ವಿಜಯ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
'''ವಿಜಯ ಕರ್ನಾಟಕ''' ಕನ್ನಡದ ಇತ್ತೀಚಿನ ಪತ್ರಿಕೆಗಳಲ್ಲೊಂದು. ಹುಬ್ಬಳ್ಳಿಯ ವಿಜಯಾನಂದ ರೋಡ್ ಲೈನ್ಸ್ ಬಳಗದ ಪತ್ರಿಕೆಯಾಗಿದ್ದ ವಿಜಯಕರ್ನಾಟಕವನ್ನು ಇತ್ತೀಚೆಗೆ, [[ಟೈಂಸ್ ಆಫ್ ಇಂಡಿಯಾ]] ಪತ್ರಿಕೆ ಸಮೋಹದ, [[ಬೆನ್ನೆಟ್,ಕೊಲ್ಮನ್ ಅಂಡ್ ಸನ್ಸ್]] ಸಂಸ್ಥೆಯವರು, ತಮ್ಮ ಸ್ವಾಮ್ಯಕ್ಕೆ ಸೇರಿಸಿಕೊಂಡಿದ್ದಾರೆ. ಪ್ರಸಾರ ಹಾಗೂ ಸುದ್ದಿ ಪ್ರಸ್ತುತಿಯಲ್ಲಿ ಮಂಚೂಣಿಯಲ್ಲಿರುವ, "{ವಿಜಯ ಕರ್ನಾಟಕ ಪತ್ರಿಕೆಯ, ಕರ್ನಾಟಕದ ನಂ .೧, ದಿನಪತ್ರಿಕೆಯ ಸಂಪಾದಕ, '[[ವಿಶ್ವೇಶ್ವರ ಭಟ್]]' ರವರು, ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಆಡಳಿತ ವರ್ಗಕ್ಕೆ ಸೇರಿಕೊಂಡು ಸುಮಾರು ಒಂದು ದಶಕದ ಅವಧಿಯಲ್ಲಿ ಪತ್ರಿಕೆಯ ಪ್ರಸಾರವನ್ನು ೪ ಪಟ್ಟು ಹೆಚ್ಚಿಸಿಕೊಟ್ಟಿದ್ದಾರೆ. ಈಗ ತಮ್ಮ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ತಮ್ಮ ರಾಜೀನಾಮೆ ಕೊಟ್ಟಿರುತ್ತಾರೆ.
=='ವಿಜಯ ಕರ್ನಾಟಕ ಪತ್ರಿಕೆ, ನಡೆದು ಬಂದ ರೀತಿ'==
1999ರಲ್ಲಿ ವಿಜಯಾನಂದ ಪ್ರಿಂಟರ್ಸ್ ಮೂಲಕ ಆರಂಭಗೊಂಡ ವಿಜಯ ಕರ್ನಾಟಕ (ವಿಕ), ಕನ್ನಡ ಪತ್ರಿಕಾ ರಂಗದಲ್ಲಿ ನೆಲೆಯೂರಿದ್ದ ಪ್ರಮುಖ ಪತ್ರಿಕೆಗಳನ್ನು ಕೇವಲ ಎರಡುವರೆ ವರ್ಷಗಳ ಅವಧಿಯಲ್ಲೇ ಹಿಂದಿಕ್ಕಿ ನಂ.1 ಪಟ್ಟಕ್ಕೇರಿತು ಮತ್ತು ಕನ್ನಡಿಗರ ವಿಶ್ವಾಸಕ್ಕೆ ಪಾತ್ರವಾಯಿತು. ಬಳಿಕ 2006ರಲ್ಲಿ ಈ ಪತ್ರಿಕೆಯನ್ನು ಬೆನೆಟ್, ಕೋಲ್ಮನ್ ಆಂಡ್ ಕಂಪನಿ ಲಿ. (ಬಿಸಿಸಿಎಲ್) ಸ್ವಾಧೀನಕ್ಕೆ ಪಡೆದುಕೊಂಡಿತು. ಟೈಮ್ಸ್ ಆಫ್ ಇಂಡಿಯಾ ಸಮೂಹದ ಅಡಿಯಲ್ಲಿ ವಿಜಯ ಕರ್ನಾಟಕವು ಮತ್ತಷ್ಟು ಪ್ರಗತಿ ಸಾಧಿಸಿತು.
ಸನ್, ೨೦೦೦ ರಲ್ಲಿ ಭಟ್ಟರು ಪತ್ರಿಕೆಯ ಸಂಪಾದಕರಾಗಿ ಜವಾಬ್ದಾರಿ ವಹಿಸಿಕೊಂಡಾಗ ಪತ್ರಿಕೆಯ ಪ್ರಸಾರ ೧ ಲಕ್ಷ ೧೬ ಸಾವಿರವಿತ್ತು. ಹತ್ತು ವರ್ಷಗಳ ಅವಧಿಯಲ್ಲಿ ಪತ್ರಿಕೆಯ ಪ್ರಸಾರವನ್ನು ೬ ಲಕ್ಷಗಳ ಗಡಿ ದಾಟಿಸಿದ ಖ್ಯಾತಿ ವಿಶ್ವೇಶ್ವರ ಭಟ್ಟರದು. ಕೇವಲ ಸಂಪಾದಕರಾಗಿಯೇ ಉಳಿಯದೆ, 'ನಿತ್ಯ ಬರೆಯುವ' ಸಂಪಾದಕ ಎಂಬ ಖ್ಯಾತಿ ಅವರದಾಗಿತ್ತು. '[[ನೂರೆಂಟು ಮಾತು]]', ಎನ್ನುವುದು, ಭಟ್ಟರ, 'ಗುರುವಾರದ ವಿಶೇಷ ಅಂಕಣ'ವಾಗಿದ್ದು ಅತ್ಯಂತ ಜನಪ್ರಿಯತೆಯನ್ನು ಹಾಸಿಲ್ ಮಾಡಿತ್ತು. ಶನಿವಾರದ ಅಂಕಣ, '[[ಸುದ್ದಿಮನೆ ಕತೆ]]', '[[ವಕ್ರತುಂಡೋಕ್ತಿ]]', ರವಿವಾರದ, '[[ಜನಗಳ ಮನಗಳು]]' ಅಲ್ಲದೆ ಇನ್ನೂ ಹತ್ತು ಹಲವು, ಹೊಸ-ಹೊಸ ಪ್ರಕರಣಗಳನ್ನು ಸಮರ್ಥವಾಗಿಯೂ, ಸಮಯೋಚಿತವಾಗಿಯೂ ಪತ್ರಿಕೆಯಲ್ಲಿ ಹೊರತಂದು, ಓದುಗರ ಹೃದಯಗಳನ್ನು ಗೆದ್ದಿದ್ದರು.
 
ಪತ್ರಿಕೆಯ ಸಂಪಾದಕರು ಸುಗತ ಶ್ರೀನಿವಾಸ ರಾಜು. ಅವರ ಸಮರ್ಥ ಮುಂದಾಳುತ್ವ, ಅನುಭವದ ಅಡಿಯಲ್ಲಿ ಹೊಸ ಆಯಾಮವನ್ನು ಕಂಡುಕೊಂಡ ವಿಜಯ ಕರ್ನಾಟಕ ಪತ್ರಿಕೆಯು, ಓದುಗರ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿದೆ. ವಿಜಯ ಕರ್ನಾಟಕದ ಹಿಂದಿನ ಸಂಪಾದಕರು ಅನುಕ್ರಮವಾಗಿ ಈಶ್ವರ ದೈತೋಟ, ಮಹಾದೇವಪ್ಪ ಮತ್ತು ವಿಶ್ವೇಶ್ವರ ಭಟ್.
 
ಸುಮಾರು ಒಂದು ದಶಕದಿಂದ ಪ್ರಸಾರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡು, ಪ್ರತಿದಿನ ಮಾರಾಟವಾಗುವ ಪ್ರತಿಗಳ ಸಂಖ್ಯೆ 6 ಲಕ್ಷ ದಾಟಿದ ಮೊದಲ ಕನ್ನಡ ಪತ್ರಿಕೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
 
==ಹೊರಗಿನ ಸಂಪರ್ಕಗಳು==
"https://kn.wikipedia.org/wiki/ವಿಜಯ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ