಯನ ಹೊಂಬಣ್ಣದ ಕಿರಣಗಳು ನರಹರಿ ಪರ್ವತದ ದೇವಸ್ಥಾನವನ್ನಾವರಿಸುತ್ತದೆ. ಧಾರ್ಮಿಕ ಕ್ಷೇತ್ರವಾಗಿ, ಚಾರಣ ಕ್ಷೇತ್ರವಾಗಿ, ವನವಿಹಾರ ಕ್ಷೇತ್ರವಾಗಿ ನರಹರಿ ಪರ್ವತವು ಪ್ರಖ್ಯಾತವಾಗಿದೆ. ಶ್ರೀಕ್ಷೇತ್ರ ನಂದಾವರ, ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನ, ನೇತ್ರಾವತಿ ನದಿ ಶಂಭೂರು ಅಣೆಕಟ್ಟು, ತುಂಬೆ ಡ್ಯಾಂ ಸಹಿತ ಸನಿಹದ ಎಲ್ಲಾ ಪ್ರದೇಶಗಳು ಸ್ಪಷ್ಟವಾಗಿ ಕಾಣುವಷ್ಟು ಎತ್ತರದಲ್ಲಿವೆ. ಕ್ಷೇತ್ರದಲ್ಲಿ ನಿಂತು ವೀಕ್ಷಿಸಿದವರಿಗೆ ನೇತ್ರಾವತಿ ನದಿಯು ಸರಪಾಡಿಯಿಂದ ತುಂಬೆಯ ತನಕ ಕಾಣುವ ಏಕೈಕ ಸ್ಥಳವಾಗಿದೆ. ಸೂರ್ಯ ಉದಯ, ಅಸ್ತಗಳ ಸುಂದರ, ವಿಹಂಗಮ ನೋಟ ಇಲ್ಲಿನದಾಗಿದೆ.
 
ಪುರಾಣ ಕತೆ
 
ಪುರಾಣ ಕತೆಯ ಪ್ರಕಾರ ನೈಸರ್ಗಿಕವಾಗಿ ನಿರ್ಮಿತವಾದ ಶಂಖ, ಚಕ್ರ, ಗದಾ, ಪದ್ಮಗಳೆಂಬ ಆಕಾರವುಳ್ಳ ನಾಲ್ಕು ತೀರ್ಥಬಾವಿಗಳು, ನಾಗದೇವರು, ಮಹಾಗಣಪತಿ, ಶಿವಮೂರ್ತಿ ಇತ್ಯಾದಿಗಳು ಇಲ್ಲಿನ ಜನಾಕರ್ಷಣೆಯ ಕೇಂದ್ರಬಿಂದುಗಳು. ಮಹಾಭಾರತದ ಕುರುಕ್ಷೇತ್ರ ಯುದ್ಧದ ಬಳಿಕ ಪಾಂಡವರು ತಮ್ಮ ಪಾಪ ವಿಮೋಚನೆಗಾಗಿ ದಕ್ಷಿಣದ ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಕೈಗೊಳ್ಳುತ್ತಾರೆ. ಅದೇ ಸಂದರ್ಭದಲ್ಲಿ ಹರಿ ಮತ್ತು ನರ ಆ ಬೆಟ್ಟವನ್ನೇರುತ್ತಾರೆ. ಅಲ್ಲಿಗೆ ಭೇಟಿ ಕೊಟ್ಟ ಕುರುಹಿಗಾಗಿ ತನ್ನ ಆಯುಧದಿಂದ ಶಂಖ, ಚಕ್ರ, ಗದಾ ಪದ್ಮ ಎಂಬ ನಾಲ್ಕು ತೀರ್ಥಕೂಪಗಳನ್ನು ಮಾಡುತ್ತಾರೆ. ಅದರಲ್ಲಿಯೇ ಪಾಪಗಳನ್ನು ಕಳೆಯುತ್ತಾರೆ. ಅಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ, ಹರನ ಸಮೇತವಾಗಿ ಪೂಜಿಸುತ್ತಾರೆ. ಇದರಿಂದಾಗಿಯೆ ಇಲ್ಲಿಗೆ ನರಹರಿ ಸದಾಶಿವ ಎಂಬ ಹೆಸರು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವಸ್ಥಾನಗಳ ಸಂಖ್ಯೆಗೇನೂ ಕಡಿಮೆಯಿಲ್ಲ. ಇಲ್ಲಿನ ಹೆಚ್ಚಿನ ದೇವಸ್ಥಾನಗಳು ಪುರಾಣ ಕಥೆಗಳನ್ನೊಳಗೊಂಡಿದೆ. ಅವುಗಳ ಬಗೆಗಿನ ದಂತಕತೆಗಳು, ಐತಿಹ್ಯಗಳು ತುಂಬಾ ರೋಚಕವಾಗಿರುತ್ತವೆ.
"https://kn.wikipedia.org/wiki/ನರಹರಿ_ಬೆಟ್ಟ" ಇಂದ ಪಡೆಯಲ್ಪಟ್ಟಿದೆ