ಪ್ರಾಣ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
(~~~~)
೧೪ ನೇ ಸಾಲು:
}}
 
'''ಪ್ರಾಣ್''' ([[ಫೆಬ್ರುವರಿ ೧೨]],[[೧೯೨೦-ಜುಲೈ ೧೨]],[[೨೦೧೩]]) ಎಂದು ಭಾರತೀಯ ಚಿತ್ರರಂಗದಲ್ಲಿ ಹೆಸರಾದ 'ಪ್ರಾಣ್ ಕೇವಲ್ ಕ್ರಿಶನ್ ಸಿಕಂದ್' ಒಬ್ಬ ಮಹಾನ್ ಕಲಾವಿದರು. ಹಿಂದಿಚಲನ ಚಿತ್ರರಂಗದ ನಾಯಕನಟರಾಗಿ, ಖಳ ನಟರಾಗಿ, ಪೋಷಕ ನಟರಾಗಿ ಅವರು ಸಲ್ಲಿಸಿದ ಐದು ದಶಕಗಳಿಗೂ ಹೆಚ್ಚಿನ ಸೇವೆ ಅವಿಸ್ಮರಣೀಯವಾದುದು. ಅವರು ನಟಿಸಿದ ಚಿತ್ರಗಳ ಸಂಖ್ಯೆ ೩೫೦ಕ್ಕೂ ಹೆಚ್ಚಿನದು. ಪ್ರಾಣ್ ಅವರಿಗೆ ೨೦೧೨ನೇ ವರ್ಷದ ಸಾಲಿಗಾಗಿ ಭಾರತೀಯ ಚಿತ್ರರಂಗದಲ್ಲಿನ ಶ್ರೇಷ್ಠ ಸಾಧನೆಗಾಗಿ ನೀಡುವ '೪೪ ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ಘೋಷಿಸಲಾಗಿದೆ.
==ಜೀವನ==
ಪ್ರಾಣ್ ಅವರು ಫೆಬ್ರುವರಿ ೧೨, ೧೯೨೦ರ ವರ್ಷದಲ್ಲಿ ಹಳೆಯ ದಿಲ್ಲಿಯ ಬಡಾವಣೆಯ ಪಂಜಾಬಿ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ಪ್ರಾಣರ ಅಂದಿನ ಹೆಸರು 'ಪ್ರಾಣ್ ಕ್ರಿಶನ್ ಸಿಕಂದ್'. ಅವರ ತಂದೆ 'ಕೇವಲ್ ಕ್ರಿಶನ್ ಸಿಕಂದರು' ವೃತ್ತಿಯಲ್ಲಿ ಸಿವಿಲ್ ಇಂಜಿನಿಯರರಾಗಿದ್ದು ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರಾಗಿದ್ದರು. ಅವರ ತಾಯಿಯ ಹೆಸರು 'ರಾಮೇಶ್ವರಿ'. ಈ ದಂಪತಿಗಳಿಗೆ ಮೂರು ಗಂಡು ಮಕ್ಕಳೂ ಮೂರು ಹೆಣ್ಣು ಮಕ್ಕಳೂ ಇದ್ದರು. ಪ್ರಾಣ್, ಸನ್.೧೯೪೫ ರಲ್ಲಿ 'ಶುಕ್ಲಾ ಅಹ್ಲೂವಾಲಿಯ'ರನ್ನು ಮದುವೆಯಾದರು. ಇವರಿಗೆ, ಎರಡು ಗಂಡುಮಕ್ಕಳು, ಅರವಿಂದ್, ಸುನಿಲ್, ಮತ್ತು ಒಬ್ಬ ಮಗಳು ಪಿಂಕಿ ಭಲ್ಲಾ.
೧೦೨ ನೇ ಸಾಲು:
[[ಚಿತ್ರ:P.014402513.jpg|thumb|right|300px|'ಪ್ರಾಣ್ ಜೊತೆ ಅವರ ಪರಿವಾರ']]
ಸನ್.೧೯೯೭ ರ ಚಿತ್ರೀಕರಣದ ಸಮಯದಲ್ಲೇ ಅವರಿಗೆ ಮೊಣಕಾಲು ಚಿಪ್ಪಿನ ನೋವು ಹೆಚ್ಚಾಯಿತು. ಬಹಳ ಕಾಲದಿಂದ ಅದರ ನೋವನ್ನು ಅನುಭವಿಸುತ್ತಿದ್ದಾರೆ. 'ವೀಲ್ ಛೇರ್' ನಲ್ಲೇ ಕುಳಿತು ಕೆಲವು ಚಿತ್ರಗಳಲ್ಲಿ ಅತಿಥಿನಟನಾಗಿ ನಟಿಸಿದ್ದಾರೆ. ಅವರಿಗೆ ಈಗಾಗಲೇ ಸಂದಿರುವ ಚಿತ್ರರಂಗದ ಶ್ರೇಷ್ಠ ಗೌರವವಾದ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ಸ್ವೀಕರಿಸಲು ಅವರು ಸನ್. ೨೦೧೩ ರ, ಮೇ ತಿಂಗಳ ೩ ರಂದು ;ಭಾರತೀಯ ಚಲನಚಿತ್ರರಂಗದ ನೂರನೆಯ ವರ್ಷದ ಆಚರಣೆಯ ಶುಭ ಸಂದರ್ಭ;ದಲ್ಲಿ ದೆಹಲಿಗೆ ಪ್ರಯಾಣಿಸಿ, 'ರಾಷ್ಟ್ರಪತಿ ಪ್ರಣಬ್ ಮುಖರ್ಜಿ'ಯವರ ಹಸ್ತದಿಂದ ಪಡೆಯಲು ಸಾಧ್ಯವಾಗಲಿಲ್ಲ. ೨೦೧೩ ರ, ಮೇ, ೧೦, ಶುಕ್ರವಾರ, ದೆಹಲಿಯಿಂದ 'ವಾರ್ತೆ ಹಾಗೂ ಪ್ರಸಾರಾಂಗ ಖಾತೆಯ ಮಂತ್ರಿ, ಮನೀಷ್ ತಿವಾರಿ, ಸಚಿವ ಉದಯಕುಮಾರ್ ವರ್ಮಾ ಹಾಗೂ ಸಚಿವಾಲಯದ ಫಿಲ್ಮೋತ್ಸವದ ಡೆಲಿಗೇಶನ್ ಜೊತೆ, ನವದೆಹಲಿಯಿಂದ ಮುಂಬೈನ 'ಪ್ರಾಣ್ ರವರ ನಿವಾಸಕ್ಕೆ ಬಂದು ಈಗಾಗಲೇ ಘೋಶಿಸಿರುವ 'ಡಾ. ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ಪ್ರದಾನಮಾಡಲಾಯಿತು. ಪುತ್ರಿ, 'ಪಿಂಕಿ ಭಲ್ಲಾ' ಮತ್ತು ಮನೆಯ ಸದಸ್ಯರೆಲ್ಲರ ಸಮ್ಮುಖದಲ್ಲಿ ಪ್ರಥಮಬಾರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನಮಾಡಿರುವುದು ಒಂದು ದಾಖಲೆಯಾಗಿದೆ. 'ಸ್ವರ್ಣ ಕಮಲ', 'ಸ್ಮೃತಿ ಫಲಕ', 'ಶಾಲು', ಹಾಗೂ '೧೦ ಲಕ್ಷ ರೂಗಳ ನಕದು ಬಹುಮಾನ'ವೂ ಇದರ ಜೊತೆ ಸೇರಿದೆ.
==ನಿಧನ==
ಹಿರಿಯ ಅಭಿನೇತ ಪ್ರಾಣ್ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಸನ್.೨೦೧೩, ಜುಲೈ,೧೨, ಶುಕ್ರವಾರದ ರಾತ್ರಿ ೮-೩೦ ಕ್ಕೆ ನಿಧನರಾದರು. ಪ್ರಾಣ್ ರ ಅಂತಿಮ ಸಂಸ್ಕಾರ ವಿಧಿಗಳನ್ನು ಮುಂಬೈನ ದಾದರ್ ಇಲಾಖೆಯ ಶಿವಾಜಿ ಪಾರ್ಕ್ ಹಿಂದೂ ಚಿತಾಗಾರದಲ್ಲಿ ಜುಲೈ ೧೩,ಶನಿವಾರ ಮಧ್ಯಾನ್ಹ ೧೨ ಗಂಟೆಗೆ ನೆರವೇರಿಸಲಾಗುವುದು.
 
* ಚಿತ್ರಕೃಪೆ : ಉದಯವಾಣಿ ಕನ್ನಡ ದಿನಪತ್ರಿಕೆ [[http://www.udayavani.com/news/294462L15-%E0%B2%B9-%E0%B2%B0-%E0%B2%AF-%E0%B2%A8%E0%B2%9F-%E0%B2%AA-%E0%B2%B0-%E0%B2%A3--%E0%B2%97--%E0%B2%AE%E0%B2%A8-%E0%B2%AF%E0%B2%B2-%E0%B2%B2--%E0%B2%AB-%E0%B2%B2-%E0%B2%95--%E0%B2%97-%E0%B2%B0%E0%B2%B5-%E0%B2%AA-%E0%B2%B0%E0%B2%A6-%E0%B2%A8.html,]]
"https://kn.wikipedia.org/wiki/ಪ್ರಾಣ್_(ನಟ)" ಇಂದ ಪಡೆಯಲ್ಪಟ್ಟಿದೆ